How To Find UAN: ನಿಮ್ಮ PF ಖಾತೆ UAN ಮರೆತು ಹೋಯ್ತಾ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ

By Suvarna News  |  First Published Dec 18, 2021, 7:43 PM IST

ಉದ್ಯೋಗ ಬದಲಾಯಿಸೋ ಸಮಯದಲ್ಲಿ ನಿಮ್ಮ UAN ಮಾಹಿತಿಯನ್ನು ಹೊಸ ಕಂಪನಿಗೆ ನೀಡೋದು ಅಗತ್ಯ.ಆದ್ರೆ ಕೆಲವರಿಗೆ UAN ಮರೆತು ಹೋಗಿರುತ್ತೆ.ಇಂಥ ಸಮಯದಲ್ಲಿ UAN ಮಾಹಿತಿಯನ್ನು ಎಲ್ಲಿಂದ ಪಡೆಯಬಹುದು? 


ನೀವು ಉದ್ಯೋಗಿಯಾಗಿದ್ರೆ, ನೌಕರರ ಭವಿಷ್ಯ ನಿಧಿ ಖಾತೆ (EPF) ಹೊಂದಿರುತ್ತೀರಿ. ಪಿಎಫ್ ಖಾತೆ ಹೊಂದಿರೋ ನೌಕರರಿಗೆ  ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಒಂದು ಸಂಖ್ಯೆ ನೀಡಿರುತ್ತದೆ. ಇದನ್ನು ಯುನಿವರ್ಸಲ್ ಅಕೌಂಟ್ ನಂಬರ್ (UAN) ಎಂದು ಕರೆಯಲಾಗುತ್ತದೆ. ಈ ಸಂಖ್ಯೆ ಅತ್ಯಂತ ಮುಖ್ಯವಾಗಿದ್ದು, ನೀವು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸೇರಿದ ಬಳಿಕವೂ ಈ ಸಂಖ್ಯೆ ಮುಂದುವರಿಯುತ್ತದೆ. ಅಂದ್ರೆ ಈ ಸಂಖ್ಯೆಯ ಮೂಲಕ ನೀವು ಇನ್ನೊಂದು ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ ಬಳಿಕವೂ ಈ ಹಿಂದಿನ ಪಿಎಫ್ ಖಾತೆಯನ್ನು ಮುಂದುವರಿಸಲು ಸಾಧ್ಯ. ಆದ್ರೆ ಬಹುತೇಕರು UAN ಮರೆತಿರುತ್ತಾರೆ, ಇಲ್ಲವೇ ಅದನ್ನು ಹುಡುಕೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಹೀಗಾಗಿ ಉದ್ಯೋಗ ಬದಲಾಯಿಸಿದ ಬಳಿಕ ಹೊಸ ಪಿಎಫ್ ಖಾತೆ ತೆರೆಯುತ್ತಾರೆ. ಹಾಗಾದ್ರೆ UAN ಸಂಖ್ಯೆ ಎಲ್ಲಿ ಸಿಗುತ್ತದೆ? ಹೇಗೆಲ್ಲ ಅದನ್ನು ಪಡೆಯಬಹುದು? ಇಲ್ಲಿದೆ ಮಾಹಿತಿ.

ಪೇ ಸ್ಲಿಪ್ (payslip) ಮೂಲಕ
UAN ಪತ್ತೆ ಹಚ್ಚೋ ಸುಲಭದ ವಿಧಾನವೆಂದ್ರೆ ಪೇ ಸ್ಲಿಪ್ (payslip) ಮೂಲಕ. ಪ್ರತಿ ತಿಂಗಳು ನಿಮಗೆ ವೇತನ ಸಂದಾಯವಾದ ಬಳಿಕ ಪೇ ಸ್ಲಿಪ್ ಬರುತ್ತದೆ. ಇದ್ರಲ್ಲಿ ನಿಮ್ಮ UAN ದಾಖಲಾಗಿರುತ್ತದೆ. ಒಂದು ವೇಳೆ ನಿಮ್ಮ ಹಳೇ ಉದ್ಯೋಗದ ಪೇ ಸ್ಲಿಪ್ ಸಿಕ್ಕಿಲ್ಲವೆಂದ್ರೆ ಆ ಕಂಪನಿಯ ಎಚ್ ಆರ್ ಅಧಿಕಾರಿಗಳೊಂದಿಗೆ ವಿಚಾರಿಸಿ. ಅವರ ಬಳಿ UAN ಮಾಹಿತಿಯಿರುತ್ತದೆ.

Tap to resize

Latest Videos

undefined

Nominee To PF:ನಾಮಿನಿ ಸೇರ್ಪಡೆಗೆ ಡಿ.31 ಕೊನೆಯ ದಿನಾಂಕ; ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ

UAN ಪೋರ್ಟಲ್
EPFO ಅಧಿಕೃತ ಪೋಟರ್ಲ್ ನಲ್ಲಿ ಚಂದಾದಾರರು ಖಾತೆ ಮಾಹಿತಿಗಳನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ, ಇಪಿಎಫ್ ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಹಣದ ವಿತ್ ಡ್ರಾ ಅಥವಾ ವರ್ಗಾವಣೆ ಕೂಡ ಮಾಡಬಹುದು. ಒಂದು ಉದ್ಯೋಗದಾತ ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಈ ಪೋರ್ಟಲ್ ಮೂಲಕವೇ ಹಣ ವರ್ಗಾವಣೆ ಮಾಡಬಹುದು. UAN ಪೋರ್ಟಲ್ ನಲ್ಲಿ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡೋ ಮೂಲಕ UAN ಪತ್ತೆಹಚ್ಚಬಹುದು. https://unifiedportalmem.epfindia.gov.in/ ಮೂಲಕ ನೀವು UAN ಪೋರ್ಟಲ್ ಗೆ ಭೇಟಿ ನೀಡಬಹುದು.

ಮಾಹಿತಿ ಒದಗಿಸಿ
UAN ಪೋರ್ಟಲ್ ನಲ್ಲಿ ನೀವು 'Know your UAN Status'ಮೇಲೆ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ, ಪ್ಯಾನ್, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಒದಗಿಸಿ. CAPTCHA ದೃಢೀಕರಣದ ಬಳಿಕ 'Get Authorisation PIN' ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್ ಗೆ ದೃಢೀಕರಣ ಪಿನ್ (authorisation PIN) ಬರುತ್ತದೆ. 

ಮನವಿ ಮಾನ್ಯ ಮಾಡೋದು (Validation)
ನಿಮ್ಮ ಮೊಬೈಲ್ ಗೆ ಒಮ್ಮೆ ಅಧಿಕೃತ ಪಿನ್ (authorisation PIN) ಬಂದ ಬಳಿಕ ಆ ಸಂಖ್ಯೆಯನ್ನು ನಮೂದಿಸಬೇಕು. ಇದ್ರಿಂದ ನಿಮ್ಮ ಮನವಿ ಮಾನ್ಯವಾಗುತ್ತದೆ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ UAN ಸಂಖ್ಯೆ ಹಾಗೂ UAN ಸ್ಟೇಟಸ್ ಮಾಹಿತಿ ಬರುತ್ತದೆ.

Umang App: ಈಗ ಮನೆಯಲ್ಲೇ ಕುಳಿತು PFಹಣ ವಿತ್‌ಡ್ರಾ ಮಾಡಿ, ಹೀಗಿದೆ ಪ್ರಕ್ರಿಯೆ

ಆಧಾರ್ ಹಾಗೂ UAN ಜೋಡಣೆ ಕಡ್ಡಾಯ
ನಿಮ್ಮ ಆಧಾರ್ ಕಾರ್ಡ್ (Aadhaar card)ಅನ್ನು ಇಪಿಎಫ್‌ಒ ನೀಡಿರುವ ಯುನಿವರ್ಸಲ್ ಅಕೌಂಟ್ ನಂಬರ್‌ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯ. ಪ್ರತಿ ಉದ್ಯೋಗಿಗೆ ನಿಯೋಜಿಸಲಾದ ಸಂಖ್ಯೆಗಳಲ್ಲಿ UAN ಒಂದಾಗಿದೆ ಮತ್ತು ಇದು ಶಾಶ್ವತವಾದ ಅಕೌಂಟ್ ನಂಬರ್ ಆಗಿದೆ. EPFO ಯುನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಗಡುವು ಡಿಸೆಂಬರ್ 31 ಆಗಿದೆ. ಹೀಗಾಗಿ ನೀವು ಇನ್ನೂ  UAN ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದಿದ್ರೆ ಕೂಡಲೇ ಆ ಕೆಲಸವನ್ನು ಮಾಡಿ ಮುಗಿಸಿದ್ದಾರೆ. 

click me!