SBI 3-in-1 Account:ಖಾತೆ ಒಂದು, ಪ್ರಯೋಜನ ಹಲವು; ಈ ಖಾತೆ ತೆರೆಯೋದು ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Dec 18, 2021, 4:41 PM IST

*ಒಂದೇ ಖಾತೆಯಲ್ಲಿ ಉಳಿತಾಯ, ಡಿಮ್ಯಾಟ್, ಆನ್ ಲೈನ್ ಟ್ರೇಡಿಂಗ್ ಸೌಲಭ್ಯ
*ಕಾಗದರಹಿತ ಟ್ರೇಡಿಂಗ್ ಅನುಭವ ಹೊಂದಲು ಅವಕಾಶ
*ಇತ್ತೀಚಿನ ದಿನಗಳಲ್ಲಿ ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ಹೆಚ್ಚಿರೋ ಬೇಡಿಕೆ
 


ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರೋ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (State Bank of India) ಆಗಾಗ ಹೊಸ ನೀತಿಗಳನ್ನು ಪ್ರಕಟಿಸೋ ಜೊತೆ ಗ್ರಾಹಕರಿಗೆ ವ್ಯವಹಾರವನ್ನು ಸರಳಗೊಳಿಸೋ ನಿಟ್ಟಿನಲ್ಲಿ ವಿನೂತನ ಸೌಲಭ್ಯಗಳನ್ನು ಕೂಡ ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿ ಬ್ಯಾಂಕ್ 3 ಇನ್ 1 ಖಾತೆ (3-in-1 account)ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಇದು ಖಾತೆದಾರರಿಗೆ ಟ್ರೇಡಿಂಗ್ ನಲ್ಲಿ(trading) ಅನುಭವ ಗಳಿಸಲು ನೆರವು ನೀಡಲಿದೆ. ಎಸ್ ಬಿಐ ಈ 3 ಇನ್ 1  ಖಾತೆಯು ಬ್ಯಾಂಕ್ ಉಳಿತಾಯ ಖಾತೆ( Savings Account), ಡಿಮ್ಯಾಟ್ ಖಾತೆ( Demat Account) ಹಾಗೂ ಆನ್ ಲೈನ್ ಟ್ರೇಡಿಂಗ್(Trading Account) ಖಾತೆಯನ್ನು ಹೊಂದಿದ್ದು, ಗ್ರಾಹಕರಿಗೆ ಕಾಗದರಹಿತ(Paperless) ಟ್ರೇಡಿಂಗ್(Trading) ಅನುಭವ ಪಡೆಯಲು ನೆರವು ನೀಡಲಿದೆ. ಈ ವಿಶೇಷ ಖಾತೆಯನ್ನು ತೆರೆಯಲಿಚ್ಛಿಸೋ ಜನರು ಹೆಚ್ಚಿನ ಮಾಹಿತಿ ಹಾಗೂ ಪ್ರಶ್ನೆಗಳಿಗಾಗಿ ತನ್ನ ವೆಬ್ ಸೈಟ್ ಗೆ ಭೇಟಿ ನೀಡಬಹುದು ಎಂದು ಎಸ್ ಬಿಐ(SBI) ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ(SBI) ಡಿಸೆಂಬರ್ 15ರಂದು ಮಾಡಿದ ಟ್ವೀಟ್ ನಲ್ಲಿ(tweet) '3 ಇನ್ 1 ಖಾತೆಯ ಸಾಮರ್ಥ್ಯ ಅರಿಯಿರಿ! ( Savings Account), ಡಿಮ್ಯಾಟ್ ಖಾತೆ( Demat Account) ಹಾಗೂ ಆನ್ ಲೈನ್ ಟ್ರೇಡಿಂಗ್(Trading Account) ಖಾತೆ ಈ ಮೂರನ್ನೂ ಒಳಗೊಂಡ ಖಾತೆ ಇದಾಗಿದ್ದು, ನಿಮಗೆ ಸರಳ ಹಾಗೂ ಕಾಗದರಹಿತ ಟ್ರೇಡಿಂಗ್ ಅನುಭವ ಒದಗಿಸುತ್ತದೆ' ಎಂದು ಹೇಳಿದೆ.

Latest Videos

undefined

SBI hikes Interest Rates: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬೇಸ್ ರೇಟ್ ನಲ್ಲೂ ಏರಿಕೆ

ಷೇರು ಮಾರುಕಟ್ಟೆಯಲ್ಲಿ (stock market) ಯಾರಾದ್ರೂ ಹೂಡಿಕೆ(Investment) ಮಾಡಲು ಬಯಸಿದ್ರೆ ಅಂಥವರು ಡಿಮ್ಯಾಟ್ (Demat account)) ಹಾಗೂ ಟ್ರೇಡಿಂಗ್ ಖಾತೆ (trading account)ಹೊಂದಿರೋದು ಕಡ್ಡಾಯ.  ಅನೇಕ ಕಂಪನಿಗಳು(Companies) ಐಪಿಒಗಳನ್ನು (IPOs) ಆರಂಭಿಸುತ್ತಿರೋದ್ರಿಂದ ಇತ್ತೀಚಿನ ದಿನಗಳಲ್ಲಿ ಈ ಖಾತೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. 

ಇ-ಮಾರ್ಜಿನ್ ಸೌಲಭ್ಯ(e-margin facility)
ಎಸ್ ಬಿಐ 3 ಇನ್ 1  ಖಾತೆ ಇ-ಮಾರ್ಜಿನ್ ಸೌಲಭ್ಯವನ್ನು ಕೂಡ ಹೊಂದಿದೆ. ಈ ಯೋಜನೆ ಅಡಿಯಲ್ಲಿ 3 ಇನ್ 1 ಖಾತೆ ಹೊಂದಿರೋ ಗ್ರಾಹಕರು ಅತೀ ಕಡಿಮೆ ಮಾರ್ಜಿನ್(Margin) ಅಂದ್ರೆ ಶೇ.25ರಲ್ಲಿ ಟ್ರೇಡ್(trade) ನಡೆಸಬಹುದು. 

ಈ  ಖಾತೆ ತೆರೆಯಲು ಯಾವೆಲ್ಲ ದಾಖಲೆಗಳು ಅಗತ್ಯ?
1.ಪ್ಯಾನ್ ಅಥವಾ ಅರ್ಜಿ-60(PAN or Form 60), 
2.ಫೋಟೋ(Photo) 
3. ವಿಳಾಸ ದೃಢೀಕರಣಕ್ಕೆ(Adress proof) ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ- ಪಾಸ್‌ಪೋರ್ಟ್ (Passport), ಆಧಾರ್(Aadhaar), ವಾಹನ ಚಾಲನಾ ಪರವಾನಗಿ(Driving licence), ಮತದಾರರ ಚೀಟಿ(Votal ID), ಉದ್ಯೋಗಿ ಖಾತ್ರಿ ಯೋಜನೆ (MNREGA) ಕೆಲಸದ ಚೀಟಿ(MNREGA), ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅವರು ನೀಡಿರೋ ಹೆಸರು ಹಾಗೂ ವಿಳಾಸ ದೃಢೀಕರಣ(Adress proof) ಪತ್ರ.

Cryptocurrency:ಕೇಂದ್ರೀಯ ಮಂಡಳಿ ಸಭೆಯಲ್ಲಿ ಕ್ರಿಪ್ಟೋ ಸಂಪೂರ್ಣ ನಿಷೇಧಕ್ಕೆ RBI ಆಗ್ರಹ

ಖಾತೆ ತರೆಯೋದು ಹೇಗೆ?
SBI 3-in-1 ಖಾತೆ ತೆರೆಯೋ ಪ್ರಕ್ರಿಯೆಯನ್ನು ಬ್ಯಾಂಕ್ ಸರಳಗೊಳಿಸಿದ್ದು, ಇದ್ರಿಂದ ಗ್ರಾಹಕರು ಸುಲಭವಾಗಿ ಖಾತೆ ತೆರೆಯಬಹುದು. ಖಾತೆ ತೆರೆಯಲು ಈ ಕೆಳಗೆ ನೀಡಲಾಗಿರೋ ಹಂತಗಳನ್ನು ಅನುಸರಿಸಿ.
ಹಂತ 1: ಎಸ್ ಬಿಐ ಸೆಕ್ಯುರಿಟೀಸ್ ವೆಬ್ ಸೈಟ್ ಮೂಲಕ ಟ್ರೇಡಿಂಗ್ ಖಾತೆಗೆ ಲಾಗ್ ಇನ್ ಆಗಿ.
ಹಂತ 2: order placement ಮೆನುಗೆ ಹೋಗಿ
ಹಂತ 3:ಆರ್ಡರ್ ನೀಡುವಾಗ product type ಆಯ್ಕೆ ಮಾಡೋ ಸಮಯದಲ್ಲಿ E-Margin ಮೇಲೆ ಕ್ಲಿಕಿಸಿ.

click me!