*ಮಾಹಿತಿ ಮುಚ್ಚಿಟ್ಟ ಆರೋಪದಲ್ಲಿ ಅಮೆಜಾನ್ -ಫ್ಯೂಚರ್ ಗ್ರೂಪ್ ಒಪ್ಪಂದ ರದ್ದು
*ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ನ ಶೇ.49ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಮೆಜಾನ್ ಗೆ 2019ರಲ್ಲಿ ಅನುಮತಿ
*ದಂಡ ಪಾವತಿಗೆ 60 ದಿನಗಳ ಕಾಲಾವಕಾಶ
*ಫ್ಯೂಚರ್ ಗ್ರೂಪ್ ಆಸ್ತಿಗಳನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಗೆ ಮಾರಾಟ ಮಾಡದಂತೆ ತಡೆ ಕೋರಿರೋ ಅಮೆಜಾನ್
ನವದೆಹಲಿ (ಡಿ.18): ಫ್ಯೂಚರ್ ಗ್ರೂಪ್ ಘಟಕದಲ್ಲಿ (Future Group unit) ಹೂಡಿಕೆ ಮಾಡಲು ಅಮೆಜಾನ್ ಗೆ ( Amazon) ನವೆಂಬರ್ 2019ರಂದು ನೀಡಿದ್ದ ಅನುಮತಿಯನ್ನು ಭಾರತೀಯ ಸ್ಪರ್ಧಾ ಆಯೋಗ ( Competition Commission of India) ಶುಕ್ರವಾರ (ಡಿ.17) ರದ್ದುಗೊಳಿಸಿದೆ. ಅಲ್ಲದೆ, ಕೆಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಒಟ್ಟು 202ಕೋಟಿ ರೂ. ದಂಡ ಕೂಡ ವಿಧಿಸಲಾಗಿದೆ.
ಅಮೆರಿಕ ಮೂಲದ ಇ-ಕಾಮರ್ಸ್(e-commerce) ಕಂಪನಿ ಅಮೆಜಾನ್ ( Amazon)ಅನುಮತಿ ಪಡೆಯೋ ಸಂದರ್ಭದಲ್ಲಿ ಹೂಡಿಕೆ(Investment) ಪೂರ್ಣ ಮಾಹಿತಿಯನ್ನು ಮರೆಮಾಚಿತ್ತು ಎಂಬ ಕಾರಣಕ್ಕೆ ಸ್ಪರ್ಧಾ ಆಯೋಗ ಒಪ್ಪಂದಕ್ಕೆನೀಡಿರೋ ಅನುಮತಿಯನ್ನು ರದ್ದುಗೊಳಿಸಿದೆ.
ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ನ (Future Coupons Private Ltd.) ಶೇ.49ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಮೆಜಾನ್ ಸಂಸ್ಥೆಗೆ ಭಾರತೀಯ ಸ್ಪರ್ಧಾ ಆಯೋಗ 2019ರ ನವೆಂಬರ್ 28ರಂದು ಅನುಮತಿ ನೀಡಿತ್ತು. ಫ್ಯೂಚರ್ ಗ್ರೂಪ್(Future Group) 2020ಲ್ಲಿ ತನ್ನ ಚಿಲ್ಲರೆ ಆಸ್ತಿಗಳನ್ನು(Retail property) ರಿಲಾಯನ್ಸ್ ಇಂಡಸ್ಟ್ರೀಸ್ ಗೆ (Reliance Industries) ಮಾರಾಟ(Sale) ಮಾಡಲು ಕೈಗೊಂಡಿರೋ ನಿರ್ಧಾರವನ್ನು ತಡೆಹಿಡಿಯುವಂತೆ ಅಮೆಜಾನ್ ಕಾನೂನು ಹೋರಾಟ ನಡೆಸುತ್ತಿರೋ ಹಿನ್ನೆಲೆಯಲ್ಲಿ ಸಿಸಿಐ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
undefined
Amazon Prime Membership: ದುಬಾರಿಯಾಗಲಿದೆ ಅಮೆಝಾನ್ ಪ್ರೈಮ್ : 999 ಆಫರ್‌ಗೆ ಇಂದು ಕೊನೆಯ ದಿನ!
ಅಮೆಜಾನ್ ಗೆ ದಂಡ ಪಾವತಿ ಮಾಡಲು ಸಿಸಿಐ(CCI) 60 ದಿನಗಳ ಕಾಲಾವಕಾಶ ನೀಡಿದೆ. ಜೊತೆಗೆ ಅದೇ ಸಮಯ ಮಿತಿಯಲ್ಲಿ ನಿಜಾಂಶ, ಸಮರ್ಪಕ ಹಾಗೂ ಸಂಪೂರ್ಣ ಮಾಹಿತಿಯನ್ನೊಳಗೊಂಡ ಹೊಸ ಪ್ರಸ್ತಾವನೆ ಸಲ್ಲಿಕೆ ಮಾಡುವಂತೆಯೂ ಆದೇಶಿಸಿದೆ. ಈ ಕುರಿತು 57 ಪುಟಗಳ ಆದೇಶವನ್ನು ಸಿಸಿಐ(CCI) ಹೊರಡಿಸಿದೆ. ಕಂಪನಿಗಳ ನಡುವೆ ಹೊಂದಾಣಿಕೆ ಹಾಗೂ ಹೂಡಿಕೆ(Investment) ಉದ್ದೇಶವನ್ನು ಮುಚ್ಚಿಟ್ಟಿರೋ ಕಾರಣಕ್ಕೆ ಅಮೆಜಾನ್ ಗೆ 2 ಕೋಟಿ ರೂ. ದಂಡ ವಿಧಿಸಲಾಗಿದೆ. ಇನ್ನು ಕಂಪನಿಗಳ ನಡುವೆ ನಡೆದಿರೋ ಒಪ್ಪಂದಗಳ ಬಗ್ಗೆ ಸರಿಯಾದ ಕ್ರಮದಲ್ಲಿ ಮಾಹಿತಿ ನೀಡದ ಕಾರಣ ಅಮೆಜಾನ್ ಗೆ 200ಕೋಟಿ ರೂ. ದಂಡ ವಿಧಿಸಲಾಗಿದೆ. ಅಮೆಜಾನ್ ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದವನ್ನು ಇನ್ನೊಮ್ಮೆ ಹೊಸದಾಗಿ ಪರಿಶೀಲನೆ ನಡೆಸೋದಾಗಿ ಸಿಸಿಐ ತಿಳಿಸಿದೆ. 'ಇದು ಆನ್ಲೈನ್ ಹಾಗೂ ಆಪ್ ಲೈನ್ ಚಿಲ್ಲರೆ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರೋ ಎರಡು ಸಂಸ್ಥೆಗಳ ನಡುವಿನ ಒಪ್ಪಂದವಾಗಿದೆ. ಇವರಿಬ್ಬರ ಉದ್ಯಮದ ನಡುವಿನ ಯೋಜನೆಗಳ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಲಿದ್ದೇವೆ' ಎಂದು ಸಿಸಿಐ ಹೇಳಿದೆ. ಈ ಒಪ್ಪಂದಕ್ಕೆ ಅನುಮತಿ ನೀಡೋ ಸಂದರ್ಭದಲ್ಲೇ ಮಾಹಿತಿ ತಪ್ಪಾಗಿದ್ರೆ ಆದೇಶ ರದ್ದುಪಡಿಸೋದಾಗಿ ಸಿಸಿಇ ಎಚ್ಚರಿಸಿತ್ತು. ಈಗ ಎರಡು ವರ್ಷಗಳ ಬಳಿಕ ಈ ಒಪ್ಪಂದವನ್ನು ಸಿಸಿಐ ರದ್ದುಪಡಿಸಿದೆ.
SBI 3-in-1 Account:ಖಾತೆ ಒಂದು, ಪ್ರಯೋಜನ ಹಲವು; ಈ ಖಾತೆ ತೆರೆಯೋದು ಹೇಗೆ? ಇಲ್ಲಿದೆ ಮಾಹಿತಿ
ಸಿಸಿಐ ಆದೇಶದ ಬಗ್ಗೆ ಪ್ರತಿಕ್ರಿಯಿಸಿರೋ ಅಮೆಜಾನ್ ಸಂಸ್ಥೆ ಅಧಿಕಾರಿಗಳು ಸಿಸಿಇ ನಿರ್ಧಾರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ. 2019ರ ಆಗಸ್ಟ್ ನಲ್ಲಿ ಫ್ಯೂಚರ್ ಕೂಪನ್ಸ್ ನಲ್ಲಿ (Future Coupons Private Ltd.) ಶೇ.49ರಷ್ಟು ಷೇರುಗಳನ್ನು ಖರೀದಿಸಲು ಅಮೆಜಾನ್(Amazon) ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಆ ಬಳಿಕ ಅಂದ್ರೆ 2020ರ ಆಗಸ್ಟ್ ನಲ್ಲಿ ರಿಲಾಯನ್ಸ್ ಸಂಸ್ಥೆ ಫ್ಯೂಚರ್ ಸಂಸ್ಥೆಯ ಚಿಲ್ಲರೆ, ಸಗಟು. ಸರಕು ಸಾಗಣೆ ಹಾಗೂ ಗೋದಾಮು ವಹಿವಾಟುಗಳನ್ನು ಖರೀದಿಸೋದಾಗಿ ಘೋಷಿಸಿತು. ಈ ನಿರ್ಧಾರವನ್ನು ಅಮೆಜಾನ್ ಪ್ರಶ್ನಿಸಿತ್ತು. ಅಮೆಜಾನ್ ಸಿಂಗಾಪುರ ಮಧ್ಯಸ್ಥಗಾರರು ಹಾಗೂ ಭಾರತೀಯ ನ್ಯಾಯಾಲಯಗಳಿಂದ ತಡೆ ತಂದಿರೋ ಕಾರಣ ಫ್ಯೂಚರ್ -ರಿಲಾಯನ್ಸ್ ನಡುವಿನ ಒಪ್ಪಂದವನ್ನು ಕೆಲವು ತಿಂಗಳ ಕಾಲ ತಡೆ ಹಿಡಿಯಲಾಗಿದೆ.