ಪ್ರತಿಯೊಬ್ಬರೂ ಹೆಚ್ಚಿನ ಆದಾಯ ಗಳಿಸಲು ಹಗಲಿರುಳು ಶ್ರಮಿಸ್ತಾರೆ. ಆದ್ರೂ ಬರುವ ಆದಾಯ ಮಾತ್ರ ಯಾವುದಕ್ಕೂ ಸಾಲೋದಿಲ್ಲ. ವ್ಯಾಪಾರವಿರಲಿ, ಗೃಹಿಣಿಯಾಗಿರಲಿ, ಕೆಲಸಕ್ಕೆ ಹೋಗುವವರಿರಲಿ, ಪಾರ್ಟ್ ಟೈಂ ಮೂಲಕ ಸ್ವಲ್ಪ ಮಟ್ಟಿಗೆ ಆದಾಯ ಗಳಿಸಬೇಕು ಎನ್ನುವವರು ಪೇಟಿಎಂ ನೆರವು ಪಡೆಯಬಹುದು.
ಆನ್ಲೈನ್ ನಲ್ಲಿ ಹಣ ವರ್ಗಾವಣೆ ಬಂದಾಗ ನೀವು ಪೇಟಿಎಂ ಅಪ್ಲಿಕೇಷನ್ ಓಪನ್ ಮಾಡ್ತಿರಿ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಬಳಿ ಪೇಟಿಎಂ ಅಪ್ಲಿಕೇಷನ್ ಇರುತ್ತೆ. ಈ ಪೇಟಿಎಂ ಬರೀ ಹಣವನ್ನು ನೀಡುವುದಕ್ಕೆ ಮಾತ್ರವಲ್ಲ ಗಳಿಕೆಗೂ ಅವಕಾಶ ಮಾಡಿಕೊಡುತ್ತದೆ. ಈಗಿನ ದಿನಗಳಲ್ಲಿ ಹಣ ಯಾರಿಗೆ ಬೇಡ ಹೇಳಿ? ಆದಾಯವನ್ನು ಹೆಚ್ಚು ಮಾಡಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಕೆಲಸದ ಜೊತೆ ಪಾರ್ಟ್ ಟೈಂ ವ್ಯಾಪಾರ ಹುಡುಕಿಕೊಳ್ತಾರೆ. ನೀವೂ ಸಣ್ಣ ಗಳಿಕೆ ಬಯಸಿದ್ರೆ, ನಿಮ್ಮ ಬಳಿ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ಫೋನ್ ಇದ್ದು, ಪೇಟಿಎಂ ಅಪ್ಲಿಕೇಷನ್ ಬಳಕೆ ಮಾಡ್ತಿದ್ದರೆ ನೀವು ಇಂದಿನಿಂದಲೇ ಗಳಿಕೆ ಶುರು ಮಾಡಬಹುದು. ಪೇಟಿಎಂನಲ್ಲಿ ಹಣ ಗಳಿಸೋದು ಹೇಗೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.
ಮೊದಲು ಕೇವಲ ಹಣ (Money) ವರ್ಗಾವಣೆ ದೃಷ್ಟಿಯಿಂದ ಪೇಟಿಎಂ (Paytm) ಶುರು ಮಾಡಲಾಗಿತ್ತು. ಈಗ ಪೇಟಿಎಂ ಅನೇಕ ಸೌಲಭ್ಯವನ್ನು ಗ್ರಾಹಕರಿಗೆ ನೀಡ್ತಿದೆ. ಉಳಿತಾಯ (Saving) ಖಾತೆಯನ್ನು ಕೂಡ ನೀವು ತೆರೆಯಬಹುದು. ಆನ್ಲೈನ್ ಶಾಪಿಂಗ್ ಗೆ ಇದನ್ನು ಬಳಸಬಹುದು. ಹಾಗೆಯೇ ಇದ್ರಿಂದ ಆದಾಯ ಗಳಿಸಬಹುದು.
ಪೇಟಿಎಂನಿಂದ ಹಣ ಗಳಿಸುವುದು ಹೀಗೆ : ನೀವು ಯಾವುದೇ ಕಚೇರಿಗೆ ಹೋಗಬೇಕಾಗಿಲ್ಲ, ಮನೆಯಲ್ಲಿಯೇ ಕುಳಿತು ಆನ್‌ಲೈನ್ (Online) ಮೂಲಕ ಪೇಟಿಎಂನಿಂದ ಹಣ ಸಂಪಾದಿಸಬಹುದು. ಇದಕ್ಕಾಗಿ ಪೇಟಿಎಂ ಹಲವು ಮಾರ್ಗಗಳನ್ನು ನೀಡುತ್ತದೆ. ಪೇಟಿಎಂ ಕ್ಯಾಶ್‌ಬ್ಯಾಕ್ (Paytm Cash Back), ಪ್ರೋಮೋಕೋಡ್ (Promo Code), ಗೇಮ್ಸ್ (Games), ಅಂಗಸಂಸ್ಥೆ ಮಾರ್ಕೆಟಿಂಗ್ (Marketing) ಸೇರಿದಂತೆ ಬೇರೆ ವಿಧಾನಗಳಿಂದ ನೀವು ಹಣ ಸಂಪಾದನೆ ಮಾಡಬಹುದು.
ಕ್ಯಾಶ್ಬ್ಯಾಕ್ ಮೂಲಕ ಹಣ : ಪೇಟಿಎಂ ಆರಂಭವಾದಾಗಿನಿಂದಲೂ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ನೀಡ್ತಿದೆ. ಇದೇ ಕಾರಣಕ್ಕೆ ಪೇಟಿಎಂ ಆರಂಭದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಈಗ್ಲೂ ಪೇಟಿಎಂನಲ್ಲಿ ನೀವು ಕ್ಯಾಶ್ಬ್ಯಾಕ್ ಸೌಲಭ್ಯ ಪಡೆಯಬಹುದು. ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ (Mobile Recharge) ಮೇಲೆ ಕಂಪನಿ ಕ್ಯಾಶ್‌ಬ್ಯಾಕ್ ನೀಡುತ್ತದೆ. ನಿಮ್ಮ ವ್ಯಾಲೆಟ್‌ನಿಂದ ನೀವು ಇತರರ ಬಿಲ್‌ಗಳನ್ನು ಪಾವತಿಸಲು ಪ್ರಾರಂಭಿಸಿದರೆ ನಂತರ ನೀವು ಕ್ಯಾಶ್‌ಬ್ಯಾಕ್ ರೂಪದಲ್ಲಿ ಉತ್ತಮ ಹಣವನ್ನು ಪಡೆಯಬಹುದು.
ವಿವಾಹಿತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 5000ರೂ. ಪಿಂಚಣಿ
ಪೇಟಿಎಂನಲ್ಲಿ ಆಟದ ಮೂಲಕ ಹಣ ಗಳಿಕೆ : ಇತ್ತೀಚೆಗೆ ಪೇಟಿಎಂ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಹೊಸ ಗೇಮಿಂಗ್ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ. ಪೇಟಿಎಂ ಫಸ್ಟ್ ಗೇಮ್ ಎಂದು ಕರೆಯಲ್ಪಡುವ ಇದನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬೇಕು. ಇದರಲ್ಲಿ ತುಂಬಾ ಸುಲಭವಾದ ಆಟಗಳಿವೆ. ಅದನ್ನು ಆಡುವ ಮೂಲಕ ನೀವು ಹಣವನ್ನು ಗಳಿಸಬಹುದು.
ಪೇಟಿಎಂ ಪ್ರೋಮೋ ಕೋಡ್ ಬಳಸಿ ಹಣ ಸಂಪಾದಿಸಿ : ಬಿಲ್ ಪಾವತಿ ಮತ್ತು ಮೊಬೈಲ್ ರೀಚಾರ್ಜ್ ಮಾಡಿದ್ರೆ ಪೇಟಿಎಂ ನಿಮಗೆ ಕ್ಯಾಶ್‌ಬ್ಯಾಕ್ ನೀಡುತ್ತದೆ. ಇದಲ್ಲದೆ ಪ್ರೋಮೋ ಕೋಡ್‌ಗಳನ್ನು ಬಳಸಿಕೊಂಡು ನೀವು ಹಣವನ್ನು ಗಳಿಸಬಹುದು. ಪೇಟಿಎಂ ಅನೇಕ ಹಬ್ಬಗಳು ಮತ್ತು ಈವೆಂಟ್‌ಗಳಲ್ಲಿ ಪ್ರೋಮೋ ಕೋಡ್‌ಗಳನ್ನು ನೀಡುತ್ತದೆ. ಅದ್ರಲ್ಲಿ ಹಣ ಗಳಿಸುವ ಅವಕಾಶವನ್ನು ನಿಮಗೆ ನೀಡುತ್ತದೆ.
ಪೇಟಿಎಂ ಅಫಿಲಿಯೇಟ್ ಮಾರ್ಕೆಟಿಂಗ್ : ಅಮೆಜಾನ್, ಫ್ಲಿಪ್ಕಾರ್ಟ್ ನಂತೆ ಪೇಟಿಎಂ ಮಾಲ್ ಕೂಡ ಇದೆ. ಪೇಟಿಎಂ ಮಾಲ್ ನಲ್ಲಿಯೂ ಅಮೆಜಾನ್ ನಂತೆಯೆ ಅನೇಕ ವಸ್ತುಗಳು ಲಭ್ಯವಿದೆ. ಅದ್ರ ಪ್ರಮೋಷನ್ ಗಾಗಿ ಪೇಟಿಎಂ ಅಫಿಲಿಯೇಟ್ ಮಾರ್ಕೆಟಿಂಗ್ ಆಯ್ಕೆಯನ್ನು ನೀಡುತ್ತದೆ. ನೀವು ಪೇಟಿಎಂ ಮಾಲ್ ನಲ್ಲಿರುವ ವಸ್ತುಗಳ ಲಿಂಕನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ಬೇಕು. ನೀವು ಹಾಕಿದ ಲಿಂಕ್ ಬಳಸಿಕೊಂಡು ಬೇರೆ ಗ್ರಾಹಕರು ಆ ವಸ್ತು ಖರೀದಿ ಮಾಡಿದ್ರೆ ನಿಮಗೆ ಕಮಿಷನ್ ಸಿಗುತ್ತದೆ.
ಬ್ಯಾಂಕ್ ಲಾಕರ್ ಬೇಕಿದೆಯಾ? ಯಾವ ಬ್ಯಾಂಕ್ ಎಷ್ಟು ಶುಲ್ಕ ವಿಧಿಸುತ್ತದೆ? ಇಲ್ಲಿದೆ ಮಾಹಿತಿ
ಪೇಟಿಎಂ ಮಾಲ್ ನಲ್ಲಿ ವ್ಯವಹಾರ : ನೀವು ಪೇಟಿಎಂ ಮಾಲ್ ಮೂಲಕ ಎರಡು ರೀತಿಯ ವ್ಯವಹಾರ ನಡೆಸಬಹುದು. ಅಲ್ಲಿನ ವಸ್ತುವನ್ನು ನೀವು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಅಂಗಡಿಯಲ್ಲಿ ಮಾರಾಟ ಮಾಡಬಹುದು. ಅಲ್ಲದೆ ನೀವು ತಯಾರಿಸಿದ ವಸ್ತುವನ್ನು ಪೇಟಿಎಂ ಮಾಲ್ ಮೂಲಕ ಮಾರಾಟ ಮಾಡಬಹುದು.