India Passport : ಭಾರತದ ಪಾಸ್ಪೋರ್ಟ್ ಬಣ್ಣದ ಬಗ್ಗೆ ನಿಮಗೆಷ್ಟು ಗೊತ್ತು?

Published : Dec 07, 2022, 03:28 PM IST
India Passport : ಭಾರತದ ಪಾಸ್ಪೋರ್ಟ್ ಬಣ್ಣದ ಬಗ್ಗೆ ನಿಮಗೆಷ್ಟು ಗೊತ್ತು?

ಸಾರಾಂಶ

ಪಾಸ್ಪೋರ್ಟ್ ಇಲ್ಲದೆ ವಿದೇಶಿ ಪ್ರಯಾಣ ಸಾಧ್ಯವಿಲ್ಲ ಎನ್ನುವುದು ಜನರಿಗೆ ತಿಳಿದಿದೆ. ಹಾಗೆ ಜನಸಾಮಾನ್ಯರಿಗೆ ನೀಲಿ ಬಣ್ಣದ ಪಾಸ್ಪೋರ್ಟ್ ನೀಡಲಾಗುತ್ತೆ ಎನ್ನುವುದು ಕೂಡ ಬಹುತೇಕರಿಗೆ ಗೊತ್ತು. ಆದ್ರೆ ಭಾರತದಲ್ಲಿ ಇನ್ನೂ ಎರಡು ಬಣ್ಣದ ಪಾಸ್ಪೋರ್ಟ್ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.  

ವಿದೇಶಕ್ಕೆ ಹೋಗ್ಬೇಕೆಂದ್ರೆ ನಿಮ್ಮ ಬಳಿ ಪಾಸ್‌ಪೋರ್ಟ್ ಇರಲೇಬೇಕು. ಬೇರೆ ಬೇರೆ ದೇಶಗಳಲ್ಲಿ ಪಾಸ್ಪೋರ್ಟ್ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಭಾರತದ ಪಾಸ್ಫೋರ್ಟ್ ನಲ್ಲೂ ವಿಧವಿದೆ.  ಮೂರು ವಿಧದ ಭಾರತೀಯ ಪಾಸ್‌ಪೋರ್ಟ್‌ಗಳನ್ನು ನಾವು ನೋಡಬಹುದು. ಅವು ವಿಭಿನ್ನ ಬಣ್ಣಗಳನ್ನು ಹೊಂದಿವೆ. ಭಾರತದಲ್ಲಿ ಈ ಪಾಸ್ಪೋರ್ಟನ್ನು ದಾಖಲೆ ರೂಪದಲ್ಲಿಯೂ ಬಳಕೆ ಮಾಡಲಾಗುತ್ತದೆ. ನಾವಿಂದು ಭಾರತದ ಪಾಸ್ಪೋರ್ಟ್ ವಿಧ ಹಾಗೂ ಅದ್ರ ಬಣ್ಣ ಹಾಗೂ ಅದ್ರಲ್ಲಿರುವ ವ್ಯತ್ಯಾಸಗಳ ಬಗ್ಗೆ ಹೇಳ್ತೆವೆ.  

ಭಾರತ (India) ದ ಪಾಸ್ಪೋರ್ಟ್ (Passport) ನಲ್ಲಿದೆ ಮೂರು ವಿಧ : ಭಾರತದಲ್ಲಿ ಬೇರೆ ಬೇರೆ ಸ್ತರದ ಜನರಿಗೆ ನೀಡಲು ಬೇರ ಬೇರೆ ಪಾಸ್ಪೋರ್ಟ್ ಇದೆ. ಇದನ್ನು ಮೂರು ಬಣ್ಣ (Color) ಗಳಲ್ಲಿ ವಿಂಗಡನೆ ಮಾಡಲಾಗಿದೆ. ಭಾರತದಲ್ಲಿ ಮರೂನ್ (Maroon), ಬಿಳಿ (White) ಮತ್ತು ನೀಲಿ (Blue) ಬಣ್ಣದ ಪಾಸ್ಪೋರ್ಟ್ ಗಳನ್ನು ನೀವು ನೋಡಬಹುದು.

ಮರೂನ್ ಬಣ್ಣದ ಪಾಸ್ಪೋರ್ಟ್ ಯಾರಿಗೆ ನೀಡಲಾಗುತ್ತದೆ? : ಮರೂನ್ ಬಣ್ಣದ ಪಾಸ್ಪೋರ್ಟನ್ನು ಭಾರತೀಯ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಅಂದರೆ ಐಎಎಸ್ ಶ್ರೇಣಿ ಮತ್ತು ಐಪಿಎಸ್ (IPS) ಶ್ರೇಣಿಯ ಜನರಿಗೆ ನೀಡಲಾಗುತ್ತದೆ. ಇದನ್ನು ಉತ್ತಮ ಗುಣಮಟ್ಟದ ಪಾಸ್‌ಪೋರ್ಟ್ ಎಂದು ಪರಿಗಣಿಸಲಾಗುತ್ತದೆ. ಮರೂನ್ ಪಾಸ್ಪೋರ್ಟ್ ಪಡೆಯಬೇಕೆಂದ್ರೆ ಜನರು ಅದಕ್ಕೆ ಪ್ರತ್ಯೇಕ ಅರ್ಜಿ (Application) ಯನ್ನು ಭರ್ತಿ ಮಾಡಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಮರೂನ್ ಬಣ್ಣದ ಭಾರತೀಯ ಪಾಸ್ ಪೋರ್ಟ್ ಹೊಂದಿರುವವರಿಗೆ ಹಲವು ವಿಶೇಷ ಸೌಲಭ್ಯಗಳು ಲಭ್ಯವಿವೆ. ಭಾರತದ ಎಲ್ಲ ಜನರು ಇದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಭಾರತ ಸರ್ಕಾರದ ಅಧಿಕೃತ ಮತ್ತು ಪ್ರತಿನಿಧಿ ಮಾತ್ರ ಈ ಪಾಸ್‌ಪೋರ್ಟ್ ಪಡೆಯುತ್ತಾರೆ. ಮರೂನ್ ಬಣ್ಣದ ಪಾರ್ಸಪೋರ್ಟ್ ಹೊಂದಿರುವ ವ್ಯಕ್ತಿ ಮೇಲೆ ವಿದೇಶದಲ್ಲಿ ಸುಲಭವಾಗಿ ದೂರು ನೀಡಲು ಸಾಧ್ಯವಾಗುವುದಿಲ್ಲ.

ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು? ಹೊಸ ತೆರಿಗೆ ನಿಯಮ ಏನ್ ಹೇಳುತ್ತೆ?

ಬಿಳಿ ಬಣ್ಣದ ಪಾಸ್‌ಪೋರ್ಟ್‌ ಯಾರಿಗೆ ನೀಡಲಾಗುತ್ತದೆ ? : ಬಿಳಿ ಬಣ್ಣದ ಪಾಸ್ಪೋರ್ಟನ್ನು ಎಲ್ಲರಿಗೂ ನೀಡಲಾಗುವುದಿಲ್ಲ. ಸರ್ಕಾರಿ ಅಧಿಕಾರಿಯಾಗಿದ್ದು, ಸರ್ಕಾರವನ್ನು ಪ್ರತಿನಿಧಿಸಲು ವಿದೇಶಕ್ಕೆ ಹೋಗ್ತಿದ್ದರೆ ಅವರಿಗೆ ಈ ಬಿಳಿ ಬಣ್ಣದ ಪಾಸ್ಪೋರ್ಟ್ ನೀಡಲಾಗುತ್ತದೆ.  ಬಿಳಿ ಬಣ್ಣದ ಪಾಸ್ ಪೋರ್ಟ್ ಹೊಂದಿರುವವರು ಕೂಡ ಕೆಲವು ವಿಶೇಷ ಸೌಲಭ್ಯಗಳನ್ನು ಪಡೆಯುತ್ತಾರೆ.  

ಯಾರಿಗೆಲ್ಲ ಸಿಗುತ್ತೆ ನೀಲಿ ಬಣ್ಣದ ಪಾಸ್ಪೋರ್ಟ್? : ಭಾರತದ ಜನಸಾಮಾನ್ಯರಿಗೆ ಸಿಗುವ ಪಾಸ್ಪೋರ್ಟ್ ನೀಲಿ ಬಣ್ಣದಾಗಿದೆ. ಭಾರತದ ನಾಗರಿಕರಿಗೆ ಈ ಪಾಸ್ಪೋರ್ಟ್ ನೀಡಲಾಗುತ್ತದೆ. ಇದನ್ನು ಸಾಮಾನ್ಯ ಪಾಸ್‌ಪೋರ್ಟ್ ಎಂದೂ ಕರೆಯಲಾಗುತ್ತದೆ. ಈ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಯು ಭಾರತೀಯ ರಾಜತಾಂತ್ರಿಕ ಅಥವಾ ಸರ್ಕಾರದ ಅಧಿಕಾರಿಯಲ್ಲ ಎಂದು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು. ಈ ಪಾಸ್‌ಪೋರ್ಟ್ ನಲ್ಲಿ ವ್ಯಕ್ತಿಯ ಮಾಹಿತಿ ಇರುತ್ತದೆ. ಇದು ವ್ಯಕ್ತಿಯ ಗುರುತಾಗಿ ಕೆಲಸ ಮಾಡುತ್ತದೆ. ಭಾರತದ ನಾಗರಿಕರು ಈ  ಪಾಸ್‌ಪೋರ್ಟ್‌ಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ   ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತ್ರ ಪ್ರಥಮ ದರ್ಜೆ ಗೆಜೆಟೆಡ್ ಅಧಿಕಾರಿಯು ಮಾಹಿತಿಯ ಪರಿಶೀಲನೆ ನಡೆಸುತ್ತಾನೆ. ಸುಮಾರು 25 ದಿನಗಳ ನಂತರ ಈ ಪಾಸ್‌ಪೋರ್ಟ್ ಅರ್ಜಿದಾರನ ಮನೆಗೆ ಬರುತ್ತದೆ.

ಈ ನಾಣ್ಯ ನಿಮ್ಮ ಬಳಿಯಿದ್ರೆ ಕೋಟ್ಯಧೀಶರಾಗ್ಬಹುದು!

ಭಾರತದ ಪಾಸ್ಪೋರ್ಟ್ ಇಲ್ಲದೆ ನೀವು ವಿದೇಶಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ. ನಿಮ್ಮ ಬಳಿ ಬರೀ ಪಾಸ್ಪೋರ್ಟ್ ಇದ್ದರೆ ನೀವು 60ಕ್ಕೂ ಹೆಚ್ಚು ದೇಶವನ್ನು ವಿಸಾ ಇಲ್ಲದೆ ಸುತ್ತಬಹುದು. ಭಾರತ ಸರ್ಕಾರ ಪಾಸ್ಪೋರ್ಟ್ ಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ರೂಪಿಸಿದೆ. ಅದರ ಪಾಲನೆ ಮಾಡಬೇಕಾಗುತ್ತದೆ. ನಿಯಮ ಮೀರಿದ್ರೆ ದಂಡ ಪಾವತಿ ಮಾಡಬೇಕಾಗುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!