Asianet Suvarna News Asianet Suvarna News

ಪ್ಯಾನ್ ಕಾರ್ಡ್ 10 ಡಿಜಿಟ್ಸ್ ನಲ್ಲಿ ಅಡಗಿದೆ ನಿಮ್ಮ ಗುಟ್ಟು,ಅದೇನದು? ಇಲ್ಲಿದೆ ಮಾಹಿತಿ

ಪ್ಯಾನ್ ಕಾರ್ಡ್ ನಲ್ಲಿ 10 ಡಿಜಿಟ್ಸ್  ಯಾಕಿವೆ ಎಂಬ ಪ್ರಶ್ನೆ ನಿಮ್ಮನ್ನು ಒಮ್ಮೆಯಾದ್ರೂ ಕಾಡಿರಬಹುದು.ಅದೇಗೆ ಎಲ್ಲರ ಪ್ಯಾನ್ ಕಾರ್ಡ್ ಗೂ ವಿಭಿನ್ನ ಡಿಜಿಟ್ಸ್ ನೀಡುತ್ತಾರೆ? ಅದರ ಅರ್ಥವೇನು?ಇಂಥ ಕೆಲವು ಪ್ರಶ್ನೆಗಳು ಕೂಡ ಹುಟ್ಟಿಕೊಳ್ಳುತ್ತವೆ. ಪ್ಯಾನ್ ಕಾರ್ಡ್ ನಲ್ಲಿರುವ 10 ಡಿಜಿಟ್ಸ್ ಸುಖಾಸುಮ್ಮನೆ ನೀಡಿರುವ ಅಂಕೆಗಳು, ಅಕ್ಷರಗಳ ಸಂಯೋಜನೆಯಲ್ಲ. ಅದಕ್ಕೊಂದು ಅರ್ಥವಿದೆ.ಹಾಗಾದ್ರೆ ಪ್ಯಾನ್ ನಲ್ಲಿರುವ ಅಕ್ಷರಗಳು ಹಾಗೂ ಸಂಖ್ಯೆಗಳ ಅರ್ಥವೇನು? ಇಲ್ಲಿದೆ ಮಾಹಿತಿ. 
 

PAN card 10 digits discloses your details
Author
Bangalore, First Published Aug 8, 2022, 8:22 PM IST

Business Desk: ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್  ಅನ್ನೋದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಈ ಸಂಖ್ಯೆಯನ್ನು ಭಾರತದಲ್ಲಿ ವ್ಯಕ್ತಿಯ ಗುರುತು ದೃಢೀಕರಣವಾಗಿಯೂ ಬಳಸಲಾಗುತ್ತದೆ. ಇದನ್ನು ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಮೊದಲ ಐದು ಚಿಹ್ನೆಗಳು ಇಂಗ್ಲಿಷ್ ಅಕ್ಷರಮಾಲೆಯ ಎ ಯಿಂದ ಝುಡ್ ತನಕದ ಅಕ್ಷರಗಳಾಗಿವೆ. ನಂತರದ ನಾಲ್ಕು ಚಿಹ್ನೆಗಳು ಸಂಖ್ಯೆಗಳಾಗಿವೆ. ಹಾಗೆಯೇ ಕೊನೆಯ ಚಿಹ್ನೆ ಕೂಡ ಅಕ್ಷರವಾಗಿದೆ. ಈ ಸಂಖ್ಯೆಗಳು ಹಾಗೂ ಅಕ್ಷರಗಳನ್ನು ಏಕೆ ಬಳಸಲಾಗಿದೆ? ಪ್ರತಿಯೊಬ್ಬರಿಗೂ ಈ ವಿಶಿಷ್ಟ ಸಂಖ್ಯೆಯನ್ನು ಹೇಗೆ ಸೃಷ್ಟಿಸಲಾಗುತ್ತದೆ? ಇದರ ಹಿಂದಿರುವ ಅರ್ಥವೇನು? ಇಂಥ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಈ ಅಕ್ಷರಗಳು ಹಾಗೂ ಸಂಖ್ಯೆಗಳ ಸಂಯೋಜನೆಗೆ ಅರ್ಥವಿರುವ ಜೊತೆಗೆ ಅವು ನಿಮ್ಮ ಕುರಿತ ಒಂದಿಷ್ಟು ಮಾಹಿತಿಗಳನ್ನು ಕೂಡ ಅಡಗಿಸಿಕೊಂಡಿವೆ. ಈ ವಿಶಿಷ್ಟ ಸಂಖ್ಯೆ ಆದಾಯ ತೆರಿಗೆ ಇಲಾಖೆಗೆ ಆ ವ್ಯಕ್ತಿಯ ಎಲ್ಲ ಹಣದ ವಹಿವಾಟುಗಳ ಮಾಹಿತಿ ಕಲೆ ಹಾಕಲು ನೆರವು ನೀಡುತ್ತದೆ. ಸರಳವಾಗಿ ಹೇಳೋದಾದ್ರೆ ಪ್ಯಾನ್ ನಿಮ್ಮ ಆದಾಯ, ಖರ್ಚು, ವೆಚ್ಚಗಳ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಮುಂದೆ ಬಹಿರಂಗಗೊಳಿಸುತ್ತದೆ. ಹಾಗಾದ್ರೆ ಪ್ಯಾನ್ ನಲ್ಲಿರುವ ಅಕ್ಷರಗಳು ಹಾಗೂ ಸಂಖ್ಯೆಗಳ ಸಂಯೋಜನೆಯಲ್ಲಿ ಅಡಗಿರುವ ಮಾಹಿತಿಯೇನು? ಅವುಗಳ ಅರ್ಥವೇನು?

ಮೊದಲ ಮೂರು ಚಿಹ್ನೆಗಳು: ಪ್ಯಾನ್ ಕಾರ್ಡ್ ನ ಮೊದಲ ಮೂರು ಚಿಹ್ನೆಗಳು ಇಂಗ್ಲಿಷ್ ಅಕ್ಷರಮಾಲೆಯ A ಯಿಂದ Z ತನಕ ಅಕ್ಷರಗಳ ಸರಣಿಯಾಗಿದೆ. ಉದಾಹರಣೆಗೆ ನಿಮ್ಮ ಪ್ಯಾನ್ ಪ್ರಾರಂಭದಲ್ಲಿ BEP ಅಥವಾ APZ ಎಂದಿರಬಹುದು. ಇಲ್ಲಿ ಆಯ್ಕೆ ನಿರ್ದಿಷ್ಟವಾಗಿರೋದಿಲ್ಲ. ಗೊತ್ತು ಗುರಿಯಿಲ್ಲದೆ ಅಕ್ಷರಗಳನ್ನು ಆಯ್ಕೆ ಮಾಡಲಾಗುತ್ತದೆ. 

ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರಾ?

ನಾಲ್ಕನೇ ಚಿಹ್ನೆ: ಇನ್ನು ನಿಮ್ಮ ಪ್ಯಾನ್ ನ ನಾಲ್ಕನೇ ಚಿಹ್ನೆ ಯಾವಾಗಲೂ ನಿಮ್ಮ ಸ್ಥಾನಮಾನವನ್ನು (status) ಸೂಚಿಸುತ್ತದೆ. ಪ್ಯಾನ್ ಹೊಂದಿರುವ ಬಹುತೇಕರ ನಾಲ್ಕನೇ ಚಿಹ್ನೆ 'P' ಆಗಿರುತ್ತದೆ. ಇದರ ಅರ್ಥ 'ಪರ್ಸನ್'. ನಾಲ್ಕನೇ ಚಿಹ್ನೆಯನ್ನು ಪ್ರತಿನಿಧಿಸುವ ಇತರ ಒಂಬತ್ತುಅಕ್ಷರಗಳೆಂದ್ರೆ C, H, F, A, T, B, L, J,ಹಾಗೂ  G.ಇದರಲ್ಲಿ C ಅಂದ್ರೆ ಕಂಪನಿ. ಹೀಗಾಗಿ ನಿಮ್ಮ ಪ್ಯಾನ್ ನಿಮ್ಮ ಕಂಪನಿಯ ಹೆಸರಿನಲ್ಲಿ ಇದ್ರೆ ಅದರ ನಾಲ್ಕನೇ ಚಿಹ್ನೆ C ಆಗಿರುತ್ತದೆ. H ಅಂದ್ರೆ ಹಿಂದು ಅವಿಭಕ್ತ ಕುಟುಂಬ. F ಅಂದ್ರೆ ಪಾಲುದಾರ ಸಂಸ್ಥೆ (firm). A ಅಂದ್ರೆ ವ್ಯಕ್ತಿಗಳ ಸಂಘಟನೆ. T ಅಂದ್ರೆ ನಂಬಿಕೆ, B ಅಂದ್ರೆ ವ್ಯಕ್ತಿಗಳ ಸಂಸ್ಥೆ. Lಅಂದ್ರೆ ಸ್ಥಳೀಯ ಪ್ರಾಧಿಕಾರ. J ಅಂದ್ರೆ ಆರ್ಟಿಫಿಷಿಯಲ್ ಜ್ಯುರಿಡಿಕಲ್ ಪರ್ಸನ್.  G ಅಂದ್ರೆ ಸರ್ಕಾರ.

ಐದನೇ ಚಿಹ್ನೆ: ಇನ್ನು ಐದನೇ ಚಿಹ್ನೆ ನಿಮ್ಮ ಕೊನೆಯ ಹೆಸರು ಅಥವಾ ಉಪನಾಮದ (surname) ಮೊದಲ ಅಕ್ಷರವಾಗಿರುತ್ತದೆ. ಉದಾಹರಣೆಗೆ ಒಬ್ಬರ ಹೆಸರು ಸುನೀಲ್ ಕಿಶಾನ್ ಮೆಹ್ತಾ ಎಂದಿರುತ್ತದೆ. ಆಗ ಅವರ ಪ್ಯಾನ್ ಕಾರ್ಡ್ 5ನೇ ಚಿಹ್ನೆ M ಆಗಿರುತ್ತದೆ. 

ಆರರಿಂದ ಒಂಬತ್ತರ ತನಕದ ಚಿಹ್ನೆಗಳು: ಮುಂದಿನ ನಾಲ್ಕು ಚಿಹ್ನೆಗಳು 0001 ರಿಂದ 9999 ನಡುವಿನ ಅನುಕ್ರಮ ಸಂಖ್ಯೆಯಾಗಿರುತ್ತದೆ. ಮೊದಲ ಮೂರು ಚಿಹ್ನೆಗಳಂತೆ ಇದು ಕೂಡ ನಿರ್ದಿಷ್ಟವಲ್ಲದ ಆಯ್ಕೆಯಾಗಿರುತ್ತದೆ. 

ಐಟಿ ರಿಟರ್ನ್ ಸಲ್ಲಿಕೆ ಮಾಡಿರೋರು ರೀಫಂಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

10ನೇ ಚಿಹ್ನೆ: ಪ್ಯಾನ್ ಕಾರ್ಡ್ ಕೊನೆಯ ಹಾಗೂ 10ನೇ ಚಿಹ್ನೆ ಅಕ್ಷರದ ಚೆಕ್ ಡಿಜಿಟ್ ಆಗಿದೆ. ಅಂದ್ರೆ ಈ ಹಿಂದಿನ ಒಂಬತ್ತು ಅಕ್ಷರಗಳು ಹಾಗೂ ಸಂಖ್ಯೆಗಳಿಗೆ ಸೂತ್ರವೊಂದನ್ನು ಬಳಸಿದಾಗ ಸಿಕ್ಕಿರುವ ಸಂಖ್ಯೆ.

Follow Us:
Download App:
  • android
  • ios