Investment Tips : ಪ್ರತಿ ದಿನ ಕುಡಿಯೋ ಟೀಗೆ ಹೇಳಿ ಬೈ ಕೋಟ್ಯಾಧಿಪತಿಯಾಗ್ಬಹುದು!

By Suvarna NewsFirst Published Mar 17, 2023, 4:03 PM IST
Highlights

ಶ್ರೀಮಂತ, ಹೂಡಿಕೆ, ಉಳಿತಾಯ ಇಂಥ ಶಬ್ಧ ಬಂದಾಗ ನಾವು ಕೈನಲ್ಲಿ ಹಣವಿದ್ರೆ ಮಾತ್ರ ಇದೆಲ್ಲ ಸಾಧ್ಯ ಎಂದುಕೊಳ್ತೇವೆ. ಆದ್ರೆ ಬುದ್ಧಿವಂತಿಕೆ, ದೃಢ ನಿರ್ಧಾರವಿದ್ರೆ ಸಣ್ಣ ಉಳಿತಾಯದ ಮೂಲಕವೇ ನಾವು ಕೋಟ್ಯಾಧಿಪತಿಯಾಗ್ಬಹುದು. ಆದ್ರೆ ಇದಕ್ಕೆ ತಾಳ್ಮೆ ಬಹಳ ಮುಖ್ಯ.
 

ನೀವೂ ಕೂಡ ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಅದು ತುಂಬಾ ಕಠಿಣವೇನಲ್ಲ. ಇದಕ್ಕಾಗಿ ಸರಿಯಾದ ಹೂಡಿಕೆ ತಂತ್ರ, ನಿರ್ಣಯ ಮತ್ತು ಗುರಿ ಮಾತ್ರ ಅಗತ್ಯವಿರುತ್ತದೆ. ನೀವೂ ಶ್ರೀಮಂತರಾಗ್ಬೇಕೆಂದ್ರೆ ಹೆಚ್ಚೇನೂ ಮಾಡ್ಬೇಕಾಗಿಲ್ಲ. ದಿನದಲ್ಲಿ ಎರಡು ಗೊತ್ತು ಕುಡಿಯುವ ಟೀ ಬಿಟ್ರೆ ಸಾಕು. 

ಟೀ (Tea) ನಮ್ಮ ಆರೋಗ್ಯ (Health) ವನ್ನು ಹಾಳು ಮಾಡುತ್ತೆ ಎನ್ನುವುದು ನಮಗೆ ಗೊತ್ತು. ದಿನದಲ್ಲಿ ಮೂರ್ನಾಲ್ಕು ಬಾರಿಯಲ್ಲ ಎರಡು ಬಾರಿ ಟೀ ಸೇವನೆ ಮಾಡಿದ್ರೂ ನಮ್ಮ ಜೇಬಿನಲ್ಲಿರುವ ಹಣ ಖರ್ಚಾಗುತ್ತದೆ. ದಿನಕ್ಕೆ ಎರಡು ಬಾರಿ ನೀವು ಟೀ ಕುಡಿತೀರಿ ಎಂದಿಟ್ಟುಕೊಳ್ಳೋಣ. ಎರಡು ಬಾರಿ ಕುಡಿಯೋ ಟೀಗೆ 20 ರೂಪಾಯಿಯಾದ್ರೂ ಖರ್ಚು ಬರುತ್ತೆ. ಅಷ್ಟೆ, ಟೀ ಬಿಟ್ಟು ಬರೀ 20 ರೂಪಾಯಿ ಉಳಿಸಿದ್ರೆ ಸಾಕು. ನಿಮ್ಮ ಕೋಟ್ಯಾಧಿಪತಿ ಕನಸನ್ನು ನನಸು ಮಾಡ್ಬಹುದು. 

ಟೀ ಬಿಟ್ರೆ ಇದೆ ಎರಡು ಲಾಭ : ದಿನಕ್ಕೆ ಮೂರ್ನಾಲ್ಕು ಬಾರಿ ಟೀ ಸೇವನೆ ಮಾಡಿದ್ರೆ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅನೇಕರಿಗೆ ದಿನಕ್ಕೆ ಒಮ್ಮೆ ಟೀ ಕುಡಿದ್ರೂ ಅದ್ರಿಂದ ಚೇತರಿಸಿಕೊಳ್ಳೋದು ಕಷ್ಟ. ಆದ್ರೂ ಅವರಿಂದ ಟೀ ಬಿಡೋಕೆ ಸಾಧ್ಯವಾಗೋದಿಲ್ಲ. ಚಹಾ ಬಿಡೋದು ಕಷ್ಟವಾದ್ರೂ ಅಸಾಧ್ಯವೇನಲ್ಲ. ನಿಮ್ಮಲ್ಲಿ ದೃಢ ನಿರ್ಣಯ ಮತ್ತು ಇಚ್ಛಾಶಕ್ತಿ ಇದ್ದರೆ ನೀವು ಆರಾಮವಾಗಿ ಚಹಾ ಸೇವನೆ ಬಿಡಬಹುದು. ಇದ್ರಿಂದ ನಿಮ್ಮ ಆರೋಗ್ಯ ವೃದ್ಧಿಸುವ ಜೊತೆಗೆ ಹಣದ ಉಳಿತಾಯವಾಗುತ್ತದೆ.

Shopping Tips: ಹಾಸಿಗೆಗೆ ಕಾಸು ಹಾಕುವ ಮುನ್ನ ಇದನ್ನೊಮ್ಮೆ ಓದಿ

ತಿಂಗಳಿಗೆ 600 ರೂಪಾಯಿ ಉಳಿಸಿ ಹೂಡಿಕೆ ಶುರು ಮಾಡಿ : ಅಲ್ಲ, ದಿನಕ್ಕೆ 20 ರೂಪಾಯಿ ಉಳಿಸಿ ಹೇಗೆ ಕೋಟ್ಯಾಧಿಪತಿಯಾಗ್ಬಹುದು ಅಂತಾ ನೀವು ಕೇಳ್ಬಹುದು. ಇದಕ್ಕೊಂದು ಫಾರ್ಮುಲಾ ಇದೆ. ನೀವು ದಿನಕ್ಕೆ 20 ರೂಪಾಯಿ ಉಳಿಸಿದ್ರೆ ತಿಂಗಳಿಗೆ 600 ರೂಪಾಯಿ ಉಳಿತಾಯವಾಗುತ್ತದೆ. ಈ ಹಣವನ್ನು ನೀವು ಸೂಕ್ತವಾದ ಜಾಗದಲ್ಲಿ ಹೂಡಿಕೆ ಮಾಡ್ಬೇಕು. ಈ ಹಣವನ್ನು ನೀವು ಮ್ಯೂಚ್ಯುವಲ್ ಫಂಡ್ (Mutual Fund) ನಲ್ಲಿ ಹಾಕ್ಬಹುದು. ಪ್ರತಿ ತಿಂಗಳು ನೀವು 600 ರೂಪಾಯಿಯನ್ನು ಮ್ಯೂಚ್ಯುವಲ್ ಫಂಡ್ ಗೆ ಹಾಕಿದ್ರೆ ಸಾಕು. ಇದು ದೀರ್ಘಾವಧಿಯ ಹೂಡಿಕೆಯಾಗಿದ್ದು, ಇದ್ರಲ್ಲಿ ಉತ್ತಮ ರಿಟರ್ನ್ ಸಿಗುತ್ತದೆ. ಇದ್ರಿಂದ ನಿಮಗೆ ಶೇಕಡಾ 15ರಿಂದ 18ರಷ್ಟು ರಿಟರ್ನ್ ನಿಶ್ಚಿತವಾಗಿ ಸಿಗುತ್ತದೆ.

ಟೀ ಉಳಿಸಿ ಇಲ್ಲಿ ಹೂಡಿಕೆ ಮಾಡಿ : ನೀವು ದಿನದ ಎರಡು ಕಪ್ ಟೀ ಬಿಟ್ಟು, ಅಲ್ಲಿ ಉಳಿದ ಹಣವನ್ನು ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ( ಎಸ್ ಐಪಿ)ನಲ್ಲಿ ಹೂಡಿಕೆ ಮಾಡಬಹುದು. 20 ವರ್ಷದ ವ್ಯಕ್ತಿಯೊಬ್ಬ ಮ್ಯೂಚುವಲ್ ಫಂಡ್ ನಲ್ಲಿ 600 ರೂಪಾಯಿಯನ್ನು ಪ್ರತಿ ತಿಂಗಳು ಎಸ್ ಐಪಿ ಮಾಡ್ತಾನೆ ಅಂದ್ರೆ, 40 ವರ್ಷಗಳ ಕಾಲ ಅವನು ಎಸ್ ಐಪಿ ಮಾಡಿದ್ರೆ ಆತ ಒಟ್ಟೂ 2,88,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಈ ಅವಧಿಯಲ್ಲಿ ಶೇಕಡಾ 15ರಷ್ಟು ರಿಟರ್ನ್ ಸಿಗ್ತಿದೆ ಎಂದಾದ್ರೆ ವ್ಯಕ್ತಿಗೆ 1, 88,42,253 ರೂಪಾಯಿ ಆಗುತ್ತದೆ. ಶೇಕಡಾ 20ರಷ್ಟು ರಿಟರ್ನ್ ಸಿಗ್ತಿದೆ ಎಂದಾದ್ರೆ ಆಗ 10,18, 16,777 ರೂಪಾಯಿ ಆತನಿಗೆ ಸಿಗುತ್ತದೆ. 

ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು

ದೀರ್ಘಾವದಿ ಹೂಡಿಕೆಯಲ್ಲಿದೆ ಹೆಚ್ಚು ಲಾಭ : ಮ್ಯುಚ್ಯುವಲ್ ಫಂಡ್ ನಲ್ಲಿ ನೀವು ಮಾಡಿದ ಹೂಡಿಕೆ ಮೇಲೆ ಚಕ್ರಬಡ್ಡಿ ಸಿಗುವ ಮೂಲಕ  ನೀವು ಮಾಡಿದ ಸಣ್ಣ ಹೂಡಿಕೆಯು ದೀರ್ಘಾವಧಿಯಲ್ಲಿ ದೊಡ್ಡ ನಿಧಿಯಾಗುತ್ತದೆ. ಆದ್ರೆ ಮ್ಯೂಚ್ಯುವಲ್ ಫಂಡ್ ನಲ್ಲಿ ಸಾಕಷ್ಟು ಏರುಪೇರುಗಳಾಗುತ್ತದೆ. ಷೇರು ಮಾರುಕಟ್ಟೆಯಲ್ಲಿನ ಏರಿಳಿತ ನಿಮ್ಮ ಹೂಡಿಕೆ ಮೇಲೆ ಆಗಬಹುದು. ಹಾಗಾಗಿ ನೀವು ಆರ್ಥಿಕ ತಜ್ಞರ ಸಲಹೆಪಡೆದು ನೀವು ಹೂಡಿಕೆ ಮಾಡಬೇಕಾಗುತ್ತದೆ.
 

click me!