
ನಮ್ಮ ಹಿರಿಯರು ಯಾವಾಗಲೂ ಮನೆಯಲ್ಲಿ ಚಿನ್ನದಲ್ಲಿ (Gold) ಹೂಡಿಕೆ ಮಾಡಬೇಕು ಅಂತ ಹೇಳ್ತಿದ್ರು. ಮನೆಯಲ್ಲಿ ಯಾವಾಗ ಸಮಸ್ಯೆ ಬಂದ್ರೂ ಚಿನ್ನ ತುಂಬಾ ಸಹಾಯವಾಗುತ್ತೆ. ಒಂದು ವೇಳೆ ನಿಮಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದರೆ, ಗೋಲ್ಡ್ ಲೋನ್ ಪಡೆಯುವುದು ಒಳ್ಳೆಯ ಆಯ್ಕೆ. ಬೇರೆ ಸಾಲಗಳಿಗೆ ಹೋಲಿಸಿದರೆ ಗೋಲ್ಡ್ ಲೋನ್ ಬೇಗ ಸಿಗುತ್ತೆ ಮತ್ತು ಸುಲಭ ಕೂಡ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಗೋಲ್ಡ್ ಲೋನ್ ಒಂದು ಉತ್ತಮ ಆಯ್ಕೆಯಾಗಿದೆ. ಆದರೆ ಅನೇಕ ಬ್ಯಾಂಕುಗಳು ಗೋಲ್ಡ್ ಲೋನ್‌ಗೆ ವಿಭಿನ್ನ ದರದಲ್ಲಿ ಬಡ್ಡಿ ವಿಧಿಸುತ್ತವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಭೀತಿ: ಒಂದೇ ದಿನ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲು
ಗೋಲ್ಡ್ ಲೋನ್ ನಿಯಮಗಳು
ನೀವು ಗೋಲ್ಡ್ ಲೋನ್ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಕೆಲವು ವಿಷಯಗಳನ್ನು ತಿಳಿದಿರಬೇಕು. ಗೋಲ್ಡ್ ಲೋನ್‌ನಲ್ಲಿ ನಿಮ್ಮ ಚಿನ್ನದ ಮಾರುಕಟ್ಟೆ ಮೌಲ್ಯದ 75% ವರೆಗೆ ಮಾತ್ರ ಬ್ಯಾಂಕ್ ಸಾಲ ನೀಡುತ್ತದೆ. ಉಳಿದ 25% ಅನ್ನು ಸುರಕ್ಷತಾ ಅಂಚು ಎಂದು ಪರಿಗಣಿಸಲಾಗುತ್ತದೆ. ಗೋಲ್ಡ್ ಲೋನ್ ಪಡೆಯುವಾಗ ಯಾವ ಬ್ಯಾಂಕ್ ಎಷ್ಟು ಬಡ್ಡಿ ದರ ವಿಧಿಸುತ್ತಿದೆ ಎಂಬುದನ್ನು ಪರಿಶೀಲಿಸಿ.
ಪೂರ್ಣ ಪಟ್ಟಿ ಇಲ್ಲಿದೆ:
HDFC ಬ್ಯಾಂಕ್ ಗೋಲ್ಡ್ ಲೋನ್‌ಗೆ 8.5% ಬಡ್ಡಿ ದರ ವಿಧಿಸುತ್ತದೆ.
Indian Bank ಗೋಲ್ಡ್ ಲೋನ್‌ಗೆ 8.65% ಬಡ್ಡಿ ದರ ವಿಧಿಸುತ್ತದೆ.
Union Bank ಗೋಲ್ಡ್ ಲೋನ್‌ಗೆ 8.7% ಬಡ್ಡಿ ದರ ವಿಧಿಸುತ್ತದೆ.
Bank of India ಗೋಲ್ಡ್ ಲೋನ್‌ಗೆ 8.8% ಬಡ್ಡಿ ದರ ವಿಧಿಸುತ್ತದೆ.
Canara Bank ಗೋಲ್ಡ್ ಲೋನ್‌ಗೆ 9.25% ಬಡ್ಡಿ ದರ ವಿಧಿಸುತ್ತದೆ.
Bank Of Baroda ಗೋಲ್ಡ್ ಲೋನ್‌ಗೆ 9.4% ಬಡ್ಡಿ ದರ ವಿಧಿಸುತ್ತದೆ.
SBI ಗೋಲ್ಡ್ ಲೋನ್‌ಗೆ 9.6% ಬಡ್ಡಿ ದರ ವಿಧಿಸುತ್ತದೆ.
ICICI ಬ್ಯಾಂಕ್ ಗೋಲ್ಡ್ ಲೋನ್‌ಗೆ 10% ಬಡ್ಡಿ ದರ ವಿಧಿಸುತ್ತದೆ.
Axis ಬ್ಯಾಂಕ್ ಗೋಲ್ಡ್ ಲೋನ್‌ಗೆ 17% ಬಡ್ಡಿ ದರ ವಿಧಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.