
ಬೆಂಗಳೂರು(ಆ.30) ಜಿಯೋ, ಏರ್‌ಟೆಲ್, ವಿಐ ಟೆಲಿಕಾಂ ಸೇವೆ ಒದಗಿಸುತ್ತಿರುವ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಇತರ ಆಫರ್ ನೀಡುತ್ತಿದೆ. ಪೈಪೋಟಿಗೆ ಬಿದ್ದು ಕಡಿಮೆ ಬೆಲೆಗೆ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಬಿಎಸ್‌ಎನ್ಎಲ್ ಮಹತ್ವದ ಬದಲಾವಣೆಯೊಂದಿಗೆ ಈಗಾಗಲೇ ಎಂಟ್ರಿಕೊಟ್ಟಿದೆ. ಇದೀಗ ಹೊಸ ಆಫರ್ ಘೋಷಿಸಿದೆ. ಕೇವಲ 397 ರೂಪಾಯಿಗೆ 150 ದಿನ ಅಂದರೆ 5 ತಿಂಗಳ ವ್ಯಾಲಿಟಿಡಿ ನೀಡಿದೆ. ಇಷ್ಟೇ ಅಲ್ಲ ಅನ್‌ಲಿಮಿಟೆಡ್ ಕಾಲ್ಸ್ ಹಾಗೂ ಡೇಟಾ ಆಫರ್ ಕುರಿತು ಮಹತ್ವದ ಘೋಷಣೆ ಮಾಡಿದೆ.
ಬಿಎಸ್‌ಎನ್ಎಲ್ ಸದ್ಯ ಘೋಷಿಸಿರುವ 397 ರೂಪಾಯಿ ಪ್ಲಾನ್‌ನಲ್ಲಿ ಹಲವು ವಿಶೇಷತೆಗಳಿವೆ. ಪ್ರಮುಖವಾಗಿ ಈ ಪ್ಲಾನ್ ಬಿಎಸ್‌ಎನ್ಎಲ್ ಸಿಮ್‌ನ್ನು ಎರಡನೇ ಸಿಮ್ ಆಗಿ ಬಳಸುತ್ತಿರುವ ಗ್ರಾಹಕರಿಗೆ ನೀಡಿದೆ. ಈ ಪ್ಲಾನ್ ರಿಚಾರ್ಜ್ ಮಾಡಿದ್ದಲ್ಲಿ, ಆರಂಭಿಕ 30 ದಿನ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ಸ್ ಸೌಲಭ್ಯ ಸಿಗಲಿದೆ. ಆರಂಭಿಕ 30 ದಿನ ಪ್ರತಿ ದಿನ 2 ಜಿಬಿಯಂತೆ ಒಟ್ಟು 60 ಜಿಬಿ ಡೇಟಾ ಸಿಗಲಿದೆ. ಆರಂಭಿಕ 30 ದಿನ ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ.
160 ದಿನ 320 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್: ಪೈಪೋಟಿ ನಡುವೆ BSNL ಗ್ರಾಹಕರಿಗೆ ಭರ್ಜರಿ ಆಫರ್!
150 ದಿನ ದೇಶಾದ್ಯಂತ ರೋಮಿಂಗ್ ಶುಲ್ಕ ಇರುವುದಿಲ್ಲ. 150 ದಿನ ವ್ಯಾಲಿಟಿಡಿ ಕಾರಣ, ಇನ್‌ಕಮಿಂಗ್ ಕಾಲ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅನ್‌ಲಿಮಿಟೆಡ್ ಕಾಲ್ಸ್ ಅವಧಿ ಮುಗಿದರೆ ಕಡಿಮೆ ಬೆಲೆಗೆ ಟಾಪ್ ಅಪ್ ಅವಕಾಶವನ್ನು ನೀಡಲಾಗಿದೆ. ಇದು ಡೇಟಾ ರಿಚಾರ್ಜ್‌ಗೂ ಅನ್ವಯಿಸಲಿದೆ. ಐದು ತಿಂಗಳಿಗೆ 397 ರೂಪಾಯಿ ರಿಚಾರ್ಜ್ ಮಾಡಿದರೆ ಪ್ರತಿ ತಿಂಗಳಿಗೆ ಸರಾಸರಿ 80 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಇದು ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ ಪ್ಲಾನ್ ಆಗಿದೆ.
ಬಿಎಸ್‌ಎನ್ಎಲ್ ಈಗಾಗಲೇ 4ಜಿ ಸೇವೆಯನ್ನು ಜಾರಿಗೊಳಿಸಿದೆ. ಖಾಸಗಿ ಕಂಪನಿಗಳ ಪೈಪೋಟಿಯಿಂದ ಸೊರಗಿದ್ದ ಬಿಎಸ್‌ಎನ್ಎಲ್‌ಗೆ ಹೊಸ ಜೀವಕಳೆ ನೀಡಲಾಗಿದೆ. ಕೇಂದ್ರ ಸರ್ಕಾರ ಭರ್ಜರಿ ಹೂಡಿಕೆ ಮಾಡಿ ಟೆಲಿಕಾಂ ಸೇವೆಯನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಿಸಿದೆ. ಇದೀಗ 5ಜಿ ಸೇವೆ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಕೆಲ ವಿಶೇಷ ಆಫರ್ ಸದ್ಯದಲ್ಲೇ ಘೋಷಣೆಯಾಗಲಿದೆ.
ದೇಶದ 6.4 ಲಕ್ಷ ಹಳ್ಳಿಗೆ ಬ್ರಾಂಡ್‌ಬ್ಯಾಂಡ್ ಸೇವೆ ಒದಗಿಸಲು ಸಂಪುಟ ಸಮ್ಮತಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.