ಮುಕೇಶ್ ಅಂಬಾನಿ ಜೇಬಿನ ರಹಸ್ಯ, ವಿಶ್ವದ ಶ್ರೀಮಂತ ವ್ಯಕ್ತಿ ತನ್ನ ಜೇಬಿನಲ್ಲಿ ಇಟ್ಟುಕೊಳ್ಳುವ ಹಣವೆಷ್ಟು?

By Gowthami K  |  First Published Nov 6, 2024, 7:31 PM IST

ಮುಕೇಶ್ ಅಂಬಾನಿ ಆಸ್ತಿ $99 ಶತಕೋಟಿ ದಾಟಿದೆ. ಆದರೆ ಅವರು ಹೊರಗೆ ಹೋಗುವಾಗ ಎಷ್ಟು ಹಣ ತೆಗೆದುಕೊಂಡು ಹೋಗ್ತಾರೆ ಗೊತ್ತಾ? ಈ ರಹಸ್ಯವನ್ನು ತಿಳಿದರೆ ನಿಮಗೆ ಶಾಕ್ ಆಗುತ್ತೆ!


ಪ್ರಪಂಚದ ಶ್ರೀಮಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ಆಸ್ತಿಪಾಸ್ತಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರು ದಿನನಿತ್ಯ ಎಷ್ಟು ಹಣ ತೆಗೆದುಕೊಂಡು ಹೋಗ್ತಾರೆ ಅಂತ ಗೊತ್ತಾ? ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಆಸ್ತಿ ಇತ್ತೀಚೆಗೆ $2 ಶತಕೋಟಿಗಿಂತ ಹೆಚ್ಚು ಏರಿಕೆಯಾಗಿದೆ. ಇದರೊಂದಿಗೆ ಅವರ ಒಟ್ಟು ಆಸ್ತಿ $99 ಶತಕೋಟಿ ದಾಟಿದೆ. ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಿಂದ  ಒಬ್ಬರಾಗಿದ್ದಾರೆ.

Tap to resize

Latest Videos

undefined

ನೀತಾ ಅಂಬಾನಿಯವರ ಫೇವರಿಟ್ ಜಾಗ ಸ್ವಿಸ್ ಆಲ್ಪ್ಸ್, ಒಂದು ದಿನ ತಂಗಲು ಎಷ್ಟು ಖರ್ಚಾಗುತ್ತದೆ?

ಮುಕೇಶ್ ಅಂಬಾನಿ ಪ್ರಸ್ತುತ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಈ ಉದ್ಯಮಿಯ ದಿನನಿತ್ಯದ ಜೀವನಶೈಲಿ ಅಚ್ಚರಿ ಮೂಡಿಸುತ್ತದೆ. ಅವರು ಮಾತ್ರವಲ್ಲ, ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದಾರೆ.

ಆದರೆ ಮುಕೇಶ್ ಅಂಬಾನಿ ಮನೆಯಿಂದ ಹೊರಗೆ ಹೋಗುವಾಗ ಎಷ್ಟು ಹಣ ತೆಗೆದುಕೊಂಡು ಹೋಗ್ತಾರೆ ಅಂತ ಎಷ್ಟು ಜನರಿಗೆ ಗೊತ್ತು? ಇಷ್ಟು ಶ್ರೀಮಂತ ವ್ಯಕ್ತಿ ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡು ಹೋಗ್ತಾರೆ ಅಂತ ನಾವು ಭಾವಿಸುತ್ತೇವೆ. ಆದರೆ ಅದು ನಿಜವೇ?

ಸಾಮಾನ್ಯ ಜನರು ಹೊರಗೆ ಹೋಗುವಾಗ ನೂರಾರು ಅಥವಾ ಸಾವಿರಾರು ರೂಪಾಯಿಗಳನ್ನು ತೆಗೆದುಕೊಂಡು ಹೋಗ್ತಾರೆ. ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದರೆ ಮುಕೇಶ್ ಅಂಬಾನಿ ಅವರ ಹಣದ ವಿಷಯ ಕೇಳಿದ್ರೆ ಶಾಕ್ ಆಗ್ತೀರ.

ಅಪ್ಪನಿಗೆ ಗೊತ್ತಾದ್ರೆ ದಂಡನೆ ಖಚಿತ , ಹೀಗಾಗಿ ಕದ್ದು ಬಿಯರ್ ಕುಡಿಯಲು ಜಾಗ ಕಂಡುಕೊಂಡಿದ್ದ ನಾಗಾರ್ಜುನ!

ಒಂದು ಸಮ್ಮೇಳನದಲ್ಲಿ ಮುಕೇಶ್ ಅಂಬಾನಿ ಈ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಹೊರಗೆ ಹೋಗುವಾಗ ತಾನು ಎಷ್ಟು ಹಣ ತೆಗೆದುಕೊಂಡು ಹೋಗ್ತೇನೆ ಎಂದು ಹೇಳಿದಾಗ ಎಲ್ಲರೂ ಅಚ್ಚರಿಗೊಂಡರು.

ಮುಕೇಶ್ ಹೇಳಿದ್ದನ್ನು ನಂಬುವುದು ಕಷ್ಟ. ಆದರೆ ಹಣದ ಬಗ್ಗೆ ಅವರಿಗೆ ವಿಭಿನ್ನ ದೃಷ್ಟಿಕೋನವಿದೆ. ರಿಲಯನ್ಸ್ ಗ್ರೂಪ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಣವನ್ನು ಬಂಡವಾಳ ಎಂದು ಪರಿಗಣಿಸುತ್ತಾರೆ, ಅದು ಅವರ ಕಂಪನಿಯನ್ನು ಅಪಾಯದಿಂದ ರಕ್ಷಿಸುತ್ತದೆ.

ಮುಕೇಶ್ ಅಂಬಾನಿ ತಮ್ಮ ಜೇಬಿನಲ್ಲಿ ಒಂದು ಪೈಸೆಯನ್ನೂ ಇಟ್ಟುಕೊಳ್ಳುವುದಿಲ್ಲ. ಶತಕೋಟಿ ಡಾಲರ್‌ಗಳ ಮಾಲೀಕರಾದರೂ, ಅವರ ಬಳಿ ಯಾವಾಗಲೂ ಹಣ ಇರುವುದಿಲ್ಲ.

ಅವರು ಒಮ್ಮೆ ಹೇಳಿದ್ದರು, “ನಾನು ಚಿಕ್ಕಂದಿನಿಂದಲೂ ನನ್ನ ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದಿಲ್ಲ, ಈಗಲೂ ಇಟ್ಟುಕೊಳ್ಳುವುದಿಲ್ಲ. ನನ್ನ ಬಳಿ ಕ್ರೆಡಿಟ್, ಡೆಬಿಟ್‌ ಕಾರ್ಡ್ ಕೂಡ ಇಲ್ಲ. ನನ್ನ ಸಹಾಯಕರು ಯಾವಾಗಲೂ ನನ್ನೊಂದಿಗೆ ಇರುತ್ತಾರೆ ಮತ್ತು ಅವರೇ ಬಿಲ್ ಪಾವತಿಸುತ್ತಾರೆ ಎಂದಿದ್ದಾರೆ. ಹೀಗಾಗಿ ಅಂಬಾನಿ ಅವರು ಕೋಟ್ಯಂತರ ರೂ ಇದ್ದರೂ 1 ಪೈಸೆ ಕೂಡ ಜೇಬಿನಲ್ಲಿ ಇಡುವುದಿಲ್ಲ.

click me!