Success Story Of A Businessman: ಅಂದು ಬಾಸ್ಕೆಟ್ ಬಾಲ್ ಆಟಗಾರ, ಇಂದು 300 ಕೋಟಿ ರೂ. ವಹಿವಾಟು ನಡೆಸೋ ಟ್ರಾವೆಲ್ ಕಂಪನಿ ಒಡೆಯ

By Suvarna News  |  First Published Jan 8, 2022, 3:46 PM IST

ಬಾಸ್ಕೆಟ್ ಬಾಲ್ ಆಟಗಾರನೊಬ್ಬ ಕೇವಲ ನಾಲ್ಕು ಟ್ಯಾಕ್ಸಿಗಳೊಂದಿಗೆ ಪ್ರಾರಂಭಿಸಿದ ಟ್ರಾವೆಲ್ ಕಂಪನಿ ಇಂದು ಕೋಟ್ಯಂತರ ರೂ. ವಹಿವಾಟು ನಡೆಸೋ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದೆ. ಆ ಬಾಸ್ಕೆಟ್ ಬಾಲ್ ಆಟಗಾರ ಯಾರು? ಆತ ಯಶಸ್ವಿ ಉದ್ಯಮಿಯಾದ ಯಶೋಗಾಥೆ ಇಲ್ಲಿದೆ.


Business Desk: ದೃಢ ಸಂಕಲ್ಪ,ಕಠಿಣ ಪರಿಶ್ರಮ,ಛಲ ಹಾಗೂ ಆತ್ಮವಿಶ್ವಾಸ ವ್ಯಕ್ತಿಯ ಬದುಕಿನ ಚಿತ್ರಣವನ್ನೇ ಬದಲಿಸಿಬಿಡಬಹುದು ಅನ್ನೋದಕ್ಕೆ ಭಾರತದ ಬಾಸ್ಕೆಟ್ ಬಾಲ್ (Basketball ) ತಂಡದ ಮಾಜಿ (Former) ಆಟಗಾರ (Player), ಸಾರಿಗೆ ಉದ್ಯಮಿ (Businessman) ಪ್ರಸನ್ನ ಪಟವರ್ಧನ್ (Prasanna Patwardhan) ಜ್ವಲಂತ ನಿದರ್ಶನ. 1964ರಲ್ಲಿ ಕೇವಲ ನಾಲ್ಕು ಟ್ಯಾಕ್ಸಿಗಳೊಂದಿಗೆ ಪ್ರಾರಂಭವಾದ ಪ್ರಸನ್ನ ಪರ್ಪಲ್ ಮೊಬಿಲಿಟಿ ಸೊಲ್ಯುಷನ್ಸ್ ಪ್ರೈವೇಟ್ ಲಿ. (Prasanna Purple Mobility Solutions Pvt. Ltd.) ಇಂದು ಸಾರಿಗೆ ವಲಯದಲ್ಲಿ(transport sector) ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, 300 ಕೋಟಿ ರೂ. ವಹಿವಾಟು ( turnover) ನಡೆಸುತ್ತಿದೆ. ಕುಟುಂಬದ ಉದ್ಯಮವನ್ನು ಮುನ್ನಡೆಸೋದು ಮಾತ್ರವಲ್ಲ, ವಿಸ್ತರಿಸೋ ಕನಸು ಕಾಣುತ್ತಿರೋ ಯುವಕರಿಗೆ ಪ್ರಸನ್ನ ಪಟವರ್ಧನ್ ಕಥೆ ಪ್ರೇರಣೆಯಾಗಿದೆ. 

ಪ್ರಸನ್ನ ಪರ್ಪಲ್ ಎಂಬ ಬ್ರ್ಯಾಂಡ್ ನೇಮ್ ಮೂಲಕ ಜನಪ್ರಿಯತೆ ಗಳಿಸಿರೋ ಈ ಸಂಸ್ಥೆ ಇಂದು ಭಾರತದ 85 ನಗರಗಳಲ್ಲಿ 1200 ಬಸ್ ಗಳು (buses) ಹಾಗೂ ಕಾರುಗಳ (cars) ಸೇವೆ ಒದಗಿಸುತ್ತಿದೆ. ಇವುಗಳಲ್ಲಿ ಸುಮಾರು 700 ಕ್ಕೂ ಅಧಿಕ ಬಸ್ ಗಳು ಈ ಕಂಪನಿಯ ಒಡೆತನಕ್ಕೆ ಸೇರಿವೆ. 

Tap to resize

Latest Videos

undefined

Indian GDP: ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ.9.2ರಷ್ಟು ಏರಿಕೆ!

ಬಾಸ್ಕೆಟ್ ಬಾಲ್ ಆಟಗಾರ
ಪ್ರಸನ್ನ ಪರ್ಪಲ್ ಎಂಡಿ  ಪ್ರಸನ್ನ ಪಟವರ್ಧನ್, ಒಂದು ಸಮಯದಲ್ಲಿ ಕ್ರೀಡಾಪಟುವಾಗಿದ್ದರು. ಇವರು ಮಹಾರಾಷ್ಟ್ರ (Maharastra) ಬಾಸ್ಕೆಟ್ ಬಾಲ್ (Basketball ) ತಂಡದ ಕ್ಯಾಪ್ಟನ್ ಆಗಿದ್ದರು. ಅಷ್ಟೇ ಅಲ್ಲ, ಭಾರತದ ಬಾಸ್ಕೆಟ್ ಬಾಲ್ ತಂಡವನ್ನು ಕೂಡ ಪ್ರತಿನಿಧಿಸಿದ್ದರು. ಆದ್ರೆ ಆ ಬಳಿಕ ಮಂಡಿ (Knee) ನೋವಿನ ಕಾರಣದಿಂದ ಅವರು ಬಾಸ್ಕೆಟ್ ಬಾಲ್ ಆಟಗಾರರಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಇದು ಅವರ ಬದುಕಿಗೆ ಹೊಸ ತಿರುವು ನೀಡಿತು. ಕ್ರೀಡಾಪಟುವಿನಿಂದ ಉದ್ಯಮಿಯಾಗಿ ಬೆಳೆಯಲು ಪ್ರೇರಣೆಯಾಯ್ತು.

ಅಪ್ಪನ ಉದ್ಯಮ ವಿಸ್ತರಿಸಿದ ಮಗ
ಪುಣೆಯ ಮಧ್ಯಮ ವರ್ಗದ ಕೂಡು ಕುಟುಂಬವೊಂದರಲ್ಲಿ  1962ರಲ್ಲಿ ಹುಟ್ಟಿದ ಪ್ರಸನ್ನ, 24 ಜನರಿರೋ ತುಂಬು ಮನೆಯಲ್ಲಿ ಬೆಳೆದರು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಬಳಿಕ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಪ್ರಸನ್ನ ಅವರ ತಂದೆ ಟ್ಯಾಕ್ಸಿ ಸರ್ವೀಸ್ ನಡೆಸುತ್ತಿದ್ದರು. ಪುಣೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದರು. ಇದ್ರಿಂದ ಇವರ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಬರುತ್ತಿತ್ತು. ಆದ್ರೆ 1985 ರಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾಧ್ಯಾಪಕರಿಗೆ ಟ್ಯಾಕ್ಸಿ ಬದಲು ಕಾರ್ ಪೂಲ್ ಬಳಸಲು ಸಲಹೆ ನೀಡಿದರು. ಇದ್ರಿಂದ ಪ್ರಸನ್ನಅವರ ತಂದೆಯ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತು. ಕುಟುಂಬದ ಆದಾಯದಲ್ಲಿ ಇಳಿಕೆಯಾಯ್ತು. ಈ ಸಮಯದಲ್ಲಿ ಆಗತಾನೇ ಮ್ಯಾನೇಜ್ಮೆಂಟ್ ಪದವಿ ಮುಗಿಸಿದ ಪ್ರಸನ್ನ ತಂದೆಯ ಉದ್ಯಮಕ್ಕೆ ಪ್ರವೇಶಿಸಿದರು. ಕಾರ್ಪೋರೇಟ್ ಕಂಪನಿಗಳಿಗೆ ಟ್ಯಾಕ್ಸಿ ಸೇವೆ ಒದಗಿಸಲು ಯೋಜನೆ ರೂಪಿಸಿದರು. ಆರಂಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದರೂ ನಂತರದಲ್ಲಿ ಉದ್ಯಮ ಚೇತರಿಕೆ ಕಂಡಿತು. ಫಿಲಿಪ್ಸ್ ಹಾಗೂ ಟೆಲಿಕೊ ಅವರ ಮೊದಲ ಗ್ರಾಹಕರಾಗಿದ್ದು, ನಂತರ ಈ ಪಟ್ಟಿ ಬೆಳೆಯುತ್ತ ಸಾಗಿತು. ಪ್ರಸನ್ನ ಟ್ರಾವೆಲ್ಸ್ ವಹಿವಾಟು ಎರಡು, ಮೂರು ಪಟ್ಟು ಹೆಚ್ಚುತ್ತ ಸಾಗಿತು.1985ರಲ್ಲಿ ವಾರ್ಷಿಕ 3 ಲಕ್ಷ ರೂ.ವಿದ್ದ ಟರ್ನ್ ಒವರ್ ಹತ್ತು ವರ್ಷಗಳ ಬಳಿಕ ಅಂದ್ರೆ 1995ರಲ್ಲಿ 10 ಕೋಟಿ ರೂ. ತಲುಪಿತು. ಹೀಗೆ ಪ್ರತಿ ವರ್ಷ ವಹಿವಾಟು ಹೆಚ್ಚಿದಂತೆ ಪ್ರಸನ್ನ ಹೊಸ ಕಾರುಗಳು ಹಾಗೂ ಟೆಂಪೋಗಳನ್ನು ಖರೀದಿಸಿದರು.

Ratan Tata biography: ರತನ್ ಟಾಟಾ ಜೀವನಚರಿತ್ರೆ ದಾಖಲೆ ಮೊತ್ತಕ್ಕೆ ಮಾರಾಟ!

ಬಸ್ ಸೇವೆ ಪ್ರಾರಂಭ
1988ರಲ್ಲಿ ಪ್ರಸನ್ನ ಮೊದಲ ಬಸ್ ಸೇವೆ ಪ್ರಾರಂಭಿಸಿದರು. ಆ ಬಳಿಕ ಹಂತ ಹಂತವಾಗಿ ಮಹಾರಾಷ್ಟ್ರದ ವಿವಿಧ ನಗರಗಳು ಹಾಗೂ ಬೇರೆ ರಾಜ್ಯಗಳಲ್ಲೂ ಬಸ್ ಸೇವೆ ವಿಸ್ತರಿಸಿದ್ದಾರೆ. ಇಂದು ಅವರ ಬಳಿ 3000ಕ್ಕೂ ಅಧಿಕ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ತರಬೇತಿ ನೀಡಲು ಪ್ರಸನ್ನ ಡ್ರೈವಿಂಗ್ ಸ್ಕೂಲ್ ಕೂಡ ಪ್ರಾರಂಭಿಸಿದ್ದಾರೆ. 

1986ರಲ್ಲಿ ಮೋನಿಕಾ ಅವರನ್ನು ವಿವಾಹದ ಪ್ರಸನ್ನ ಅವರಿಗೆ ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ಸೌರಬ್ ಕಂಪನಿಯ ಕಾರ್ಗೋ ಉದ್ಯಮ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಿರಿಯ ಪುತ್ರ ಹರ್ಷವರ್ಧನ್ ಫುಟ್ ವೇರ್ ಉತ್ಪಾದನಾ ಉದ್ಯಮ ಹೊಂದಿದ್ದಾರೆ. 

click me!