ಬರೀ 20ನೇ ವಯಸ್ಸಿಗೆ 770 ಮಿಲಿಯನ್ ಡಾಲರ್ ವಹಿವಾಟು ನಡೆಸೋ ಉದ್ಯಮ ಕಟ್ಟಿದ ಯುವಕ;ಈತನ ಯಶಸ್ಸಿನ ಗುಟ್ಟೇನು?

By Suvarna NewsFirst Published Dec 4, 2023, 2:12 PM IST
Highlights

ಉದ್ಯಮದಲ್ಲಿ ಯಶಸ್ಸು ಸಾಧಿಸಲು ವಯಸ್ಸು ಮುಖ್ಯವಲ್ಲ ಎಂಬುದನ್ನು ರಾಜಸ್ಥಾನದ ಈ ಯುವಕ ಸಾಬೀತುಪಡಿಸಿದ್ದಾನೆ. ಬರೀ 20ನೇ ವಯಸ್ಸಿನಲ್ಲಿ  770 ಮಿಲಿಯನ್ ಡಾಲರ್ ಮೌಲ್ಯದ ಉದ್ಯಮವನ್ನು ಈತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾನೆ. 
 

Business Desk: ಇತ್ತೀಚಿನ ದಿನಗಳಲ್ಲಿ ಮನೆಯ ಒಳಾಂಗಣ ವಿನ್ಯಾಸಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ರಾಜಸ್ಥಾನ ಮೂಲದ 20 ವರ್ಷದ ಯುವಕನೊಬ್ಬ 770 ಮಿಲಿಯನ್ ಡಾಲರ್ ಮೌಲ್ಯದ ಕಂಪನಿ ಕಟ್ಟಿದ್ದಾನೆ. ಗೃಹ ಪೀಠೋಪಕರಣಗಳ ತಯಾರಿಕೆ ಹಾಗೂ ರಫ್ತಿನ ಉದ್ಯಮ ಸ್ಥಾಪಿಸಿರುವ ಈತ ಈಗ ಈ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾನೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಕಂಡಿರುವ ಈ ಯುವಕನ ಹೆಸರು ಶ್ರೀರಾಮ್ ಜಂಗೀರ್. ಶ್ರೀರಾಮ್ ಟಿಂಬರ್ ಹಾಸ್ಟ್ ಕಲಾ ಉದ್ಯೋಗ ಎಂಬ ಸಂಸ್ಥೆಯ ಸಿಇಒ ಹಾಗೂ ಅಧ್ಯಕ್ಷ. ಶ್ರೀರಾಮ್ ಟಿಂಬರ್ ಸಂಸ್ಥೆಯನ್ನು ಶ್ರೀರಾಮ್ ಜಂಗೀರ್ ಅವರ ತಂದೆ ಬಾಬುಲಾಲ್ ಜಂಗೀರ್ 2001ರಲ್ಲಿ ಪ್ರಾರಂಭಿಸಿದ್ದರು. ಆದರೆ, ಸಂಸ್ಥೆ ಅಷ್ಟೇನೂ ಹೆಸರು ಗಳಿಸಿರಲಿಲ್ಲ. ಆದರೆ, 2018ರಲ್ಲಿ ಶ್ರೀರಾಮ್ ಸಂಸ್ಥೆಯ ಚುಕ್ಕಾಣಿ ಹಿಡಿದ ಬಳಿಕ ಉದ್ಯಮಕ್ಕೆ ಹೊಸ ದಿಕ್ಕು ನೀಡಿದರು. ಬದಲಾಗುತ್ತಿರುವ ಟ್ರೆಂಡ್ ಗಳಿಗೆ ಅನುಗುಣವಾಗಿ ಫರ್ನಿಚರ್ ಗಳನ್ನು ಸಿದ್ಧಪಡಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾದರು. ಅಮೆರಿಕ, ಕೆನಡಾದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಈ ಸಂಸ್ಥೆ ಹೊಂದಿದೆ. 

ಶ್ರೀರಾಮ್ ಟಿಂಬರ್ (SRT) ಉದ್ಯಮ ಜಗತ್ತಿನಲ್ಲಿ ಹೊಸ ಮೈಲುಗಲ್ಲನ್ನೇ ಸಾಧಿಸಿದೆ ಎಂದರೆ ತಪ್ಪಿಲ್ಲ. ಇನ್ನು ಶ್ರೀರಾಮ್ ಟಿಂಬರ್ INMARWAR.com ಹಾಗೂ myShriram.com ಎಂಬ ಆನ್ ಲೈನ್ ಫರ್ನಿಚರ್ ಕಂಪನಿಯನ್ನು ಕೂಡ ಹೊಂದಿದೆ. ರಾಜಸ್ಥಾನ ಮೂಲದ ಈ ಕಂಪನಿ ಈಗ ಗೃಹೋಪಕರಣಗಳ ಉದ್ಯಮದಲ್ಲಿ ಜನಪ್ರಿಯ ಹೆಸರಾಗಿದೆ. INMARWAR.com ಉಸ್ತುವಾರಿಯನ್ನು ಶ್ರೀರಾಮ್ ಅವರ ಸಹೋದರ ಶ್ರೀಕೃಷ್ಣ ಜಂಗೀರ್ ನೋಡಿಕೊಳ್ಳುತ್ತಿದ್ದಾರೆ. INMARWAR.com ಅನ್ನು 2020ರ ಆಗಸ್ಟ್ 18ರಂದು ಸ್ಥಾಪಿಸಲಾಗಿತ್ತು. ಈ ಆನ್ ಲೈನ್ ಫರ್ನಿಚರ್ ಶಾಪ್ ಗ್ರಾಹಕರಿಗೆ ವಲ್ಡ್ ಕ್ಲಾಸ್ ವಿನ್ಯಾಸದ ಪೀಠೋಪಕರಣಗಳನ್ನು ಒದಗಿಸುತ್ತಿದೆ.

Latest Videos

ಯಶಸ್ವಿ ಉದ್ಯಮಿಗಳನ್ನು ಸಂದರ್ಶಿಸುವ ಈತ ಕೂಡ ಸಾಧಕನೇ;ಮಿಂತ್ರಾ,ಕಲ್ಟ್ ಫಿಟ್ ಸ್ಥಾಪಕನಾದ ಈತನ ಸಂಪತ್ತು4200 ಕೋಟಿ ರೂ.

ಶ್ರೀರಾಮ್ ಟಿಂಬರ್ ಕಂಪನಿ ಮರ, ಕಬ್ಬಿಣ, ಮಾರ್ಬಲ್, ಶಿಲೆಗಳಿಂದ ಪೀಠೋಪಕರಣಗಳನ್ನು ಸಿದ್ಧಪಡಿಸಿ ನೀಡುತ್ತದೆ. ಮನೆಯ ಹಾಲ್, ಡೈನಿಂಗ್ ರೂಮ್, ಬೆಡ್ ರೂಮ್, ಹೊರಾಂಗಣ ಸೇರಿದಂತೆ ವಿವಿಧ ರೂಮ್ ಹಾಗೂ ಅಗತ್ಯಗಳಿಗೆ ತಕ್ಕದಾದ ಪೀಠೋಪಕರಣಗಳನ್ನು ಈ ಕಂಪನಿ ಸಿದ್ಧಪಡಿಸುತ್ತದೆ. 

500ಕ್ಕೂ ಅಧಿಕ ಉದ್ಯೋಗಿಗಳು
ಶ್ರೀರಾಮ್ ಟಿಂಬರ್ ಕಂಪನಿಯಲ್ಲಿ ಪ್ರಸ್ತುತ 500ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.  250ಕ್ಕೂ ಅಧಿಕ ಕೌಶಲ್ಯ ಹೊಂದಿರುವ ಕಲಾಕಾರರಿದ್ದಾರೆ. ಇನ್ನು ಈ ಕಂಪನಿ 3 ಕಾರ್ಖಾನೆಗಳನ್ನು ಹೊಂದಿದೆ. ಇದರಲ್ಲಿ 100ಕ್ಕೂ ಅಧಿಕ ಪರಿಣಿತ ಮಷಿನ್ ಗಳಿವೆ. ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಪೀಠೋಪಕರಣಗಳನ್ನು ಈ ಕಂಪನಿಯಲ್ಲಿ ಸಿದ್ಧಪಡಿಸಲಾಗುತ್ದೆ.

770 ಮಿಲಿಯನ್ ವಹಿವಾಟು
ಈ ಕಂಪನಿ 770 ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತದೆ. ಅಮೆರಿಕ ಹಾಗೂ ಕೆನಡಾದಲ್ಲಿ ಈ ಕಂಪನಿ 20ಕ್ಕೂ ಅಧಿಕ ಸಗಟು ಹಾಗೂ ರಿಟೇಲ್ ಗ್ರಾಹಕರನ್ನು ಹೊಂದಿದೆ. ಭಾರತದ ಟಾಪ್ 50 ಪೀಠೋಪಕರಣಗಳನ್ನು ರಫ್ತು ಮಾಡುವ ಸಂಸ್ಥೆಗಳಲ್ಲಿ ಇದು ಕೂಡ ಒಂದು. ಈ ಕಂಪನಿಯ ಉತ್ಪನ್ನಗಳು ಗರಿಷ್ಠ 2ಲಕ್ಷ ರೂ. ತನಕ ಬೆಲೆ ಹೊಂದಿವೆ. 

ವಜ್ರೋದ್ಯಮದ ದೊರೆಯಾದ ರೈತನ ಮಗ; ಸಾವ್ಜಿ ಧಂಜಿ ಧೋಲಕಿಯಾ ಯಶಸ್ಸಿನ ಕಥೆ ಇಲ್ಲಿದೆ

ಮತ್ತೊಂದು ಪ್ರಾಜೆಕ್ಟ್
ಮುಂದಿನ ಕೆಲವು ತಿಂಗಳಲ್ಲಿ ಇನ್ನೊಂದು ಹೊಸ ಪ್ರಾಜೆಕ್ಟ್ ಪ್ರಾರಂಭಿಸುವ ಯೋಚನೆ ಶ್ರೀರಾಮ್ ಅವರಿಗಿದೆ. ಉತ್ತಮ ಗುಣಮಟ್ಟ ಹಾಗೂ ಜನರ ಅಭಿರುಚಿಗೆ ಅನುಗುಣವಾಗಿ ಪೀಠೋಪಕರಣಗಳನ್ನು ಸಿದ್ಧಪಡಿಸುವ ಮೂಲಕ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ಕೂಡ ಶ್ರೀರಾಮ್ ಅವರಿಗಿದೆ. ಇನ್ನು myShriram.com ಎಂಬ ಇ-ಕಾಮರ್ಸ್ ಕಂಪನಿಯನ್ನು ಕೂಡ ಇವರು ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆ ಮೂಲಕ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ನೆರವಾಗುವ ಗುರಿಯನ್ನು ಕೂಡ ಶ್ರೀರಾಮ್ ಹೊಂದಿದ್ದಾರೆ. 

click me!