ಕರ್ಣಾಟಕ ಬ್ಯಾಂಕ್‌: ಗೃಹ ಸಾಲ ವಿಶೇಷ ಅಭಿಯಾನಕ್ಕೆ ಚಾಲನೆ

By Kannadaprabha News  |  First Published Apr 19, 2023, 3:30 AM IST

ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವು ಇದ್ದ ಸ್ಥಳದಲ್ಲೇ, ಅವರ ಅನುಕೂಲಕರ ಸಮಯದಲ್ಲೇ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ ವೇದಿಕೆಗಳ ಮೂಲಕ ಪಡೆಯಬಹುದು


ಮಂಗಳೂರು(ಏ.19): ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ ತನ್ನ ಶತಮಾನೋತ್ಸವ ಸಂಭ್ರಮವನ್ನು ಗ್ರಾಹಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಗೃಹ ಸಾಲವನ್ನು ಏ.17 ರಿಂದ ಜು.17ರ ವರೆಗೆ ವಿಶೇಷ ಅಭಿಯಾನ-‘ಕೆಬಿಎಲ್‌ ಸೆಂಟಿನರಿ ಮಹೋತ್ಸವ’ದ ಮೂಲಕ ಮಂಜೂರು ಮಾಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು.

ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವು ಇದ್ದ ಸ್ಥಳದಲ್ಲೇ, ಅವರ ಅನುಕೂಲಕರ ಸಮಯದಲ್ಲೇ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ ವೇದಿಕೆಗಳ ಮೂಲಕ ಪಡೆಯಬಹುದು. ಈ ಸಾಲಗಳಿಗೆ ತ್ವರಿತ ತಾತ್ವಿಕ ಮಂಜೂರಾತಿ ಲಭ್ಯವಾಗಲಿದ್ದು, ಇದು ಗ್ರಾಹಕರ ಸಂತಸ ಹೆಚ್ಚಿಸಲಿದೆ. ಈ ಅವಧಿಯಲ್ಲಿ ಗೃಹ ಸಾಲಗಳು ಶೇ.8.75ರಿಂದ ಆರಂಭವಾಗುವ ಆಕರ್ಷಕ ಬಡ್ಡಿದರಗಳಲ್ಲಿ ಲಭ್ಯವಾಗಲಿದೆ. ಈ ಅಭಿಯಾನದಲ್ಲಿ ಗೃಹಸಾಲಗಳು ಸಂಸ್ಕರಣಾ ಶುಲ್ಕ ರಹಿತವಾಗಿ ಗ್ರಾಹಕರಿಗೆ ಸಿಗಲಿದೆ. ಅಲ್ಲದೆ ಇತರ ಶುಲ್ಕಗಳಲ್ಲೂ ವಿಶೇಷ ವಿನಾಯ್ತಿ ನೀಡಲಾಗಿದೆ ಹಾಗೂ ಇನ್ನೂ ಅನೇಕ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ.

Tap to resize

Latest Videos

ಕರ್ನಾಟಕ ಬ್ಯಾಂಕ್‌ನಿಂದ ಕಸ್ಟಮ್ಸ್‌ ತೆರಿಗೆ ಪಾವತಿಗೆ ಅಸ್ತು

ಈ ಅಭಿಯಾನಕ್ಕೆ ಚಾಲನೆ ನೀಡಿದ ಬ್ಯಾಂಕಿನ ಇಂಟರಿಯಮ್‌ ಮ್ಯಾನೇಜಿಂಗ್‌ ೕಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಶೇಖರ್‌ ರಾವ್‌, ಬ್ಯಾಂಕಿನ ಶತಮಾನೋತ್ಸವ ವರ್ಷದಲ್ಲಿ ಈ ಅಭಿಯಾನದ ಮುಖಾಂತರ ವಿಶೇಷ ಗೃಹಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ತುಂಬಾ ಸಂತೋಷವೆನಿಸುತ್ತದೆ. ಅತ್ಯಂತ ಸುಲಭವಾಗಿ ಡಿಜಿಟಲ್‌ ಪ್ರಕ್ರಿಯೆಗಳ ಮೂಲಕವೂ ಸಾಲಗಳಿಗೆ ಕ್ಷಿಪ್ರ ಮಂಜೂರಾತಿ, ಆಕರ್ಷಕ ಬಡ್ಡಿದರದಲ್ಲಿ ದೊರೆಯಲಿದ್ದು, ತನ್ಮೂಲಕ ಸ್ವಂತ ಮನೆ ಹೊಂದುವ ಕನಸುಗಳು ನನಸಾಗಲಿದೆ. ‘ನಿಮ್ಮ ಕುಟುಂಬದ ಬ್ಯಾಂಕ್‌ ದೇಶದಾದ್ಯಂತ’ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಬ್ಯಾಂಕ್‌ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲಿದೆ ಎಂದು ಹೇಳಿ ಈ ಅಭಿಯಾನಕ್ಕೆ ಶುಭ ಹಾರೈಸಿದರು.

click me!