ಭಾರತಕ್ಕೆ ಆಗಮಿಸಿರುವ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿ ದಿನ ಸ್ಯಾಲರಿ 1.10 ಕೋಟಿ ರೂ!

By Suvarna News  |  First Published Apr 18, 2023, 7:55 PM IST

ಭಾರತದಲ್ಲಿ ಮೊಟ್ಟಮೊದಲ ಆ್ಯಪ್ ಸ್ಟೋರ್ ಉದ್ಘಾಟನೆ ಮಾಡಿರುವ ಸಿಇಒ ಟಿಮ್ ಕುಕ್, ಇದೀಗ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಜ್ಜಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಆಸ್ತಿ, ಪ್ರತಿ ದಿನದ ಸ್ಯಾಲರಿ ಕೇಳಿದರೆ ತಲೆ ತಿರುಗುತ್ತೆ. ಹಾಗಾದರೆ ಕುಕ್  ಒಟ್ಟು ಆಸ್ತಿ, ವಾರ್ಷಿಕ ವೇತನ ಸೇರಿದಂತೆ ಇತರ ಆದಾಯದ ರೋಚಕ ಮಾಹಿತಿ ಇಲ್ಲಿದೆ.


ಮುಂಬೈ(ಏ.18): ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಕಾರ್ಯಾರಂಭಗೊಂಡಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆ್ಯಪಲ್ ಸ್ಟೋರ್ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ ಆ್ಯಪಲ್ ಸಿಇಒ, ಉದ್ಘಾಟನೆ ಬಳಿಕ ಸಂತಸ ಹಂಚಿಕೊಂಡಿದ್ದಾರೆ. ಏಪ್ರಿಲ್ 20 ರಂದು ದೆಹಲಿಯಲ್ಲಿ 2ನೇ ಆ್ಯಪಲ್ ಸ್ಟೋರ್ ಉದ್ಘಾಟನೆಯಾಗುತ್ತಿದೆ. ರಿಲಯನ್ಸ್ ಚೇರ್ಮೆನ್ ಮುಕೇಶ್ ಅಂಬಾನಿ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ನೇಹಾ ಧೂಪಿಯಾ ಭೇಟಿಯಾಗಿರುವ ಟಿಮ್ ಕುಕ್, ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಭಾರತದಲ್ಲಿ ಆ್ಯಪಲ್ ವ್ಯವಾಹರ ವಿಸ್ತರಿಸಿರುವ ಟಿಮ್ ಕುಕ್ ಪ್ರತಿ ದಿನದ ಸ್ಯಾಲರಿ 1.10 ಕೋಟಿ ರೂಪಾಯಿ. ಅಂದರೆ ವಾರ್ಷಿಕ ವೇತನ 401 ಕೋಟಿ ರೂಪಾಯಿ.

61 ವರ್ಷದ ಟಿಮ್ ಕುಕ್ 2022ರ ಅಂತ್ಯದಲ್ಲಿ ಅಚ್ಚರಿ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲ ಕಂಪನಿಗೂ ಮನವಿ ಮಾಡಿದ್ದರು. ನನ್ನ ವೇತನ ತುಂಬಾ ಹೆಚ್ಚಿದೆ. ಇದನ್ನು ಕಡಿತಗೊಳಿಸಿ ಎಂದು ಆ್ಯಪಲ್ ಕಂಪನಿಗೆ ಮನವಿ ಮಾಡಿದ್ದರು. 2022ರ  ವರೆಗೆ ಟಿಮ್ ಕುಕ್ 98.7 ಮಿಲಿಯನ್ ಅಮೇರಿಕನ್ ಡಾಲರ್ ವಾರ್ಷಿಕ ವೇತನ ಪಡೆಯುತ್ತಿದ್ದರು. ಅಂದರೆ ಸರಿಸುಮಾರು 800 ರಿಂದ 900 ಕೋಟಿ ರೂಪಾಯಿ. ಕುಕ್ ಮನವಿ ಬಳಿಕ 2023ರಿಂದ ವಾರ್ಷಿಕವೇತನವನ್ನು 49 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಕಡಿತಗೊಳಿಸಲಾಗಿತ್ತು.

Latest Videos

undefined

ಸಂಬಳ ಸಿಕ್ಕಾಪಟ್ಟೆ ಹೆಚ್ಚು ಎಂದಿದ್ದ ಟಿಮ್‌ ಕುಕ್‌ಗೆ ಶೇ.50ರಷ್ಟು ವೇತನ ಕಡಿತ ಮಾಡಿದ ಆಪಲ್‌!

ಇದರ ಜೊತೆಗೆ ಆ್ಯಪಲ್ ಕಂಪನಿಯಲ್ಲಿ ಶೇಕಡಾ 1 ರಷ್ಟು ಷೇರು ಹೊಂದಿದ್ದಾರೆ. ಕಳೆದ ವರ್ಷ ಸಣ್ಣ ಪ್ರಮಾಣದ ಷೇರು ಮಾರಾಟ ಮಾಡಿದ್ದರು. ಆದರೂ ವಾರ್ಷಿಕವಾಗಿ ಕೋಟಿ ಕೋಟಿ ರೂಪಾಯಿಗಳಲ್ಲಿ ಷೇರು ಪಾಲನ್ನು ಪಡೆಯುತ್ತಾರೆ. 2023ರಲ್ಲೂ ಟಿಮ್ ಕುಕ್ ಸರಿಸುಮಾರು 815 ರಿಂದ 900 ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಇದರಲ್ಲಿ ವೇತನವೂ ಸೇರಿದೆ. 

ಇದೀಗ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟಿಸಿ ಭಾರತವನ್ನು ಆ್ಯಪಲ್ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದೆ. ವಿದೇಶಕ್ಕೆ ಗರಿಷ್ಠ ಫೋನ್ ರಫ್ತುವಿನಲ್ಲಿ ಆ್ಯಪಲ್ ಐಫೋನ್ ಮೊದಲ ಸ್ಥಾನದಲ್ಲಿದೆ. ಇನ್ನು ಭಾರತದಲ್ಲಿ ಐಫೋನ್ ಬಳಕೆಯೂ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ಕಂಪನಿಗೆ ಇದೀಗ ಭಾರತ ಪ್ರಮುಖ ಮಾರುಕ್ಟಟೆಯಾಗಿದೆ.

Make in India: ವಾರ್ಷಿಕ $50 ಬಿಲಿಯನ್ ಮೌಲ್ಯದ ಆ್ಯಪಲ್‌ ಸರಕು ಉತ್ಪಾದನೆಗೆ ಕೇಂದ್ರ ಪ್ರಸ್ತಾಪ!‌

ಮುಂಬೈ ಉಪನಗರದ ಜಿಯೋ ವಲ್ಡ್‌ರ್‍ ಡ್ರೈವ್‌ ಮಾಲ್‌ನಲ್ಲಿ ಆ್ಯಪಲ್ ಮಳಿಗೆ ತರೆಯಲಾಗಿದ್ದು, ಇದಕ್ಕೆ ‘ಆ್ಯಪಲ್‌ ಬಿಕೆಸಿ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಮ್‌ ಕುಕ್‌, ‘ಮುಂಬೈನಲ್ಲಿ ಆ್ಯಪಲ್‌ ಸ್ಟೋರ್‌ ಆರಂಭಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಸ್ಫೂರ್ತಿದಾಯಕವಾಗಿದೆ. ಅತ್ಯದ್ಭುತ ಪ್ರತಿಕ್ರಿಯೆ ನೋಡುತ್ತುತ್ತಿದ್ದೇವೆ. ಭಾರತದ ಮೊದಲ ಆ್ಯಪಲ್‌ ಬಿಕೆಸಿ ಸ್ಟೋರ್‌ ಆರಂಭಿಸಲು ಸಂತಸವಾಗುತ್ತಿದೆ’ ಎಂದಿದ್ದಾರೆ.
 

click me!