ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳು ಈ ತಿಂಗಳಿಂದ ಜಾರಿಗೆ ಬರುವಂತೆ ಹೆಚ್ಚಿಸಿವೆ. ಹೀಗಿರುವಾಗ 8 ಪ್ರಮುಖ ಬ್ಯಾಂಕುಗಳ ಪರಿಷ್ಕೃತ ಬಡ್ಡಿದರದ ಮಾಹಿತಿ ಇಲ್ಲಿದೆ.
ನವದೆಹಲಿ (ಜ.16): ಅನೇಕ ಬ್ಯಾಂಕುಗಳು ಇತ್ತೀಚೆಗೆ ಸಾಲದ ಮೇಲಿನ ಬಡ್ಡಿದರವನ್ನು ಬದಲಾಯಿಸಿವೆ. ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರ (ಎಂಸಿಎಲ್ ಆರ್) ಆಧರಿಸಿ 2024ರ ಜನವರಿಯಿಂದ ಅನ್ವಯಿಸುವಂತೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿದೆ. ಈ ರೀತಿ ಸಾಲಗಳ ಮೇಲಿನ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಿದ ಬ್ಯಾಂಕುಗಳಲ್ಲಿ ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ), ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಸೇರಿವೆ. ಹಾಗಾದ್ರೆ ಈ ಪ್ರಮುಖ ಬ್ಯಾಂಕುಗಳು ತಮ್ಮ ಬಡ್ಡಿದರದಲ್ಲಿ ಎಷ್ಟು ಹೆಚ್ಚಳ ಮಾಡಿವೆ? ಇಲ್ಲಿದೆ ಮಾಹಿತಿ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಜನವರಿ 1ರಿಂದ ಅನ್ವಯವಾಗುವಂತೆ ಎಂಸಿಎಲ್ ಆರ್ 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗಿದೆ. ಈ ಹಿಂದೆ ಓವರ್ ನೈಟ್ ಎಂಸಿಎಲ್ ಆರ್ ದರ ಶೇ.8.5ರಷ್ಟಿದ್ದು, ಈಗ ಶೇ.8.6ಕ್ಕೆ ನಿಗದಿಪಡಿಸಲಾಗಿದೆ. ಇನ್ನು ಒಂದು ತಿಂಗಳ ಎಂಸಿಎಲ್ ಆರ್ ಶೇ.8.5ರಷ್ಟಿದ್ದು, ಈಗ ಶೇ..8.6ರಷ್ಟಿದೆ. ಇನ್ನು ಮೂರು ತಿಂಗಳ ಎಂಸಿಎಲ್ ಆರ್ ದರವನ್ನು ಶೇ.8.55ರಿಂದ ಶೇ.8.65ಕ್ಕೆ ಪರಿಷ್ಕರಿಸಲಾಗಿದೆ. ಇನ್ನು ಆರು ತಿಂಗಳ ದರವನ್ನು ಶೇ. 8.90ರಿಂದ ಶೇ.9ಕ್ಕೆ ಹೆಚ್ಚಿಸಲಾಗಿದೆ. ಇನ್ನು ಒಂದು ವರ್ಷದ ಅವಧಿಯ ದರ ಈ ಹಿಂದಿನ ಶೇ.9ರಿಂದ ಶೇ.9.10ಕ್ಕೆ ನಿಗದಿಪಡಿಸಲಾಗಿದೆ.
ತೆರಿಗೆ ಉಳಿತಾಯದ ಎಫ್ ಡಿಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು
ಪಿಎನ್ ಬಿ
ಪಿಎನ್ ಬಿ ವೆಬ್ ಸೈಟ್ ಪ್ರಕಾರ ಜನವರಿ 1ರಿಂದ ಬ್ಯಾಂಕ್ ಸಾಲದ ದರದಲ್ಲಿ ಏರಿಕೆ ಮಾಡಿದೆ. ಅದರ ಪ್ರಕಾರ ಓವರ್ ನೈಟ್ ಎಂಸಿಎಲ್ ಆರ್ ದರ ಈಗ ಶೇ.8.25ರಷ್ಟಿದೆ (ಈ ಹಿಂದೆ ಶೇ.8.2), ಒಂದು ತಿಂಗಳ ದರ ಶೇ.8.30 (ಈ ಹಿಂದೆ ಶೇ.8.25), ಮೂರು ತಿಂಗಳ ದರ ಶೇ.8.40 (ಈ ಹಿಂದಿನ ಶೇ.8.35), ಆರು ತಿಂಗಳ ದರ ಶೇ.8.60 (ಈ ಹಿಂದೆ ಶೇ.8.55) ಹಾಗೂ ಒಂದು ವರ್ಷಕ್ಕೆ ಶೇ.8.70 (ಈ ಹಿಂದೆ ಶೇ.8.65).
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಬ್ಯಾಂಕ್ ಹೊಸ ಬಡ್ಡಿದರಗಳು ಜನವರಿ 1ರಿಂದ ಜಾರಿಗೆ ಬರಲಿವೆ. ಓವರ್ ನೈಟ್ ಎಂಸಿಎಲ್ ಆರ್ ದರ ಶೇ.9.2, ಂದು ತಿಂಗಳ ಸಾಲದ ಮೇಲಿನ ಎಂಸಿಎಲ್ ಆರ್ ಶೇ.9.45, ಮೂರು ತಿಂಗಳ ದರ ಶೇ.10, ಆರು ತಿಂಗಳ ದರ ಶೇ.10.25 ಹಾಗೂ ಒಂದು ವರ್ಷದ ದರ ಶೇ.10.50 ಇರಲಿದೆ.
ಬ್ಯಾಂಕ್ ಆಫ್ ಇಂಡಿಯಾ
ಓವರ್ ನೈಟ್ ಅವಧಿಯ ಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಆಫ್ ಇಂಡಿಯಾ 5 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿದೆ. ಇದು ಜನವರಿ 1ರಿಂದ ಜಾರಿಗೆ ಬರಲಿದೆ. ಇದರಿಂದ ಓವರ್ ನೈಟ್ ಎಂಸಿಎಲ್ ಆರ್ ದರ ಶೇ.8, ಒಂದು ತಿಂಗಳ ಅವಧಿಗೆ ಶೇ.8.25, ಮೂರು ತಿಂಗಳ ಅವಧಿಗೆ ಶೇ.8.40, ಆರು ತಿಂಗಳಿಗೆ ಶೇ.8.60 ಹಾಗೂ ಒಂದು ವರ್ಷಕ್ಕೆ ಶೇ.8.80.
ಬ್ಯಾಂಕ್ ಆಫ್ ಬರೋಡಾ
2023ರ ಜನವರಿ 12ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡಾ ಎಂಸಿಎಲ್ ಆರ್ ದರದಲ್ಲಿ ಬದಲಾವಣೆ ಮಾಡಿದೆ. ಓವರ್ ನೈಟ್ ಎಂಸಿಎಲ್ ಆರ್ ದರ ಶೇ.8.5, ಒಂದು ತಿಂಗಳ ಎಂಸಿಎಲ್ ಆರ್ ದರದಲ್ಲಿ ಯಾವುದೇ ಬದಲಾವಣೆಯಾಗದೆ ಶೇ.8.3ರಷ್ಟಿದೆ. ಇನ್ನು ಮೂರು ತಿಂಗಳ ಎಂಸಿಎಲ್ ಆರ್ ಕೂಡ ಸ್ಥಿರವಾಗಿದ್ದು, ಶೇ.8.4ರಷ್ಟಿದೆ. ಆರು ತಿಂಗಳ ಎಂಸಿಎಲ್ ಆರ್ ನಲ್ಲಿ 5 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗಿದ್ದು, ಶೇ.8.60ರಷ್ಟಿದೆ. ಒಂದು ವರ್ಷದ ಎಂಸಿಎಲ್ ಆರ್ ಶೇ.8.80ರಷ್ಟಿದೆ.
ಕೆನರಾ ಬ್ಯಾಂಕ್
ಓವರ್ ನೈಟ್ ಎಂಸಿಎಲ್ ಆರ್ ದರ ಶೇ.8.05ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಎಂಸಿಎಲ್ ಆರ್ ದರ ಶೇ.8.15 ಹಾಗೂ ಮೂರು ತಿಂಗಳ ಎಂಸಿಎಲ್ ಆರ್ ಶೇ.8.25. ಇನ್ನು ಆರು ತಿಂಗಳ ಎಂಸಿಎಲ್ ಆರ್ ಶೇ.8.60ಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಎಂಸಿಎಲ್ ಆರ್ ಶೇ. 8.80ರಷ್ಟಿದೆ. ಇನ್ನುಎರಡು ವರ್ಷದ ಎಂಸಿಎಲ್ ಆರ್ ಶೇ.9.10 ಹಾಗೂ ಮೂರು ವರ್ಷದ ಎಂಸಿಎಲ್ ಆರ್ ಶೇ.9.20ರಷ್ಟಿದೆ.
ಹಸಿರು ರೂಪಾಯಿ ಅವಧಿ ಠೇವಣಿ ಪ್ರಾರಂಭಿಸಿದ ಎಸ್ ಬಿಐ; ಯಾರು ಹೂಡಿಕೆ ಮಾಡ್ಬಹುದು? ಬಡ್ಡಿ ಎಷ್ಟು?
ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಶೇ.8.80ರಿಂದ ಶೇ.9.30ಕ್ಕೆ ಹೆಚ್ಚಳವಾಗಿದೆ. ಓವರ್ ನೈಟ್ ಎಂಸಿಎಲ್ ಆರ್ 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಕಂಡು ಶೇ.8.80 ತಲುಪಿದೆ. ಇನ್ನು ಒಂದು ತಿಂಗಳ ಎಂಸಿಎಲ್ ಆರ್ ಶೇ.8.80ರಷ್ಟಿದೆ. ಮೂರು ತಿಂಗಳ ಎಂಸಿಎಲ್ ಆರ್ ಶೇ.9 ಹಾಗೂ ಆರು ತಿಂಗಳ ಎಂಸಿಎಲ್ ಆರ್ ಶೇ.9.20ರಷ್ಟಿದೆ. ಒಂದು ವರ್ಷದ ಅವಧಿಗೆ ಎಂಸಿಎಲ್ ಆರ್ ಶೇ.9.25 ಹಾಗೂ ಮೂರು ವರ್ಷಗಳ ಅವಧಿಗೆ ಶೇ.9.30ರಷ್ಟಿದೆ.
ಐಡಿಬಿಐ ಬ್ಯಾಂಕ್
ಓವರ್ ನೈಟ್ ಎಂಸಿಎಲ್ ಆರ್ ಶೇ.8.3, ಒಂದು ತಿಂಗಳ ಅವಧಿಗೆ ಶೇ.8.45, ಮೂರು ತಿಂಗಳಿಗೆ ಶೇ.8.75. ಆರು ತಿಂಗಳ ಅವಧಿಗೆ ಎಂಸಿಎಲ್ ಆರ್ ಶೇ.8.95, ಒಂದು ತಿಂಗಳ ಅವಧಿಗೆ ಶೇ.9, ಎರಡು ತಿಂಗಳ ಅವಧಿಗೆ ಶೇ. 9.55 ಹಾಗೂ ಮೂರು ತಿಂಗಳ ಅವಧಿಗೆ ಶೇ.9.95ರಷ್ಟಿದೆ.