ಕೊರೊನಾ ನಂತ್ರ ಬದಲಾಯ್ತು ಲಕ್, ಬ್ಯುಸಿನೆಸ್ ಆರಂಭಿಸಿದ ಕೂಲಿ ಯಶಸ್ವಿ!

By Suvarna NewsFirst Published Jan 16, 2024, 4:29 PM IST
Highlights

ನಿರ್ಧಾರ ದೃಢವಾಗಿದ್ದರೆ ಯಾವುದೇ ವ್ಯಕ್ತಿ ಕಠಿಣ ಸಾಧನೆಯನ್ನು ಸುಲಭವಾಗಿ ಮಾಡ್ಬಹುದು. ಇದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ. ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸುವ ಈತನ ಆಲೋಚನೆ ಬದಲಾಗಿದ್ದು ಕೊರೊನಾದಿಂದ. 
 

ಕೊರೊನಾ ಅನೇಕರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ಶಾಪವಾಗಿದೆ. ಕುಟುಂಬಕ್ಕಿಂತ ಒಂದೇ ಒಂದು ಆಸರೆಯನ್ನು ಕೊರೊನಾದಲ್ಲಿ ಕಳೆದುಕೊಂಡವರಿದ್ದಾರೆ. ಅಪ್ಪ – ಅಮ್ಮನನ್ನು ಕಳೆದುಕೊಂಡು ಅನಾಥರಾದ ಮಕ್ಕಳಿದ್ದಾರೆ. ಜೀವನ ನಡೆಸಲು ಸಾಕಾಗುವಷ್ಟು ಹಣ ಬರ್ತಿದ್ದ ಕೆಲಸ ಕಳೆದುಕೊಂಡವರಿದ್ದಾರೆ, ಸುಸೂತ್ರವಾಗು ನಡೆಯುತ್ತಿದ್ದ ವ್ಯಾಪಾರದ ಬಾಗಲಿ ಮುಚ್ಚಿದವರಿದ್ದಾರೆ, ಒಟ್ಟಿನಲ್ಲಿ ಕೊರೊನಾ ಲಕ್ಷಾಂತರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದ್ರೆ ಅನೇಕರ ಜೀವನ ರೀ ಸ್ಟಾರ್ಟ್ ಆಗಲು ಕೊರೊನಾ ಕಾರಣವಾಗಿದೆ. ಹೌದು, ಕೊರೊನಾದಿಂದ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದ ಅದೆಷ್ಟೋ ಮಂದಿ ಮತ್ತೆ ಎದ್ದು ನಿಂತಿದ್ದಾರೆ. ತಮ್ಮ ದಾರಿ ಬದಲಿಸಿ ಯಶಸ್ವಿಯಾಗಿದ್ದಾರೆ. ಕೊರೊನಾ ಅವರ ಜೀವನದಲ್ಲಿ ಹೊಸ ಅಧ್ಯಯನ ಶುರುವಾಗಲು ನಾಂದಿ ಹಾಡಿದೆ. ಇದ್ರಲ್ಲಿ ಈಗ ನಾವು ಹೇಳ್ತಿರುವ ವ್ಯಕ್ತಿ ಕೂಡ ಸೇರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಮೂರು ಹೊತ್ತಿನ ಊಟಕ್ಕೆ ಕಷ್ಟಪಡ್ತಿದ್ದ ವ್ಯಕ್ತಿ ಜೀವನ ಕೊರೊನಾ ನಂತ್ರ ಸಂಪೂರ್ಣ ಬದಲಾಗಿದೆ. ಕೊರೊನಾ ಉದ್ಯೋಗಿ ಒಬ್ಬನನ್ನು ಮಾಲೀಕನ ಹಂತಕ್ಕೆ ತಂದು ನಿಲ್ಲಿಸಿದೆ. ಆತನ ಯಶಸ್ಸಿನ ಕಥೆ ಇಲ್ಲಿದೆ.

ಹಾಜಿಪುರ (Hajipur) ದ ತಂಗೌಲ್ ನಿವಾಸಿ ರಾಜೇಶ್ ಕುಮಾರ್ ಬದುಕನ್ನು ಕೊರೊನಾ ಬದಲಿಸಿದೆ. ಮೊದಲು ಉದ್ಯೋಗಿಯಾಗಿದ್ದ ರಾಜೇಶ್ ಈಗ ಉದ್ಯೋಗ (Employment) ಸೃಷ್ಟಿಕರ್ತರಾಗಿದ್ದಾರೆ. ರಾಜೇಶ್, ಕೊರೊನಾ ಮೊದಲು ಬೇರೆ ರಾಜ್ಯಗಳಿಗೆ ಹೋಗಿ ಜೀವನ ನಡೆಸುತ್ತಿದ್ದರು. ಕೊರೊನಾ (Corona), ಲಾಕ್ ಡೌನ್ ಸಮಯದಲ್ಲಿ ರಾಜೇಶ್ ಕುಮಾರ್ ತಮ್ಮ ಮನೆಗೆ ವಾಪಸ್ ಆದ್ರು. ಮತ್ತೆ ಅದೇ ಉದ್ಯೋಗಕ್ಕೆ ತೆರಳುವ ಮನಸ್ಸು ರಾಜೇಶ್ ಗೆ ಇರಲಿಲ್ಲ. ತಮ್ಮದೇ ಒಂದು ವ್ಯಾಪಾರ ಶುರು ಮಾಡುವ ಆಲೋಚನೆ, ಧೈರ್ಯ ಮಾಡಿದ್ರು ರಾಜೇಶ್. ಕನಸು ಈಡೇರಿಸಿಕೊಳ್ಳಲು ರಾಜೇಶ್, ಬಿಹಾರ ಸರ್ಕಾರದ ಬೆಂಬಲ ಪಡೆದರು. ಬಿಹಾರ ಸರ್ಕಾರದ ಉದ್ಯಮಶೀಲತಾ ಯೋಜನೆಯ ಲಾಭಪಡೆದ್ರು. ಈ ಯೋಜನೆಯಡಿ ಸಾಲಕ್ಕಾಗಿ ರಾಜೇಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ರಾಜೇಶ್ ಕುಮಾರ್ ಅರ್ಜಿ ಸ್ವೀಕರಿಸಿದ ಸರ್ಕಾರ ಸಾಲ ನೀಡಿತು.

ಈಕೆ ಸಂಪತ್ತಿನಲ್ಲಿ ಮಾತ್ರವಲ್ಲ,ಮಾನವೀಯತೆಯಲ್ಲೂ ಶ್ರೀಮಂತೆ ; ಬಿಲಿಯನೇರ್ ಆದ್ರೂ ಈಕೆ ಬಗ್ಗೆ ತಿಳಿದಿರೋರು ಕಡಿಮೆ

ಸರ್ಕಾರದಿಂದ ಸಾಲದ ಸಹಾಯಪಡೆದ ರಾಜೇಶ್ ಹಿಂದೆ ನೋಡಲಿಲ್ಲ. ತಮ್ಮದೇ ವ್ಯಾಪಾರ ಶುರು ಮಾಡಿದ್ರು. ಸಿದ್ಧ ಉಡುಪುಗಳ ಕಂಪನಿಯ ಮಾಲೀಕರಾದ್ರು.  ರಾಜೇಶ್ ಅವರ ವಾರ್ಷಿಕ ವಹಿವಾಟು 50 ಲಕ್ಷ ರೂಪಾಯಿಗೆ ಬಂದು ನಿಂತಿದೆ. ಸಿದ್ಧ ಉಡುಪಿನ ಬ್ಯುಸಿನೆಸ್ ಚೆನ್ನಾಗಿ ನಡೆಸಯುತ್ತಿದೆ. ಅವರು ಎಲ್ಲ ಖರ್ಚು ಕಳೆದ್ರೂ ತಿಂಗಳಿಗೆ ರಾಜೇಶ್ ಒಂದು ಲಕ್ಷಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡ್ತಿದ್ದಾರೆ.

ರಾಜೇಶ್ ಕುಮಾರ್ ಬರೀ ತಾವು ಮಾತ್ರ ಹಣಗಳಿಸುತ್ತಿಲ್ಲ. ತಮ್ಮ ಸುತ್ತಮುತ್ತಲಿನ ಅನೇಕ ಹಳ್ಳಿಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ರಾಜೇಶ್ ಕುಮಾರ್ ಕಂಪನಿ ತಯಾರಿಸಿದ ಸಿದ್ಧ ಉಡುಪುಗಳು ಅನೇಕ ಜಿಲ್ಲೆಗಳನ್ನು ತಲುಪುತ್ತಿದ್ದೆ. ಅವರ ಉತ್ಪನ್ನಕ್ಕೆ ಉತ್ತಮ ಬೇಡಿಕೆ ಇದೆ.

ರಸ್ತೆ ಬದಿ ಮೊಮೊಸ್ ಮಾರ್ತಿದ್ದ ವ್ಯಕ್ತಿಯೀಗ ಕೋಟ್ಯಾಧಿಪತಿ, ತಿಂಗಳ ಆದಾಯ ಬರೋಬ್ಬರಿ 40 ಕೋಟಿ!

ಕೂಲಿ ಕೆಲಸ ಮಾಡ್ತಿದ್ದವನು ಮಾಲೀಕನಾದ ಖುಷಿ ರಾಜೇಶ್ ಮುಖದಲ್ಲಿದೆ. ಹಾಜಿಪುರದ ತಂಗೌಲ್‌ನಲ್ಲಿ ಎಆರ್ ಟೆಕ್ಸ್‌ಟೈಲ್ ಏಜೆನ್ಸಿ ಹೆಸರಿನಲ್ಲಿ ಇವರು ಬ್ಯುಸಿನೆಸ್ ನಡೆಸುತ್ತಿದ್ದಾರೆ, ರಾಜೇಶ್ ಕುಮಾರ್ ಕಂಪನಿಯಲ್ಲಿ  ನೈಟಿ, ಕುರ್ತಾ, ಪಲಾಝೋ, ಕ್ಯಾಪ್ರಿ, ಪ್ಯಾಂಟ್, ಲೆಗ್ಗಿಂಗ್‌ ಉತ್ಪನ್ನಗಳು ಸಿದ್ಧವಾಗುತ್ತವೆ. ಇವುಗಳನ್ನು ಶೀಘ್ರದಲ್ಲೇ ಬಿಹಾರದ ಎಲ್ಲ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಯೋಜನೆ ರಾಜೇಶ್ ಕುಮಾರ್ ಹೊಂದಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಕೂಲಿ ಕೆಲಸ ಮಾಡಿದ್ದ ರಾಜೇಶ್ ಈ ಅನುಭವ ನನಗೆ ಮುಂದೆ ಬರಲು ನೆರವಾಗಿದೆ ಎನ್ನುತ್ತಾರೆ. ಸಣ್ಣ ಮಟ್ಟದಲ್ಲಿ ಶುರುವಾದ ಈ ಬ್ಯುಸಿನೆಸ್ ನಿಧಾನವಾಗಿ ವಿಸ್ತಾರಗೊಳ್ತಿರೋದು ರಾಜೇಶ್ ಯಶಸ್ಸಿಗೆ ಹಿಡಿದ ಕೈಗನ್ನಡಿ.  
 

click me!