ದಿನಕ್ಕೆ ಕೇವಲ 100ರೂ. ಉಳಿಸಿದ್ರೆ ಸಾಕು, 50 ಲಕ್ಷ ರೂ. ಗೃಹಸಾಲದಲ್ಲಿ 12ಲಕ್ಷ ರೂ. ಉಳಿತಾಯವಾಗುತ್ತೆ, ಹೇಗೆ?

By Suvarna News  |  First Published May 31, 2023, 2:50 PM IST

ಗೃಹಸಾಲವನ್ನು ಆದಷ್ಟು ಬೇಗ ಮರುಪಾವತಿಸಿ ಸಾಲದಿಂದ ಮುಕ್ತರಾಗಬೇಕು ಎಂಬುದು ಸಾಲಗಾರರ ಬಯಕೆಯಾಗಿರುತ್ತದೆ. ಸೂಕ್ತ ಯೋಜನೆ ರೂಪಿಸಿದ್ರೆ ಗೃಹಸಾಲವನ್ನು ಅವಧಿಗೂ ಮುನ್ನ ಪಾವತಿಸಲು ಸಾಧ್ಯವಿದೆ. ದಿನಕ್ಕೆ ಬರೀ 100ರೂ. ಉಳಿತಾಯ ಮಾಡುವ ಮೂಲಕ 50ಲಕ್ಷ ರೂ. ಮೊತ್ತದ ಗೃಹಸಾಲದ ಮರುಪಾವತಿಯಲ್ಲಿ 12ಲಕ್ಷ ರೂ. ತನಕ ಉಳಿತಾಯ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು. ಅದು ಹೇಗೆ? ಇಲ್ಲಿದೆ ಮಾಹಿತಿ.


Business Desk:ಸ್ವಂತ ಮನೆ ಹೊಂದಬೇಕು ಎಂಬ ಕನಸು ನನಸಾಗಿಸಿಕೊಳ್ಳಲು ಗೃಹಸಾಲ ನೆರವು ನೀಡುತ್ತದೆ. ಈಗಂತೂ ಅನೇಕ ಬ್ಯಾಂಕ್ ಗಳು ಗೃಹಸಾಲವನ್ನು ಸುಲಭವಾಗಿ ಗ್ರಾಹಕರಿಗೆ ನೀಡುತ್ತಿವೆ. ಆದರೆ, ಗೃಹಸಾಲ ಪಡೆದ ಬಳಿಕ ಪ್ರತಿ ತಿಂಗಳು ನಿಗದಿತ ಮೊತ್ತದ ಇಎಂಐ ಪಾವತಿಸಬೇಕು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಗೃಹಸಾಲದ ಬಡ್ಡಿದರದಲ್ಲಿ ಕೂಡ ಏರಿಕೆಯಾಗಿದೆ. ಇನ್ನು ಗೃಹಸಾಲ ದೀರ್ಘಾವಧಿಯದ್ದಾಗಿರುವ ಕಾರಣ ಪ್ರತಿ ತಿಂಗಳ ಆದಾಯದಲ್ಲಿ ನಿರ್ದಿಷ್ಟ ಮೊತ್ತ ಅದಕ್ಕೇ ಹೋಗುತ್ತದೆ. ಇನ್ನು ಬಡ್ಡಿದರ ಏರಿಕೆಯಿಂದ ಗೃಹಸಾಲದ ಅವಧಿ ಕೂಡ ಹೆಚ್ಚಿದೆ. ಇದು ಸಾಲ ಪಡೆದಿರೋರ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಆದಷ್ಟು ಬೇಗ ಗೃಹಸಾಲವನ್ನು ಮರುಪಾವತಿ ಮಾಡಬೇಕು ಎಂಬುದು ಬಹುತೇಕರ ಗುರಿಯಾಗಿರುತ್ತದೆ. ಸೂಕ್ತ ಯೋಜನೆ ರೂಪಿಸಿದ್ರೆ ಅವಧಿಗಿಂತಲೂ ಮುನ್ನವೇ ಗೃಹಸಾಲವನ್ನು ಮರುಪಾವತಿ ಮಾಡಬಹುದು. ಹೀಗಿರುವಾಗ ದಿನಕ್ಕೆ ಕೇವಲ 100ರೂ. ಉಳಿತಾಯ ಮಾಡುವ ಮೂಲಕ 50ಕ್ಷ ರೂ. ಮೊತ್ತದ ಗೃಹಸಾಲದ ಮರುಪಾವತಿಯಲ್ಲಿ 12ಲಕ್ಷ ರೂ. ಉಳಿತಾಯ ಮಾಡಬಹುದು ಎನ್ನುತ್ತಾರೆ ತಜ್ಞರು. ಅದು ಹೇಗೆ? ಇಲ್ಲಿದೆ ಮಾಹಿತಿ.

ಗೃಹಸಾಲವನ್ನು ಆದಷ್ಟು ಬೇಗ ಮರುಪಾವತಿಸಲು ಯೋಜನೆ ರೂಪಿಸಬೇಕು ಎಂಬುದು ಪ್ರತಿಯೊಬ್ಬ ಸಾಲಗಾರನ ತಲೆಯಲ್ಲಿ ಇರುತ್ತದೆ. ಇದರ ಉದ್ದೇಶ ಆದಷ್ಟು ಬೇಗ ಸಾಲದಿಂದ ಮುಕ್ತವಾಗಬೇಕು ಎಂಬುದೇ ಆಗಿರುತ್ತದೆ. ಹೀಗಿರುವಾಗ ದಿನಕ್ಕೆ 100ರೂ. ಉಳಿತಾಯ ಮಾಡೋದು ತುಂಬಾ ಚಿಕ್ಕ ಸಂಗತಿ ಅನ್ನಿಸಿದ್ರೂ, ಅದರಿಂದ ನಿಮ್ಮ 50ಲಕ್ಷ ರೂ. ಮೊತ್ತದ ಸಾಲದ ಮರುಪಾವತಿಯಲ್ಲಿ 12ಕ್ಷ ರೂ. ಉಳಿತಾಯ ಮಾಡಬಹುದು. ಅದು ಹೇಗೆ ಸಾಧ್ಯ? ಎಂಬ ಅಚ್ಚರಿ ಮೂಡಬಹುದು. ಆದರೆ, ಸೂಕ್ತವಾದ ಲೆಕ್ಕಾಚಾರ ಮಾಡಿ ನೋಡಿದರೆ ಇದು ಅಸಾಧ್ಯ ಸಂಗತಿಯೇನಲ್ಲ.

Tap to resize

Latest Videos

Personal Finance: ಗೃಹ ಸಾಲವಿದ್ರೂ ಮನೆ ಮಾರಾಟ ಮಾಡೋದು ಹೇಗೆ?

ದಿನಕ್ಕೆ 100ರೂ. ಉಳಿತಾಯದಿಂದ ಇದು ಹೇಗೆ ಸಾಧ್ಯ?
ಗೃಹಸಾಲದ ಲೆಕ್ಕಾಚಾರ ಸೂತ್ರಕ್ಕೆ ಅನುಸಾರವಾಗಿ ನೋಡಿದ್ರೆ ಗೃಹಸಾಲದ ಮರುಪಾವತಿಯಲ್ಲಿ ವಾರ್ಷಿಕ ಶೇ.5ರಷ್ಟನ್ನು ಹೆಚ್ಚುವರಿಯಾಗಿ ಪಾವತಿಸಿದ್ರೆ 20ವರ್ಷಗಳ ಅವಧಿಯ ಗೃಹಸಾಲ 12 ವರ್ಷಗಳಿಗೆ ಇಳಿಕೆಯಾಗುತ್ತದೆ. ಹಾಗಯೇ ಪ್ರತಿ ವರ್ಷ ಹೆಚ್ಚುವರಿ ಇಎಂಐಗಳ ಪಾವತಿಯಿಂದ ಸಾಲದ ಅವಧಿಯನ್ನು ಇಳಿಕೆ ಮಾಡಲು ಸಾಧ್ಯವಿದೆ. ಇದೇ ಲೆಕ್ಕಾಚಾರವನ್ನು ಆಧಾರವಾಗಿಸಿಕೊಂಡು ನೋಡಿದರೆ ದಿನಕ್ಕೆ 100ರೂ. ಉಳಿತಾಯ ಮಾಡಿದರೆ ವರ್ಷಕ್ಕೆ ಒಟ್ಟು 36,500ರೂ. ಉಳಿತಾಯ ಮಾಡಬಹುದು. ಈ ಮೊತ್ತವನ್ನು ಗೃಹಸಾಲದ ಮರುಪಾವತಿಗೆ ಬಳಸಬಹುದು. ಇದರಿಂದ 20 ವರ್ಷಗಳ ಅವಧಿಗೆ ಶೇ.9.5ರಷ್ಟು ಬಡ್ಡಿದರದಲ್ಲಿ 50 ಲಕ್ಷ ರೂ. ಮೊತ್ತದ ಗೃಹಸಾಲವನ್ನು ಪಡೆದಿದ್ದರೆ 12ಲಕ್ಷ ರೂ. ಉಳಿತಾಯ ಮಾಡಬಹುದು. ಇನ್ನು ಇಷ್ಟೇ ಮೊತ್ತದ ಸಾಲದ ಅವಧಿ 25ವರ್ಷಗಳಾಗಿದ್ದರೆ 20 ಕ್ಷ ರೂ. ಉಳಿತಾಯ ಮಾಡಬಹುದು.

ವಿವಿಧ ಬ್ಯಾಂಕ್ ಗಳು ಗೃಹಸಾಲವನ್ನು ವಿವಿಧ ಬಡ್ಡಿದರದಲ್ಲಿ ನೀಡುತ್ತವೆ. ಹೀಗಾಗಿ ಈ ಮೇಲೆ ವಿವರಿಸಿರುವ ಲೆಕ್ಕಾಚಾರ ಆಯಾ ಬ್ಯಾಂಕಿನ ಬಡ್ಡಿದರದ ಆಧಾರದಲ್ಲಿ ಬದಲಾಗುತ್ತದೆ. ಅಲ್ಲದೆ, ಎಲ್ಲ ಬ್ಯಾಂಕ್ ಗಳು ನಿರ್ದಿಷ್ಟ ಸೂತ್ರವನ್ನೇ  ಬಳಸಿ ಗೃಹಸಾಲವನ್ನು ಲೆಕ್ಕಾಚಾರ ಮಾಡುವುದಿಲ್ಲ. 

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

ಪ್ರತಿ ವರ್ಷ ಹೆಚ್ಚುವರಿ ಇಎಂಐ ಪಾವತಿ, ಇಎಂಐ ಮೊತ್ತ ಹೆಚ್ಚಳ, ಉಳಿತಾಯದ ಹಣವನ್ನು ಸಾಲ ಮರುಪಾವತಿಗೆ ಬಳಸೋದು ಮುಂತಾದ ಕ್ರಮಗಳ ಮೂಲಕ ಗೃಹಸಾಲವನ್ನು ಬೇಗ ತೀರಿಸಲು ಸಾಧ್ಯವಿದೆ. ಗೃಹಸಾಲವನ್ನು ಬೇಗ ತೀರಿಸಿದಷ್ಟೂ ಬಡ್ಡಿ ಹೊರೆ ಕಡಿಮೆಯಾಗುತ್ತದೆ. ಪ್ರತಿ ತಿಂಗಳು ನಿಗದಿತ ಇಎಂಐಯಷ್ಟೇ ಪಾವತಿ ಸುಮ್ಮನಿರುವ ಬದಲು ಪ್ರತಿವರ್ಷ ಉಳಿತಾಯದಲ್ಲಿ ಒಂದಿಷ್ಟು ಮೊತ್ತವನ್ನು ಸಾಲಕ್ಕೆ ಮರುಪಾವತಿ ಮಾಡುವುದು ಉತ್ತಮ. ಇದು ಚಿಕ್ಕ ಮೊತ್ತವೇ ಆಗಿದ್ದರೂ ಇಎಂಐ ಹೊರೆ ತಗ್ಗಿಸುವಲ್ಲಿ ಇದರ ಪಾತ್ರ ಮಹತ್ವದಾಗಿರುತ್ತದೆ. 
 

click me!