ಬೇಸಿಗೆ ಕಾಲ ಮುಕ್ತಾಯವಾಗಿ ಮಳೆಗಾಲ ಆರಂಭವಾಗುವ ಸಮಯ. ಡ್ಯಾಂಪಿಂಗ್ ಹಾಗೂ ಟೆರಸ್ ಸೋರಿಕೆ ಸಮಸ್ಯೆಗಳನ್ನು ಎದುರಿಸುತ್ತಿರುವ ಮನೆ ಮಾಲೀಕರಿಗೆ ಪರಿಹಾರ ಎನ್ನುವಂತೆ ಏಷ್ಯನ್ ಪೇಂಟ್ಸ್ ಹೊಸ ಉತ್ಪನ್ನ ರಿಲೀಸ್ ಮಾಡಿದೆ.
ಬೆಂಗಳೂರು (ಮೇ. 31): ಮೈಸುಡುವಂತ ಬೇಸಿಗೆಯ ದಿನಗಳು ಮುಗಿದಿವೆ. ಟೆರೇಸ್‌ನಿಂದ ನೀರಿನ ಸೋರಿಕೆ ಮತ್ತು ಡ್ಯಾಂಪಿಂಗ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಮನೆಮಾಲೀಕರ ತಲೆನೋವು ಹೆಚ್ಚಿಸುವ ವಿಪರೀತ ಮಳೆಗಾಲದ ಕಾಲವು ಇನ್ನೇನು ದೂರವಿಲ್ಲ.
ಕೆಮಿಕಲ್ ವಾಟರ್‌ಪ್ರೂಫಿಂಗ್‌ನಿಂದ ಬೇಸತ್ತಿರುವ ಜನರಿಗೆ ಅವರ ದಿನವನ್ನು ಇನ್ನಷ್ಟು ಖುಷಿ ಮಾಡಲು ಏಷ್ಯನ್ ಪೇಂಟ್ಸ್‌ನ ನೀಡಿರುವ ಪರಿಹಾರ ಇಲ್ಲಿದೆ. ದೀರ್ಘಾವಧಿಯ ವಾಟರ್ ಪ್ರೂಫ್ ಪರಿಹಾರವಾದ ಸ್ಮಾರ್ಟ್‌ಕೇರ್ ಡ್ಯಾಂಪ್ ಪ್ರೂಫ್ ಅನ್ನು ಆಯ್ಕೆ ಮಾಡುವುದರೊಂದಿಗೆ ಮನೆಮಾಲೀಕರು ಮಳೆಗಾಲ ಮತ್ತು ಅದರೊಂದಿಗೆ ಬರುವ ಛಾವಣಿಯ ಸೋರಿಕೆ ಕುರಿತಾಗಿ ಇನ್ನು ಹೆಚ್ಚಾಗಿ ಚಿಂತೆಪಡಬೇಕಾದ ಅಗತ್ಯವಿಲ್ಲ. ಟೆರಸ್ ಸೋರಿಕೆ ಸಮಸ್ಯೆಗಳಿಗೆ ಅಂತಿಮ ಪರಿಹಾರ, ಸ್ಮಾರ್ಟ್‌ಕೇರ್ ಡ್ಯಾಂಪ್ ಪ್ರೂಫ್, ಟ್ರಿಪಲ್ ಲೇಯರ್ ಫ್ಲೆಕ್ಸ್ ಆರ್ಮರ್ ಟೆಕ್ನಾಲಜಿಯೊಂದಿಗೆ ಲಭ್ಯವಿದೆ. ಬಿರುಕುಗಳ ನಡುವೆ ಅತ್ಯುತ್ತಮವಾಗಿ ಬಂಧವನ್ನು ಏರ್ಪಡಿಸುವುದು ಮಾತ್ರವಲ್ಲ ಬಲವಾದ ಅಂಟಿನ ಕಾರಣದಿಂದಾಗಿ ನೀರು ಸೋರಿಕೆಯನ್ನು ತಡೆಗಟ್ಟುವ ಈ ಡ್ಯಾಂಫ್‌ಪ್ರೂಫ್ 8 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಅದರೊಂದಿಗೆ 'ಪದೇ ಪದೇ ಯಾವುದೇ ಕೆಮಿಕಲ್ ವಾಟರ್ ಪ್ರೂಫಿಂಗ್ ಅಗತ್ಯವಿಲ್ಲ' ಎನ್ನುವ ಮಾತಿಗೆ ತಕ್ಕಂತೆ ಇದು ಕಾರ್ಯನಿರ್ವಹಿಸುತ್ತದೆ.
ಏಷ್ಯನ್ ಪೇಂಟ್ಸ್ ಸ್ಮಾರ್ಟ್‌ಕೇರ್ ಡ್ಯಾಂಪ್ ಪ್ರೂಫ್‌ನ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಲು ಬ್ರ್ಯಾಂಡ್ ರಾಯಭಾರಿ ರಣಬೀರ್ ಕಪೂರ್ ಮತ್ತು ಬಹುಮುಖ ನಟ ಮನೋಜ್ ಪಹ್ವಾ ಅವರನ್ನು ಒಳಗೊಂಡ ಹೊಸ ಹಾಸ್ಯಮಯ ಟಿವಿ ಕಮರ್ಷಿಯಲ್‌ಅನ್ನು ಪ್ರಾರಂಭಿಸಿದೆ. ಜಾಹೀರಾತಿನಲ್ಲಿ, ಕವ್ವಾಲಿ ಉಸ್ತಾದ್ ಪಾತ್ರವನ್ನು ನಿರ್ವಹಿಸುವ ಪಹ್ವಾ ಆಯೋಜಿಸುವ ವಾರ್ಷಿಕ ಕವ್ವಾಲಿ ಕಾರ್ಯಕ್ರಮದಲ್ಲಿ ಕಪೂರ್ ಮುಖ್ಯ ಅತಿಥಿಯಾಗಿದ್ದಾರೆ. ಕೆಮಿಕಲ್ ವಾಟರ್‌ಪ್ರೂಫಿಂಗ್ ಮನೆಯ ಛಾವಣಿಯ ಸೋರಿಕೆಯನ್ನು ತಡೆಯಲು ವಿಫಲವಾದ ಕಾರಣ ಪಹ್ವಾ ತನ್ನ ಸೋರುವ ಟೆರಸ್‌ನ ಕಾರಣಕ್ಕಾಗಿ ಮುಜುಗರಕ್ಕೊಳಗಾಗುತ್ತಾನೆ. ಕಪೂರ್‌ನಿಂದ ಎರಡು ಬಾರಿ ಅಪಹಾಸ್ಯಕ್ಕೊಳಗಾಗುವ ಪಹ್ವಾ, ಲೀಕೇಜ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ರಣಬೀರ್ ಕಪೂರ್ ಎದುರು ಗೌರವವನ್ನು ಉಳಿಸಿಕೊಳ್ಳಲು ಸ್ಮಾರ್ಟ್‌ಕೇರ್ ಡ್ಯಾಂಪ್ ಪ್ರೂಫ್ ಸರಿಯಾದ ಆಯ್ಕೆ ಎಂದುಕೊಳ್ಳುತ್ತಾರೆ. ಬಳಿಕ ಏಷ್ಯನ್ ಪೇಂಟ್ಸ್ ಸ್ಮಾರ್ಟ್‌ಕೇರ್ ಡ್ಯಾಂಪ್ ಪ್ರೂಫ್ ಅನ್ನು ಶ್ಲಾಘನೆ ಮಾಡಲು ಈ ಜೋಡಿಯು ಜುಗುಲ್ ಬಂಧಿಯಲ್ಲಿ ಭಾಗಿಯಾಗುತ್ತದೆ.
ಸಮಯಕ್ಕೆ ಸರಿಯಾಗಿ ಟೆರಸ್‌ನ ಸೋರಿಕೆಯನ್ನು ತಡೆಗಟ್ಟಬೇಕು ಅದಕ್ಕೆ ಇರುವ ಪ್ರಾಮುಖ್ಯತೆಯನ್ನು ಈ ಕಮರ್ಷಿಯನ್ ಜಾಹೀರಾತು ಒತ್ತಿ ಹೇಳುತ್ತದೆ. ಮಾನ್ಸೂನ್‌ಗೂ ಮುಂಚಿತವಾಗಿ ಗ್ರಾಹಕರು ಇದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ನಿಮ್ಮ ಮನೆಯ ಟೆರಸ್‌ನ ವಾಟರ್‌ಪ್ರೂಫ್ ಮಾಡಬೇಕಿದ್ದಲ್ಲಿ ನೀವು ಮಾಡಬೇಕಾಗಿರುವುದು 80504 80504 ನಂಬರ್‌ಗೆ ಕರೆ ಮಾಡುವುದು ಮಾತ್ರ.