ಸೆನ್ಸೆಕ್ಸ್‌ಗೂ ವೈರಸ್ ದಾಳಿ: 1258 ಅಂಕಗಳ ಕುಸಿತ: ಹಳೇ ವೈರಸ್, ಆತಂಕ ಬೇಡ ಎಂದ ಸರ್ಕಾರ

By Kannadaprabha News  |  First Published Jan 7, 2025, 6:58 AM IST

ಚೀನಾದಲ್ಲಿ ವ್ಯಾಪಕವಾಗಿರುವ ಎಚ್‌ಎಂಪಿವಿ ವೈರಸ್ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1258 ಅಂಕಗಳ ಭಾರೀ ಕುಸಿತ ಕಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು 10.98 ಲಕ್ಷ ಕೋಟಿ ರೂ. ನಷ್ಟು ಕರಗಿದೆ.


ಮುಂಬೈ: ಚೀನಾದಲ್ಲಿ ವ್ಯಾಪಕವಾಗಿ, ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಎಚ್‌ಎಂಪಿವಿ ವೈರಸ್ ಸೋಮವಾರ ಬಾಂಬೆ ಷೇರು ಪೇಟೆಯ ಮೇಲೂ 'ದಾಳಿ' ನಡೆಸಿದೆ. ಬಾಂಬೆ ಷೇರುಪೇಟೆ'ಸೆನ್ಸೆಕ್ಸ್' 1258 ಅಂಕಗಳ ಭಾರೀ ಕುಸಿತ ಕಂಡು 77964 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 388 ಅಂಕ ಕುಸಿತ ಕಂಡು 23616 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದರಿಂದ ಹೂಡಿಕೆದಾರರ ಸಂಪತ್ತು 10.98 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿದೆ. ಸೆನ್ಸೆಕ್ಸ್ ಪತನದ ನಡುವೆಯೇ ಡಾಲರ್ ಎದುರು 22 ರುಪಾಯಿ ದರ ಕೂಡ 4 ಪೈಸೆ ಇಳಿದು, ಸಾರ್ವಕಾಲಿಕ ಕನಿಷ್ಠವಾದ 85.83 ರು.ಗೆ ಇಳಿದಿದೆ.

ಇಳಿಕೆಗೆ ಕಾರಣವೇನು?: 
ಸೋಂಕು ವ್ಯಾಪಕವಾದರೆ ಆರ್ಥಿಕತೆ ಮೇಲೆ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮವು ಹೂಡಿಕೆದಾರಲ್ಲಿ ಭಾರೀ ಕಳವಳ ಹುಟ್ಟು ಹಾಕಿದ ಕಾರಣ ಷೇರುಪೇಟೆ ಭಾರೀ ಕುಸಿತ ಕಂಡಿದೆ.

Tap to resize

Latest Videos

ನವೆಂಬರ್‌ನಲ್ಲೇ 3 ಎಚ್‌ಎಂಪಿವಿ ಕೇಸು: ಕೋಲ್ಕತಾ ವೈದ್ಯರು

ಕೋಲ್ಕತಾ:ದೇಶದ ಕೆಲವೆಡೆ ಎಚ್‌ಎಂಪಿವಿ ಪ್ರಕರಣ ಪತ್ತೆ ಆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲ್ಕತಾ ಪೀರ್‌ಲೆಸ್ ಆಸ್ಪತ್ರೆಯ ಸಿಇಒ ಸುದೀಪ್ತ ಮಿತ್ರ 'ಕೋಲ್ಕತ್ತಾದಲ್ಲಿನವೆಂಬರ್‌ನಿಂದ 3 ಎಚ್‌ಎಂಪಿವಿ ಕೇಸು ಪತ್ತೆ ಆಗಿವೆ. ಇದು ಹೊಸದೇನಲ್ಲ' ಎಂದಿದ್ದಾರೆ. ಸೋಮವಾರ ಮಾತನಾಡಿದ ಅವರು, 'ಇದು ಅಸಾಮಾನ್ಯ ವಿದ್ಯಮಾನವೇನಲ್ಲ. ಪ್ರತಿ ಚಳಿಗಾಲದಲ್ಲಿ ಇಂತಹ ಪ್ರಕರಣಗಳು ಬರುತ್ತವೆ. ಎಲ್ಲಾ ಪ್ರಕರಣಗಳು ಸೌಮ್ಯ ರೂಪದಲ್ಲಿವೆ. ಹೀಗಾಗಿ ನಾವು ಅದರ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ' ಎಂದರು.

ಎಚ್‌ಎಂಪಿವಿ ಹಳೇ ವೈರಸ್, ಆತಂಕ ಬೇಡ : ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ

ನವದೆಹಲಿ: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ . ಇದನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು ಮತ್ತು ಇದು ಹಲವು ವರ್ಷಗಳಿಂದ ಇಡೀ ಪ್ರಪಂಚದಲ್ಲಿ ಹರಡುತ್ತಿದೆ
ಅಲ್ಲದೆ ಎಎಂಪಿವಿ ವೈರಾಣು ಈಗಾಗಲೇ ವಿಶ್ವದಲ್ಲೇ ಚಾಲ್ತಿಯಲ್ಲಿರುವ ವೈರಾಣುವಾಗಿದ್ದು, ಅದರಲ್ಲಿ ಭಾರತವೂ ಇದೆ. ಆದರೆ ಇದನ್ನು ಎದುರಿಸಲು ಸರ್ವಸನ್ನದ್ಧವಾಗಿದ್ದೇವೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. 

ಐಸಿಎಂಆರ್‌ ತಜ್ಞರು ಕೂಡ ಇದೇ ತೆರನಾದ ಹೇಳಿಕೆ ನೀಡಿ, ‘ಕೆಲ ಪ್ರಕರಣಗಳು ಪತ್ತೆಯಾದ ಹೊರತಾಗಿಯೂ, ಸದ್ಯ ಭಾರತದಲ್ಲಿ ಇನ್‌ಫ್ಲ್ಯೂಯೆಂಜಾ ರೀತಿಯ ಕಾಯಿಲೆ ಅಥವಾ ತೀವ್ರತೆರನಾದ ಉಸಿರಾಟದ ತೊಂದರೆಯ ವ್ಯಾಧಿಗಳ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದುದು ಐಸಿಎಂಆರ್‌, ಐಡಿಎಸ್‌ಪಿಗಳ ದತ್ತಾಂಶಗಳಿಂದ ಕಂಡುಬಂದಿದೆ ಎಂದಿದ್ದಾರೆ.

ಭಾರತದಲ್ಲೂ ಚೀನಿ ವೈರಸ್‌ ಪತ್ತೆ ಅತಂಕ ಬೇಡ, ವಾಸಿಯಾಗುತ್ತೆ!

ಬೆಂಗಳೂರಿನಲ್ಲಿ HMPV ವೈರಸ್ ಪತ್ತೆ ಬೆನ್ನಲ್ಲಿಯೇ ರೋಗ ಲಕ್ಷಣ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ!

click me!