413 ಪುಟದ ಅದಾನಿ ಗ್ರೂಪ್‌ ತಿರುಗೇಟಿಗೆ ಹಿಂಡೆನ್‌ಬರ್ಗ್‌ ಪ್ರತಿಕ್ರಿಯೆ 'ಮೋಸವನ್ನು ರಾಷ್ಟ್ರೀಯತೆಯಿಂದ ಮರೆಮಾಚಲಾಗದು'!

By Santosh Naik  |  First Published Jan 30, 2023, 4:01 PM IST

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ವರದಿ ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ ಅದಾನಿ ಗ್ರೂಪ್‌ನ ಮೇಲೆ ನೇರವಾಗಿ ವಂಚನೆಯ ಆರೋಪ ಮಾಡಿದ್ದರಿಂದ ಅದಾನಿ ಸಮೂಹದ ಎಲ್ಲಾ ಕಂಪನಿಗಳ ಷೇರುಗಳು ಕುಸಿತ ಕಂಡಿದ್ದರೆ, ಅದಾನಿ ಮೇಲೆ ಹೂಡಿಕೆ ಮಾಡಿದ್ದ ಎಲ್‌ಐಸಿ, ಎಸ್‌ಬಿಐ ಷೇರುಗಳ ಮೇಲೂ ಪರಿಣಾಮ ಬೀರಿದೆ.


ನವದೆಹಲಿ (ಜ.30): ಅದಾನಿ ಗ್ರೂಪ್‌ ಕಂಪನಿಯಲ್ಲಿ ಆಗಿರುವ ಅವ್ಯವಹಾರಗಳು ಹಾಗೂ ವಂಚನೆಯ ಕುರಿತು ಅಮೆರಿಕ ಮೂಲಕ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ಜನವರಿ 24ರಂದು ವಿಸ್ತ್ರತ ವರದಿ ಪ್ರಕಟಿಸಿತ್ತು. ಇದು ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಬಳಿಕ, ಸ್ವತಃ ಅದಾನಿ ಸಮೂಹ 413 ಪುಟಗಳ ಪ್ರತಿಕ್ರಿಯೆಯನ್ನು ನೀಡಿತ್ತು. ಇಡೀ ವರದಿ ಆಧಾರರಹಿತ ಹಾಗೂ ಸುಳ್ಳಿನ ಕಂತೆ ಎಂದು ಹೇಳಿತ್ತು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಹಿಂಡೆನ್‌ಬರ್ಗ್‌, ನಮ್ಮ ವರದಿಗೆ ಅದಾನಿ ಸಮೂಹ ನೀಡಿರುವ ಪ್ರತಿಕ್ರಿಯೆಯನ್ನು ನೋಡಿದರೆ, ಅವರ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ಬಹತೇಕ ಖಚಿತಪಡಿಸಿಕೊಳ್ಳಬಹುದು ಎಂದಿದೆ. ಹಿಂಡೆನ್‌ಬರ್ಗ್ ತನ್ನ ಯುಎಸ್‌ ಟ್ರೇಡೆಡ್ ಬಾಂಡ್‌ಗಳು ಮತ್ತು ಭಾರತೀಯವಲ್ಲದ-ವಹಿವಾಟು ಉತ್ಪನ್ನಗಳ ಮೂಲಕ ಅದಾನಿ ಗ್ರೂಪ್ ಮೇಲೆ ತನ್ನ ಹಿಡಿತ ಮುಂದುವರಿಸಿದೆ. ನಮ್ಮ ವರದಿಯಲ್ಲಿ ಸಾಕಷ್ಟು ಪ್ರಮುಖ ಆರೋಪಗಳನ್ನು ಮಾಡಿದ್ದೆವು. ವಿದೇಶದಲ್ಲಿ ಅದಾನಿ ಗ್ರೂಪ್‌ನ ಕಂಪನಿಗಳ ಜೊತೆ ನಡೆಸಿರುವ ಸಾಕಷ್ಟು ಸಂಶಯಾಸ್ಪದ ವಹಿವಾಟುಗಳ ಮೇಲೆ ಗಮನ ನೀಡಿದ್ದೆವು. ಆದರೆ, ಅವರ ಪ್ರತಿಕ್ರಿಯೆಯಲ್ಲಿ ಇದರ ಯಾವ ವಿಚಾರಗಳೂ ಇಲ್ಲ ಎಂದು ಹಿಂಡೆನ್‌ಬರ್ಗ್‌ ಹೇಳಿದೆ.

"ಇದು ಕೇವಲ ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ಅನಗತ್ಯ ದಾಳಿಯಲ್ಲ, ಆದರೆ ಭಾರತದ ಮೇಲಿನ ಲೆಕ್ಕಾಚಾರದ ದಾಳಿ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟ ಮತ್ತು ಭಾರತದ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆ ಮೇಲಿನ ದಾಳಿ" ಎಂದು ಅದಾನಿ ಗ್ರೂಪ್‌ ಹೇಳಿತ್ತು. ವರದಿಯಲ್ಲಿ ಎತ್ತಲಾದ 88 ಪ್ರಶ್ನೆಗಳಲ್ಲಿ 65 ಪ್ರಶ್ನೆಗಳಿಗೆ ಉತ್ತರಗಳು "ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿವೆ" ಎಂದು ಅದು ಹೇಳಿದೆ.

ನಿಮ್ಮ ಮೋಸವನ್ನು ರಾಷ್ಟ್ರೀಯತೆಯ ಮೂಲಕ ಮರೆಮಾಚಲು ಸಾಧ್ಯವಿಲ್ಲ. ಅಥವಾ ಪ್ರತಿ ಆರೋಪಗಳಿಗೂ ಎದೆ ಉಬ್ಬಿಸುವ ಪ್ರತಿಕ್ರಿಯೆಗಳಿಂದ ಗೌಣ ಮಾಡಲು ಸಾಧ್ಯವಿಲ್ಲ ಎಂದು ಹಿಂಡೆನ್‌ಬರ್ಗ್‌ ತಿರುಗೇಟು ನೀಡಿದೆ. ಹಿಂಡೆನ್‌ಬರ್ಗ್‌ ವರದಿಯ ಬೆನ್ನಲ್ಲಿಯೇ ಅದಾನಿ ಎಂಟರ್‌ಪ್ರೈಸಸ್‌ ಸಂಸ್ಥೆ ಈ ವಾರ ನಡೆಸಿದ 2.5 ಶತಕೋಟಿ ಷೇರು ಮಾರಾಟದ ಮೇಲೂ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಅದರೊಂದಿಗೆ ಇಡೀ ಅದಾನಿ ಗ್ರೂಪ್‌ನ ಸಾಲದ ಮಟ್ಟಗಳು ಹಾಗೂ ತೆರಿಗೆ ಸ್ವರ್ಗಗಳ ಬಳಕೆಯ ಬಗ್ಗೆ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಮಾರಿಷಸ್ ಮತ್ತು ಕೆರಿಬಿಯನ್ ದ್ವೀಪಗಳಂತಹ ತೆರಿಗೆ ಸ್ವರ್ಗಗಳಲ್ಲಿ ಅದಾನಿ ಗ್ರೂಪ್ ಹೇಗೆ ವಿದೇಶಿ ಘಟಕಗಳನ್ನು ಸ್ಥಾಪನೆ ಮಾಡಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪ್ರಶ್ನಿಸಿದೆ, ಕೆಲವು ಕಡಲಾಚೆಯ ನಿಧಿಗಳು ಮತ್ತು ಶೆಲ್ ಕಂಪನಿಗಳು ಅದಾನಿ ಪಟ್ಟಿಮಾಡಿದ ಸಂಸ್ಥೆಗಳಲ್ಲಿ "ಗುಪ್ತವಾಗಿ" ಸ್ವಂತ ಸ್ಟಾಕ್ ಅನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಿತ್ತು.

Tap to resize

Latest Videos

ಅದಾನಿ ಕುಸಿತದಿಂದ ಎಲ್‌ಐಸಿ, ಎಸ್‌​ಬಿ​ಐಗೆ 78000 ಕೋಟಿ ನಷ್ಟ

ಹಿಂಡೆನ್‌ಬರ್ಗ್‌ನ ವರದಿಯು ಏಳು ಪ್ರಮುಖ ಪಟ್ಟಿಮಾಡಲಾದ ಅದಾನಿ ಕಂಪನಿಗಳಲ್ಲಿ ಐದು ಪ್ರಸ್ತುತ ಅನುಪಾತಗಳನ್ನು ವರದಿ ಮಾಡಿದೆ. ಪ್ರಸ್ತುತ ಕಂಪನಿಯಲ್ಲಿರುವ ಕ್ಯಾಶ್‌ ಹಾಗೂ ತೀರಾ ಸನಿಹದಲ್ಲಿರುವ ಲಯಾಬಿಲೀಟೀಸ್‌ಗಳ ವರದಿ ಮಾಡಿದ್ದು, ಇನ್ನು ದೊಡ್ಡ ಮಟ್ಟದ ಅಲ್ಪಾವಧಿಯ ಕ್ಯಾಶ್‌ ರಿಸ್ಕ್‌ ಅನ್ನು ಸೂಚಿಸಿದೆ ಎಂದು ಹೇಳಿದೆ.

ಒಂದೇ ಒಂದು ರಿಪೋರ್ಟ್‌, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್‌ ಅದಾನಿ!

ಈ ವರದಿಗೆ ಪ್ರತಿಕ್ರಿಯೆ ನೀಡಿದ್ದ ಅದಾನಿ, ಸಂಶೋಧನಾ ವರದಿಗೆ ಯಾವುದೇ ಪುರಾವೆಗಳಿಲ್ಲ. ಊಹಾಪೋಹದಲ್ಲಿ ಇದನ್ನು ಮಾಡಲಾಗಿದೆ. ನಮ್ಮ ವಿದೇಶಿ ಕಂಪನಿಗಳ ಬಗ್ಗೆ ತಪ್ಪುದಾರಿಗೆ ಎಳೆಯುವಂಥ ಆರೋಪ ಮಾಡಲಾಗಿದೆ ಎಂದಿದ್ದಾರೆ. ಅದಾನಿ ಅವರು ಹಿಂಡೆನ್‌ಬರ್ಗ್ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುತ್ತಿದ್ದಾರೆ ಎಂದು ಗುರುವಾರ ಹೇಳಿದರು, ಅದೇ ದಿನ ಪ್ರತಿಕ್ರಿಯಿಸಿದ್ದ ಹಿಂಡೆನ್‌ಬರ್ಗ್‌ ಅಂತಹ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು.

click me!