ನವದೆಹಲಿ(ಅ.03): ದೇಶದಲ್ಲಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುತ್ತಿರುವ ನಕಲಿ ನೋಟುಗಳ ಪೈಕಿ 2000 ರು. ನೋಟುಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಅದರಲ್ಲೂ ಕಳೆದ ವರ್ಷ ಕರ್ನಾಟಕದಲ್ಲಿ ದೇಶದಲ್ಲೇ ಅತಿಹೆಚ್ಚು ನಕಲಿ 2000 ರು. ನೋಟುಗಳು ಜಪ್ತಿಯಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2019ರಲ್ಲಿ ದೇಶದಲ್ಲಿ ಒಟ್ಟು 25.39 ಕೋಟಿ ರು. ಮೊತ್ತದ ಕಳ್ಳನೋಟು ವಶಪಡಿಸಿಕೊಳ್ಳಲಾಗಿದೆ. ಅದು 2018ರಲ್ಲಿ ವಶಪಡಿಸಿಕೊಂಡಿದ್ದ 17.95 ಕೋಟಿ ರು.ಗಿಂತ ಶೇ.11.7ರಷ್ಟುಏರಿಕೆಯಾಗಿದೆ. ಈ ಪೈಕಿ 2000 ರು. ನಕಲಿ ನೋಟುಗಳ ಸಂಖ್ಯೆಯೇ ಹೆಚ್ಚಿದ್ದು, ಒಟ್ಟು 90,566 ನಕಲಿ 2000 ರು. ನೋಟುಗಳು ಸಿಕ್ಕಿವೆ. ಅದರಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು, ಅಂದರೆ 23,599 ನಕಲಿ 2000 ರು. ನೋಟುಗಳು ಸಿಕ್ಕಿವೆ. ನಂತರದ ಸ್ಥಾನದಲ್ಲಿ ಗುಜರಾತ್ (14,494) ಮತ್ತು ಪಶ್ಚಿಮ ಬಂಗಾಳ (13,637) ಇವೆ. ಇನ್ನು, 2019ರಲ್ಲಿ 71,817 ನಕಲಿ 100 ರು. ನೋಟುಗಳು ಜಪ್ತಿಯಾಗಿವೆ.
ಅಪನಗದೀಕರಣ ಜಾರಿಗೊಳಿಸಿ ನಾಲ್ಕು ವರ್ಷವಾದರೂ ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಕಡಿಮೆಯಾಗದೆ ಹೆಚ್ಚುತ್ತಲೇ ಸಾಗಿರುವುದು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ಗೆ ತಲೆನೋವು ತಂದಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಲ್ಲಿ ನಕಲಿ ನೋಟುಗಳ ಪತ್ತೆಗೆಂದೇ ವಿಶೇಷ ವಿಭಾಗ ತೆರೆದಿದ್ದು, ಅದು ದೇಶಾದ್ಯಂತ ನಕಲಿ ನೋಟುಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ.
2000 ರು. ನಕಲಿ ನೋಟುಗಳ ಹಾವಳಿ ಮತ್ತು ಈ ನೋಟುಗಳ ಅಕ್ರಮ ದಾಸ್ತಾನು ಹೆಚ್ಚುತ್ತಿರುವುದರಿಂದ ಆರ್‌ಬಿಐ ಕಳೆದ ವರ್ಷ ಒಂದೇ ಒಂದು 2000 ರು. ನೋಟನ್ನೂ ಮುದ್ರಿಸಿಲ್ಲ. ಮಾರುಕಟ್ಟೆಯಿಂದಲೂ ಈ ನೋಟುಗಳ ಚಲಾವಣೆಯನ್ನು ಕ್ರಮೇಣ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ. 2017ರಲ್ಲಿ ಮಾರುಕಟ್ಟೆಯಲ್ಲಿ 360 ಕೋಟಿಯಷ್ಟುಸಂಖ್ಯೆಯ 2000 ರು. ನೋಟುಗಳಿದ್ದವು. 2019-20ರಲ್ಲಿ ಅವುಗಳ ಸಂಖ್ಯೆ 273 ಕೋಟಿಗೆ ಇಳಿಕೆಯಾಗಿದೆ. 2015ರಲ್ಲಿ ಭಾರತೀಯ ಅಂಕಿಅಂಶಗಳ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮಾರುಕಟ್ಟೆಯಲ್ಲಿ 400 ಕೋಟಿ ರು. ಮೌಲ್ಯದ ನಕಲಿ ನೋಟುಗಳಿವೆ ಎಂದು ಹೇಳಲಾಗಿತ್ತು.
ನವದೆಹಲಿ: ದೇಶದಲ್ಲಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುತ್ತಿರುವ ನಕಲಿ ನೋಟುಗಳ ಪೈಕಿ 2000 ರು. ನೋಟುಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಅದರಲ್ಲೂ ಕಳೆದ ವರ್ಷ ಕರ್ನಾಟಕದಲ್ಲಿ ದೇಶದಲ್ಲೇ ಅತಿಹೆಚ್ಚು ನಕಲಿ 2000 ರು. ನೋಟುಗಳು ಜಪ್ತಿಯಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2019ರಲ್ಲಿ ದೇಶದಲ್ಲಿ ಒಟ್ಟು 25.39 ಕೋಟಿ ರು. ಮೊತ್ತದ ಕಳ್ಳನೋಟು ವಶಪಡಿಸಿಕೊಳ್ಳಲಾಗಿದೆ. ಅದು 2018ರಲ್ಲಿ ವಶಪಡಿಸಿಕೊಂಡಿದ್ದ 17.95 ಕೋಟಿ ರು.ಗಿಂತ ಶೇ.11.7ರಷ್ಟುಏರಿಕೆಯಾಗಿದೆ. ಈ ಪೈಕಿ 2000 ರು. ನಕಲಿ ನೋಟುಗಳ ಸಂಖ್ಯೆಯೇ ಹೆಚ್ಚಿದ್ದು, ಒಟ್ಟು 90,566 ನಕಲಿ 2000 ರು. ನೋಟುಗಳು ಸಿಕ್ಕಿವೆ. ಅದರಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು, ಅಂದರೆ 23,599 ನಕಲಿ 2000 ರು. ನೋಟುಗಳು ಸಿಕ್ಕಿವೆ. ನಂತರದ ಸ್ಥಾನದಲ್ಲಿ ಗುಜರಾತ್ (14,494) ಮತ್ತು ಪಶ್ಚಿಮ ಬಂಗಾಳ (13,637) ಇವೆ. ಇನ್ನು, 2019ರಲ್ಲಿ 71,817 ನಕಲಿ 100 ರು. ನೋಟುಗಳು ಜಪ್ತಿಯಾಗಿವೆ.
ಅಪನಗದೀಕರಣ ಜಾರಿಗೊಳಿಸಿ ನಾಲ್ಕು ವರ್ಷವಾದರೂ ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಕಡಿಮೆಯಾಗದೆ ಹೆಚ್ಚುತ್ತಲೇ ಸಾಗಿರುವುದು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ಗೆ ತಲೆನೋವು ತಂದಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಲ್ಲಿ ನಕಲಿ ನೋಟುಗಳ ಪತ್ತೆಗೆಂದೇ ವಿಶೇಷ ವಿಭಾಗ ತೆರೆದಿದ್ದು, ಅದು ದೇಶಾದ್ಯಂತ ನಕಲಿ ನೋಟುಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ.
2000 ರು. ನಕಲಿ ನೋಟುಗಳ ಹಾವಳಿ ಮತ್ತು ಈ ನೋಟುಗಳ ಅಕ್ರಮ ದಾಸ್ತಾನು ಹೆಚ್ಚುತ್ತಿರುವುದರಿಂದ ಆರ್‌ಬಿಐ ಕಳೆದ ವರ್ಷ ಒಂದೇ ಒಂದು 2000 ರು. ನೋಟನ್ನೂ ಮುದ್ರಿಸಿಲ್ಲ. ಮಾರುಕಟ್ಟೆಯಿಂದಲೂ ಈ ನೋಟುಗಳ ಚಲಾವಣೆಯನ್ನು ಕ್ರಮೇಣ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ. 2017ರಲ್ಲಿ ಮಾರುಕಟ್ಟೆಯಲ್ಲಿ 360 ಕೋಟಿಯಷ್ಟುಸಂಖ್ಯೆಯ 2000 ರು. ನೋಟುಗಳಿದ್ದವು. 2019-20ರಲ್ಲಿ ಅವುಗಳ ಸಂಖ್ಯೆ 273 ಕೋಟಿಗೆ ಇಳಿಕೆಯಾಗಿದೆ. 2015ರಲ್ಲಿ ಭಾರತೀಯ ಅಂಕಿಅಂಶಗಳ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮಾರುಕಟ್ಟೆಯಲ್ಲಿ 400 ಕೋಟಿ ರು. ಮೌಲ್ಯದ ನಕಲಿ ನೋಟುಗಳಿವೆ ಎಂದು ಹೇಳಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.