ಬಾಗಲಕೋಟೆ: ಗುಳೇದಗುಡ್ಡ ಖಣಕ್ಕೆ ಬಂತು ಹೈಟೆಕ್ ಟಚ್: ನೇಕಾರರಿಗೆ ಸಿಕ್ತು ಹೊಸ ಐಡಿಯಾ..!

Published : Jul 02, 2022, 11:30 PM IST
ಬಾಗಲಕೋಟೆ: ಗುಳೇದಗುಡ್ಡ ಖಣಕ್ಕೆ ಬಂತು ಹೈಟೆಕ್ ಟಚ್: ನೇಕಾರರಿಗೆ ಸಿಕ್ತು ಹೊಸ ಐಡಿಯಾ..!

ಸಾರಾಂಶ

*   ಅಂತಾರಾಷ್ಟ್ರೀಯ ಮಟ್ಟದ ಬೇಡಿಕೆ ಹೊಂದುತ್ತಿರೋ ಖಣ *  ಪುಸ್ತಕಗಳ, ಡೈರಿಗಳ ಕವರ್ ಆಗಿ ಗಮನ ಸೆಳೆಯುತ್ತಿರೋ ಗುಳೇದಗುಡ್ಡ ಖಣ *  ನಾಡಿನಾದ್ಯಂತ ಫೇಮಸ್ ಆಗಿರೋ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಖಣ   

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜು.02):  ಸಾಮಾನ್ಯವಾಗಿ ಆಧುನಿಕತೆಯ ನಾಗಾಲೋಟದಲ್ಲಿ ಕೈಮಗ್ಗಗಳಿಂದ ತಯಾರಾಗುವ ಗುಳೇದಗುಡ್ಡ ಖಣಗಳಿಗೆ ಬೇಡಿಕೆ ವಿರಳವಾಗಿ ವ್ಯಾಪಾರ ಇಲ್ಲದೆ ಖಣಗಳನ್ನ ನೇಯುವ ನೇಕಾರರು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಆದರೆ ಹೆಂಗಳೆಯರು ಧರಿಸೋ ಕೈಮಗ್ಗಗಳಲ್ಲಿ ನಿರ್ಮಾಣವಾಗೋ ಗುಳೇದಗುಡ್ಡದ ಖಣಗಳನ್ನು ಇದೀಗ ನೋಟ್ ಬುಕ್ ಮತ್ತು ಡೈರಿ ಪುಸ್ತಕಗಳಿಗೆ ಮೇಲು ಹೊದಿಕೆಯಾಗಿ ಅಂದರೆ ಕವರ್ ಆಗಿ ಗಮನ ಸೆಳೆಯುತ್ತಿದ್ದು, ಗುಳೇದಗುಡ್ಡ ಖಣಗಳನ್ನು ನೇಯುವ ನೇಕಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. 

ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕೈ ಮಗ್ಗದಿಂದ ತಯಾರಾಗುವ ರೇಷ್ಮೆ ಖಣಗಳು ಅಂದರೆ ಬಹಳ ಫೇಮಸ್. ಮಾರುಕಟ್ಟೆಯಲ್ಲಿಯೂ ಗುಳೇದಗುಡ್ಡ ಖಣಗಳು ಅಂದರೆ ಸಾಕು ಅದಕ್ಕೆ ತನ್ನದೇ ಆದ ಬೇಡಿಕೆ ಇತ್ತು. ಆದರೆ ಇಂದಿನ ಕಾಲದಲ್ಲಿ ಬೇರೆ ಉತ್ಪನ್ನಗಳ ಕಡಿಮೆ ದರ  ಹಾಗೂ ತೀವ್ರ ಪೈಪೋಟಿ ಯಿಂದಾಗಿ ಕೈಮಗ್ಗ ದಿಂದ ತಯಾರಾಗುವ ಈ ಖಣಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಸ್ಥಳೀಯ ಯುವಕ ರಮೇಶ ಎಂಬುವವ  ಹೊಸದಾಗಿ ಯೋಚನೆ ಮಾಡಿಕೊಂಡು ಬುಕ್ ಗಳಿಗೆ ಕವರ್ ಹಾಕುವ ಮೂಲಕ ಖಣಗಳನ್ನು ನೇಯುವ  ನೇಕಾರರ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ. 

ಗುಳೇದಗುಡ್ಡ: ಸಾಕು ನಾಯಿಗೆ ಸೀಮಂತ ಮಾಡಿ ಸಂಭ್ರಮಿಸಿದ ಜ್ಯೋತಿ ಕುಟುಂಬ..!

ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿರೋ ಗುಳೇದಗುಡ್ಡ ಖಣ

ಗುಳೇದಗುಡ್ಡ ಖಣದ ಬಗ್ಗೆ ವೈಬ್ ಸೈಟ್ ನಿರ್ಮಾಣ ಮಾಡಿ, ಖಣದಿಂದ ತಯಾರ ಆಗಿರುವ ನೋಟ ಬುಕ್ ಗಳ ಪೋಟೋ ಹಾಗೂ ಇತರ ಫ್ಯಾಷನ್ ಬಗ್ಗೆ ವೈಬ್ ಸೈಟ್, ಟ್ವಿಟರ್ ಹಾಗೂ ಫೇಸ್‌ಬುಕ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸಲಾಗಿದೆ. ಹೀಗಾಗಿ ದೇಶದ ವಿವಿಧ ಪ್ರದೇಶದಲ್ಲಿ ಸೇರಿದಂತೆ ವಿದೇಶದಲ್ಲಿಯೂ ಗುಳೇದಗುಡ್ಡ ಖಣದಿಂದ ಕವರ್ ಹಾಕಿರುವ ಡೈರಿಗಳಿಗೆ, ನೋಟ್ ಬುಕ್ ಗಳಿಗೆ ಬೇಡಿಕೆ ಬರುತ್ತಿದೆ ಎಂದು ರಮೇಶ ತಿಳಿಸುತ್ತಿದ್ದಾರೆ.

ಲಾಕ್‌ಡೌನ್‌ದಿಂದ ಕಂಗಾಲಾಗಿದ್ದ ನೇಕಾರ ಕುಟುಂಬಗಳಿಗೆ ಸಮಾಧಾನ ತಂದ ಖಣಗಳ ಆನಲೈನ್ ಟಚ್

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ಗುಳೇದಗುಡ್ಡ ಪಟ್ಟಣದ ನೇಕಾರರು ನಿತ್ಯ ಕೆಲಸ ಮಾಡಿ  ರೇಷ್ಮೆ ಖಣಗಳನ್ನು ತಯಾರು ಮಾಡಿದ್ದರು. ಆದರೆ ಅವು ಖರೀದಿ ಆಗುತ್ತಿರಲಿಲ್ಲ. ಆಗ ರಮೇಶ  ಬೆಂಗಳೂರಿನ ಅಕ್ಷರ ಪ್ರಿಂಟರ್ ದಲ್ಲಿ ನಾಗರಾಜ್ ಎಂಬುವರು ಜೊತೆಗೆ ಚರ್ಚೆ ಮಾಡಿ ಬಳಿಕ, ಡೈರಿಗಳ (ಪುಸ್ತಕಗಳು)  ಮೇಲೆ ಕವರ್ ಹಾಕಿ ಮಾರಾಟ ಮಾಡಬಹುದು ಎಂದು ಮಾಹಿತಿ ನೀಡಿದ ನಂತರ ಅವರಿಗೆ  ಖಣಗಳನ್ನು ನೀಡಿ, ನೋಟ್ ಬುಕ್ ಗಳಿಗೆ ಕವರ್ ಹಾಕಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. 

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದಕ್ಕೆ ಜನರು ಖಣಗಳ ಕವರ್ ಇರುವ ಪುಸ್ತಕ ಮತ್ತು ಡೈರಿಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಕೈ ಮಗ್ಗ ನೇಕಾರರ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಬೇಡಿಕೆ ಕಳೆದುಕೊಂಡ ಗುಳೇದಗುಡ್ಡ ರೇಷ್ಮೆ ಖಣಕ್ಕೆ ಈಗ ಹೆಚ್ಚಿನ ಹಣ ನೀಡಿ ಖರೀದಿಸಲು  ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತರಹ ಹೊಸ ಯೋಜನೆ ಮಾಡಿಕೊಂಡು ಗ್ರಾಹಕರನ್ನು ಸೆಳೆಯಬೇಕಾಗಿದೆ ಎಂದು ರಮೇಶ ಇಂತಹ ಆಲೋಚನೆ ಮಾಡಿದ್ದಾರೆ.

ಕೈಮಗ್ಗ ನೇಕಾರರಿಗೆ ಸಿಗಬೇಕಿದೆ ಇನ್ನಷ್ಟು ಉತ್ತೇಜನ 

ಗುಳೇದಗುಡ್ಡದಲ್ಲಿ ಒಂದು ಕಾಲದಲ್ಲಿ ಗುಳೇದಗುಡ್ಡ ಖಣಗಳನ್ನು ನೇಯುವ ಅಂದಾಜು 10 ಸಾವಿರ ಮಗ್ಗಗಳಿದ್ದವು ಆದರೆ ದಿನಗಳದಂತೆ ಬೇಡಿಕೆ ಕಡಿಮೆಯಾಗುತ್ತಾ ಬಂದು ಇದೀಗ ಅವೆಲ್ಲಾ 100ಕ್ಕೆ ಬಂದು ಸೀಮಿತವಾಗಿವೆ. 
ಇನ್ನು ಪವರಲೂಮ್ ನಂತಹ ವಿದ್ಯುತ್ ಮಗ್ಗಗಳ ಅತಿಯಾದ ಪ್ರಭಾವವದ ಮಧ್ಯೆ ಈಗ ಕೈಮಗ್ಗ ನೇಕಾರರಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ದೊಡ್ಡ ಸಂಸ್ಥೆಗಳು, ರಾಜಕೀಯ ಗಣ್ಯರು,ಇಂತಹ ಡೈರಿ ಹಾಗೂ ಖಣ ಖರೀದಿಸಿ ಗಿಫ್ಟ್ ನೀಡುವಂತಾಗಬೇಕು‌. ಇದರಿಂದ ಕೈ ಮಗ್ಗದಿಂದ ತಯಾರಾಗುವ ಈ ರೇಷ್ಮೆ ಖಣಕ್ಕೆ ಹೆಚ್ಚು ಬೇಡಿಕೆ ಬಂದು ನೇಕಾರರು ಸಬಲ ಆಗುತ್ತಾರೆ.ಇನ್ನು ನೇಕಾರರು ಕಳೆದ 4 ರಿಂದ 5 ದಶಕಗಳಿಂದಲೂ ಕೈ ಮಗ್ಗ ನೇಕಾರಿಕೆ ಯನ್ನು ಅವಲಂಬಿಸಿಕೊಂಡು ಬಂದಿದ್ದು, ಸೂಕ್ತ ಬೇಡಿಕೆ ಇಲ್ಲದೆ ತೊಂದರೆ ಪಡುತ್ತಿದ್ದಾರೆ.ನೋಟ್ ಬುಕ್ ದ ಮೇಲೆ ಕವರ್ ಹಾಕುವ ಯೋಜನೆ ಸೇರಿದಂತೆ ಇತರ ಫ್ಯಾಷನ್ ಗೆ ಟಚ್ ನೀಡಿದ್ದರಿಂದ ಈಗ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. 

ಬಾಗಲಕೋಟೆಯಲ್ಲಿ ಕತ್ತೆಗಳ ಓಟದ ಸ್ಪರ್ಧೆ: ಡಾಂಕಿ ಓಟಕ್ಕೆ ಹುಚ್ಚೆದ್ದು ಕುಣಿದ ಯುವ ಜನತೆ..!

ಕೈಮಗ್ಗದಲ್ಲಿ ನೇಯ್ದ ಗುಳೇದಗುಡ್ಡ ಖಣಗಳೇ ಶ್ರೇಷ್ಠ 

ವಿದ್ಯುತ್ ಮಗ್ಗ ದಿಂದ ತಯಾರ ಆಗಿರುವ ಖಣಕ್ಕಿಂತ ಕೈಮಗ್ಗಗಳಿಂದ ತಯಾರ ಆಗಿರುವ ಖಣ ಅತಿ ಶ್ರೇಷ್ಠ ವಾಗಿದೆ ಆದರೆ ಇದಕ್ಕೆ ಬೇಡಿಕೆ ಇಲ್ಲದಂತಾಗಿದೆ ಎಂದು ನೋವು ತೊರ್ಪಡಿಸಿಕೊಳ್ಳುವ ನೇಕಾರರು, ಬುಕ್ ಮೇಲೆ ಕವರ್ ಹಾಕಿದ್ದರಿಂದ ಸ್ವಲ್ಪ ಮಟ್ಟಿಗೆ ಅದಾಯ ಹೆಚ್ಚಾಗಿದೆ.ಈ ಹಿಂದೆ ಎರಡು ದಿನಕ್ಕೆ 600 ರೂಪಾಯಿ ಆದಾಯ ಬರುತ್ತಿತ್ತು. ಈಗ ಒಂದು ಸಾವಿರ ರೂಪಾಯಿಗಳ ವರೆಗ ಆದಾಯ ಬರುತ್ತಿದೆ. ಆದರೂ ಸಹ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಕೈ ಮಗ್ಗಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಖಣದಿಂದ ತಯಾರ ಆಗುವ ಡೈರಿಗಳನ್ನು ಖರೀದಿ ಮಾಡುವ ಜೊತೆಗೆ  ಇತರ ಪ್ರೋತ್ಸಾಹ ಸಿಗುವ ಯೋಜನೆ ಜಾರಿಗೆ ತರಬೇಕಾಗುತ್ತದೆ. ಗುಳೇದಗುಡ್ಡ ಖಣ ತಯಾರಾಗಬೇಕಾದಲ್ಲಿ, ಅದರ ಹಿಂದೆ,ಚಿಕ್ಕ ಪುಟ್ಟ ಕೆಲಸ ಕಾರ್ಯಗಳನ್ನು ಮಾಡಬೇಕಾಗಿರುವುದರಿಂದ ಚರಕ ಸುತ್ತುವುದು, ಹೆಣಿಕೆ ಮಾಡುವುದು, ಬಣ್ಣ ಹಾಕುವುದು ಸೇರಿದಂತೆ ಇತರ ಉದ್ಯೋಗವು ಇದೆ. ಇಂತಹ ಉದ್ಯೋಗ ನಂಬಿದ ಜನತೆಗೂ ಸಹ ಅನುಕೂಲವಾಗಲಿದೆ. 

ಒಟ್ಟಾರೆ ನಶಿಸಿ ಹೋಗುತ್ತಿರುವ ಕೈ ಮಗ್ಗದ ಗುಳೇದಗುಡ್ಡ ಖಣಕ್ಕೆ ಹೊಸ ಫ್ಯಾಶನ್ ಟಚ್ ನೀಡುವ ಮೂಲಕ ನೇಕಾರರು ವ್ಯಾಪಾರಕ್ಕೆ ಮುಂದಾಗಿದ್ದು, ಇದಕ್ಕೆ ಸರ್ಕಾರದ ಜೊತೆ ಸಾರ್ವಜನಿಕರೂ ಸಹ ಪ್ರೋತ್ಸಾಹ ನೀಡುವುದು ಅತ್ಯಗತ್ಯವಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!