ಡೊಮಿನೋಸ್ ಮಾಜಿ ಸಿಇಒ ಇಷ್ಟೊಂದು ಪಿಜ್ಜಾ ತಿಂದ್ರಾ?ಒಂದು ವರ್ಷದ ಅವರ ಪಿಜ್ಜಾ ವೆಚ್ಚ ಎಷ್ಟು ಗೊತ್ತಾ?

By Suvarna NewsFirst Published Mar 18, 2023, 4:26 PM IST
Highlights

ಡೊಮಿನೋಸ್ ಅಂದ ತಕ್ಷಣ ಕಣ್ಮುಂದೆ ಪಿಜ್ಜಾ ಚಿತ್ರ ಮೂಡಿ ಬಾಯಲ್ಲಿ ನೀರು ಬರುತ್ತದೆ. ಹೀಗಿರುವಾಗ ಡೊಮಿನೋಸ್ ಸಿಇಒ ಕೂಡ ಪಿಜ್ಜಾ ತಿನ್ನದೇ ಸುಮ್ಮನಿರುತ್ತಾರೆ. ಖಂಡಿತಾ ಇಲ್ಲ, ಆದರೆ, ಹಾಗಂತ ಇಷ್ಟೊಂದು ಪಿಜ್ಜಾ ತಿನ್ನಲು ಸಾಧ್ಯನಾ ಎಂಬ ಪ್ರಶ್ನೆಯೊಂದು ಇತ್ತೀಚೆಗೆ ಹಲವರನ್ನು ಕಾಡಿದೆ. ಇದಕ್ಕೆ ಕಾರಣ 2021ರಲ್ಲಿ ಡೊಮಿನೋಸ್ ಅಂದಿನ ಸಿಇಒ ರಿಚ್ ಅಲ್ಲಿಸನ್ ವೈಯಕ್ತಿಕ ಪಿಜ್ಜಾ ಖರೀದಿಗೆ 3,919 ಡಾಲರ್ ಪಡೆದಿದ್ದಾರೆ ಎಂದು ಸಂಸ್ಥೆ ದಾಖಲೆಗಳು ತಿಳಿಸಿವೆ. 

Business Desk:ಡೊಮಿನೋಸ್ ಪಿಜ್ಜಾದ ಮಾಜಿ ಸಿಇಒ ರಿಚ್ ಅಲ್ಲಿಸನ್ 2022ರಲ್ಲಿ ಸಂಸ್ಥೆಯನ್ನು ತೊರೆದ ಸಂದರ್ಭದಲ್ಲಿ ಅವರಿಗೆ 'ಜೀವಮಾನ ಸವಲತ್ತು' ಘೋಷಿಸಲಾಗಿತ್ತು. ಕಳೆದ ಸಾಲಿನ ಪ್ರಾಕ್ಸಿ ಫೈಲಿಂಗ್ ನಲ್ಲಿ ಡೊಮಿನೋಸ್ ಮಾಜಿ ಸಿಇಒ ಅವರಿಗೆ ವೈಯಕ್ತಿಕ ಪಿಜ್ಜಾ ವೆಚ್ಚವಾಗಿ ಸುಮಾರು 4,000 ಡಾಲರ್ ಪಾವತಿಸಿರೋದಾಗಿ ತಿಳಿಸಿದೆ. ಡೊಮಿನೋಸ್ 2021ರ ಕಾರ್ಯನಿರ್ವಾಹಕ ಭತ್ಯೆ ಅಡಿಯಲ್ಲಿ ವೈಯಕ್ತಿಕ ಪಿಜ್ಜಾ ಖರೀದಿಗೆ ಅಲ್ಲಿಸನ್ 3,919 ಡಾಲರ್ ಪಡೆದಿರೋದಾಗಿ ತಿಳಿಸಲಾಗಿದೆ. ಕಾರ್ಯನಿರ್ವಾಹಕ ವೆಚ್ಚದಲ್ಲಿ ಸಂಸ್ಥೆಯ ವೈಯಕ್ತಿಕ ಜೆಟ್ ಬಳಕೆ, ತಂಡದ ಸದಸ್ಯರ ಬಹುಮಾನಗಳು ಹಾಗೂ ವೆಚ್ಚದ ಭತ್ಯೆಗಳು ಕೂಡ ಸೇರಿವೆ. ಆದರೆ, 2021ನೇ ಸಾಲಿನಲ್ಲಿ ಅಲ್ಲಿಸನ್ ಅವರಿಗೆ ನೀಡಿರುವ  3,919 ಡಾಲರ್ ಪಿಜ್ಜಾ ವೆಚ್ಚ ಅವರ ದೊಡ್ಡ ಪ್ರಮಾಣದ ಭತ್ಯೆಯ ಒಂದು ಚಿಕ್ಕ ಭಾಗವಷ್ಟೇ. 2021ರಲ್ಲಿ ಅಲ್ಲಿಸನ್ ಅವರಿಗೆ ನೀಡಲಾಗಿರುವ ಒಟ್ಟು ಭತ್ಯೆ ಎಷ್ಟು ಗೊತ್ತಾ? 7,138,002 ಡಾಲರ್.  ಕಂಪನಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಉದ್ಯೋಗಿಗಳಿಗೆ ವಿವಿಧ ಭತ್ಯೆಗಳನ್ನು ನೀಡುವುದು ಸರ್ವೇಸಾಮಾನ್ಯ. ಇದು ಎಲ್ಲ ಸಂಸ್ಥೆಗಳಲ್ಲೂ ಇದೆ. ಇನ್ನುಈ ಭತ್ಯೆಗಳಲ್ಲಿ ಆಹಾರದ ವೆಚ್ಚವೂ ಸೇರಿರುತ್ತದೆ. 

2021ರಲ್ಲಿ ಅಂದ್ರೆ ಅಲ್ಲಿಸನ್ ಅವರಿಗೆ 3,919 ಡಾಲರ್ ಪಿಜ್ಜಾ ವೆಚ್ಚ ನೀಡಲಾಗಿದ್ದ ಅದೇ ವರ್ಷ ಡೊಮಿನೋಸ್ ನೂತನ ಸಿಇಒ ರಸ್ಸೆಲ್ ವಿನರ್ ಅವರಿಗೆ ವೈಯಕ್ತಿಕ ಪಿಜ್ಜಾ ಖರೀದಿಗಾಗಿ 2,810 ಡಾಲರ್ ಪಾವತಿಸಲಾಗಿತ್ತು. ಇನ್ನು ಅಲ್ಲಿಸನ್ 2021ರಲ್ಲಿ ಪಿಜ್ಜಾ ವೆಚ್ಚವಾಗಿ ಪಡೆದಿರುವ ಭತ್ಯೆಗಳು ಹಿಂದಿನ ಸಾಲಿಗೆ ಹೋಲಿಸಿದ್ರೆ ತುಂಬಾ ಕಡಿಮೆ ಎಂದು ಡೊಮಿನೋಸ್ ದಾಖಲೆಗಳು ತಿಳಿಸಿವೆ. ಕೋವಿಡ್ -19 ಪ್ರಾರಂಭವಾದ ವರ್ಷ ಅಂದ್ರೆ 2020ರಲ್ಲಿ ಅಲ್ಲಿಸನ್ ಪಿಜ್ಜಾ ವೆಚ್ಚವಾಗಿ ಸಂಸ್ಥೆಯಿಂದ 6,126  ಡಾಲರ್ ಪಡೆದಿದ್ದರು. 

ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌

ಉಚಿತ ಆಹಾರ ಪ್ರಯೋಜನಗಳು ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಒಂದಾಗಿದೆ. ಹೀಗಾಗಿ ಡೊಮಿನೋಸ್ ಸಿಇಒಗಳಿಗೆ ಆಹಾರ ವೆಚ್ಚವಾಗಿ ಪಾವತಿಸಲಾಗುತ್ತಿರುವ ಮೊತ್ತವನ್ನು ನೋಡಿ ಅಚ್ಚರಿಪಡುವಂಥದ್ದು ಏನೂ ಇಲ್ಲ' ಎಂದು ಚಿಕಾಗೋ ರೆಸ್ಟೋರೆಂಟ್ ಸಲಹೆಗಾರ ಟಿಮ್ ಪೊವೆಲ್ ಅಭಿಪ್ರಾಯಪಟ್ಟಿದ್ದಾರೆ. ಕಂಪನಿಯ ಸಿಇಒಗಳು ಬ್ರ್ಯಾಂಡ್ ಸಿಇಒಗಳಾಗಿ ಕೂಡ ಸೇವೆ ಸಲ್ಲಿಸೋದು ಅಗತ್ಯ.
ಅಲ್ಲಿಸನ್ ಡೊಮಿನೋಸ್ ಸಂಸ್ಥೆಯಲ್ಲಿ 10ಕ್ಕಿಂತಲೂ ಅಧಿಕ ವರ್ಷ ಸೇವೆ ಸಲ್ಲಿಸಿದ್ದಾರೆ. ಡೊಮಿನೋಸ್ ಚೈನ್ ರೆಸ್ಟೋರೆಂಟ್ ಆಗಿದ್ದು, ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿದೆ. ಇಂಥ ಬೃಹತ್ ಸಂಸ್ಥೆಯ ಸಿಇಒ ಆಗಿ ಅಲ್ಲಿಸನ್ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. 2022ರಲ್ಲಿ ಅವರು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. 

ಈ ಹಿಂದೆ ಡೊಮಿನೋಸ್ ಆಡರ್ರ್ ತೆಗೆದುಕೊಳ್ಳಲು  ಎಐ ಆಧಾರಿತ ಸಂಭಾಷಣೆ ಪ್ರಾರಂಭಿಸಿತ್ತು. ಆ ಬಳಿಕ ಸೆಲ್ಫ್ ಡ್ರೈವಿಂಗ್ ಡೆಲಿವರಿ ಯೋಜನೆಯನ್ನು ಪ್ರಾರಂಭಿಸಿದೆ. ಅದಕ್ಕಾಗಿ 333,000 ಸ್ಕ್ವೇರ್ ಫೀಟ್‌ನ ತಂತ್ರಜ್ಞಾನ ಲ್ಯಾಬ್ ಅನ್ನು ಮಿಚಿಗನ್‌ನ ಆನ್‌ ಅರ್ಬಾರ್‌ನಲ್ಲಿ ಸ್ಥಾಪಿಸಿದೆ. 

ವಿಜಯ್‌ ಮಲ್ಯ ರೀತಿಯಲ್ಲಿ ಹವಾಯಿಗೆ ಪರಾರಿಯಾದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಮಾಜಿ ಸಿಇಒ!

ಡೊಮಿನೋಸ್ ಇತ್ತೀಚೆಗೆ ಬೆಂಗಳೂರಿನಲ್ಲಿ 20 ನಿಮಿಷಗಳ ಪಿಜ್ಜಾ ಡೆಲಿವರಿ ಸೇವೆ ಆರಂಭಿಸಿದೆ. ಇದರಿಂದ ಗ್ರಾಹಕರು ಆರ್ಡರ್ ಮಾಡಿದ ಕೇವಲ ಇಪ್ಪತ್ತೇ ನಿಮಿಷದಲ್ಲಿ ಬಿಸಿ ಬಿಸಿ ಪಿಜ್ಜಾವನ್ನು ಟೇಸ್ಟ್ ಪಡೆಯಬಹುದಾಗಿದೆ. ಡೊಮಿನೋಸ್‌ ಇಂಡಿಯಾ ಈಗಾಗಲೇ ಭಾರತದ 14 ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ಡಿಸೆಂಬರ್ 2022ರಲ್ಲಿ ಮಾಹಿತಿ ನೀಡಿದೆ. ಈ 14 ನಗರಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಪ್ರಸ್ತುತ ಡೊಮಿನೋಸ್ ಬೆಂಗಳೂರಿನ ಸುಮಾರು 170 ಔಟ್‌ಲೇಟ್‌ಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ. 
 

click me!