ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ದಿನಕ್ಕೊಂದು ಕರೆ,ಸಂದೇಶಗಳು ಬರ್ತಿರುತ್ತವೆ. ಆದ್ರೆ ಜಾಹೀರಾತು ನಂಬಿ ವಿಮೆ ಖರೀದಿ ಸಾಧ್ಯವಿಲ್ಲ. ಅದ್ರ ಸಾಧಕ-ಬಾಧಕಗಳನ್ನು ತಿಳಿದುಕೊಳ್ಳಬೇಕು. ಹಿರಿಯ ನಾಗರಿಕರ ವಿಮೆ ಖರೀದಿ ವೇಳೆಯೂ ಎಚ್ಚರಿಕೆ ವಹಿಸಬೇಕು.
ಆರೋಗ್ಯ ವಿಮೆ (Insurance Policy) ಮಹತ್ವ ಎಲ್ಲರಿಗೂ ತಿಳಿದಿದೆ. ಕೊರೊನಾ (Corona)ಸಂದರ್ಭದಲ್ಲಿ ವಿಮೆ (Insurance)ಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತಿದ್ದಾರೆ. ಆರೋಗ್ಯ ವಿಮೆ ಜನರಿಗೆ ಆರ್ಥಿಕ ನೆರವು ನೀಡಲಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಆರೋಗ್ಯ ವಿಮೆ ಹೊಂದುವ ಅಗತ್ಯವಿದೆ. ವಯಸ್ಸಾದವರಿಗೆ ಯಾಕೆ ಆರೋಗ್ಯ ವಿಮೆ ಎಂದು ನಿರ್ಲಕ್ಷ್ಯ ಮಾಡುವವರಿದ್ದಾರೆ. ಆದ್ರೆ ಅವರಿಗೂ ಆರೋಗ್ಯ ವಿಮೆ ಬೇಕು. ವಯಸ್ಸಾದಂತೆ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪದೇ ಪದೇ ಆಸ್ಪತ್ರೆಗಳಿಗೆ ಹೋಗಬೇಕಾದ ಸಂದರ್ಭ ಬರುತ್ತದೆ.
ಉದ್ಯೋಗದಾತರು ಗ್ರೂಪ್ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿದ್ದರೆ ಅದು ವಯಸ್ಸಾದ ಪೋಷಕರನ್ನು ಒಳಗೊಳ್ಳುತ್ತದೆ. ಅವರ ಚಿಕಿತ್ಸೆಗೆ ಇದು ನೆರವಾಗುತ್ತದೆ. ಹಾಗಾಗಿ ಹಿರಿಯ ನಾಗರಿಕರ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವುದು ಬುದ್ಧಿವಂತಿಕೆಯಾಗಿದೆ. ನಿಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಗೆ ಆರೋಗ್ಯ ವಿಮೆ ಖರೀದಿಸಲು ನೀವು ಮುಂದಾಗಿದ್ದರೆ ಅನೇಕ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಕವರೇಜ್ ಮಾತ್ರವಲ್ಲದೆ ಪ್ರೀಮಿಯಂನ ಸಾಧಕ-ಬಾಧಕಗಳನ್ನು ಸಹ ನೋಡಬೇಕಾಗುತ್ತದೆ.
ಇದನ್ನೂ ಓದಿ: ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?
ಸಾಮಾನ್ಯವಾಗಿ ಹಿರಿಯ ನಾಗರಿಕರ ಆರೋಗ್ಯ ಯೋಜನೆಗಳು ಸಾಮಾನ್ಯ ವಿಮೆಗಿಂತ ಭಿನ್ನವಾಗಿರುತ್ತವೆ. ಹಿರಿಯ ನಾಗರಿಕರ ಆರೋಗ್ಯ ವಿಮೆಯನ್ನು ಖರೀದಿಸುವಾಗ ಕೆಲವು ಅಗತ್ಯಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಅವುಗಳಲ್ಲಿ ವಿಮೆ ಖರೀದಿ ಹಾಗೂ ಮುಕ್ತಾಯದ ಅವಧಿಯನ್ನು ಗಮನಿಸಬೇಕು. ನವೀಕರಣದ ಗರಿಷ್ಠ ವಯಸ್ಸು,ವಿಮೆ ವ್ಯಾಪ್ತಿ, ಗಂಭೀರ ಅನಾರೋಗ್ಯದ ಕವರ್, ಆಸ್ಪತ್ರೆಗೆ ದಾಖಲು ಸೇರಿದಂತೆ ಕೆಲ ವಿಷ್ಯಗಳನ್ನು ಗಮನಿಸಬೇಕಾಗುತ್ತದೆ.
ಜೀವ ವಿಮಾದಾರರ ವಯಸ್ಸು ಸುಮಾರು 60 ವರ್ಷವಾಗಿದ್ದರೆ, ಅವರ ಒಟ್ಟು ವಿಮಾ ಮೊತ್ತ ಶೇಕಡಾ 2.5 ರವರೆಗೆ ಮಾತ್ರ ಪ್ರೀಮಿಯಂ ಇಟ್ಟುಕೊಳ್ಳುವುದು ಉತ್ತಮ. ಅದೇ ರೀತಿ, ವಯಸ್ಸು 80 ವರ್ಷಗಳವರೆಗೆ ಇದ್ದರೆ ಒಟ್ಟು ವಿಮಾ ಮೊತ್ತದ ಶೇಕಡಾ 9ರವರೆಗೆ ಪ್ರೀಮಿಯಂ ಪಾವತಿಸಬಹುದು. ನೀವು ಇದಕ್ಕಿಂತ ಹೆಚ್ಚಿನ ಪ್ರೀಮಿಯಂ ಪಾವತಿಸುತ್ತಿದ್ದರೆ, ಅದು ನಿಮಗೆ ದುಬಾರಿಯಾಗಲಿದೆ.
ವಯಸ್ಸಿನೊಂದಿಗೆ, ಪಾಲಿಸಿಯ ಪ್ರೀಮಿಯಂ ಅಗ್ಗವಾಗಬಹುದು ಅಥವಾ ದುಬಾರಿಯಾಗಬಹುದು. ಅಲ್ಲದೆ, ರೈಡರ್ ಮತ್ತು ವೈಶಿಷ್ಟ್ಯ ಕಾರಣದಿಂದಾಗಿ ಬೆಲೆಗಳು ಬದಲಾಗುತ್ತವೆ.
ಹಿರಿಯ ನಾಗರಿಕರಿಗೆ ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ, ಪ್ರೀಮಿಯಂ ಹೆಚ್ಚಿರಬಹುದು. ಅಂದರೆ 75 ನೇ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಿದರೆ ಮತ್ತು ನಿಮಗೆ ಮಧುಮೇಹದ ಗಂಭೀರ ಸಮಸ್ಯೆ ಇದ್ದರೆ, ವಿಮಾ ಕಂಪನಿಯು ಅದರ ಮೂಲ ಬೆಲೆಯನ್ನು ಶೇಕಡಾ 100 ರಿಂದ ಶೇಕಡಾ 150 ರಷ್ಟು ಹೆಚ್ಚಿರುತ್ತದೆ.
ಕಂಪನಿಗಳು ಪ್ರೀಮಿಯಂ ಅನ್ನು ಹೆಚ್ಚಿಸಲು ಯಾವುದೇ ಮಾನದಂಡವನ್ನು ಮಾಡದಿದ್ದರೂ, ಸಾಮಾನ್ಯವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. 60 ರಿಂದ 80 ವರ್ಷ ವಯಸ್ಸಿನವರಿಗೆ, ಈ ಪ್ರೀಮಿಯಂ ವಾರ್ಷಿಕವಾಗಿ ಶೇಕಡಾ 4-5ರ ದರದಲ್ಲಿ ಹೆಚ್ಚಾಗುತ್ತದೆ. ಹಿರಿಯ ನಾಗರಿಕರಿಗೆ ಗಂಭೀರ ಸಮಸ್ಯೆ ಇದ್ದರೆ ಆರೋಗ್ಯ ವಿಮೆಯನ್ನು ಖರೀದಿಸುವುದು ಕಷ್ಟವಾಗುತ್ತದೆ.
ಇದನ್ನೂ ಓದಿ: WORK FROM OFFICE: ಐಟಿ ಉದ್ಯೋಗಿಗಳಿಗೆ ಕಚೇರಿಗೆ ಸ್ವಾಗತಿಸಲು ಸಜ್ಜಾದ ಭಾರತೀಯ ಟೆಕ್ ಕಂಪನಿಗಳು!
ಅತ್ಯುತ್ತಮ ಆರೋಗ್ಯ ವಿಮೆ :
1. ಆದಿತ್ಯ ಬಿರ್ಲಾ ಆಕ್ಟಿವ್ ಕೇರ್ ಹಿರಿಯ ನಾಗರಿಕ ಆರೋಗ್ಯ ವಿಮೆ ಹಲವಾರು ಮಿತಿಗಳೊಂದಿಗೆ ವಿಮೆ ಸೌಲಭ್ಯ ನೀಡುತ್ತದೆ. ಈ ಆರೋಗ್ಯ ವಿಮಾ ಪಾಲಿಸಿಯು 80 ವರ್ಷ ವಯಸ್ಸಿನ ಜನರಿಗೆ ರಕ್ಷಣೆ ನೀಡುತ್ತದೆ.
2. ಬಜಾಜ್ ಅಲಿಯಾನ್ಸ್ ಹಿರಿಯ ನಾಗರಿಕರಿಗಾಗಿ ರಜತ್ ಆರೋಗ್ಯ ಯೋಜನೆ ನೀಡುತ್ತೆ.
3. ಭಾರ್ತಿಎಕ್ಸಾ ಸ್ಮಾರ್ಟ್ ಸೂಪರ್ ಆರೋಗ್ಯ ವಿಮೆಯನ್ನು 65 ವರ್ಷ ವಯಸ್ಸಿನ ವೃದ್ಧರು ಖರೀದಿಸಬಹುದು. ವಿಮಾ ಮೊತ್ತವು 5 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಇರುತ್ತದೆ.
ಇದಲ್ಲದೆ ಇನ್ನೂ ಅನೇಕ ಕಂಪನಿಗಳು ಆರೋಗ್ಯ ವಿಮೆ ಸೌಲಭ್ಯ ನೀಡುತ್ತವೆ. ವಿಮೆ ಖರೀದಿ ಮೊದಲು ಸರಿಯಾದ ಮಾಹಿತಿ ಪಡೆಯುವ ಅಗತ್ಯವಿರುತ್ತದೆ.