* 5 ಸಿಬ್ಬಂದಿಗೆ ಒಟ್ಟು 9ಲಕ್ಷ ಷೇರುಗಳ ಉಡುಗೊರೆ
*ಈ ಹಿಂದೆ ಕೂಡ ಕೆಲವು ವ್ಯಕ್ತಿಗಳಿಗೆ ಷೇರು ಉಡುಗೊರೆ ನೀಡಿದ್ದ ವಿ. ವೈದ್ಯನಾಥನ್
*ಸಾಮಾಜಿಕ ಕಾರ್ಯ ಹಾಗೂ ಉಡುಗೊರೆಯಾಗಿ ಐಡಿಎಫ್ ಸಿ ಫಸ್ಟ್ ಬ್ಯಾಂಕಿನ ಒಟ್ಟು 11 ಲಕ್ಷ ಇಕ್ವಿಟಿ ಷೇರುಗಳ ವಿನಿಮಯ
ನವದೆಹಲಿ (ಫೆ.22): ಐಡಿಎಫ್ ಸಿ ಫಸ್ಟ್ ಬ್ಯಾಂಕ್ (IDFC FIRST Bank) ಎಂಡಿ (MD) ಹಾಗೂ ಸಿಇಒ (CEO) ವಿ. ವೈದ್ಯನಾಥನ್ (V. Vaidyanathan) ತನ್ನ ಬಳಿಯಿರೋ ಬ್ಯಾಂಕಿನ 3.95 ಕೋಟಿ ರೂ. ಮೌಲ್ಯದ 9 ಲಕ್ಷ ಷೇರುಗಳನ್ನು (Shares) ತರಬೇತುದಾರ (trainer), ಮನೆ ಕೆಲಸದ ಸಹಾಯಕ (househelp) ಹಾಗೂ ಡ್ರೈವರ್ (driver) ಸೇರಿದಂತೆ 5 ಜನರಿಗೆ ಮನೆಗಳನ್ನು ಖರೀದಿಸಲು ನೆರವು ನೀಡೋ ಉದ್ದೇಶದಿಂದ ಉಡುಗೊರೆಯಾಗಿ (gift) ನೀಡಿದ್ದಾರೆ.
ವಿ.ವೈದ್ಯನಾಥನ್ ಈ ರೀತಿ ಷೇರುಗಳನ್ನು (Shares) ಉಡುಗೊರೆಯಾಗಿ (Gift) ನೀಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ತನಗೆ ಸಂಬಂಧವಿಲ್ಲದ ಕೆಲವು ವ್ಯಕ್ತಿಗಳಿಗೆ ಕೂಡ ಇವರು ಷೇರುಗಳನ್ನು (Shares) ಉಡುಗೊರೆಯಾಗಿ ನೀಡಿದ್ದಾರೆ. ಇಂಥ ನೆರವುಗಳನ್ನು ವೈದ್ಯನಾಥ್ ತನ್ನ ವೈಯಕ್ತಿಕ ನೆಲೆಗಟ್ಟಿನಲ್ಲೇ ಮಾಡುತ್ತಿರೋದು ವಿಶೇಷ. ಐಡಿಎಫ್ ಸಿ ಫಸ್ಟ್ ಬ್ಯಾಂಕಿನಲ್ಲಿ ತಾನು ಹೊಂದಿರೋ 9,00,000 ಇಕ್ವಿಟಿ ಷೇರುಗಳನ್ನು ಎಂಡಿ ಹಾಗೂ ಸಿಇಒ ವಿ.ವೈದ್ಯನಾಥನ್ 2022ರ ಫೆಬ್ರವರಿ 21ರಂದು ಉಡುಗೊರೆಯಾಗಿ ನೀಡಿದ್ದಾರೆ ಎಂದು ಬ್ಯಾಂಕ್ ಸೋಮವಾರ (ಫೆ.21) ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗೆ (BSE) ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಿದೆ.
ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?
ವೈದ್ಯನಾಥನ್ ಮೂರು ಲಕ್ಷ ಷೇರುಗಳನ್ನು ತರಬೇತುದಾರ ರಮೇಶ್ ರಾಜು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಮನೆಕೆಲಸದ ಸಹಾಯಕ ಪ್ರಾಂಜಲ್ ನರ್ವೇಕರ್ ಹಾಗೂ ಚಾಲಕ ಅಲ್ಗರ್ಸ್ಯಾಮೈ ಸಿ ಮುನಪರ್ ಅವರಿಗೆ ತಲಾ ಎರಡು ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ತಲಾ 1ಲಕ್ಷ ಷೇರುಗಳನ್ನು ಆಫೀಸ್ ಸಫೋರ್ಟ್ ಸ್ಟಾಪ್ ದೀಪಕ್ ಪತ್ತಾರೆ ಹಾಗೂ ಹೌಸ್ ಹೆಲ್ಪರ್ ಸಂತೋಷ್ ಜೋಗಲೆ ಅವರಿಗೆ ನೀಡಿದ್ದಾರೆ.
ಸೋಮವಾರದ ಬಾಂಬೆ ಷೇರುಮಾರುಕಟ್ಟೆ ಕ್ಲೋಸಿಂಗ್ ಬೆಲೆಯ ಲೆಕ್ಕಾಚಾರದಲ್ಲಿ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಒಂದು ಷೇರಿನ ಬೆಲೆ 43.90ರೂ. ಆಗಿದೆ. ಈ ಆಧಾರದಲ್ಲಿ 9 ಲಕ್ಷ ಉಡುಗೊರೆಯಾಗಿ ನೀಡಿರೋ ಷೇರುಗಳ ಮೌಲ್ಯ 3,95,10,000ರೂ. ಈ ಬೆನ್ನಲ್ಲೇ ಬ್ಯಾಂಕ್ ನೀಡಿರೋ ಇನ್ನೊಂದು ಮಾಹಿತಿ ಪ್ರಕಾರ ರುಕ್ಮಿಣಿ ಸಾಮಾಜ ಕಲ್ಯಾಣ ಟ್ರಸ್ಟ್ 2ಲಕ್ಷ ಇಕ್ವಿಟಿ ಷೇರುಗಳನ್ನು(equity shares) ಸಾಮಾಜಿಕ ಕಾರ್ಯಗಳಿಗೆ (Social works) ಬೆಂಬಲ ನೀಡೋ ಉದ್ದೇಶದಿಂದ ವಿನಿಮಯ ಮಾಡಲಾಗಿದೆ. ಹೀಗಾಗಿ ಸಾಮಾಜಿಕ ಕಾರ್ಯಗಳಿಗಾಗಿ ಹಾಗೂ ಉಡುಗೊರೆಯಾಗಿ ಐಡಿಎಫ್ ಸಿ ಫಸ್ಟ್ ಬ್ಯಾಂಕಿನ ಒಟ್ಟು 11 ಲಕ್ಷ ಇಕ್ವಿಟಿ ಷೇರುಗಳನ್ನು (equity shares) ವಿನಿಮಯ ಮಾಡಲಾಗಿದೆ. ಈ ವಹಿವಾಟಿನಿಂದ ವಿ. ವೈದ್ಯನಾಥ್ ನೇರ ಅಥವಾ ಪರೋಕ್ಷವಾಗಿ ಯಾವುದೇ ಪ್ರಯೋಜನಗಳನ್ನು ಪಡೆದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
CEPA Deal : ಭಾರತ-ಯುಎಇ ವ್ಯಾಪಾರ ಸಮೃದ್ಧಿಯ ಶಕೆ: ಪಿಯೂಷ್ ಗೋಯಲ್
ಈ ರೀತಿ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿರೋದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆ ಕೇರಳ (Kerala) ಮೂಲದ ಉದ್ಯಮಿಯೊಬ್ಬರು ತನ್ನ ಕಂಪನಿಯಲ್ಲಿ 22 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಉದ್ಯೋಗಿಯೊಬ್ಬರಿಗೆ ಮರ್ಸಿಡಿಸ್ ಬೆಂಜ್ (Mercedes-Benz) ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಉದ್ಯಮಿ ಹೆಸರು ಎ.ಕೆ. ಶಾಜಿ. ( AK Shaji) ಇವರು ಸಿ.ಆರ್. ಅನೀಶ್ (CR Anish) ಎಂಬ ಉದ್ಯೋಗಿಗೆ ಈ ದುಬಾರಿ ಉಡುಗೊರೆ ನೀಡೋ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಸುಂದರ ಕ್ಷಣಗಳ ವೀಡಿಯೋವನ್ನು ಶಾಜಿ ಹಂಚಿಕೊಂಡಿದ್ದರು. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು ಕೂಡ.