ಎಚ್ ಡಿಎಫ್ ಸಿ- ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಸ್ತಾವನೆಗೆ ಬಿಎಸ್ ಇ, ಎನ್ ಎಸ್ ಇ ಹಸಿರು ನಿಶಾನೆ; ಮುಂದೇನು?

By Suvarna NewsFirst Published Jul 4, 2022, 6:27 PM IST
Highlights

*ಈ ವರ್ಷದ ಏಪ್ರಿಲ್ ನಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಅದರ ಮಾತೃಸಂಸ್ಥೆ ಎಚ್ ಡಿಎಫ್ ಸಿ ವಿಲೀನದ ಬಗ್ಗೆ ಘೋಷಣೆ
*ವಿಲೀನದ ಬಳಿಕ ಜಗತ್ತಿನ ಅತೀದೊಡ್ಡ ಬ್ಯಾಂಕುಗಳಲ್ಲಿ ಒಂದಾಗಲಿರುವ ಎಚ್ ಡಿಎಫ್ ಸಿ
*ವಿಲೀನದ ಬಳಿಕ ಎಚ್ ಡಿ ಎಫ್ ಸಿ ಬ್ಯಾಂಕ್ ಶೇ.100ರಷ್ಟು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಲಿದೆ 
 

ನವದೆಹಲಿ (ಜು.4): ಎಚ್ ಡಿಎಫ್ ಸಿ ಬ್ಯಾಂಕ್ (HDFC Bank) ಹಾಗೂ ಅದರ ಮಾತೃಸಂಸ್ಥೆ ಎಚ್ ಡಿಎಫ್ ಸಿ (HDFC) ವಿಲೀನ ಪ್ರಕ್ರಿಯೆಗೆ ಮುಂಬೈ ಷೇರು ಮಾರುಕಟ್ಟೆ (BSE) ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಹಸಿರು ನಿಶಾನೆ ತೋರಿಸಿವೆ. ಎಚ್ ಡಿಎಫ್ ಸಿ ಬ್ಯಾಂಕ್  ಬಿಎಸ್ ಇಯಿಂದ (BSE) 'ಪ್ರತಿಕೂಲ ಅವಲೋಕನ ಇಲ್ಲ' ಎಂಬ ಪತ್ರ ವನ್ನು ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಿಂದ (NSE) ನಿರಾಕ್ಷೇಪಣಾ (no objection) ಪತ್ರಗಳನ್ನು ಜುಲೈ 2ರಂದು ಪಡೆದಿದೆ. 

ಪ್ರಸ್ತಾವಿತ ವಿಲೀನ ಪ್ರಕ್ರಿಯೆಯು ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಷನ್  (HDFC) ಅಂಗಸಂಸ್ಥೆಗಳಾದ ಎಚ್ ಡಿಎಫ್ ಸಿ ಹೂಡಿಕೆಗಳು ಹಾಗೂ ಎಚ್ ಡಿಎಫ್ ಸಿ ಹೋಲ್ಡಿಂಗ್ಸ್  ಸಂಸ್ಥೆಗಳನ್ನು ಎಚ್ ಡಿಎಫ್ ಸಿಯೊಂದಿಗೆ ಹಾಗೂ ಎಚ್ ಡಿಎಫ್ ಸಿಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ನೊಂದಿಗೆ ವಿಲೀನಗೊಳಿಸೋದನ್ನು ಒಳಗೊಂಡಿದೆ. 

LIC Policy For Children:ಎಲ್ಐಸಿ ಈ ಯೋಜನೆಯಲ್ಲಿ ದಿನಕ್ಕೆ 150 ರೂ. ಹೂಡಿಕೆ ಮಾಡಿದ್ರೆ 8.5ಲಕ್ಷ ರೂ. ರಿಟರ್ನ್!

ಈ ಯೋಜನೆಯು ವಿವಿಧ ನಿಯಂತ್ರಕರ ಹಾಗೂ ಸಂಸ್ಥೆಗಳ ಅನುಮೋದನೆ ಪಡೆಯಬೇಕಿದೆ. ಇದರಲ್ಲಿ ಭಾರತದ ಸ್ಪರ್ಧಾ ಆಯೋಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಹಾಗೂ ಕಂಪನಿಯ ಷೇರುದಾರರು ಮತ್ತು ಕ್ರೆಡಿಟರ್ಸ್ ಗಳ ಅನುಮತಿ ಪಡೆಯಬೇಕಿದೆ ಎಂದು ನಿಯಂತ್ರಕರಿಗೆ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ತಿಳಿಸಿವೆ.

ಎಚ್ ಡಿಎಫ್ ಸಿ ಮಾತೃಸಂಸ್ಥೆ ಬ್ಯಾಂಕ್ ಜೊತೆಗೆ ವಿಲೀನವಾಗಲಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಏಪ್ರಿಲ್ 4ರಂದು ಘೋಷಿಸಿತ್ತು. ತಡೆರಹಿತವಾಗಿ ಗೃಹಸಾಲಗಳನ್ನು ಒದಗಿಸಲು ಹಾಗೂ ಎಚ್ ಡಿಎಫ್ ಸಿ ಬ್ಯಾಂಕಿನ 68 ಮಿಲಿಯನ್ ಗ್ರಾಹಕರ ವ್ಯವಹಾರಗಳ ನಿಯಂತ್ರಣಕ್ಕೆ ಈ ವಿಲೀನ ಮಾಡಲಾಗುತ್ತಿದೆ ಎಂದು ಕೂಡ ಅದು ತಿಳಿಸಿತ್ತು. 

ಜಗತ್ತಿನ ಅತೀದೊಡ್ಡ ಬ್ಯಾಂಕ್ 
ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನವಾದ ಬಳಿಕ ಜಗತ್ತಿನ ಅತೀದೊಡ್ಡ ಬ್ಯಾಂಕುಗಳಲ್ಲಿ ಒಂದಾಗಲಿದೆ. ಈ ಒಪ್ಪಂದವು 4.53ಲಕ್ಷ ಕೋಟಿ ರೂ. ಮೌಲ್ಯದಾಗಿದೆ. ಇದು ಈ ವರ್ಷದ ಎರಡನೇ ಅತೀದೊಡ್ಡ ವ್ಯವಹಾರ ಒಪ್ಪಂದವಾಗಿದೆ. ಈ ಒಪ್ಪಂದ ಪೂರ್ಣಗೊಂಡ ಬಳಿಕ ಅಂದ್ರೆ ವಿಲೀನ ಪ್ರಕ್ರಿಯೆ ನಂತರ ಬ್ಯಾಂಕಿನ ಮಾರ್ಕೆಟ್ ಕ್ಯಾಪ್ 15.12 ಲಕ್ಷ ಕೋಟಿ ರೂ. ತಲುಪಲಿದೆ. ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ  2024ರ ದ್ವಿತೀಯ ಅಥವಾ ತೃತೀಯ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.  

Personal Finance : ಗೃಹ- ಕಾರು ಸಾಲಕ್ಕಿಂತ ವೈಯಕ್ತಿಕ ಸಾಲ ಯಾಕೆ ದುಬಾರಿ ಗೊತ್ತಾ?

ವಿಲೀನದ ಬಳಿಕ ಏನಾಗುತ್ತೆ?
ವಿಲೀನದ ಬಳಿಕ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಶೇ.100ರಷ್ಟು ಸಾರ್ವಜನಿಕ ಷೇರುದಾರರ ಸ್ವಾಮ್ಯದ ಬ್ಯಾಂಕ್ ಆಗಲಿದೆ. ಪ್ರಸ್ತುತ ಇರುವ ಎಚ್ ಡಿಎಫ್ ಸಿ ಷೇರುದಾರರು ಎಚ್ ಡಿ ಎಫ್ ಸಿ ಬ್ಯಾಂಕಿನ ಶೇ.41ರಷ್ಟು ಷೇರುಗಳನ್ನು ಹೊಂದಲಿದ್ದಾರೆ. ಇನ್ನು ಎಚ್ ಡಿ ಎಫ್ ಸಿ ಅಂಗಸಂಸ್ಥೆಗಳು ಹಾಗೂ ಸಹವರ್ತಿ ಸಂಸ್ಥೆಗಳು ಎಚ್ ಡಿಎಫ್ ಸಿ ಬ್ಯಾಂಕಿಗೆ ವರ್ಗವಾಗಲಿವೆ. ಇದರರ್ಥ ಎಚ್ ಡಿಎಫ್ ಸಿಯು ಎಚ್ ಡಿಎಫ್ ಸಿ ಬ್ಯಾಂಕಿನ ಶೇ. 41ರಷ್ಟು ಷೇರುಗಳನ್ನು ಪರಿವರ್ತನೆಯ ವಿಲೀನದ ಮೂಲಕ ಸ್ವಾಧೀನಪಡಿಸಿಕೊಳ್ಳಲಿದೆ. ಎಚ್ ಡಿಎಫ್ ಸಿ ಷೇರುದಾರರು ಹೊಂದಿರುವ ಪ್ರತಿ 25 ಷೇರುಗಳಿಗೆ ಬ್ಯಾಂಕಿನ 42  ಷೇರುಗಳು ಸಿಗಲಿವೆ. ಈ ವಿಲೀನ 12.8ಲಕ್ಷ ಕೋಟಿ ರೂ. ಮಾರ್ಕೆಟ್ ಕ್ಯಾಪಿಟಲ್ ಹಾಗೂ 17.9ಲಕ್ಷ ಕೋಟಿ ರೂ. ಬ್ಯಾಲೆನ್ಸ್ ಶೀಟ್ ಸೃಷ್ಟಿಸಲಿವೆ.
 

click me!