HDFC Bank ಜೊತೆ ಎಚ್‌ಡಿಎಫ್ ಸಿ ವಿಲೀನವಾದ್ರೆ ಗ್ರಾಹಕರಿಗೇನು ಲಾಭ?

Published : Jun 28, 2023, 12:54 PM IST
HDFC Bank ಜೊತೆ ಎಚ್‌ಡಿಎಫ್ ಸಿ ವಿಲೀನವಾದ್ರೆ ಗ್ರಾಹಕರಿಗೇನು ಲಾಭ?

ಸಾರಾಂಶ

ಬ್ಯಾಂಕ್ ಗಳ ವಿಲೀನ ಗ್ರಾಹಕರ ತಲೆನೋವಿಗೆ ಕಾರಣವಾಗುತ್ತದೆ. ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಈಗ ಎಚ್ ಡಿಎಫ್ ಸಿ ಬ್ಯಾಂಕ್ ಜೊತೆ ಎಚ್ ಡಿಎಫ್ ಸಿ ವಿಲೀನವಾಗ್ತಿದೆ. ಅದ್ರಿಂದ ಯಾರಿಗೆಲ್ಲ ಲಾಭ, ಯಾರಿಗೆ ನಷ್ಟ ಎಂಬುದರ ವಿವರ ಇಲ್ಲಿದೆ.  

ಬ್ಯಾಂಕಿನಲ್ಲಾಗುವ ಪ್ರತಿಯೊಂದು ಬದಲಾವಣೆ ಜನಸಾಮಾನ್ಯನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಬ್ಯಾಂಕ್ ಗಳ ವಿಲೀನದ ಸಮಯದಲ್ಲಿ ಗ್ರಾಹಕರು ಭಯಗೊಳ್ಳೋದು ಸಾಮಾನ್ಯ. ಠೇವಣಿ, ವಿಮೆ, ಷೇರು ಸೇರಿದಂತೆ ಬ್ಯಾಂಕ್ ನಲ್ಲಿರುವ ಹಣಕ್ಕೆ ತೊಂದ್ರೆಯಾದ್ರೆ ಎಂಬ ಪ್ರಶ್ನೆ ಕಾಡೋದು ಸಾಮಾನ್ಯ. ಈಗ ಎಚ್ ಡಿಎಫ್ ಸಿ ಗ್ರಾಹಕರಿಗೂ ಇದೇ ಸಮಸ್ಯೆ ಶುರುವಾಗಿದೆ. 

ಎಚ್ ಡಿಎಫ್ ಸಿ ಬ್ಯಾಂಕ್‌ (HDFC Bank ) ನೊಂದಿಗೆ ಎಚ್ ಡಿಎಫ್ ಸಿ (HDFC) ವಿಲೀನವಾಗಲಿದೆ. ಜುಲೈ 1, 2023 ರಿಂದಲೇ ವಿಲೀನ ನಿಯಮ ಜಾರಿಗೆ ಬರಲಿದೆ. ಎಚ್‌ಡಿಎಫ್‌ಸಿ ಗ್ರೂಪ್ ಅಧ್ಯಕ್ಷ ದೀಪಕ್ ಪಾರಿಖ್ ಈ ವಿಷಯವನ್ನು ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿಯ ಉನ್ನತ ಆಡಳಿತ ಈ ವಿಲೀನವನ್ನು ಎರಡೂ ಹಣಕಾಸು (Finance) ಕಂಪನಿಗಳ ಪರ ಎಂದು ಕರೆದಿದೆ. ಇದು ಸಂಸ್ಥೆಗೆ, ಷೇರು (Stock) ದಾರರಿಗೆ, ಗ್ರಾಹಕರಿಗೆ ಮತ್ತು ಆರ್ಥಿಕತೆ ಎಲ್ಲದಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ ಎಚ್‌ಡಿಎಫ್‌ಸಿಯ ಠೇವಣಿದಾರರು, ಗೃಹ ಸಾಲ ಗ್ರಾಹಕರ ಮೇಲೆ ಈ ವಿಲೀನದ ಪರಿಣಾಮ ಏನು ಎಂಬುದನ್ನು ನಾವಿಂದು ಹೇಳ್ತೇವೆ.

ದುಡ್ಡು ಮಾಡಬೇಕಾ? ಅಂಬಾನಿ ಹೇಳಿದ ಈ 5 ಟಿಪ್ಸ್ ಫಾಲೋ ಮಾಡಿ

Fd ಗ್ರಾಹಕರ ಮೇಲೆ ಯಾವ ಪರಿಣಾಮ ಬೀರುತ್ತೆ? : ಎಚ್ ಡಿಎಫ್ ಸಿಯಲ್ಲಿ ಎಫ್ ಡಿ ಪಡೆದಿರುವ ಗ್ರಾಹಕರಿಗೆ ವಿಲೀನದ ನಂತ್ರ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಶ್ನೆ ಮಾಡಲಿದೆ. ಎಚ್ ಡಿಎಫ್ ಸಿಯ ಎಫ್ ಡಿ ಗ್ರಾಹಕರು ತಮ್ಮ ಎಫ್ ಡಿ ಖಾತೆಯನ್ನು ಮುಂದುವರೆಸುತ್ತಾರಾ ಇಲ್ಲ ವಿತ್ ಡ್ರಾ ಮಾಡಿಕೊಳ್ತಾರಾ ಎಂದು ಕೇಳಲಿದೆ. ಗ್ರಾಹಕರಿಗೆ ಎರಡೂ ಆಯ್ಕೆಗಳನ್ನು ಬ್ಯಾಂಕ್ ನೀಡುತ್ತದೆ. ಎಚ್ ಡಿಎಫ್ ಸಿ 12 ರಿಂದ 120 ತಿಂಗಳ ಎಫ್ ಡಿ ಮೇಲೆ ಶೇಕಡಾ 6.56 ರಿಂದ ಶೇಕಡಾ 7.21ರಷ್ಟು ಬಡ್ಡಿದರಗಳನ್ನು ನೀಡುತ್ತಿತ್ತು. ಅದೇ ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 3 ರಿಂದ ಶೇಕಡಾ 7.25ರಷ್ಟು ಬಡ್ಡಿಯನ್ನು ನೀಡುತ್ತಿದೆ.

ವಿಮೆಯಲ್ಲಿ (Insurance) ಸಿಗುತ್ತಾ ಲಾಭ? : ಎಚ್ ಡಿಎಫ್ ಸಿ ಬ್ಯಾಂಕ್ ಜೊತೆ ಎಚ್ ಡಿಎಫ್ ಸಿ ವಿಲೀನವಾದ್ಮೇಲೆ ಗ್ರಾಹಕರಿಗೆ ಠೇವಣಿ ಮೇಲೆ ವಿಮೆ ಲಾಭ ಸಿಗಲಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ ಪ್ರಕಾರ, 5 ಲಕ್ಷದವರೆಗಿನ ಠೇವಣಿ ಮೇಲೆ ವಿಮಾ ರಕ್ಷಣೆಯ ನಿಬಂಧನೆ ಇದೆ.

ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್​ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ

ಎಚ್ ಡಿಎಫ್‌ಸಿ ಗ್ರಾಹಕರಿಗೆ ಗೃಹ ಸಾಲ ಉತ್ಪನ್ನಗಳಿಂದ ಪ್ರಯೋಜನ : ಎಚ್ ಡಿಎಫ್ ಸಿ ಗೃಹ ಸಾಲ ವ್ಯವಹಾರದಲ್ಲಿದೆ. ವಿಲೀನದ ನಂತರ, ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಎಚ್ ಡಿಎಫ್ ಸಿ ಗೃಹ ಸಾಲ ಉತ್ಪನ್ನಗಳ ಪ್ರಯೋಜನ ಸಿಗಲಿದೆ. ಎಚ್‌ಡಿಎಫ್‌ಸಿ ಗ್ರಾಹಕರಿಗೆ ನೀಡುವ ಗೃಹ ಸಾಲವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಎಲ್ಲಾ ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರು ಗೃಹ ಸಾಲದ ಬಡ್ಡಿ ದರಗಳಲ್ಲಿ ಬದಲಾವಣೆಯನ್ನು ನೋಡಬಹುದು. ರೆಪೊ ದರ ಆಧಾರಿತ ದರದ ಪ್ರಕಾರ ಗೃಹ ಸಾಲದ ಬಡ್ಡಿ ದರಗಳನ್ನು ನಿಗದಿಪಡಿಸಲಾಗುತ್ತದೆ. 

ಷೇರುದಾರರಿಗೆ (Shareholders) ಏನು ಸಿಗಲಿದೆ? : ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಎಚ್ ಡಿಎಫ್ ಸಿ ವಿಲೀನವಾದ ನಂತರ ಷೇರಿನಲ್ಲೂ ಬದಲಾವಣೆ ಕಾಣಬಹುದು. ನಿಯಮಗಳ ಪ್ರಕಾರ, ಎಚ್ ಡಿಎಫ್ ಸಿ ಷೇರುದಾರರು ಎಚ್ ಡಿಎಫ್ ಸಿಯ ಪ್ರತಿ 25 ಷೇರುಗಳಿಗೆ ಎಚ್ ಡಿಎಫ್ ಸಿ ಬ್ಯಾಂಕ್‌ನ 42 ಷೇರುಗಳನ್ನು ಪಡೆಯುತ್ತಾರ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!