ಪೂರ್ವಿಕರ ಜೊತೆಗಿನ ಪೇಂಟಿಂಗ್ ನೋಡಿ ಭಾವುಕರಾದ ರತನ್ ಟಾಟಾ; ಮುಂಬೈ ನಿವಾಸದಲ್ಲಿ ಚಿತ್ರಕಾರನಿಗೆ ಸತ್ಕಾರ

Published : Jun 28, 2023, 11:34 AM ISTUpdated : Jun 28, 2023, 11:37 AM IST
ಪೂರ್ವಿಕರ ಜೊತೆಗಿನ ಪೇಂಟಿಂಗ್ ನೋಡಿ ಭಾವುಕರಾದ ರತನ್ ಟಾಟಾ; ಮುಂಬೈ ನಿವಾಸದಲ್ಲಿ ಚಿತ್ರಕಾರನಿಗೆ ಸತ್ಕಾರ

ಸಾರಾಂಶ

ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾ ತಮ್ಮ ಸರಳತೆಯ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಜೆಮ್ ಶೆಡ್ ಪುರ ಮೂಲದ ಚಿತ್ರ ಕಲಾವಿದ ಅಸೀಮ್ ಪೊದ್ದರ್, ರತನ್ ಟಾಟಾ ತಮ್ಮ ಪೂರ್ವಿಕರಾದ ಜೆಮ್ ಷೆಟ್ ಜೀ ಟಾಟಾ ಅವರನ್ನು ಗೌರವಿಸುವ ಪೇಟಿಂಗ್ ರಚಿಸಿದ್ದರು.ಈ ಪೇಟಿಂಗ್ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ರತನ್ ಟಾಟಾ ಅವರ ಗಮನ ಕೂಡ ಸೆಳೆದಿತ್ತು. ಪೇಟಿಂಗ್ ಮೆಚ್ಚಿದ ಟಾಟಾ, ಪೊದ್ದರ್ ಅವರನ್ನು ತಮ್ಮ ಮುಂಬೈ ನಿವಾಸಕ್ಕೆ ಆಹ್ವಾನಿಸಿ ಸತ್ಕರಿಸುವ ಜೊತೆಗೆ ಪೇಟಿಂಗ್  ಖರೀದಿಸಿದ್ದಾರೆ ಕೂಡ. 

Business Desk:ಭಾರತದ ಉದ್ಯಮಿಗಳಲ್ಲೇ ರತನ್ ಟಾಟಾ ಅವರಿಗೆ ಅಗ್ರಗಣ್ಯ ಸ್ಥಾನವಿದೆ. ಅವರಂಥ ಮಾನವೀಯ ಹಾಗೂ ಸರಳ ಉದ್ಯಮಿ ಸಿಗೋದೇ ಅಪರೂಪ. ರತನ್ ಟಾಟಾ ಭಾರತದ ಹೆಮ್ಮೆ ಎನ್ನಬಹುದು. ಅವರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದರೆ. ಎಷ್ಟೋ ಮಂದಿ ಒಮ್ಮೆ ರತನ್ ಟಾಟಾ ಅವರನ್ನು ಭೇಟಿಯಾಗಬೇಕು ಎಂಬ ಹಂಬಲವನ್ನು ಕೂಡ ಹೊಂದಿರುತ್ತಾರೆ. ಭಾರತದ ಯುವ ಉದ್ಯಮಿಗಳಿಗೆ ಕೂಡ ರತನ್ ಟಾಟಾ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೆ ಅವರು ಅನೇಕ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿರೋದೆ ಸಾಕ್ಷಿ. ಟಾಟಾ ಕುಟುಂಬದ ಉದ್ಯಮ ಹಾಗೂ ಪರಂಪರೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿರುವ ರತನ್ ಟಾಟಾ ಅವರಿಗೆ ಕಲೆಯ ಮೂಲಕ ಕೂಡ ಅನೇಕ ಅಭಿಮಾನಿಗಳು ಪ್ರೀತಿ ತೋರಿದ್ದಾರೆ. ಇಂಥ ಅಭಿಮಾನಿಗಳಲ್ಲಿ ಜೆಮ್ ಶೆಡ್ ಪುರದ ಮ್ಯಾಂಗೋ ನಿವಾಸಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಅಸೀಮ್ ಪೊದ್ದರ್ ಕೂಡ ಒಬ್ಬರು.  ಇತ್ತೀಚೆಗೆ ಅವರು ರತನ್ ಟಾಟಾ ತಮ್ಮ ಪೂರ್ವಜರಾದ ಜೆಮ್ ಷೆಟ್ ಜೀ ಟಾಟಾ ಅವರನ್ನು ಗೌರವಿಸುವ ಪೇಟಿಂಗ್ ರಚಿಸಿದ್ದು, ಅದು ವೈರಲ್ ಆಗಿತ್ತು. ರತನ್ ಟಾಟಾ ಕೂಡ ಆ ಪೇಟಿಂಗ್ ಅನ್ನು ಮೆಚ್ಚಿ ಅಸೀಮ್ ಅವರನ್ನು ಮುಂಬೈಯ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಸತ್ಕರಿಸಿದ್ದಾರೆ.

ರತನ್ ಟಾಟಾ ಅವರ ಸರಳತೆಗೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಅವರು ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ ಕೂಡ ಸಾಮಾನ್ಯರ ಜೊತೆಗೆ ಸಾಮಾನ್ಯರಂತೆ ಬೆರೆಯುತ್ತಾರೆ. ವಿಶಿಷ್ಟ ಸಾಧನೆ ಮಾಡಿದವರನ್ನು ಅಥವಾ ಅವರು ಮೆಚ್ಚಿಕೊಂಡ ಕಲಾಕೃತಿಗಳನ್ನು ರಚಿಸಿದವರನ್ನು ಕರೆಸಿ, ಮಾತನಾಡಿಸಿದಂತಹ ಅನೇಕ ಉದಾಹರಣೆಗಳು ಈ ಹಿಂದೆ ಕೂಡ ನಡೆದಿವೆ. ಇತ್ತೀಚೆಗೆ ಪೊದ್ದರ್ ಅವರ ಪೇಟಿಂಗ್ ರತನ್ ಟಾಟಾ ಅವರಿಗೆ ತುಂಬಾ ಮೆಚ್ಚುಗೆಯಾಗಿತ್ತು. ಈ ಪೇಟಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಕೂಡ. ಅಲ್ಲದೆ, ಈ ಪೇಟಿಂಗ್ ರತನ್ ಟಾಟಾ ಮತ್ತು ಅವರ ಪೂರ್ವಜರಾದ ಜೆಮ್ ಷೆಟ್ ಜೀ ಟಾಟಾ ಅವರನ್ನು ಒಳಗೊಂಡಿದ್ದ ಕಾರಣ ಅದು ಅವರಿಗೆ ತುಂಬಾ ಭಾವನಾತ್ಮಕವಾಗಿ ಕೂಡ ತುಂಬಾ ಹತ್ತಿರವಾಗಿತ್ತು. ಇದೇ ಕಾರಣಕ್ಕೆ ರತನ್ ಟಾಟಾ ಅವರು  ಈ ಪೇಟಿಂಗ್ ರಚಿಸಿದ್ದ ಅಸೀಮ್ ಪೊದ್ದರ್ ಅವರನ್ನು ಅವರ ಪೇಟಿಂಗ್ ಸಹಿತ ಮುಂಬೈನ ಕೋಲಬದಲ್ಲಿರುವ ತಮ್ಮ 150 ಕೋಟಿ ರೂ. ಮೌಲ್ಯದ ಬಂಗಲೆಗೆ ಕರೆದು ಸತ್ಕರಿಸಿದ್ದಾರೆ. ಅಲ್ಲದೆ, ಆ ಪೇಟಿಂಗ್ ಅನ್ನು ಖರೀದಿಸಿದ್ದಾರೆ ಕೂಡ.

ಭಾರತದ ಅತೀದೊಡ್ಡ ಕೈಗಾರಿಕೋದ್ಯಮಿ ಆಗಿದ್ದರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್ ಟಾಟಾ ಏಕಿಲ್ಲ?

ಆ ಪೇಟಿಂಗ್ ಅನ್ನು ನೋಡಿದ ತಕ್ಷಣ ರತನ್ ಟಾಟಾ ಅವರು ತುಂಬಾ ಭಾವುಕರಾದರು ಹಾಗೂ ಅದನ್ನು ಖರೀದಿಸಿದರು ಎಂದು ವರದಿಗಳು ತಿಳಿಸಿವೆ. ಆ ಪೇಟಿಂಗ್ ಅನ್ನು ಮೆಚ್ಚಿದ ಟಾಟಾ, ತುಂಬಾ ಸಮಯದ ತನಕ ಅದನ್ನು ಶ್ಲಾಘಿಸಿದ್ದರೆ. ಹಾಗೆಯೇ ಅಸೀಮ್ ಅವರ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೊತೆಗೆ 'ಜೆಮ್ ಶೆಡ್ ಪುರದ ಯುವಕರಲ್ಲಿ ಪ್ರತಿಭೆಗೆ ಯಾವುದೇ ಅಭಾವವಿಲ್ಲ' ಎಂದು ಹೊಗಳಿದ್ದಾರೆ ಎಂದು ವರದಿಯಾಗಿದೆ. 'ರತನ್ ಟಾಟಾ ಅವರನ್ನು ಭೇಟಿಯಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಬೇಕು ಎಂಬುದು ನನ್ನ ಬಹುದಿನದ ಕನಸಾಗಿದ್ದು, ಅದು ಈಗ ನೆರವೇರಿದೆ' ಎಂದು ಅಸೀಮ್ ಪೊದ್ದರ್ ಹರ್ಷ ವ್ಯಕ್ತಪಡಿಸಿದ್ದಾರೆ.  ರತನ್ ಟಾಟಾ ಅವರ ಸರಳ ವ್ಯಕ್ತಿತ್ವ ಹಾಗೂ ಅವರು ತೋರಿದ ಪ್ರೀತಿ, ಗೌರವದ ಬಗ್ಗೆ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. 

ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?

2021ನೇ ಸಾಲಿನಲ್ಲಿ ಅಂದಾಜು 103 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿರುವ ಟಾಟಾ ಗ್ರೂಪ್ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನ ಅತೀದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ. . ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯಗಳು ಹಾಗೂ ಶೈಕ್ಷಣಿಕ ವ್ಯವಸ್ಥೆಯ ಅಭಿವೃದ್ಧಿಗೆ ನೆರವು ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ರತನ್ ಟಾಟಾ ಸಾಕಷ್ಟು ಕೊಡುಗೆ ನೀಡಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!