ಒಂದೇ ದಿನ 1.1 ಲಕ್ಷ ಕೋಟಿ ರೂಪಾಯಿ ಮೌಲ್ಯ ಕಳೆದುಕೊಂಡ ಎಚ್‌ಡಿಎಫ್‌ಸಿ ಬ್ಯಾಂಕ್‌!

By Santosh Naik  |  First Published Jan 17, 2024, 6:48 PM IST


HDFC Bank Share Fall: ಷೇರು ಮಾರ್ಕೆಟ್‌ನ ದಿನಪೂರ್ತಿ ಕುಸಿತದ ನಡುವೆ ಎಚ್‌ಡಿಎಫ್‌ಸಿ ಬ್ಯಾಂಕ್ ಹೂಡಿಕೆದಾರರು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿದ್ದಾರೆ. ವಾಸ್ತವವಾಗಿ, ಕಂಪನಿಯ ಷೇರುಗಳು ಶೇಕಡಾ 8 ಕ್ಕಿಂತ ಹೆಚ್ಚು ಕುಸಿದವು ಮತ್ತು 1528 ರೂಪಾಯಿಗೆ ಕುಸಿದಿದೆ.


ಮುಂಬೈ (ಜ.17): ಷೇರು ಮಾರುಕಟ್ಟೆ ಪಾಲಿಗೆ ಅದರಲ್ಲೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೂಡಿಕೆದಾರರಿಗೆ ಬುಧವಾರ ಬಹಳ ಕೆಟ್ಟದಿನವಾಗಿ ಪರಿಣಮಿಸಿದೆ. ಒಂದೆಡೆ ಸೆನ್ಸೆಕ್ಸ್‌ 1600 ಅಂಕಗಳಷ್ಟು ಕುಸಿದರೆ, ನಿಫ್ಟಿ 450 ಪಾಯಿಂಟ್ಸ್‌ ಕುಸಿತ ಕಂಡಿದೆ. ಒಟ್ಟಾರೆ ಹೂಡಿಕೆದಾರರ 4 ಲಕ್ಷ ಕೋಟಿ ಹಣ ಬುಧವಾರ ಒಂದೇ ದಿನ ಕರಗಿಹೋಗಿದೆ. ಇದರಲ್ಲಿ ಎಚ್‌ಡಿಎಫ್‌ಸಿಯ ಪಾಲು 1.1 ಲಕ್ಷ ಕೋಟಿ ರೂಪಾಯಿ ಆಗಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ದೊಡ್ಡ ನಷ್ಟವನ್ನು ಅನುಭವಿಸಿದೆ. ಕಳೆದ ಮೂರು ತಿಂಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರು ಗಳಿಸಿದ್ದಕ್ಕಿಂತ ಐದು ಪಟ್ಟು ಹೆಚ್ಚು ಮೌಲ್ಯವನ್ನು ಬುಧವಾರ ಒಂದೇ ದಿನ ಕಳೆದುಕೊಂಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮೇಲೆ ಹೂಡಿಕೆ ಮಾಡಿದ್ದ ಷೇರುದಾರರು ದಿನವಿಡೀ ನಷ್ಟದಲ್ಲಿಯೇ ಕಳೆದುಕೊಂಡಿದ್ದಾರೆ. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಪ್ರತಿ ಷೇರಿಗೆ 1679 ರೂಪಾಯಿಯಂತೆ ವಹಿವಾಟು ಮುಗಿಸಿತ್ತು. ಆದರೆ, ಕಂಪನಿಯ ಮೂರನೇ ತ್ರೈಮಾಸಿಕದ ವರದಿ ಗೊತ್ತಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಅರಂಭವಾಯಿತು.

Tap to resize

Latest Videos

ಬುಧವಾರದ ಆರಂಭವನ್ನೇ 1570 ರೂಪಾಯಿಯೊಂದಿಗೆ ಆರಂಭಿಸಿದ್ದ ಎಚ್‌ಡಿಎಫ್‌ಸಿ, ದಿನದ ವಹಿವಾಟಿಯಲ್ಲಿ 1590ರ ಮಟ್ಟಕ್ಕೆ ಒಮ್ಮೆ ಮುಟ್ಟಿತ್ತು. 1528 ರೂಪಾಯಿ ದಿನದ ಕನಿಷ್ಠ ಮೊತ್ತವಾಗಿತ್ತು. ಕೊನೆಗೆ ದಿನದ ವಹಿವಾಟನ್ನು ಪ್ರತಿಷೇರಿಗೆ 1542 ರೂಪಾಯಿಯಂತೆ ಮುಗಿಸಿದ್ದು,  ಒಟ್ಟಾರೆ, ಎಚ್‌ಡಿಎಫ್‌ಸಿ ಬ್ಯಾಂಕ್‌ ಬುಧವಾರ ಒಂದೇ ದಿನ ಶೇ. 8.16ರಷ್ಟು ಕುಸಿದಿದೆ. ಒಟ್ಟಾರೆಯಾಗಿ 137 ರೂಪಾಯಿ ಕುಸಿತ ಕಂಡಂತಾಗಿದೆ. ಕೋವಿಡ್‌ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅತಿದೊಡ್ಡ ಕುಸಿತದ ಕಾರಣದಿಂದಾಗಿ ಈ ಕಂಪನಿಯ ಷೇರುಗಳ ಹೂಡಿಕೆದಾರರು ಅಂದಾಜು 1.1 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಒಂದೇ ದಿನ ಕಂಡಿದ್ದಾರೆ.

ಮೂರು ತಿಂಗಳಲ್ಲಿ ಗಳಿಸಿದ್ದು,  ಒಂದೇ ದಿನ ಮಾಯ: ಸಾಕಷ್ಟು ಮಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕುಸಿತ ಅಚ್ಚರಿ ಉಂಟು ಮಾಡಿದೆ. ಮಂಗಳವಾರವಷ್ಟೇ ಎಚ್‌ಡಿಎಫ್‌ಸಿ ತನ್ನ ಮುರನೇ ತ್ರೈಮಾಸಿಕದ ವರದಿಯನ್ನು ಪ್ರಕಟ ಮಾಡಿತ್ತು. ಅದಲ್ಲದೆ, ಕಂಪನಿಯ ಫಲಿತಾಂಶಗಳೂ ಅದ್ಭುತವಾಗಿದ್ದವು. ಇನ್ನು ಬ್ಯಾಂಕ್‌ನ ತ್ರೈಮಾಸಿಕ ವರದಿಯನ್ನು ನೋಡುವುದಾದರೆ, ಕಂಪನಿಯ ನಿವ್ವಳ ಆದಾಯದಲ್ಲಿ ಶೇ.34ರಷ್ಟು ಏರಿಕೆಯಾಗಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ಹೇಳಿರುವ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಬ್ಯಾಂಕ್‌ನ ಆದಾಯ 16,372 ಕೋಟಿ ರೂಪಾಯಿ ಆಗಿದೆ. ಇಷ್ಟೆಲ್ಲಾ ಇದ್ದರೂ ಬುಧವಾರದ ವಹಿವಾಟಿನ ಅಂತ್ಯದ ವೇಳೆ ತನ್ನ ಮೌಲ್ಯದಲ್ಲಿ ಶೇ. 1.1 ಲಕ್ಷ ಕೋಟಿ ರೂಪಾಯಿಯನ್ನು ಬ್ಯಾಂಕ್‌ ಕಳೆದುಕೊಂಡಿದೆ.

 

 

Investment Tips: ಸಣ್ಣ ಷೇರಿನಲ್ಲಿ ಹೆಚ್ಚು ಲಾಭಬೇಕೆಂದ್ರೆ ಈ ರೂಲ್ಸ್ ಫಾಲೋ ಮಾಡಿ

ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ 12.74 ಲಕ್ಷ ಕೋಟಿ ರೂಪಾಯಿ ಆಗಿತ್ತು. ಬುಧವಾರದ ವೇಳೆಗೆ ಇದು 11.68 ಲಕ್ಷ ಕೋಟಿ ರೂಪಾಯಿಗೆ ಮುಟ್ಟಿದೆ. ನಿಖರವಾಗಿ ಹೇಳುವುದಾದರೆ, ಒಂದೇ ದಿನದಲ್ಲಿ ಕಂಪನಿಯ ಮೌಲ್ಯದಲ್ಲಿ 106740.22 ಕೋಟಿ ರೂಪಾಯಿ ಕುಸಿತ ಕಂಡಂತಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಜೂನ್ 2023 ರಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ನೊಂದಿಗೆ ವಿಲೀನಗೊಂಡಿತು ಎನ್ನುವುದು ಇಲ್ಲಿ ಮುಖ್ಯವಾಗಿದೆ.

ಷೇರುಪೇಟೆಗೆ ಎಚ್ ಡಿಎಫ್ ಸಿ ಪೆಟ್ಟು,ಕುಸಿದ ಸೆನ್ಸೆಕ್ಸ್, ನಿಫ್ಟಿ; 3.4ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

click me!