ಇಂದು ಈ ಎರಡು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ- ಕೆಲ ಸೇವೆ 13 ತಾಸು ಬಂದ್ 

By Kannadaprabha News  |  First Published Jul 13, 2024, 8:52 AM IST

ದೇಶದ ಎರಡು ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವೆಲ್ಲಾ ಸೇವೆಗಳಲ್ಲಿ ಅಡಚಣೆ ಉಂಟಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.


ನವದೆಹಲಿ (ಜು.13): ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಎಚ್ ಡಿಎಫ್‌ಸಿ ಬ್ಯಾಂಕ್ ಹಾಗೂ ಎಕ್ಸಿಸ್ ಬ್ಯಾಂಕ್ ತಮ್ಮ ಆಸ್ಟೈನ್ ಸೇವೆಗಳನ್ನು ಉನ್ನತೀ ಕರಣ ಮಾಡುತ್ತಿರುವ ಕಾರಣ ಶನಿವಾರ ಅವುಗಳ ಸರ್ವರ್ ಹಾಗೂ ಆನ್ಸೆನ್ ವಹಿವಾಟುಗಳು 13 ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ. 

ಎಕ್ಸಿಸ್ ಬ್ಯಾಂಕ್ AXIS BANK HDFC BANK ಸರ್ವೀಸ್ ಅಪ್‌ಗ್ರೆಡೇಷನ್ ಹಾಗೂ ಕೋರ್ ಬ್ಯಾಂಕಿಂಗ್ ಸಿಸ್ಟಂ (ಸಿಬಿಎಸ್) ವರ್ಗಾವಣೆ ಮಾಡಿಕೊಳ್ಳುತ್ತಿರುವ ಕಾರಣ ಶನಿವಾರ ನಸುಕಿನ 3ರಿಂದ ಸಂಜೆ 4.30ರವರೆಗೆ ಆಸ್ಟೈನ್ ಚಟುವಟಿಕೆ ಸ್ಥಗಿತವಾಗಿರಲಿದೆ. 

Tap to resize

Latest Videos

9.30ರಿಂದ ಮಧ್ಯಾಹ್ನ 12.45ರವರೆಗೆ ಸ್ಥಗಿತವಾಗಿರಲಿವೆ. ಐಎಂಪಿಎಸ್, ಎನ್‌ಇಎಫ್‌ಟಿ, ಆರ್‌ಟಿಜಿ ಎಸ್ ಹಾಗೂ ಖಾತೆ ನೇರ ಹಣ ವರ್ಗಾವಣೆಗಳು ಮುಂಜಾನೆ 3ರಿಂದ ಮಧ್ಯಾಹ್ನ 12.45 ರವರೆಗೆ ಇರುವುದಿಲ್ಲ. ಎಟಿಎಂ ಸೇವೆಗಳೂ ಬಾಧಿತವಾಗಲಿವೆ. 

ಈ ಸ್ವಾತಂತ್ರ್ಯ ಹೋರಾಟಗಾರ ತೆರೆದ ಸಣ್ಣ ಅಂಗಡಿ ಇಂದು 1,45,000 ಕೋಟಿ ಮೌಲ್ಯದ ಕಂಪನಿ!

ಯಾವ ಸೇವೆ ಇಲ್ಲ? ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯುಪಿಐ ಸೇವೆ, ನೆಟ್ ಬ್ಯಾಂಕಿಂಗ್‌ಗಳು ಶನಿವಾರ ಮುಂಜಾನೆ 3 ರಿಂದ 3.45 ರವರೆಗೆ ಹಾಗೂ ಬೆಳಗ್ಗೆ ನಲ್ಲಿ ಶುಕ್ರವಾರ ರಾತ್ರಿ 10ರವರೆಗೆ ಸೇವೆ ಸ್ಥಗಿತವಾಗಲಿದ್ದು, ಭಾನುವಾರ ಬೆಳಗ್ಗೆ 9ರವರೆಗೆ ವ್ಯತ್ಯಯವಾಗಲಿದೆ. 

ಇವುಗಳಿಗೆ ತೊಂದರೆ ಇಲ್ಲ: ಕ್ರೆಡಿಟ್ ಕಾರ್ಡ್ ವಹಿವಾಟು, ಪಿನ್ ಬದಲಾವಣೆ, ಪಿಓಎಸ್ ಮಶೀನ್ ವಹಿವಾಟುಗಳು, ಬ್ಯಾಲೆನ್ಸ್ ಮಾಹಿತಿ ಎಂದಿನಂತೆ ಇರಲಿದೆ. ಜೊತೆಗೆ ಬೇರೆ ಖಾತೆಯಿಂದ ಹಣ ಸ್ವೀಕಾರ ಇರಲಿದ್ದು, ಮಾಹಿತಿ 1 ದಿನ ತಡವಾಗಿ ಬರಲಿದೆ. 

ಟೆಲಿಕಾಂಗಳ ದರ ಹೆಚ್ಚಳ ವಿರೋಧಿಸಿ ನೆಟ್ಟಿಗರ ಅಭಿಯಾನ, ಲಕ್ಷಕ್ಕೂ ಅಧಿಕ ಮಂದಿ BSNLಗೆ ಸಿಮ್ ಪೋರ್ಟ್!

click me!