ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಶೀಘ್ರದಲ್ಲೇ ಕಾಯ್ದೆ ತಿದ್ದುಪಡಿ?

By Kannadaprabha News  |  First Published Jul 13, 2024, 7:04 AM IST

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಕ್ಕಾಗಿ 'ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ-1970' ಮತ್ತು 1980ರ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.


ನವದೆಹಲಿ(ಜು.13):  ಬ್ಯಾಂಕಿಂಗ್ ಕ್ಷೇತ್ರದಲ್ಲಿ 'ಸುಧಾರಣೆ' ತರಲು ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಅನುವಾಗುವ ಮಹತ್ವದ ತಿದ್ದುಪಡಿ ವಿಧೇಯಕ ಮಂಡಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಕ್ಕಾಗಿ 'ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970' ಮತ್ತು 1980ರ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Tap to resize

Latest Videos

ಕೇಂದ್ರ ಬಜೆಟ್ ಮಂಡನೆಗೆ ತಯಾರಿ ನಡುವೆ ಈ 7 ಕುತೂಹಲ ಮಾಹಿತಿ ನಿಮಗೆ ತಿಳಿದಿರಬೇಕು!

ಈ ಕಾಯ್ದೆಗಳು 2 ಹಂತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಕಾರಣವಾಗಿದ್ದವು, ಇದೀಗ ಆ ಕಾನೂನಿನಲ್ಲಿ ತಿದ್ದುಪಡಿ ತರುವುದರ ಮೂಲಕ ಬ್ಯಾಂಕುಗಳ ಖಾಸಗೀಕರಣಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ. ಸಂಸತ್ತಿನಲ್ಲಿ ಈ ತಿದ್ದುಪಡಿಗಳು ಅಂಗೀಕಾರವಾದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಸರ್ಕಾರದ ಪಾಲು ಈಗಿನ ಶೇ.51ಕ್ಕಿಂತ ಕಡಿಮೆ ಮಾಡಲು ಸರ್ಕಾರಕ್ಕೆ ಅವಕಾಶ ಸಿಗಲಿದೆ. ಇದು ಬ್ಯಾಂಕ್‌ಗಳ ಖಾಸಗೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ. ಈ ಹಿಂದೆ ಸರ್ಕಾರ ಹಲವು ಸರ್ಕಾರಿ ಬ್ಯಾಂಕ್‌ಗಳನ್ನು ಇತರ ಸರ್ಕಾರಿ ಬ್ಯಾಂಕ್‌ಗಳಲ್ಲಿ ವಿಲೀನ ಮಾಡಿತ್ತು. ಆದರೆ, ಈಗಿನ ಸುಧಾರಣೆಯಿಂದ ಬ್ಯಾಂಕು ಗಳ ಆಡಳಿತದ ಸುಧಾರಣೆ ಆಗಬಹುದು ಮತ್ತು ಹೂಡಿಕೆ ದಾರರಿಗೆ ನೆರವಾಗಬಹುದು ಎಂದು ಸರ್ಕಾರದ ಮೂಲ ಗಳು ಹೇಳಿವೆ. 2021ರಂದ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರ ಬ್ಯಾಂಕ್‌ ಕಾಯ್ದೆಗಳ ತಿದ್ದುಪಡಿಗೆ ಸರ್ಕಾರ ಪಟ್ಟಿ ಮಾಡಿತ್ತು, ಆದರೆ ಮಸೂದೆ ಮಂಡಿಸಿರಲಿಲ್ಲ. ಜುಲೈ 22 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಜು.23ರಂದು ಬಜೆಟ್ ಮಂಡನೆ ನಡೆಯಲಿದೆ.

ಏಕೆ ಈ ತಿದ್ದುಪಡಿ?

. 1969ರಲ್ಲಿ ದೇಶದ ಪ್ರಮುಖ 14 ಖಾಸಗಿ ಬ್ಯಾಂಕು ಗಳನ್ನು ರಾಷ್ಟ್ರೀಕರಣ ಮಾಡಿದ್ದ ಇಂದಿರಾ ಗಾಂಧಿ
• ಅದರನ್ವಯ ಸರ್ಕಾರಿ ಬ್ಯಾಂಕುಗಳಲ್ಲಿ ಕೇಂದ್ರ ಸರ್ಕಾರ ಕನಿಷ್ಠಶೇ.51 ಷೇರು ಹೊಂದಿರಬೇಕು
# ಈ ನಿಯಮಕ್ಕೆ ತಿದ್ದುಪಡಿ ತರಲು ಕೆಲ ಕಾಯ್ದೆಗಳನ್ನು ಬದಲಿಸಲಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ
• ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸುವ ಪ್ರಕ್ರಿಯೆ ಸುಲಭವಾಗಿಸಲು ಈ ತಿದ್ದುಪಡಿ
• ಖಾಸಗೀಕರಣದಿಂದ ಬ್ಯಾಂಕುಗಳ ಆಡಳಿತ ಸುಧಾರಣೆ, ಹೂಡಿಕೆದಾರರಿಗೆ ನೆರವಾಗುವ ಉದ್ದೇಶ

click me!