ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?

Published : Jul 12, 2024, 05:01 PM IST
ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?

ಸಾರಾಂಶ

ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದ್ವೆ ಇಂದು ಮುಂಬೈನ ಜಿಯೋ ಕನ್ವೆನ್ಸನ್ ಹಾಲ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಈ ಮದ್ವೆಗಾಗಿ ದೇವಲೋಕವೇ ಧರೆಗಿಳಿದಂತೆ ಕನ್ವೆನ್ಷನ್ ಹಾಲ್ ಸಿದ್ಧಗೊಂಡಿದೆ. 

ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದ್ವೆ ಇಂದು ಮುಂಬೈನ ಜಿಯೋ ಕನ್ವೆನ್ಸನ್ ಹಾಲ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಈ ಮದ್ವೆಗಾಗಿ ದೇವಲೋಕವೇ ಧರೆಗಿಳಿದಂತೆ ಕನ್ವೆನ್ಷನ್ ಹಾಲ್ ಸಿದ್ಧಗೊಂಡಿದೆ. ಬಾಲಿವುಡ್ ಹಾಲಿವುಡ್ ಗಣ್ಯರು ಈ ಮದುವೆ ಸಮಾರಂಭದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ. ಅದೇ ರೀತಿ ಹಾಲಿವುಡ್ ಗಾಯಕ ಬೇಬಿ ಕಾಮ್ ಡೌನ್ ಹಾಡಿನಿಂ ಫೇಮಸ್ ಆಗಿರುವ ರೇಮಾ ಕೂಡ ಈ ಅದ್ದೂರಿ ಮದ್ವೆ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರು ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದ್ವೆಯಲ್ಲಿ ಹಾಡು ಹಾಡಲಿದ್ದು, ಅವರ ಒಂದು ಹಾಡಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಹಣವನ್ನು ಅಂಬಾನಿ ಕುಟುಂಬ ನೀಡುತ್ತಿದೆ ಎಂದು ವರದಿ ಆಗಿದೆ. 

ರೇಮಾ ಜೊತೆಗೆ ಡೆಸ್ಪಸಿಟೋ ಖ್ಯಾತಿಯ  ಲೂಯಿಸ್ ಫೋನ್ಸಿ ಕೂಡ ಅಂಬಾನಿ ಮದ್ವೆಯಲ್ಲಿ ಹಾಡುವುದಕ್ಕೆ  ಭಾರತಕ್ಕೆ ಆಗಮಿಸಿದ್ದಾರೆ ಎಂದು ವರದಿ ಆಗಿದೆ.  ನೈಜಿರಿಯಾ ಮೂಲದ ಈ ಗಾಯಕ 3 ಮಿಲಿಯನ್ ಡಾಲರ್ ಚಾರ್ಜ್ ಮಾಡುತ್ತಿದ್ದು, 3 ಮಿಲಿಯನ್ ಡಾಲರ್ ಎಂದರೆ ಭಾರತೀಯ ರೂಪಾಯಿಗಳಲ್ಲಿ 25 ಕೋಟಿಗೂ ಅಧಿಕ,  ಇನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಭಾರತ ಭೇಟಿಯ ವೀಡಿಯೋವನ್ನು ರೇಮಾ ಪೋಸ್ಟ್ ಮಾಡಿದ್ದು, ಕಪ್ಪು ಬಣ್ಣದ ಸೂಟು ಬೂಟು ಧರಿಸಿ ಖಾಸಗಿ ಜೆಟ್‌ನತ್ತ ನಡೆದುಕೊಂಡು ಹೋಗುತ್ತಿರುವ ದೃಶ್ಯವಿದೆ. 

ರೆಸ್ಲರ್ ಜಾನ್ ಸೀನಾ, ಮೈಕ್ ಟೈಸನ್, ಕಿಮ್ ಕರ್ದಾಶಿಯನ್‌: ಅಂಬಾನಿ ಮನೆ ಮದ್ವೆಯಲ್ಲಿ ಯಾರುಂಟು ಯಾರಿಲ್ಲ

ಹಾಗೆಯೇ ಬಾಲಿವುಡ್ ಗಾಯಕ ಬಾದ್‌ಶಾ ಕೂಡ ಈ ಮದುವೆಯಲ್ಲಿ ಹಾಡುವುದಕ್ಕೆ 4 ಕೋಟಿ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ. ಹಾಗೆಯೇ ಮೊನ್ನೆಯಷ್ಟೇ ಸಂಗೀತ್‌ನಲ್ಲಿ ಪ್ರದರ್ಶನ ನೀಡಿದ ಗಾಯಕ ಜಸ್ಟೀನ್ ಬೈಬರ್ ಕೂಡ ತಮ್ಮ ಈ ಗಾಯನಕ್ಕಾಗಿ 10 ಮಿಲಿಯನ್ ಡಾಲರ್ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ. 

ಮುಂಬೈನಲ್ಲಿ ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಜಗತ್ತಿನೆಲ್ಲೆಡೆಯಿಂದ ಗಣ್ಯರು ಆಗಮಿಸಿದ್ದು,  ಕಿಮ್ ಕಾರ್ದಶಿಯಾನ್, ಖೋಲೆ ಕಾರ್ದಶಿಯಾನ್, ಭವಿಷ್ಯ ಹೇಳುವ ಪೀಟರ್ ಡೈಮಂಡಿಸ್, ಕಲಾವಿದ ಜೆಫ್ ಕೂನ್ಸ್, ವ್ಯಕ್ತಿತ್ವ ವಿಕಸನ ಕೋಚ್ ಜೇ ಶೆಟ್ಟಿ, ಮಾಜಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಟೋನಿ ಬ್ಲೇರ್, ಅಮೆರಿಕಾ ಮಾಜಿ ಸ್ಟೇಟ್ ಸೆಕ್ರೆಟರಿ ಜಾನ್ ಕೆರ್ರಿ, ಸ್ವೀಡಿಷ್ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್ ಮತ್ತು ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಸೇರಿದಂತೆ ಜಗತ್ತಿನೆಲ್ಲೆಡೆಯ ಹಲವಾರು ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಮದುವೆಯಲ್ಲಿ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಂಬೈಗೆ ಬಂದಿಳಿದಿದ್ದಾರೆ. 

ಹೋಗ್ಬಾರ್ದು ಅನ್ಕೊಂಡಿದ್ದೆ ಆದ್ರೆ... ಅಂಬಾನಿ ಪುತ್ರನ ಮದ್ವೆಗೆ ಹೊರಟ ಮಮತಾ ಬ್ಯಾನರ್ಜಿ

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!