
ನವದೆಹಲಿ (ಫೆ.14): ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಇನ್ಮುಂದೆ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಬೇಕಾಗಿಲ್ಲ. ಇಂಟರ್ನೆಟ್ ಇಲ್ಲದೆ ಹಣವನ್ನು ವರ್ಗಾವಣೆ ಮಾಡುವ ಹಾಗೂ ಸ್ವೀಕರಿಸುವ ಸೌಲಭ್ಯ ದೊರೆಯಲಿದೆ. ದೇಶದ ಖಾಸಗಿ ವಲಯದ ಅತೀದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಆಫ್ ಲೈನ್ ಡಿಜಿಟಲ್ ಪಾವತಿಯ ಪೈಲಟ್ ಪ್ರಾಜೆಕ್ಟ್ ಪ್ರಾರಂಭಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ನಿಯಂತ್ರಿತ ಸ್ಯಾಂಡ್ ಬಾಕ್ಸ್ ಪ್ರೋಗ್ರಾಂ ಅಡಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಕ್ರಂಚ್ ಫಿಶ್ ಸಹಭಾಗಿತ್ವದಲ್ಲಿಆಪ್ ಲೈನ್ ಪೇ ಸಲ್ಯೂಷನ್ ಪರಿಚಯಿಸಿದೆ. ಈ ಸಲ್ಯೂಷನ್ ಬಳಸಿ ಹಣ ಕಳುಹಿಸಲು ಅಥವಾ ಸ್ವೀಕರಿಸಲು ಗ್ರಾಹಕರಿಗೆ ಹಾಗೂ ಉದ್ಯಮಗಳಿಗೆ ಮೊಬೈಲ್ ನೆಟ್ ವರ್ಕ್ ಅಗತ್ಯವಿಲ್ಲ. ಇಂಥ ಸಲ್ಯೂಷನ್ ಅನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿರುವ ಬ್ಯಾಂಕ್ ಎಚ್ ಡಿಎಫ್ ಸಿ ಆಗಿದೆ. ಇದರಿಂದ ಮೊಬೈಲ್ ನೆಟ್ ವರ್ಕ್ ಕವರೇಜ್ ಇರದ ಸಣ್ಣ ಹಳ್ಳಿಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಕೂಡ ಡಿಜಿಟಲ್ ಪಾವತಿ ಸಾಧ್ಯವಾಗಲಿದೆ. ಇನ್ನು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳು, ವ್ಯಾಪಾರ ಮೇಳಗಳು ಹಾಗೂ ಪ್ರದರ್ಶನಗಳಲ್ಲಿ ಮೊಬೈಲ್ ನೆಟ್ ವರ್ಕ್ ಟ್ರಾಫಿಕ್ ನಿಂದಾಗಿ ಡಿಜಿಟಲ್ ಪಾವತಿಗೆ ಸಮಸ್ಯೆಯಾಗುವುದು ಸಾಮಾನ್ಯ. ಆದರೆ, ಈ ಆಪ್ ಲೈನ್ ಪಾವತಿ ಸಲ್ಯೂಷನ್ ಇಂಥ ಜನಸಂದಣಿ ಹೆಚ್ಚಿರುವ ಕಾರ್ಯಕ್ರಮಗಳಲ್ಲಿ ನಗದುರಹಿತ ವ್ಯವಹಾರ ನಡೆಸಲು ಅನುಕೂಲ ಕಲ್ಪಿಸುತ್ತದೆ.
ಪ್ರಸ್ತುತ ನಾವು ಬಳಸುತ್ತಿರುವ ಸಾಂಪ್ರದಾಯಿಕ ಡಿಜಿಟಲ್ ಪಾವತಿ ವಿಧಾನದಲ್ಲಿ ಡಿಜಿಟಲ್ ವಹಿವಾಟು ನಡೆಸಲು ಇಬ್ಬರಲ್ಲಿ ಒಬ್ಬರಾದರೂ ಆನ್ ಲೈನ್ ನಲ್ಲಿ ಇರೋದು ಅಗತ್ಯ. ಹೀಗಾಗಿ ನೆಟ್ ವರ್ಕ್ ಕಡಿಮೆಯಿರುವ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳಿಗೆ ಎಚ್ ಡಿಎಫ್ ಸಿ 'ಆಪ್ ಲೈನ್ ಪೇ' ಪರಿಹಾರ ನೀಡಿದೆ. ಈ ಆಪ್ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಇಂಟರ್ನೆಟ್ ಸಂಪರ್ಕ ಇಲ್ಲದೆ ವಹಿವಾಟು ನಡೆಸಲು ಅನುವು ಮಾಡಿ ಕೊಡುತ್ತದೆ.
ಷೇರುದಾರರ ಹಿತಕ್ಕೆ ಸಮಿತಿ ರಚನೆಗೆ ಸಿದ್ಧ: ಸುಪ್ರೀಂಕೋರ್ಟ್‌ಗೆ ಕೇಂದ್ರ
ಈ ಸಲ್ಯೂಷನ್ ವ್ಯಾಪಾರಿಗಳಿಗೆ ಆಪ್ ಲೈನ್ ನಲ್ಲಿ ಪಾವತಿ ದೃಢೀಕರಣ ಸ್ವೀಕರಿಸಲು ನೆರವು ನೀಡುತ್ತದೆ. ಇನ್ನು ವಹಿವಾಟುಗಳು ವ್ಯಾಪಾರಿಗಳು ಅಥವಾ ಗ್ರಾಹಕರು ಮತ್ತೆ ಆನ್ ಲೈನ್ ಮೋಡ್ ಗೆ ಬಂದ ಬಳಿಕ ಆಗುತ್ತದೆ. ಈ ಸೇವೆಯನ್ನು ಮುಂದಿನ ನಾಲ್ಕು ತಿಂಗಳು ಪೈಲಟ್ ಯೋಜನೆಯಾಗಿ ಪರಿಚಯಿಸಲಾಗಿದ್ದು, ದೇಶದ 16ಕ್ಕೂ ಅಧಿಕ ನಗರ ಹಾಗೂ ಪಟ್ಟಣಗಳಲ್ಲಿ ಲಭ್ಯವಾಗಲಿದೆ. ಇತರ ಬ್ಯಾಂಕ್ ಗಳ ಬಳಕೆದಾರರಿಗೆ ಕೂಡ ಈ ಸೇವೆ ಲಭ್ಯವಾಗಲಿದ್ದು, ಇನ್ವಿಟೇಷನ್ ಲಿಂಕ್ ಕಳುಹಿಸುವ ಮೂಲಕ ಅವರನ್ನು ಸೇರಿಸಿಕೊಳ್ಳಬಹುದು. ಇನ್ನು ಈ ಪೈಲಟ್ ಯೋಜನೆಯಲ್ಲಿ ಆಪ್ ಲೈನ್ ಪೇ ವಹಿವಾಟು ಮಿತಿಯನ್ನು ಪ್ರತಿ ವಹಿವಾಟಿಗೆ 200 ರೂ.ಗೆ ಮಿತಿಗೊಳಿಸಲಾಗಿದೆ.
ಉದ್ಯೋಗಿಗಳಿಗೆ ಕಹಿಸುದ್ದಿ,ಇಪಿಎಫ್ ಬಡ್ಡಿದರ ಶೇ.8ಕ್ಕೆ ನಿಗದಿಪಡಿಸುವ ಸಾಧ್ಯತೆ!
ಈ ಆಪ್ ಲೈನ್ ಪಾವತಿಗಳನ್ನು ನೆಟ್ ವರ್ಕ್ ಇಲ್ಲದ ನೆಲ ಅಂತಸ್ತಿನ ಮೆಟ್ರೋ ರೈಲ್ವೆ ನಿಲ್ದಾಣಗಳು, ಪಾರ್ಕಿಂಗ್ ಸ್ಥಳಗಳು, ರಿಟೇಲ್ ಸ್ಟೋರ್ ಗಳು, ವಿಮಾನಗಳು, ರೈಲುಗಳು ಹಾಗೂ ಹಡಗುಗಳಲ್ಲಿ ಕೂಡ ಮಾಡಬಹುದಾಗಿದೆ. 2022ರ ಸೆಪ್ಟೆಂಬರ್ ನಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕ್ರಂಚ್ ಫಿಶ್ ಅಭಿವೃದ್ಧಿಪಡಿಸಿರುವ ಈ ಅಪ್ಲಿಕೇಷನ್ ಗೆ ಆರ್ ಬಿಐ ಅನುಮತಿ ನೀಡಿದೆ. ಈ ಪೈಲಟ್ ಯೋಜನೆಯ ಯಶಸ್ಸು ಭಾರತದ ಆಪ್ ಲೈನ್ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಲಿದೆ. ಇದು ದೇಶಾದ್ಯಂತ ಆಪ್ ಲೈನ್ ಡಿಜಿಟಲ್ ಪಾವತಿಗಳನ್ನು ಜನರು ದೊಡ್ಡ ಮಟ್ಟದಲ್ಲಿ ಬಳಸಲು ಅನುವು ಮಾಡಿಕೊಡಲಿದೆ ಕೂಡ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.