
ನವದೆಹಲಿ: ಉದ್ಯಮದ ಜೊತೆಗೆ ಸಾಮಾಜಿಕ ಅಭಿವೃದ್ಧಿಗಾಗಿ ದಾನ ಮಾಡುತ್ತಿರುವವರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಹೆಚ್‌ಸಿಎಲ್‌ನ ಸಹ ಸಂಸ್ಥಾಪಕ ಶಿವನಾಡರ್ 2022ರಲ್ಲಿ 1,161 ಕೋಟಿ ರು. ದಾನ ಮಾಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಕೆಲವು ದಶಕಗಳಿಂದ ಹಲವು ಸಾಮಾಜಿಕ ಕಾರ್ಯಗಳಿಗಾಗಿ ಕೋಟ್ಯಂತರ ರು. ದಾನ ಮಾಡುತ್ತಿರುವ ಶಿವ ನಾಡರ್ ಈ ಬಾರಿಯೂ ಪ್ರತಿದಿನ 3 ಕೋಟಿ ರು. ಅಧಿಕ ದಾನ ಮಾಡುವ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕಾಗಿ ಇವರು ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅಜೀಂ ಪ್ರೇಮ್‌ಜಿ (Ajim Premji) 484 ಕೋಟಿ ರು. ದಾನ ಮಾಡುವ ಮೂಲಕ 2022ರಲ್ಲಿ 2ನೇ ಸ್ಥಾನದಲ್ಲಿ ಗಳಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industry) ಮುಖ್ಯಸ್ಥ ಮುಖೇಶ್ ಅಂಬಾನಿ (Mukhesh Ambani) ಕಳೆದ ವರ್ಷ 411 ಕೋಟಿ ರು. ದಾನ ಮಾಡಿದ್ದಾರೆ. ಅಲ್ಲದೇ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿ ದಿನ 1 ಸಾವಿರ ಟನ್ ಆಮ್ಲಜನಕ (Oxygen) ಹಾಗೂ ಊಟದ ಸೌಲಭ್ಯವನ್ನು ಒದಗಿಸಿದೆ.
ಭಾರತದ ದಾನಿಗಳ ಪಟ್ಟಿಯಲ್ಲಿ ಶಿವ ನಡಾರ್ ನಂ.1; ಎರಡನೇ ಸ್ಥಾನಕ್ಕೆ ಜಾರಿದ ಅಜೀಂ ಪ್ರೇಮ್ ಜಿ
ಉಳಿದಂತೆ ಕುಮಾರ ಮಂಗಲಂ ಬಿರ್ಲಾ 242 ಕೋಟಿ ರು., ಗೌತಮ್ ಅದಾನಿ (Gowtam adani) 190 ಕೋಟಿ ರು., ಎ.ಎಂ. ನಾಯಕ್ 142 ಕೋಟಿ ರು. ದಾನ ಮಾಡಿದ್ದಾರೆ.
ಭಾರತೀಯ ದಾನಿಗಳಲ್ಲಿ ಶಿವನಾಡರ್ ನಂ 1!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.