BBMP Budget: ಉದ್ಯಾನ ನಗರಿ ಬೆಂಗಳೂರಿಗೆ ಇನ್ನೂ 15 ಹೊಸ ಉದ್ಯಾನಗಳು

Published : Mar 03, 2023, 07:57 AM IST
BBMP Budget: ಉದ್ಯಾನ ನಗರಿ ಬೆಂಗಳೂರಿಗೆ ಇನ್ನೂ 15 ಹೊಸ ಉದ್ಯಾನಗಳು

ಸಾರಾಂಶ

ಉದ್ಯಾನ ನಗರಿ ಬೆಂಗಳೂರಿನ ಹಸಿರೀಕರಣಕ್ಕೆ 129 ಕೋಟಿ, ಶೇ.1.16 ಅನುದಾನ ಮೀಸಲು, ಪಾರ್ಕ್‌ಗಳ ಅಭಿವೃದ್ಧಿಗೆ ಒತ್ತು, 15 ಹೊಸ ಉದ್ಯಾನವನಗಳ ಸ್ಥಾಪನೆ. 

ಬೆಂಗಳೂರು(ಮಾ.03):  ಗ್ರೀನ್‌ ಸಿಟಿ, ಉದ್ಯಾನಗಳ ನಗರಿಯ ಹಸಿರನ್ನು ಇನ್ನಷ್ಟುಹೆಚ್ಚಿಸಲು ಒತ್ತು ನೀಡಲಾಗಿದೆ. 15 ಹೊಸ ಉದ್ಯಾನವನಗಳ ಸ್ಥಾಪನೆ, ಪಾರ್ಕ್‌ಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸೇರಿ ಬಿಬಿಎಂಪಿ ಪ್ರಸಕ್ತ ಬಜೆಟ್‌ನಲ್ಲಿ ಬರೋಬ್ಬರಿ 129 ಕೋಟಿಗೂ ಹೆಚ್ಚಿನ ಅನುದಾನ ಮೀಸಲಿಟ್ಟಿದೆ.

ಬಜೆಟ್‌ನ ಒಟ್ಟು ಗಾತ್ರದಲ್ಲಿ ಶೇ.1.16ರಷ್ಟು ಅನುದಾನವನ್ನು ತೋಟಗಾರಿಕೆಗೆ ಮೀಸಲಿಡಲಾಗಿದೆ. ಪಾಲಿಕೆಯ ಉದ್ಯಾನವನಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಸಿಗಳ ರಕ್ಷಣೆಗೆ ಕ್ರಮ ಕೈಗೊಂಡಿರುವುದಾಗಿ ಬಜೆಟ್‌ ಮಂಡಿಸಿದ ವಿಶೇಷ ಆಯುಕ್ತರಾದ ಜಯರಾಮ್‌ ರಾಯಪುರ್‌ ತಿಳಿಸಿದ್ದಾರೆ.

BBMP Budget: ಬೆಂಗ್ಳೂರಿನ ರಸ್ತೆ, ಮೇಲ್ಸೇತುವೆ, ಅಂಡರ್‌ ಪಾಸ್‌ಗೆ ಭರಪೂರ ಹಣ

ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ವರ್ಷ 10 ಹೊಸ ಉದ್ಯಾನವನ ನಿರ್ಮಿಸಲಾಗಿದ್ದು, ಒಟ್ಟಾರೆ ರಾಜಧಾನಿಯಲ್ಲಿ 1233 ಉದ್ಯಾನಗಳು ನಿರ್ಮಾಣ ಆದಂತಾಗಿದೆ. ಈ ವರ್ಷದಲ್ಲಿ 15 ಹೊಸ ಉದ್ಯಾನವನಗಳಿಗೆ .15 ಕೋಟಿ ಮೀಸಲಿಡಲಾಗಿದೆ.

ಪಾಲಿಕೆಯ ತೋಟಗಾರಿಕೆ ವಿಭಾಗದಿಂದ ರುದ್ರಭೂಮಿಯ ನಿರ್ವಹಣೆಗೆ .1 ಕೋಟಿ, ಪಾಲಿಕೆಯ ಹೊಸ ವಲಯಗಳಲ್ಲಿನ ಉದ್ಯಾನಗಳ ನಿರ್ವಹಣೆಗೆ ವಲಯಕ್ಕೆ ತಲಾ .2 ಕೋಟಿ ಸೇರಿ ಹೊಸ ನಿರ್ವಹಣೆ ಕಾಮಗಾರಿಗೆ .35 ಕೋಟಿ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ಉದ್ಯಾನಗಳ ನಿರ್ವಹಣೆಗೆ .45 ಕೋಟಿ, ರೈಲ್ವೆ, ವಿಮಾನ ನಿಲ್ದಾಣಗಳ ಪ್ರವೇಶದಲ್ಲಿರುವ ಉದ್ಯಾನಗಳ ಅಭಿವೃದ್ಧಿಗೆ .25 ಲಕ್ಷ ಒದಗಿಸಲಾಗಿದೆ.

ಇವೆಲ್ಲ ಸೇರಿ ಒಟ್ಟಾರೆ ಉದ್ಯಾನಗಳ ದುರಸ್ತಿ, ನಿರ್ವಹಣೆಯ ಹೊಸ ಕಾಮಗಾರಿಗೆ .81.25 ಕೋಟಿ ಮೀಸಲಿರಸಲಾಗಿದೆ. ಇನ್ನು, ಉದ್ಯಾನವನಗಳ ತೋಟಗಾರಿಕೆ ಫಲಪುಷ್ಪ ಪ್ರದರ್ಶನಕ್ಕಾಗಿ ಪಾಲಿಕೆ .10 ಲಕ್ಷ ಕೊಡಲಿದೆ.
ಬಜೆಟ್‌ನಲ್ಲಿ ಉದ್ಯಾನವನಗಳಿಗೆ ನೀಡುವ ಹಣ ಸದುಪಯೋಗ ಆಗಬೇಕು. ಮುಖ್ಯವಾಗಿ ಉದ್ಯಾನಗಳ ಭದ್ರತೆಗೆ ಸಿಸಿ ಕ್ಯಾಮೆರಾ, ಸಿಬ್ಬಂದಿ ನೇಮಕಕ್ಕೆ ಒತ್ತು ಸಿಗಬೇಕಿತ್ತು. ಮಧ್ಯವರ್ತಿಗಳು, ಗುತ್ತಿಗೆದಾರರ ಜೇಬಿಗೆ ಈ ಮೊತ್ತ ಹೋಗದಂತೆ ನೋಡಿಕೊಳ್ಳಬೇಕು ಅಂತ ಕಬ್ಬನ್‌ಪಾರ್ಕ್ ಸಂರಕ್ಷಣಾ ಸಂಘ ಉಮೇಶ್‌ಕುಮಾರ್‌ ತಿಳಿಸಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!