ಚಿನ್ನಕ್ಕೆ ಹಾಲ್‌ಮಾರ್ಕ್‌: ಕರ್ನಾಟಕದ ಈ 14 ಜಿಲ್ಲೆಗಳಲ್ಲಿ ಕಡ್ಡಾಯ!

Published : Jun 19, 2021, 04:45 PM ISTUpdated : Jun 19, 2021, 04:49 PM IST
ಚಿನ್ನಕ್ಕೆ ಹಾಲ್‌ಮಾರ್ಕ್‌: ಕರ್ನಾಟಕದ ಈ 14 ಜಿಲ್ಲೆಗಳಲ್ಲಿ ಕಡ್ಡಾಯ!

ಸಾರಾಂಶ

* ಚಿನ್ನದ ಆಭರಣಗಳು ಮತ್ತು ಇತರ ಚಿನ್ನದ ವಸ್ತುಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯ * ಕರ್ನಾಟಕದ 14 ಸೇರಿ ದೇಶದ ಒಟ್ಟು 256 ಜಿಲ್ಲೆಗಳಲ್ಲಿ ಹಾಲ್‌ ಮಾರ್ಕ್ ಕಡ್ಡಾಯ * ಚಿನ್ನಾಭರಣಗಳ ಮಾರಾಟದಲ್ಲಿ ನಡೆಯುತ್ತಿದ್ದ ವಂಚನೆ ಪ್ರಕರಣ ನಿಯಂತ್ರಿಸಲು ನಿಯಮ

ನವದೆಹಲಿ(ಜೂ.19): ಚಿನ್ನದ ಆಭರಣಗಳು ಮತ್ತು ಇತರ ಚಿನ್ನದ ವಸ್ತುಗಳ ಮೇಲೆ ಹಾಲ್ ಮಾರ್ಕ್‌ನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಚಿನ್ನಾಭರಣಗಳ ಮಾರಾಟದಲ್ಲಾಗುತ್ತಿದ್ದ ವಂಚನೆ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ಹಾಲ್ ಮಾರ್ಕ್ ಕಡ್ಡಾಯಗೊಳಸಲು ಆದೇಶಿಸಿದೆ. ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು.

ಚಿನ್ನದ ಮೇಲೆ ಹಾಲ್ ಮಾರ್ಕ್‌ ಕಡ್ಡಾಯ, ನಿಮ್ಮ ಬಳಿ ಇರುವ ಆಭರಣದ ಕತೆ ಏನು?

ಈ ನಿಟ್ಟಿನಲ್ಲಿ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈಗಾಗಲೇ ಕ್ರಮ ಕೈಗೊಂಡಿದ್ದು, ಬುಧವಾರದಿಂದ ದೇಶದಾದ್ಯಂತ 256 ಜಿಲ್ಲೆಗಳಲ್ಲಿ ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 14 ಜಿಲ್ಲೆಗಳೂ ಸೇರ್ಪಡೆಗೊಂಡಿವೆ. 

ಕರ್ನಾಟಕದ 14 ಜಿಲ್ಲೆಗಳು ಯಾವುದು?

1. ಬೆಂಗಳೂರು ನಗರ 
2. ತುಮಕೂರು 
3. ಹಾಸನ 
4. ಮಂಡ್ಯ 
5. ಮೈಸೂರು 
6. ದಕ್ಷಿಣ ಕನ್ನಡ 
7. ಶಿವಮೊಗ್ಗ 
8. ಉಡುಪಿ 
9. ದಾವಣಗೆರೆ 
10. ಉತ್ತರ ಕನ್ನಡ 
11. ಬೆಳಗಾವಿ 
12. ಧಾರವಾಡ 
13. ವಿಜಯಪುರ
14. ಕಲಬುರಗಿ

ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್‌ನ ಡಿಜಿ ಪ್ರಮೋದ್ ಕುಮಾರ್ ತಿವಾರಿ, ಹಾಲ್ ಮಾರ್ಕ್ ಇಲ್ಲದಿರುವ ಆಭರಣಗಳನ್ನು ಜ್ಯುವೆಲ್ಲರಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡಲು ಇನ್ನೂ ಅವಕಾಶ ಇದೆ. ಖರೀದಿಸಿದವರು ಅದಕ್ಕೆ ಹಾಲ್ ಮಾರ್ಕ್ ಹಾಕಿ ಹೊಸ ಜ್ಯುವೆಲ್ಲರಿಯಾಗಿ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.

ಚಿನ್ನಕ್ಕೆ `ಹಾಲ್‌ಮಾರ್ಕ್' ಕಡ್ಡಾಯ: ತಲೆಮಾರಿಂದ ಬಂದ ಹಳದಿ ಲೋಹದ ಕತೆ ಏನು?

ಕೆಲವು ವಿಭಾಗಗಳಿಗೆ ಕಡ್ಡಾಯ ಹಾಲ್ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ. ಅವುಗಳಲ್ಲಿ 40 ಲಕ್ಷ ರೂ.ಗಳವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಆಭರಣಕಾರರು ಸೇರಿದ್ದಾರೆ. ಕೈಗಡಿಯಾರಗಳು, ಫೌಂಟೆನ್ ಪೆನ್ ಮತ್ತು ವಿಶೇಷ ಆಭರಣಗಳಾದ ಕುಂದನ್, ಪೋಲ್ಕಿ ಮತ್ತು ಜಾದೌ ಸೇರಿವೆ. ಭಾರತ ಸರ್ಕಾರದ ವ್ಯಾಪಾರ ನೀತಿಯ ಪ್ರಕಾರ ಆಭರಣಗಳ ರಫ್ತು ಮತ್ತು ಮರು-ಆಮದು - ಅಂತರರಾಷ್ಟ್ರೀಯ ಪ್ರದರ್ಶನಗಳಿಗೆ ಆಭರಣಗಳು ಮತ್ತು ಸರ್ಕಾರದಿಂದ ಅನುಮೋದಿತ ಬಿ 2 ಬಿ ದೇಶೀಯ ಪ್ರದರ್ಶನಗಳಿಗೂ ವಿನಾಯಿತಿ ನಿಡಲಾಗಿದೆ.

ಚಿನ್ನದ ಹಾಲ್‌ಮಾರ್ಕ್‌ಗೆ ಎಷ್ಟು ಖರ್ಚಾಗುತ್ತದೆ?

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ವೆಬ್‌ಸೈಟ್‌ನ ಪ್ರಕಾರ, ಬಿಐಎಸ್ ಮಾನ್ಯತೆ ಪಡೆದ ಆಭರಣಕಾರರು ಪಾವತಿಸಬೇಕಾದ ಚಿನ್ನಾಭರಣಗಳು, ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಶುಲ್ಕಗಳು ಪ್ರತಿ ಆಭರಣಕ್ಕೆ 35 ರೂ. ನಷ್ಟಿದ್ದು, ಒಂದು ಸರಕುಗೆ ಕನಿಷ್ಠ ಸೇವೆಗಳ ತೆರಿಗೆ ಮತ್ತು ಅನ್ವಯವಾಗುವ ಇತರ ಸುಂಕಗಳು ಹೆಚ್ಚುವರಿವಾಗಿ 200 ರೂ. ಅನ್ವಯಿಸುತ್ತದೆ.

ಆಭರಣಗಳ ತೂಕ ಏನೇ ಇರಲಿ, ಹಾಲ್‌ಮಾರ್ಕಿಂಗ್ ಬೆಲೆಗಳು ಚಿನ್ನದ ಆಭರಣಗಳಿಗೆ ಪ್ರತಿ ತುಂಡಿಗೆ 35 ಪಾಯಿ ಪ್ಲಸ್‌ ಜಿಎಸ್‌ಟಿ ಮತ್ತು ಬೆಳ್ಳಿ ಆಭರಣಗಳಿಗೆ 25 ರೂಪಾಯಿ ಪ್ಲಸ್‌ ಜಿಎಸ್‌ಟಿ ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!