Success Story : ಇಂಗ್ಲೀಷ್ ಬರದೆ ಟೋಲ್ ನಲ್ಲಿ 250 ರೂ. ದುಡಿತಿದ್ದ ವ್ಯಕ್ತಿ ಈಗ ಯಶಸ್ವಿ ಉದ್ಯಮಿ

Published : Jan 30, 2026, 09:00 PM IST
Gupio company owner Gurumurthy

ಸಾರಾಂಶ

ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಇಂಗ್ಲೀಷ್ ಬರ್ತಿರಲಿಲ್ಲ. ಅಲ್ಲಿ ಇಲ್ಲಿ ಕೆಲ್ಸ ಮಾಡಿ ಹೊಟ್ಟೆ ತುಂಬಿಸಿಕೊಂಡ್ರೂ ಮನಸ್ಸಿಗೆ ತೃಪ್ತಿ ಇರಲಿಲ್ಲ. ಒಂದೊಂದೇ ಮೆಟ್ಟಿಲು ಏರಿದ ವ್ಯಕ್ತಿ ಈಗ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಉದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. 

ಭಾರತದ ಜನನಿಬಿಡ ನಗರಗಳಲ್ಲಿ ಪಾರ್ಕಿಂಗ್ ಈಗ ಸಣ್ಣ ಸಮಸ್ಯೆ ಅಲ್ವೇ ಅಲ್ಲ, ದೈನಂದಿನ ಕಾರ್ಯಾಚರಣೆಗಳಿಗೆ ಇದು ಪ್ರಮುಖ ಅಡಚಣೆಯಾಗಿದೆ. ಟೆಕ್ ಪಾರ್ಕ್ಗಳಲ್ಲಿ ಅಥವಾ ಆಫೀಸ್ ಗಳಲ್ಲಿ, ಮಾಲ್ ಗಳಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಆದ್ರೆ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಗುಪಿಯೊ (Gupio) ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ. ನಿರ್ದಿಷ್ಟವಾಗಿ ಮೊಬಿಲಿಟಿ ಹಾಗೂ ಪಾರ್ಕಿಂಗ್ ಮೂಲಸೌಕರ್ಯದ ಬಗ್ಗೆ ಕಂಪನಿ ಗಮನ ನೀಡ್ತಿದೆ. ಗುರುಮೂರ್ತಿ ಸಿ ಗುಪಿಯೊ ಸ್ಟಾರ್ಟ್ ಅಪ್ ಸ್ಥಾಪಕರು. ಭಾರತದಾದ್ಯಂತ ಕಾರ್ಪೊರೇಟ್ ಕೆಲಸದ ಸ್ಥಳಗಳಿಗೆ ತಂತ್ರಜ್ಞಾನ ಆಧಾರಿತ ಪಾರ್ಕಿಂಗ್ ಪರಿಹಾರ ನೀಡುವ ಕೆಲ್ಸವನ್ನು ಕಂಪನಿ ಮಾಡ್ತಿದೆ.

ಗುರುಮೂರ್ತಿ ಸಿ ಯಾರು?

ಗುರುಮೂರ್ತಿ ಕರ್ನಾಟಕದ ದಾವಣಗೆರೆ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಕೆಳ-ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿ ಅವರ ಮೈಮೇಲೆ ಬಂದಿತ್ತು. ಓದುತ್ತಿರುವಾಗ್ಲೇ ರೆಸ್ಟೋರೆಂಟ್ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಗುರುಮೂರ್ತಿ ಶುರು ಮಾಡಿದ್ದರು. ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿದ್ದರೂ, ಆರ್ಥಿಕ ಒತ್ತಡಗಳಿಂದಾಗಿ 2014 ರಲ್ಲಿ 12 ನೇ ತರಗತಿ ಪೂರ್ಣಗೊಳಿಸಿ ಓದು ನಿಲ್ಲಿಸಿದ್ದರು. ಕೆಲ್ಸ ಅರಸುತ್ತ ಗುರುಮೂರ್ತಿ ಬೆಂಗಳೂರಿಗೆ ಬಂದಿದ್ದರು. ಅವರ ಆರಂಭಿಕ ದಿನಗಳು ಕಷ್ಟಕರವಾಗಿದ್ದವು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಇಂಗ್ಲಿಷ್ನೊಂದಿಗೆ ಹೋರಾಟ ನಡೆಸೋದು ಕಷ್ಟವಾಗಿತ್ತು. ಟೋಲ್ ಪ್ಲಾಜಾದಲ್ಲಿ ಕೆಲಸ ಪಡೆದ ಗುರುಮೂರ್ತಿ ಎಂಟು ಗಂಟೆಗಳ ಪಾಳಿಗೆ 250 ರೂಪಾಯಿ ಸಂಪಾದನೆ ಮಾಡ್ತಿದ್ದರು.

ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್‌ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ!

ಆರು ತಿಂಗಳ ನಂತ್ರ ಅವರು ಯುನಿಬಿಕ್ ಬಿಸ್ಕತ್ತು ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆದರೆ ಅಲ್ಲಿ ಅವರು ಹೆಚ್ಚು ಕಾಲ ಕೆಲ್ಸ ಮಾಡಲಿಲ್ಲ. ಗುರುಮೂರ್ತಿಯವರ ಮೊದಲ ತಿಂಗಳ ಕೆಲ್ಸ ಕ್ರೋಮಾದಲ್ಲಿ. ಅಲ್ಲಿ ಸೇಲ್ಸ್ ಮೆನ್ ಆಗಿದ್ದ ಗುರುಮೂರ್ತಿ ಏಕಕಾಲದಲ್ಲಿ ತಮ್ಮ ಇಂಗ್ಲಿಷ್ ಮತ್ತು ವೃತ್ತಿಪರ ವಿಶ್ವಾಸವನ್ನು ಸುಧಾರಿಸಲು ಪ್ರಾರಂಭಿಸಿದ್ದರು. ಆರು ತಿಂಗಳಲ್ಲೇ ಅವರು ವಿವೋಗೆ ತೆರಳಿದ್ದರು. ಅವರ ವೃತ್ತಿಜೀವನದ ಪಥ ಬದಲಾಯಿತು. ಚಿಲ್ಲರೆ ಮಾರಾಟ ಮನವೊಲಿಸುವ ಕಲೆ, ಗ್ರಾಹಕರ ನಡವಳಿಕೆ ಮತ್ತು ಉತ್ತಮ ಪ್ಲಾನಿಂಗ್ ಕಲಿಸ್ತು. ವಿವೋದಲ್ಲಿ ಗುರುಮೂರ್ತಿ ಸಾಕಷ್ಟು ಕಲಿತಿದ್ರು.

ಹೊಸದನ್ನು ಕಲಿಯುವ ಅವರ ಬಯಕೆ ಪಾಕಿಂಗ್ ಪ್ಲಸ್ ಗೆ ತಂದು ನಿಲ್ಲಿಸ್ತು. ಅಲ್ಲಿ ಅವರು ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆಗೆ ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಅನುಭವ ಅವರಿಗೆ ಪಾರ್ಕಿಂಗ್ ನಿರ್ವಹಣೆ ಸೇರಿದಂತೆ ಅನೇಕ ವಿಷ್ಯಗಳನ್ನು ಕಲಿಸಿತ್ತು. ರಿಲಯನ್ಸ್ ಜಿಯೋಮಾರ್ಟ್ನಲ್ಲಿ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾಗಿಯೂ ಗುರುಮೂರ್ತಿ ಕೆಲ್ಸ ಮಾಡಿದ್ದರು.

ಹಲವು ಲಕ್ಷುರಿ ಕಾರು ಮಾಲೀಕ ಸಿಜೆ ರಾಯ್ ತುಕ್ಕು ಹಿಡಿದ ಮಾರುತಿ 800ಗೆ 10 ಲಕ್ಷ ರೂ ಕೊಟ್ಟಿದ್ದು ಯಾಕೆ?

ಉದ್ಯಮಿ ಆಗ್ಬೇಕೆಂದು ಕನಸು ಕಂಡಿದ್ದ ಗುರುಮೂರ್ತಿ 2023ರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡರು. ಹೊಸದನ್ನು ಮಾಡಬಯಸಿದ್ದ ಗುರುಮೂರ್ತಿ ಹೆಚ್ಚಿನ ಟೆಕ್ ಪಾರ್ಕ್ಗಳಲ್ಲಿ, ಪಾರ್ಕಿಂಗ್ ಸಾಮರ್ಥ್ಯ ಕೇವಲ ಶೇಕಡಾ 10ರಷ್ಟು ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇದ್ರಿಂದ ಅನೇಕ ಉದ್ಯೋಗಿಗಳಿಗೆ ಸಮಸ್ಯೆ ಆಗ್ತಿದೆ ಎಂಬುದನ್ನು ಅರಿತ ಗುರುಮೂರ್ತಿ, ಸಾಕಷ್ಟು ಸಂಶೋಧನೆ ನಂತ್ರ ಮಾರ್ಚ್ 2023 ರಲ್ಲಿ ಗುಪಿಯೊ ಪ್ರಯಾಣ ಶುರು ಮಾಡಿದ್ರು. ಗುರುಮೂರ್ತಿ ತಮ್ಮ ಉಳಿತಾಯದಿಂದ 10 ಲಕ್ಷ ಬಳಸಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಿದರು.

ಗುಪಿಯೊ ಹೆಚ್ಚುವರಿ ಪಾರ್ಕಿಂಗ್ ಸೇವೆಗಳು, ವ್ಯಾಲೆಟ್ ಸೇವೆಗಳು, ಗುಪಿಯೊ ವ್ಯಾಲೆಟ್ ಅಪ್ಲಿಕೇಷನ್ ಹಾಗೂ ಶಟಲ್ ಸರ್ವೀಸಸ್ ಬೈ ಗುಪಿಯೋ ಎಂಬ ನಾಲ್ಕು ಸೇವೆಗಳನ್ನು ನೀಡ್ತಿದೆ. ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಗುಪಿಯೊ 50 ಕ್ಕೂ ಹೆಚ್ಚು ಕಾರ್ಪೊರೇಟ್ ಕ್ಲೈಂಟ್ಗಳಿಗೆ ಸೇವೆ ಸಲ್ಲಿಸಿದೆ. 2023-24ನೇ ಹಣಕಾಸು ವರ್ಷದಲ್ಲಿ, ಗುಪಿಯೊ ಸುಮಾರು 30 ಲಕ್ಷ ಆದಾಯವನ್ನು ಗಳಿಸಿದೆ. 2025-26ನೇ ಹಣಕಾಸು ವರ್ಷ ಕಂಪನಿ 7 ಕೋಟಿ ವಾರ್ಷಿಕ ವಹಿವಾಟಿನ ಗುರಿ ಹೊಂದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Confident Group CJ Roy ಮಗಳು ಯಾರು? ಈ ವಯಸ್ಸಿಗೆ ಅಷ್ಟೆಲ್ಲ ಫಾಲೋವರ್ಸ್‌ ಇರೋದ್ಯಾಕೆ?
ಹಲವು ಲಕ್ಷುರಿ ಕಾರು ಮಾಲೀಕ ಸಿಜೆ ರಾಯ್ ತುಕ್ಕು ಹಿಡಿದ ಮಾರುತಿ 800ಗೆ 10 ಲಕ್ಷ ರೂ ಕೊಟ್ಟಿದ್ದು ಯಾಕೆ?