ತೆರಿಗೆ ದಾಳಿಗೆ ಬೇಸತ್ರಾ ಸಿ.ಜೆ.ರಾಯ್, ಕಾಫಿ ಡೇ ಸಿದ್ಧಾರ್ಥ್ ಸಾವು ಮುನ್ನೆಲೆಗೆ

Published : Jan 30, 2026, 06:57 PM IST
VG Siddarth - CJ Roy

ಸಾರಾಂಶ

ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್, ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು, ಈ ಹಿಂದೆ ಇದೇ ರೀತಿ ಐಟಿ ದಾಳಿಗೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡ ವಿ.ಜಿ. ಸಿದ್ದಾರ್ಥ್ ಹೆಗಡೆಯವರ ದುರಂತವನ್ನು ನೆನಪಿಸಿದೆ.

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿಯ ದಾಳಿಗೆ ಬೇಸತ್ತು ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್, ತಮ್ಮ ಖಾಸಗಿ ಪಿಸ್ತೂಲ್‌ನಲ್ಲಿ ಗುಂಡು ಹಾರಿಸಿಕೊಂಡು ಕೊನೆಯುಸಿರೆಳೆದಿದ್ದಾರೆ. ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸಿಜೆ ರಾಯ್ ಮೊದಲಿಗರೇನಲ್ಲ. ಈ ಹಿಂದೆ ಕನ್ನಡದ ದಿಗ್ಗಜ ಉದ್ಯಮಿ ಸಿದ್ದಾರ್ಥ್ ಹೆಗಡೆ ಕೂಡಾ ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ಘಟನೆ ನಡೆದಿದೆ. ಸಿಜೆ ರಾಯ್‌ ಅವರ ಕಚೇರಿ ಮೇಲೆ 10 ದಿನಗಳ ಹಿಂದೆ ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ತೆರಿಗೆ ವಂಚನೆ ಆರೋಪದಡಿ ಐಟಿ ಇಲಾಖೆ ದಾಳಿ ನಡೆಸಿತ್ತು. ಐಟಿ ದಾಳಿ ಬೆನ್ನಲ್ಲೇ ಇಂದು ಮಧ್ಯಾಹ್ನದ ವೇಳೆಗೆ ಆನೆಪಾಳ್ಯದಲ್ಲಿರುವ ಕಚೇರಿಗೆ ಸಿಜೆ ರಾಯ್ ಬಂದಿದ್ದರು. ಇದಾದ ನಂತರ ಒಂದು ಗಂಟೆಗಳ ಕಾಲ ಸಿಜೆ ರಾಯ್ ಐಟಿ ಅಧಿಕಾರಿಗಳ ಎದುರು ವಿಚಾರಣೆ ಎದುರಿಸಿದ್ದರು.

ದಾಖಲೆ ತರುತ್ತೇನೆಂದು ಹೇಳಿ ಹೋಗಿ ಆತ್ಮ*ಹತ್ಯೆ

ಈ ಮೊದಲೇ ಸಿಜೆ ರಾಯ್ ಕೆಲವೊಂದು ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದರು. ಇದಾದ ಬಳಿಕ ಮತ್ತಷ್ಟು ದಾಖಲೆ ತಂದುಕೊಡಲು ಐಟಿ ಅಧಿಕಾರಿಗಳ ಅನುಮತಿ ಪಡೆದ ಎರಡನೇ ಪ್ಲೋರ್‌ಗೆ ಹೋಗಿದ್ದರು. ಅಲ್ಲಿ ರಿವಲ್ವಾರ್‌ನಲ್ಲಿ ಎದೆಗೆ ಗುಂಡಿಕ್ಕಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆಗ ಕಚೇರಿ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ HSR ಲೇಔಟ್ ನ ನಾರಾಯಣ ಆಸ್ಪತ್ರೆಯಲ್ಲಿರುವ ಮೃತದೇಹ ಇರಿಸಲಾಗಿದೆ.

ವಿ.ಜಿ. ಸಿದ್ದಾರ್ಥ್ ಹೆಗಡೆ ಸಾವು ನೆನಪಿಸಿದ ಆತ್ಮ*ಹತ್ಯೆ

ಇನ್ನು ಸಿಜೆ ರಾಯ್ ಆತ್ಮ*ಹತ್ಯೆಯಾಗುತ್ತಿದ್ದಂತೆಯೇ, ಕೆಫೆ ಕಾಫಿ ಡೇ ಕ್ರಾಂತಿಕಾರಕ ಸಿದ್ದಾರ್ಥ್ ಹೆಗಡೆಯವರ ಹೆಸರು ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ದೇಶದ 200 ನಗರಗಳಲ್ಲಿ 1,772ಕ್ಕೂ ಹೆಚ್ಚು ಫೆ ಕಾಫಿ ಡೇ ಶಾಖೆಗಳನ್ನು ಹೊಂದಿದ್ದ, ಒಂದು ತಲೆಮಾರಿನ ಮೇಲೆ ಅಪಾರ ಪ್ರಭಾವ ಬೀರಿದ್ದ ಕನ್ನಡದ ಹೆಮ್ಮೆಯ ಉದ್ಯಮಿ ಸಿದ್ದಾರ್ಥ್ ಹೆಗಡೆ ಕೂಡಾ ಇದೇ ಟ್ಯಾಕ್ಸ್ ಟೆರರಿಸಂಗೆ ಹೆದರಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು.

ವಿಜೆ ಸಿದ್ದಾರ್ಥ್ ಹೆಗಡೆ 2019ರ ಜುಲೈ 29ರಂದು ಮಂಗಳೂರಿನ ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಒಟ್ಟು 22 ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದುವ ಮೂಲಕ ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದ ಸಿದ್ದಾರ್ಥ್ ಹೆಗಡೆ ಆತ್ಮ*ಹತ್ಯೆ ಮಾಡಿಕೊಂಡಾಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ಯಾಕ್ಸ್‌ ಟೆರರಿಸಂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆಗಲೂ ಕೂಡಾ ಐಟಿ ದಾಳಿಗೆ ಬೇಸತ್ತು ಸಿದ್ದಾರ್ಥ್ ಹೆಗಡೆ ಆತ್ಮ*ಹತ್ಯೆ ಮಾಡಿಕೊಂಡಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ರಾಯ್ ಸಾವಿಗೂ ಐಟಿ ದಾಳಿಯೇ ಕಾರಣ ಎಂದು ಹೇಳಲಾಗುತ್ತಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್‌ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ!
CJ Roy Death: ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್ ಸಾವಿಗೆ ಶರಣು; ಟಿವಿ ಶೋ, ಸಿನಿಮಾ ನಿರ್ಮಾಣದಲ್ಲೂ ಸಕ್ರಿಯರಾಗಿದ್ರು!