2023 - 2024 ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಮೊದಲ ತಿಂಗಳಾದ ಜನವರಿಯಲ್ಲಿ ಇಲ್ಲಿಯವರೆಗೆ 14.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ನೇರ ತೆರಿಗೆ ಸಂಗ್ರಹದಲ್ಲಿ ಶೇ. 19 ರಷ್ಟು ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ನವದೆಹಲಿ (ಜನವರಿ 12, 2024): 2023 ರಲ್ಲಿ 1.98 ಲಕ್ಷ ಕೋಟಿ ರೂ. ಗೂ ಅಧಿಕ ತೆರಿಗೆ ವಂಚನೆ ನಡೆದಿದೆ ಎಂಬುದನ್ನು ಜಿಎಸ್‌ಟಿ ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಅಲ್ಲದೇ ಈ ವಂಚನೆ ಹಿಂದಿರುವ 140 ಮಂದಿ ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಲಾಗಿದೆ ಎಂದು ಗುರುವಾರ ವಿತ್ತ ಸಚಿವಾಲಯ ಹೇಳಿದೆ.
ಅನ್‌ಲೈನ್ ಗೇಮಿಂಗ್, ಕ್ಯಾಸಿನೋ, ವಿಮೆ ಮತ್ತು ಮಾನವ ಶಕ್ತಿಯ ಆಮದಿನಲ್ಲಿ ವಂಚನೆ ಎಸಗಲಾಗಿದೆ. 2023 ರಲ್ಲಿ ಇಂತಹ 6,323 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 1.98 ಲಕ್ಷ ಕೋಟಿ ರೂ. ತೆರಿಗೆ ವಂಚನೆ ನಡೆದಿದೆ. ಇದರಲ್ಲಿ 28 ಸಾವಿರ ಕೋಟಿ ಸ್ವಯಂಪ್ರೇರಿತ ಪಾವತಿ ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. 2022ರಲ್ಲಿ 4273 ಪ್ರಕರಣಗಳು ನಡೆದಿದ್ದು, 90,499 ಕೋಟಿ ತೆರಿಗೆ ವಂಚನೆ ನಡೆದಿತ್ತು.
ಇದದನ್ನು ಓದಿ: ವಿಶ್ವಕ್ಕೆ ಭಾರತ ಭರವಸೆಯ ಆಶಾಕಿರಣ: ಪ್ರಧಾನಿ ಮೋದಿ; ನಾನು ಹೆಮ್ಮೆಯ ಗುಜರಾತಿ ಎಂದ ಅಂಬಾನಿ
ನೇರ ತೆರಿಗೆ 19% ಹೆಚ್ಚಳ:
2023 - 2024 ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಮೊದಲ ತಿಂಗಳಾದ ಜನವರಿಯಲ್ಲಿ ಇಲ್ಲಿಯವರೆಗೆ 14.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ನೇರ ತೆರಿಗೆ ಸಂಗ್ರಹದಲ್ಲಿ ಶೇ. 19 ರಷ್ಟು ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ತೆರಿಗೆ ಸಂಗ್ರಹ ಪ್ರಮಾಣ 2023 - 24ನೇ ವರ್ಷದ ಬಜೆಟ್ ನಿರೀಕ್ಷೆಯ ಶೇ. 81 ರಷ್ಟಾಗಿದೆ. ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯಿಂದ ಕಳೆದ ಹಣಕಾಸು ವರ್ಷಕ್ಕಿಂತ ಶೇ. 9.75 ರಷ್ಟು ಹೆಚ್ಚುವರಿ ಅಂದರೆ 18.23 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದು ಇಲಾಖೆ ಅಂದಾಜಿಸಿತ್ತು.
ಇದನ್ನು ಓದಿ: ಲಕ್ಷದ್ವೀಪಕ್ಕೆ ಹೋಗಲು ಪ್ಲ್ಯಾನ್ ಮಾಡ್ತಿದ್ದೀರಾ? PayTMನಲ್ಲಿ ಬುಕ್ ಮಾಡಿ ವಿಮಾನ ಟಿಕೆಟ್‌ಗೆ ಭರ್ಜರಿ ಡಿಸ್ಕೌಂಟ್ ಗಳಿಸಿ!