
ನವದೆಹಲಿ(ಡಿ.14): ಆಧುನಿಕ ತಂತ್ರಜ್ಞಾನ, ಇ-ಬಿಲ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಕಣ್ಗಾವಲು ಇದೆಲ್ಲಾ ಇದ್ದರೂ, ಜಿಎಸ್ ಟಿ ಯಲ್ಲಿ 12 ಸಾವಿರ ಕೋಟಿ ರೂ. ತೆರಿಗೆ ವಂಚನೆ ದಾಖಲಾಗಿದ್ದು, ಕೇಂದ್ರ ಹಣಕಾಸು ಸಚಿವಾಲಯವನ್ನು ಆತಂಕಕ್ಕೆ ತಳ್ಳಿದೆ.
ಹೌದು, ಈ ಕುರಿತು ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಮಾಹಿತಿ ನೀಡಿದ್ದು, ಕಳೆದ 8 ತಿಂಗಳಿನಿಂದ ನವಂಬರ್ ವರೆಗೆ ಒಟ್ಟು 12 ಸಾವಿರ ಕೋಟಿ ರೂ. ಏರುಪೇರಾಗಿದ್ದು, ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕವೂ ಇಷ್ಟು ಪ್ರಮಾಣದ ತೆರಿಗೆ ವಂಚನೆಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.
ಜಿಎಸ್ ಟಿ ಅಡಿಯಲ್ಲಿ ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತದ್ದರಲ್ಲಿ 12 ಸಾವಿರ ಕೋಟಿ ರೂ.ನಷ್ಟು ತೆರಿಗೆ ವಂಚನೆ ಮಾಡಿರುವುದು ತೆರಿಗೆ ವಂಚಕರ ಚಾಣಾಕ್ಷತನಕ್ಕೆ ಸಾಕ್ಷಿ ಎಂದು ಪರೋಕ್ಷ ತೆರಿಗೆ ಮಂಡಳಿ ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ.
ಈ ಕುರಿತು ಜಿಎಸ್ ಟಿ ಕಾನೂನಿನಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಸೇರಿಸುವ ಕುರಿತು ಚರ್ಚಿಸಲಾಗಿದ್ದು, ತೆರಿಗೆ ವಂಚನೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಾನ್ ಜೋಸೆಫ್ ಭರವಸೆ ನೀಡಿದ್ದಾರೆ.
200 ಕೋಟಿ ರೂಪಾಯಿ ಜಿಎಸ್‌ಟಿ ವಂಚಕರು ಅರೆಸ್ಟ್!
ಗುಡ್ ನ್ಯೂಸ್: ಜಿಎಸ್ ಟಿ ಶ್ರೇಣಿ 4 ರಿಂದ 3ಕ್ಕೆ ಇಳಿಕೆ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.