ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

By Web DeskFirst Published Dec 13, 2018, 4:16 PM IST
Highlights

ಕಚ್ಚಾತೈಲ ದರದಲ್ಲಿ ಇಳಿಕೆಯಾದರೂ ಪೆಟ್ರೋಲ್ ದರ ಏರಿಕೆ ಯಾಕೆ?| ಎರಡು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.30 ರಷ್ಟು ಇಳಿಕೆಯಾದ ಕಚ್ಚಾತೈಲ| ಕಳೆದೊಂದು ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.2ರಷ್ಟು ಇಳಿಕೆ ಕಂಡ ಕಚ್ಚಾತೈಲ| ಆದರೂ ಪೆಟ್ರೋಲ್, ಡೀಸೆಲ್ ದರ ಏರಿಸುವ ನಿರ್ಧಾರ ಕೈಗೊಂಡ ತೈಲ ಕಂಪನಿಗಳು

ನವದೆಹಲಿ(ಡಿ.13): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದರೂ , ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡುವ ತೈಲ ಕಂಪನಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಕಳೆದ ವಾರದಲ್ಲಿ ಶೇ.2ರಷ್ಟು ಮತ್ತು ಕಳೆದ ಎರಡು ತಿಂಗಳಲ್ಲಿ ಶೇ.30ರಷ್ಟು ಕಡಿಮೆಯಾಗಿದೆ. ಆದರೂ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡಿರುವುದು ಏಕೆ ಎಂಬ ಪ್ರಶ್ನೆ ಮೂಡತೊಡಗಿದೆ.

ಇನ್ನು ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿದ್ದ ತೈಲದರ ಇದೀಗ ಹೆಚ್ಚಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಅಕ್ಟೋಬರ್ 16 ರಂದು ಹೆಚ್ಚಾಗಿತ್ತು. ಆ ನಂತರ ತೈಲ ದರದಲ್ಲಿ ಕೇವಲ ಇಳಿಕೆಯಷ್ಟೇ ಕಂಡು ಬಂದಿತ್ತು.

ಅದರಂತೆ ದೇಶದ ಮನಾಹಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರದತ್ತ ಗಮನ ಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್- 70.29 ರೂ.

ಡೀಸೆಲ್- 64.66 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್- 75.91 ರೂ.

ಡೀಸೆಲ್- 67.66 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್- 72.38 ರೂ.

ಡೀಸೆಲ್- 66.40 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್- 72.94 ರೂ.

ಡೀಸೆಲ್- 68.26  ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್- 70.86 ರೂ.

ಡೀಸೆಲ್- 65  ರೂ. 

click me!