ಕುಸಿದಿದ್ದ ದೇಶದ ಆರ್ಥಿಕತೆ ಈಗ ಮತ್ತಷ್ಟು ಚೇತರಿಕೆ!

By Suvarna NewsFirst Published Mar 2, 2021, 7:29 AM IST
Highlights

ಕುಸಿದಿದ್ದ ದೇಶದ ಆರ್ಥಿಕತೆ ಈಗ ಮತ್ತಷ್ಟು ಚೇತರಿಕೆ| ಸತತ 5ನೇ ತಿಂಗಳೂ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ| ಕಾರು, ಬೈಕ್‌ ಮಾರಾಟ ಶೇ.23ರಷ್ಟು ಭಾರಿ ಹೆಚ್ಚಳ| ಲಾಕ್‌ಡೌನ್‌ ವೇಳೆ .32000 ಕೋಟಿಗೆ ಕುಸಿದಿದ್ದ ಜಿಎಸ್‌ಟಿ ಸಂಗ್ರಹ| ಅಕ್ಟೋಬರ್‌ನಿಂದ ಪ್ರತಿ ತಿಂಗಳೂ ಲಕ್ಷ ಕೋಟಿ ರು. ತೆರಿಗೆ ಕಲೆಕ್ಷನ್‌| ಫೆಬ್ರವರಿಯಲ್ಲಿ 1.13 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ| 28 ದಿನದಲ್ಲಿ 3 ಲಕ್ಷ ಕಾರು, 6 ಲಕ್ಷ ಬೈಕ್‌, ಸ್ಕೂಟರ್‌ ಮಾರಾಟ

ನವದೆಹಲಿ(ಮಾರ್ಚ್ 03)

ಕೊರೋನಾ ವಿರುದ್ಧ 3ನೇ ಹಂತದ ಲಸಿಕಾ ಅಭಿಯಾನ ಆರಂಭವಾದ ಬೆನ್ನಲ್ಲೇ, ಇತ್ತಕಡೆ ದೇಶದ ಆರ್ಥಿಕತೆ ಮತ್ತೆ ಸರಿದಾರಿಗೆ ಮರಳಿರುವುದಕ್ಕೆ ಮತ್ತಷ್ಟುಸಾಕ್ಷ್ಯಗಳು ದೊರೆತಿವೆ. ಫೆಬ್ರವರಿ ತಿಂಗಳಲ್ಲಿ ಭರ್ಜರಿ 1.13 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದರೆ, ದೇಶದ ಆಟೋಮೊಬೈಲ್‌ ಕ್ಷೇತ್ರ ಕೂಡ ಶೇ.23ರಷ್ಟುಭರ್ಜರಿ ಏರಿಕೆ ಕಂಡಿರುವ ಶುಭ ಸುದ್ದಿ ಸೋಮವಾರ ಹೊರಬಿದ್ದಿದೆ.

ಕೊರೋನಾ ಲಾಕ್ಡೌನ್‌ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯು 2020-21ರ ಮೊದಲ ತ್ರೈಮಾಸಿಕದಲ್ಲಿ ಶೇ.- 23, 2ನೇ ತ್ರೈಮಾಸಿಕದಲ್ಲಿ ಶೇ.-7.50ರಷ್ಟುಕುಸಿತ ಕಂಡಿತ್ತು. ಆದರೆ ಮೂರನೇ ತ್ರೈಮಾಸಿಕದಲ್ಲಿ ಶೇ.0.4ರಷ್ಟುಬೆಳವಣಿಗೆ ಮೂಲಕ ಋುಣಾತ್ಮಕ ಸ್ಥಿತಿಯಿಂದ ಧನಾತ್ಮಕ ಬೆಳವಣಿಗೆ ಹಾದಿಗೆ ಮರಳಿತ್ತು. ಇನ್ನು 4ನೇ ತ್ರೈಮಾಸಿಕ ಇನ್ನಷ್ಟುಉತ್ತಮವಾಗಿರಲಿದೆ ಎಂಬ ಸರ್ಕಾರದ ಭರವಸೆಯ ನಡುವೆಯೇ ಹೊರಬಿದ್ದಿರುವ ಜಿಎಸ್‌ಟಿ ಸಂಗ್ರಹ ಮತ್ತು ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆ ಹೊಸ ಭರವಸೆ ಮೂಡಿಸಿದೆ. ಹೀಗಾಗಿಯೇ ‘ಇದು ಆರ್ಥಿಕತೆ ಪುನಶ್ಚೇತನದ ಸಂಕೇತ’ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಜಿಎಸ್‌ಟಿ ಏರಿಕೆ:

ಫೆಬ್ರವರಿ ತಿಂಗಳ ಜಿಎಸ್‌ಟಿ ಸಂಗ್ರಹ 1.13 ಲಕ್ಷ ಕೋಟಿ ರು. ತಲುಪಿದೆ. ಈ ಮೂಲಕ ಸತತ 5ನೇ ತಿಂಗಳು ಕೂಡ ಜಿಎಸ್‌ಟಿ ಸಂಗ್ರಹ ಲಕ್ಷ ಕೋಟಿ ರು.ನ ಗಡಿ ದಾಟಿದೆ. ಕಳೆದ ಜನವರಿಯಲ್ಲಿ 1.19 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿ ಹೊಸ ದಾಖಲೆ ನಿರ್ಮಾಣವಾಗಿತ್ತು. 2020ರ ಏಪ್ರಿಲ್‌ ತಿಂಗಳಲ್ಲಿ ಲಾಕ್ಡೌನ್‌ ಜಾರಿಯಾಗಿದ್ದ ವೇಳೆ ಜಿಎಸ್‌ಟಿ ಸಂಗ್ರಹ ದಾಖಲೆಯ 32172 ಕೋಟಿ ರು.ಗೆ ಕುಸಿದಿತ್ತು. ಬಳಿಕ ಅಕ್ಟೋಬರ್‌ನಿಂದ ಲಕ್ಷ ಕೋಟಿ ರು.ಗೂ ಹೆಚ್ಚಿನ ಜಿಎಸ್‌ಟಿ ಸಂಗ್ರಹ ಆರಂಭವಾಗಿ ಇದೀಗ 5ನೇ ತಿಂಗಳಿಗೂ ಅದು ವಿಸ್ತರಿಸಿದೆ.

ಭರ್ಜರಿ ಮಾರಾಟ:

ಕಳೆದ ವರ್ಷ ದಾಖಲೆಯ ಇಳಿಕೆ ಕಂಡಿದ್ದ ಕಾರು, ಬೈಕ್‌, ಪ್ರಯಾಣಿಕ ವಾಹನಗಳ ಮಾರಾಟ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಫೆಬ್ರವರಿ ತಿಂಗಳಿನಲ್ಲಿ ಬಹುತೇಕ ಎಲ್ಲಾ ವಲಯಗಳ ವಾಹನ ಮಾರಾಟದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫೆಬ್ರವರಿಯಲ್ಲಿ ದೇಶದ ಆಟೋಮೊಬೈಲ್‌ ಉದ್ಯಮ ಶೇ.23ರಷ್ಟುಏರಿಕೆ ಕಂಡಿದೆ. ಈ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ಕಾರು, 6 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ ಮಾರಾಟವಾಗಿವೆ.

ಮಾರುತಿ ಸುಝುಕಿ ಶೇ.11.8, ಹ್ಯುಂಡೈ ಮೋಟಾ​ರ್‍ಸ್ ಶೇ.29, ಟಾಟಾ ಮೋಟಾ​ರ್‍ಸ್ ಶೇ.119, ಮಹೀಂದ್ರಾ ಶೇ.40.71, ಟೊಯೋಟಾ ಶೇ.36, ಹೋಂಡಾ ಮೋಟ​​ರ್‍ಸ್​ ಶೇ.28, ಎಂ.ಜಿ ಮೋಟಾ​ರ್‍ಸ್ ಶೇ.214, ನಿಸಾನ್‌ ಶೇ.312, ಅಶೋಕ್‌ ಲೇಲ್ಯಾಂಡ್‌ ಶೇ.19ರಷ್ಟುಏರಿಕೆ ದಾಖಲಿಸಿದೆ.

ಇದೇ ವೇಳೆ ಬೈಕ್‌ ಮತ್ತು ಸ್ಕೂಟರ್‌ ಮಾರಾಟದಲ್ಲೂ ಭರ್ಜರಿ ಏರಿಕೆ ಕಂಡುಬಂದಿದೆ. ಹೋಂಡಾ ಮೋಟಾ​ರ್‍ಸ್ ಶೇ.29, ಟಿವಿ​ಎಸ್‌ ಮೋಟಾ​ರ್‍ಸ್ ಶೇ.18, ರಾಯಲ್‌ ಎನ್‌​ಫೀ​ಲ್ಡ್‌ ​ಶೇ.10, ಸುಝುಕಿ ​ಶೇ.5.4ರಷ್ಟುಪ್ರಗತಿ ದಾಖಲಿಸಿದೆ.

click me!