ಆನ್​ಲೈನ್​ ವಹಿವಾಟಿನಿಂದ ಬಯಲಾಗೋಯ್ತು ಪಾನೀಪುರಿ ಮಾರಾಟಗಾರನ ಗುಟ್ಟು! ಕೇಳಿದ್ರೆ ನೀವೂ ಸುಸ್ತು!

By Suchethana D  |  First Published Jan 3, 2025, 10:22 PM IST

 ಆನ್​ಲೈನ್​ ವಹಿವಾಟಿನಿಂದ ಬಯಲಾಗೋಯ್ತು ಪಾನೀಪುರಿ ಮಾರಾಟಗಾರನ ಗುಟ್ಟು! ಕೇಳಿದ್ರೆ ನೀವೂ ಸುಸ್ತು. ಅಂಥದ್ದೇನಾಗಿದೆ ನೋಡಿ..!
 


ಪಾನೀಪುರ ಮಾರಾಟಗಾರನ ಗುಟ್ಟೊಂದು ಆನ್​ಲೈನ್​ ವಹಿವಾಟಿನಿಂದ ಬಯಲಾಗಿ ಹೋಗಿದೆ. ಇದನ್ನು ಕೇಳಿದವರೂ  ಶಾಕ್​ ಆಗಿದ್ದಾರೆ. ಮಾತ್ರವಲ್ಲದೇ ಈ ಪಾನೀಪುರಿ ಮಾರಾಟಗಾರ ತನ್ನ ಕೆಲಸ ಮುಗಿಸಿ ಮನೆಗೆ ಹೋದಾಗ ಅಲ್ಲಿ ಬಂದಿರುವ ನೋಟಿಸ್​ ನೋಡಿ ಅವನೂ ಬೇಸ್ತು ಬಿದ್ದಿದ್ದಾನೆ!  ಈಗ ಏನಿದ್ದರೂ ಎಲ್ಲವೂ ಆನ್​ಲೈನ್​ ವ್ಯವಹಾರವೇ. ಒಂದು ರೂಪಾಯಿಯಿಂದ ಹಿಡಿದು ಲಕ್ಷ ಲಕ್ಷ ರೂಪಾಯಿಗಳವರೆಗೂ ಒಂದೇ  ಕ್ಲಿಕ್​ನಲ್ಲಿ ಆನ್​ಲೈನ್​ನಲ್ಲಿ ಹಣ ಕಳಿಸುವವರೇ ಜಾಸ್ತಿ. ಅದು ಎಲ್ಲಿಯವರೆಗೆ ಎಂದರೆ ಭಿಕ್ಷೆ ಬೇಡುವವ ಕೂಡ ಒಂದು ಕ್ಯೂಆರ್​ ಕೋಡ್​​ ಹಿಡಿದು ಬಂದು ಭಿಕ್ಷೆ ಬೇಡುವಷ್ಟರ ಮಟ್ಟಿಗೆ ಇಂದು ಡಿಜಿಟಲ್​ ವ್ಯವಹಾರ ನಡೆಯುತ್ತಿದೆ. ಯಾರ ಬಳಿಯೂ ನಗದು ಹಣವೇ ಇರುವುದಿಲ್ಲ. ಯಾರ ಬಳಿಯಾದರೂ ದುಡ್ಡು ನೋಡಿದರೆ ಆಶ್ಚರ್ಯ  ಪಡುವಷ್ಟರ ಮಟ್ಟಿಗೆ ಇಂದು ಆನ್​ಲೈನ್​ ವ್ಯವಹಾರ ನಡೆಯುತ್ತಿದೆ. 

ಆದರೆ ಇದೇ ವ್ಯವಹಾರ ಈಗ ಪಾನೀಪುರಿ ಮಾರಾಟಗಾರನಿಗೆ ಫಜೀತಿ ತಂದಿದೆ. ಅಷ್ಟಕ್ಕೂ ಯುಪಿಐ ಪೇಮೆಂಟ್​ ಉದ್ದೇಶವೂ ಒಂದು ರೀತಿಯಲ್ಲಿ ಇದೇ ಆಗಿದೆ. ತೆರಿಗೆ ಕಟ್ಟುವವರು ಮಾಸಿಕ ಸಂಬಳ ಪಡೆಯುವವರಷ್ಟೇ ಸದ್ಯ ಆಗಿದ್ದಾರೆ. ಸಂಬಳ ಎಷ್ಟೇ ಇದ್ದರೂ ಟ್ಯಾಕ್ಸ್​ ಕಟ್ಟಾಗಿಯೇ ಬರುತ್ತದೆ. ಅದನ್ನು ಬಿಟ್ಟರೆ ದೊಡ್ಡ ದೊಡ್ಡ ಉದ್ಯಮಿಗಳು ಟ್ಯಾಕ್ಸ್​ ಕಟ್ಟಬೇಕು. ಕೊಳ್ಳುವ ಎಲ್ಲಾ ವಸ್ತುಗಳು ತೆರಿಗೆಯನ್ನು ಸೇರಿಸಿಯೇ ಇರುತ್ತದೆಯಾದರೂ, ತಿಂಗಳು ತಿಂಗಳು ಇಂತಿಷ್ಟು ತೆರಿಗೆ ಕಟ್ಟುವವರು ಸಂಬಳದಾರರು ಮಾತ್ರ ಆಗಿದ್ದಾರೆ. ಚಿಕ್ಕ ಪುಟ್ಟ ಉದ್ಯಮಿಗಳು ಇದರಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ಇದೀಗ ಪಾನೀಪುರಿ ಮಾರಾಟಗಾರನಿಗೆ ಶಾಕ್​ ನೀಡುವ ಘಟನೆ ನಡೆದಿದೆ.

Tap to resize

Latest Videos

ಇನ್ಮುಂದೆ ಈ 20ಕ್ಕೂ ಅಧಿಕ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ: ನಿಮ್ಮ ಫೋನ್​ ಇದ್ಯಾ ಚೆಕ್​ ಮಾಡಿಕೊಳ್ಳಿ...

ಅದೇನೆಂದರೆ, ತಮಿಳುನಾಡಿನ ಪಾನೀಪುರ ಮಾರಾಟಗಾರನ ದುಡಿಮೆ 40 ಲಕ್ಷ ರೂಪಾಯಿ ದಾಟಿದೆ! ಯುಪಿಐನಿಂದ ಈ ಗುಟ್ಟು ರಟ್ಟಾಗಿ ಹೋಗಿದೆ. ಇದೇ ಕಾರಣಕ್ಕೆ ಜಿಎಸ್​ಟಿಯಿಂದ ಈತನಿಗೆ ಸಮನ್ಸ್​ ನೀಡಲಾಗಿದೆ.  ಮಾರಾಟಗಾರನ UPI ಪಾವತಿಗಳನ್ನು ಸರ್ಕಾರ ಟ್ರ್ಯಾಕ್ ಮಾಡಿದೆ. 40 ಲಕ್ಷ ಆದಾಯ ಬಂದಿರುವುದು ತಿಳಿದಿರುವ ಹಿನ್ನೆಲೆಯಲ್ಲಿ ತಮಿಳುನಾಡು GST ಇಲಾಖೆಯು ಸಮನ್ಸ್​ ಜಾರಿ ಮಾಡಿದೆ.  ಪ್ರಮುಖ ಪಾವತಿ ಗೇಟ್‌ವೇಗಳು, Razorpay ಮತ್ತು PhonePe ನಿಂದ ಪಡೆದ ವಹಿವಾಟಿನ ವರದಿಗಳನ್ನು ಆಧರಿಸಿ ತಮಿಳುನಾಡು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.  ಮಾರಾಟಗಾರನು GST ಕಾಯ್ದೆ ಅಡಿಯಲ್ಲಿ ನಮೂದಿಸಲಾದ  ಮಿತಿಯನ್ನು ಮೀರಿದ ಸರಕು ಮತ್ತು ಸೇವೆಗಳ ಹೊರಗಿನ ಪೂರೈಕೆಗಾಗಿ ಪಾವತಿಗಳನ್ನು ಸ್ವೀಕರಿಸಿದ್ದಾನೆ ಎನ್ನುವ ಕಾರಣಕ್ಕೆ ಆತನ ಆದಾಯದ ಮೇಲೆ ಜಿಎಸ್​ಟಿ ಹಾಕಲಾಗಿದೆ.

 GST ಕಾಯ್ದೆಯ ಸೆಕ್ಷನ್ 22(1) ರ ಅಡಿಯಲ್ಲಿ, ಸರಕು ಅಥವಾ ಸೇವೆಗಳ ಪೂರೈಕೆಯಲ್ಲಿ ತೊಡಗಿರುವ ಯಾವುದೇ ಪೂರೈಕೆದಾರರು ತಮ್ಮ ಒಟ್ಟು ವಹಿವಾಟು ನಿಗದಿತ ಮೊತ್ತಕ್ಕಿಂತ ಹೆಚ್ಚಿದ್ದರೆ GST ನೋಂದಣಿಯನ್ನು ಪಡೆಯಬೇಕಾಗುತ್ತದೆ. ಆರ್ಥಿಕ ವರ್ಷದಲ್ಲಿ 20 ಲಕ್ಷ ರೂ. ತೆರಿಗೆ ಮೂಲವನ್ನು ವಿಸ್ತರಿಸಲು ಮತ್ತು ಆದಾಯ ಸೋರಿಕೆಯನ್ನು ನಿಯಂತ್ರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಡಿಜಿಟಲ್ ಪಾವತಿ ಡೇಟಾವನ್ನು ನಿಯಂತ್ರಿಸುವುದು ಹೆಚ್ಚಿನ ವ್ಯವಹಾರಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತರಲು ಅಂತಹ ಒಂದು ಕ್ರಮವಾಗಿದೆ. ಈಗ ಸದ್ಯ ಈತನಿಗೆ ನೀಡಿರುವ ಜಿಎಸ್‌ಟಿ ನೋಟಿಸ್​ ಕೇವಲ ಸಮನ್ಸ್ ಆಗಿದೆಯೇ ಹೊರತು ಬೇಡಿಕೆಯ ಆದೇಶವಲ್ಲ. ಈ ಬಗ್ಗೆ ಮಾರಾಟಗಾರನ ಅಹವಾಲನ್ನು ಆಲಿಸಲಾಗುವುದು ಎಂದು ಮೂಲಗಳು ಹೇಳಿವೆ. 

ಗೊತ್ತಿಲ್ದೇ ಆ ಲಿಂಕ್​ ಒತ್ತಿಬಿಟ್ಟೆ... ಆಮೇಲೆ ನೋಡಿದ್ರೆ... ಗಂಡಂಗೂ ಹೇಳದ ಎಡವಟ್ಟನ್ನು ತೆರೆದಿಟ್ಟ ನಟಿ ಕಾವ್ಯಾ ಶಾ!

click me!