ಪರ್ಸನಲ್ ಲೋನ್ ಪಡೆಯಲು ಆರ್‌ಬಿಐ ಹೊಸ ನಿಯಮ,ಬದಲಾವಣೆ ಏನು?

By Chethan Kumar  |  First Published Jan 3, 2025, 4:20 PM IST

ಪರ್ಸನಲ್ ಲೋನ್ ಬೇಕಿತ್ತಾ? ಈಗಾಗಲೇ ಸಾಲ ಪಡೆದಿದ್ದೀರಾ? ಹೊಸ ವರ್ಷದಿಂದ ಭಾರತೀ ರಿಸರ್ವ್ ಬ್ಯಾಂಕ್ ನಿಯಮ ಬದಲಿಸಿದೆ. ಪರ್ಸನಲ್ ಲೋನ್ ನಿಯಮ ಬಿಗಿಯಾಗಿದೆ. ಇದೀಗ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಪರ್ಸನಲ್ ಲೋನ್ ಸಿಗಲ್ಲ. 


ನವದೆಹಲಿ(ಜ.03) ಪರ್ಸನಲ್ ಲೋನ್ ಬೇಕಾ ಎಂದು ಪದೇ ಪದೇ ಫೋನ್ ಕಾಲ್ ಬರುತ್ತಲೇ ಇರುತ್ತದೆ. ಇನ್‌ಸ್ಟಾಂಟ್ ಲೋನ್, ಯಾವುದೇ ದಾಖಲೆ ಬೇಡ, ತಕ್ಷಣವೇ ಖಾತೆಗೆ ಹಣ ವರ್ಗಾವಣೆ, ಮಾಸಿಕ ಕಂತು ಪಾವತಿಗರೆ ಮುಗೀತು. ಈ ರೀತಿ ಬ್ಯಾಂಕ್ ಲೋನ್ ವಿಭಾದದ ಸಿಬ್ಬಂದಿಗಳು ಕರೆ ಮಾಡುತ್ತಾರೆ. ಪರ್ಸನಲ್ ಲೋನ್ ಇತರ ಎಲ್ಲಾ ಸಾಲಕ್ಕಿಂತ ಸುಲಭವಾಗಿ ಪಡೆಯಲು ಸಾಧ್ಯವಿದೆ. ಇತರ ಸಾಲಗಳಿಗೆ ಹೆಚ್ಚಿನ ದಾಖಲೆಗಳ ಅವಶ್ಯಕತೆ ಇದೆ. ಆದರೆ ಪರ್ಸನಲ್ ಲೋನ್, ಖಾತೆದಾರರ ವೇತನ ಆಧಾರ, ವಹಿವಾಟು ಆಧಾರ, ಸಿಬಿಲ್ ಸ್ಕೋರ್ ಸೇರಿದಂತೆ ಹಲವು ಆಧಾರಗಳ ಮೇಲೆ ಪಡೆಯಲು ಸಾಧ್ಯವಿದೆ. ಇಷ್ಟೇ ಅಲ್ಲ ಒಂದು ಬ್ಯಾಂಕ್‌ನಿಂದ ಸಾಲ ಪಡೆದ ಬಳಿಕ ತುರ್ತು ಅಗತ್ಯವಿದ್ದರೆ, ಮತ್ತೊಂದು ಬ್ಯಾಂಕ್‌ನಿಂದಲೂ ಸಾಲು ಪಡೆಯಲು ಸಾಧ್ಯವಿದೆ. ಆದರೆ ಹೊಸ ವರ್ಷದಿಂದ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ.

ಪರ್ಸನಲ್ ಲೋನ್‌ನಲ್ಲಿರುವ ನಿಯಮದಲ್ಲಿನ ಸಣ್ಣ ಲೋಪಗಳಿಂದ ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಈ ಅವಕಾಶ ಬಳಸಿ ಹೆಚ್ಚು ಸಾಲ ಪಡೆದು ದಿವಾಳಿಯಾಗುವ, ಸಾಲ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮದಲ್ಲಿ ಪರ್ಸನಲ್ ಲೋನ್ ಮೇಲೆ ಮೂಗುದಾರ ಹಾಕಲಾಗಿದೆ.

Tap to resize

Latest Videos

ನೀವು ಸಾಲ ಮರುಪಾವತಿಸಿಲ್ಲವೇ? ಗುಡ್ ನ್ಯೂಸ್ ಕೊಟ್ಟ ಆರ್‌ಬಿಐ!

ಆರ್‌ಬಿಐ ಹೊಸ ನಿಯಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್‌ಗಳು ಅಥವಾ ಇತರ ಸಂಸ್ಥೆಗಳು ಸಾಲ ಪಡೆದವನ ಮಾಹಿತಿ, ಸಾಲದ ಮೊತ್ತ, ಸಿಬಿಲ್ ಸ್ಕೋರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು 15 ದಿನಗಳ ಒಳಗೆ ಅಪ್‌ಡೇಟ್ ಮಾಡಬೇಕ. ಇದುವರೆಗೆ 30 ದಿನಗಳ ಕಾಲಾವಕಾಶವಿತ್ತು. ಆದರೆ ಇದೀಗ ಕೇವಲ 15ದಿನಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಏಕಕಾಲಕ್ಕೆ ವಿವಿಧ ಬ್ಯಾಂಕ್‌ಗಳಲ್ಲಿ ಪರ್ಸನಲ್ ಲೋನ್ ಪಡೆಯುವುದು ತಪ್ಪಲಿದೆ ಎಂದು ಆರ್‌ಬಿಐ ಹೇಳಿದೆ.

ಇದುವರೆಗೆ ಸಾಲ ಪಡೆದ 40 ದಿನಗಳ ಬಳಿಕವೇ ಮತ್ತೊಂದು ಸಾಲ ನೀಡುವ ಬ್ಯಾಂಕ್‌ಗೆ ಈ ಕುರಿತು ಮಾಹಿತಿಗಳು ಲಭ್ಯವಾಗುತ್ತಿತ್ತು. ಇದರಿಂದ ಹಲವರು ಒಂದು ಬ್ಯಾಂಕ್‌ನಿಂದ ಪರ್ಸನಲ್ ಲೋನ್ ಪಡೆದು, ಮತ್ತೊಂದು ಬ್ಯಾಂಕ್‌ಲ್ಲೂ ಅರ್ಜಿ ಹಾಕಿ ಸಾಲ ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದೆ. ಒಂದು ಪರ್ಸನಲ್ ಲೋನ್ ಪಡೆದ ಬಳಿಕ ಇನ್ಯಾವುದೇ ಬ್ಯಾಂಕ್‌ನಲ್ಲಿ ಅದೇ ವ್ಯಕ್ತಿಗ, ಅದೇ ಸಮಯದಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಒಂದು ಪರ್ಸನಲ್ ಲೋನ್ ಚಾಲ್ತಿಯಲ್ಲಿರುವಾಗ ಮತ್ತೊಂದು ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಆರ್‌ಬಿಐ ನಿಯಮ ಬಿಗಿ ಗೊಳಿಸಿದೆ.

ಪರ್ಸನಲ್ ಲೋನ್ ಪಡೆದ ಬಳಿಕ ಬೇರೆ ಮನೆ ಸಾಲ, ವಾಹನ ಸಾಲ ಸೇರಿದಂತೆ ಬೇರೆ ಸಾಲ ಪಡೆಯಲು ಅವಕಾಶವಿದೆಯಾ ಅನ್ನೋ ಪ್ರಶ್ನೆ ಇಲ್ಲಿ ಮೂಡುತ್ತದೆ. ಇದಕ್ಕೂ ಆರ್‌ಬಿಐ ಉತ್ತರ ನಿಡಿದೆ. ಉದಾಹರಣೆಗೆ ಪರ್ಸನಲ್ ಲೋನ್ ಪಡೆದ ಬಳಿಕ ಕಾರು ಸಾಲ ಅಥವಾ ಇನ್ಯಾವುದೇ ಇತರ ಸಾಲ ಪಡೆಯಲು ಅವಕಾಶವಿದೆ. ಆದರೆ ಸಾಲ ಪಡೆಯುವವನ ಆದಾಯ, ತೆಗೆದುಕೊಂಡಿರುವ ಸಾಲಕ್ಕೆ ಕಟ್ಟುತ್ತಿರುವ ಇಎಂಐ ಸೇರಿದಂತೆ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಬ್ಯಾಂಕ್ ಇದಕ್ಕಾಗಿ ಅನುಪಾತ ನಿಯಮವಿದೆ. ಈ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ.

ಕ್ಷಿಪ್ರಗತಿಯಲ್ಲಿ ಸಾಲ ಪಡೆದವರ ಮಾಹಿತಿಗಳು ಅಪ್‌ಡೇಟ್ ಆಗಬೇಕು. ಇದರಿಂದ ಯಾವುದೇ ಬ್ಯಾಂಕ್‌ಗಳಿಗೆ ಸಾಲಕ್ಕೆ ಅರ್ಜಿ ಬಂದಾಗ ಸಂಪೂರ್ಣ ಮಾಹಿತಿ ಸಿಗಲಿದೆ. ಇದರಿಂದ ಸಾಲ ನೀಡಬೇಕೋ ಬೇಡವೋ ಅನ್ನೋ ನಿರ್ಧಾರಕ್ಕೆ  ಸುಲಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಆರ್‌ಬಿಐ ಹೊಸ ನಿಯಮ, ಇನ್ಮುಂದೆ ಹಣ ವರ್ಗಾಯಿಸುವಾಗ ತಪ್ಪಿ ಇನ್ಯಾರಿಗೋ ಹೋಗಲ್ಲ
 

click me!