Import Duty On Palm Oil:ತಗ್ಗಲಿದೆ ಅಡುಗೆ ಎಣ್ಣೆ ಬೆಲೆ; ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

By Suvarna News  |  First Published Dec 22, 2021, 1:40 PM IST

*ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಇಳಿಕೆ ಮಾಡಲು ಆಮದು ಸುಂಕ ಕಡಿತಗೊಳಿಸಿದ ಸರ್ಕಾರ
* ತಾಳೆ ಎಣ್ಣೆ ಮೇಲಿನ ಆಮದು ಸುಂಕ ಶೇ.17.5 ರಿಂದ ಶೇ. 12.5ಕ್ಕೆ ಇಳಿಕೆ 
*ಈ ಪರಿಷ್ಕೃತ ಮೂಲ ಆಮದು ಸುಂಕ 2022ರ ಮಾರ್ಚ್ ಕೊನೆಯ ತನಕ ಜಾರಿಯಲ್ಲಿರುತ್ತೆ


ನವದೆಹಲಿ (ಡಿ.22):  ಅಡುಗೆ ಎಣ್ಣೆ ಬೆಲೆಯೇರಿಕೆಯಿಂದ ತತ್ತರಿಸಿದ್ದ ಗೃಹಿಣಿಯರಿಗೆ ಕೊಂಚ ನೆಮ್ಮದಿ ನೀಡುವಂತಹ ಸುದ್ದಿಯನ್ನು ಸರ್ಕಾರ ನೀಡಿದೆ. ಸಂಸ್ಕರಿಸಿದ ತಾಳೆ ಎಣ್ಣೆ (palm oil)ಮೇಲಿನ ಆಮದು ಸುಂಕವನ್ನು ( customs duty) ಕೇಂದ್ರ ಸರ್ಕಾರ (Central government) ಶೇ.17.5 ರಿಂದ ಶೇ. 12.5 ಕ್ಕೆ ಇಳಿಕೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಪೂರೈಕೆ ಹೆಚ್ಚಿಸಲು ಹಾಗೂ ಅಡುಗೆ ಎಣ್ಣೆ ಚಿಲ್ಲರೆ ದರ (retail price) ಇಳಿಕೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಪರಿಷ್ಕೃತ ಮೂಲ ಆಮದು ಸುಂಕ (Basic Customs Duty)2022ರ ಮಾರ್ಚ್ ಕೊನೆಯ ತನಕ ಜಾರಿಯಲ್ಲಿರುತ್ತದೆ.

ಸರ್ಕಾರ ವ್ಯಾಪಾರಿಗಳಿಗೆ ಪರವಾನಗಿ ( licence)ಇಲ್ಲದೆ ಸಂಸ್ಕರಿಸಿದ ತಾಳೆ ಎಣ್ಣೆ (palm oil) ರಫ್ತು ಮಾಡಲು ಇನ್ನೂ ಒಂದು ವರ್ಷ ಅಂದ್ರೆ 2022ರ ಡಿಸೆಂಬರ್ ತನಕ ಅನುಮತಿ ನೀಡಿದ ಒಂದು ದಿನದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿರೋದು ಗಮನಾರ್ಹ.ಇನ್ನು ಇತ್ತೀಚೆಗಷ್ಟೇ ಸರ್ಕಾರ ಕಚ್ಚಾ ತಾಳೆ ಎಣ್ಣೆ  (crude palm oil) ಸೇರಿದಂತೆ ಏಳು ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಹೊಸ ಒಪ್ಪಂದಕ್ಕೆ ನಿರ್ಬಂಧ ವಿಧಿಸಿತ್ತು. ಈ ಮೂರು ಕ್ರಮಗಳನ್ನು ಸರ್ಕಾರ ಹಣದುಬ್ಬರ ಏರಿಕೆಯಾಗುತ್ತಿರೋ ಸಮಯದಲ್ಲೇ ಕೈಗೊಂಡಿದೆ. ಅಂದ್ರೆ ದೇಶದಲ್ಲಿ ಹೆಚ್ಚುತ್ತಿರೋ ಹಣದುಬ್ಬರ (Inflation)ನಿಯಂತ್ರಿಸೋ ಉದ್ದೇಶದಿಂದ ಸರ್ಕಾರ ಈ ನಿಯಮಗಳನ್ನು ಜಾರಿಗೊಳಿಸಿದೆ.

Tap to resize

Latest Videos

undefined

Edible oil prices;ಪೆಟ್ರೋಲ್ ಡೀಸೆಲ್ ದರ ಕಡಿತ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಸಿದ ಕೇಂದ್ರ!

ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಕ್ಕೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರೋ ಕೇಂದ್ರ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಮಂಡಳಿ (CBIC),'ಸಂಸ್ಕರಿಸಿದ ತಾಳೆ ಎಣ್ಣೆ ಹಾಗೂ ಅದರ ಉಪ ಉತ್ಪನ್ನಗಳ ಮೇಲಿನ ಮೂಲ ಆಮದು ಸುಂಕವನ್ನು (Basic Customs Duty) 2022ರ ಮಾರ್ಚ್ 31ರ ತನಕ ಶೇ.17.5 ರಿಂದ ಶೇ.12.5ಕ್ಕೆ ಇಳಿಕೆ ಮಾಡಲಾಗಿದೆ' ಎಂದು ತಿಳಿಸಿದೆ. ಅಲ್ಲದೆ, ಈ ಹೊಸ ದರವು ಡಿ.21ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದೆ.

ಆಮದು ಸುಂಕ ಕಡಿತದಿಂದ ಸಂಸ್ಕರಿಸಿದ ತಾಳೆ ಎಣ್ಣೆ ಹಾಗೂ ಪಾಮೊಲಿನ್ ಆಯಿಲ್ ಎರಡರ ಮೇಲಿನ ಸಮಾಜ ಕಲ್ಯಾಣ ತೆರಿಗೆ ಸೇರಿದಂತೆ ಎಲ್ಲ ತೆರಿಗೆಗಳು ಶೇ.19.25ರಿಂದ ಶೇ.13.75 ಕ್ಕೆ ಇಳಿಕೆಯಾಗಲಿವೆ ಎಂದು ಅಡುಗೆ ಎಣ್ಣೆ ಉತ್ಪಾದನಾ ಉದ್ಯಮಗಳ ಸಂಘಟನೆ  SEA ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ತಿಳಿಸಿದ್ದಾರೆ. ಆಮದು ಸುಂಕ ಕಡಿತದಿಂದ ದೇಶೀಯ ತಾಳೆ ಎಣ್ಣೆ ಉತ್ಪಾದಕರಿಗೆ ಹೊಡೆತ ಬೀಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಅಡುಗೆಎಣ್ಣೆ ಬೆಲೆ ಇಳಿಕೆ ಬಗ್ಗೆ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ನಾವು ಅಡುಗೆ ಎಣ್ಣೆ ಸೇರಿದಂತೆ ಕೆಲವು ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿದ್ದೇವೆ' ಎಂದು ತಿಳಿಸಿದ್ದರು.

GST On Food Delivery Apps:ಜ.1ರಿಂದ ಬದಲಾಗಲಿದೆ Swiggy, Zomato ಮೇಲಿನ ತೆರಿಗೆ ನೀತಿ

ಕಚ್ಚಾ ಹಾಗೂ ಸಂಸ್ಕರಿಸಿದ ಅಡುಗೆ ಎಣ್ಣೆಗಳ ಬೆಲೆಯೇರಿಕೆ ನಿಯಂತ್ರಣಕ್ಕೆ ಸರ್ಕಾರ ಈ ವರ್ಷ ಅನೇಕ ಬಾರಿ ಆಮದು ಸುಂಕವನ್ನು ಕಡಿತಗೊಳಿಸಿದೆ. ಈ ಬಾರಿಗೂ ಮೊದಲು ಅಕ್ಟೋಬರ್ 14ರಂದು ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.ಭಾರತದ ಅಡುಗೆ ಎಣ್ಣೆ ಒಟ್ಟು ಬಳಕೆ 22-22.5 ಮಿಲಿಯನ್ ಟನ್ ಗಳಲ್ಲಿ ಶೇ.65ರಷ್ಟು ಆಮದಿನ ಮೇಲೆ ಅವಲಂಬಿತವಾಗಿದೆ ಎಂದು SEA ಹೇಳಿದೆ. ದೇಶದಲ್ಲಿ ಎಣ್ಣೆ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ತಗ್ಗಿಸಲು ಸರ್ಕಾರ 13-15 ಮಿಲಿಯನ್ ಟನ್ ಅಡುಗೆ ಎಣ್ಣೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. 


 

click me!