Gold Silver Price:ಬಂಗಾರಪ್ರಿಯರಿಗೆ ಇಂದು ಕೂಡ ಖುಷಿ; ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರ ಏರಿಕೆ

Suvarna News   | Asianet News
Published : Dec 22, 2021, 12:05 PM ISTUpdated : Dec 22, 2021, 02:40 PM IST
Gold Silver Price:ಬಂಗಾರಪ್ರಿಯರಿಗೆ ಇಂದು ಕೂಡ ಖುಷಿ; ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರ ಏರಿಕೆ

ಸಾರಾಂಶ

ಬೆಂಗಳೂರಿನಲ್ಲಿ ನಿನ್ನೆ ಇಳಿಕೆ ದಾಖಲಿಸಿದ್ದ ಚಿನ್ನದ ಬೆಲೆ ಇಂದು ಕೂಡ ಅದೇ ಹಾದಿಯಲ್ಲಿ ಸಾಗಿರೋದು ಚಿನ್ನ ಖರೀದಿಗೆ ಮುಂದಾಗಿರೋರಿಗೆ ಖುಷಿ ನೀಡಿದೆ. ಆದ್ರೆ ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿ ದರ ಮಾತ್ರ ಇಂದು ಏರಿಕೆಯಾಗಿದೆ. 

ಬೆಂಗಳೂರು (ಡಿ.22): ಚಿನ್ನ(Gold)ಹಾಗೂ ಬೆಳ್ಳಿ (Silver) ಬೆಲೆಯಲ್ಲಿ ಹಾವೇಣಿ ಆಟ ಸಹಜ. ಕೊರೋನಾ ಬಳಿಕ ಏರುಮುಖ ದಾಖಲಿಸಿದ  ಚಿನ್ನದ ಬೆಲೆ ಈ ವರ್ಷದ ಪ್ರಾರಂಭದಲ್ಲಿ ಇಳಿಕೆ ದಾಖಲಿಸಿತು. ಆದ್ರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಒಂದು ದಿನ ಏರಿಕೆಯಾದ್ರೆ ಮತ್ತೊಂದು ದಿನ ಇಳಿಕೆಯಾಗೋ ಮೂಲಕ ಚಿನ್ನ ಖರೀದಿಗೆ ಯೋಚಿಸುತ್ತಿರೋರಿಗೆ ಗೊಂದಲ ಮೂಡಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರೋ ಹಣದುಬ್ಬರ(Inflation), ಷೇರು ಮಾರುಕಟ್ಟೆಯಲ್ಲಿನ(Stock Market) ಅಸ್ಥಿರತೆ ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ.ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ದಿನೇದಿನೆ ಹೆಚ್ಚಳವಾಗುತ್ತಿರೋದು ಕೂಡ ಚಿನ್ನದ ಬೇಡಿಕೆ ಹಾಗೂ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಈ ನಡುವೆ ಬೆಂಗಳೂರು ಸೇರಿದಂತೆ ದೇಶದ ಕೆಲವು ನಗರಗಳಲ್ಲಿ ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ  ಇಂದು ಕೂಡ ಅದೇ ದಾರಿಯಲ್ಲಿ ಮುಂದುವರಿದಿದೆ. ಇದು ಬಂಗಾರ ಖರೀದಿಸಲು ಮುಂದಾಗಿರೋರಿಗೆ ಕೊಂಚ ನೆಮ್ಮದಿ ತರಿಸಿದೆ. ಇನ್ನು ನಿನ್ನೆ ಇಳಿಕೆ ದಾಖಲಿಸಿದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ. ಹಾಗಾದ್ರೆ ಇಂದು (ಡಿ.22) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  45,300ರೂ. ಇದ್ದು, ಇಂದು  45,290ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,420ರೂ. ಇದ್ದು, ಇಂದು 49, 410ರೂ. ಇದೆ. ಅಂದ್ರೆ 10ರೂ. ಇಳಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 500ರೂ. ಏರಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,400ರೂ. ಇದ್ರೆ ಇಂದು 61,900ರೂ. ಇದೆ.

Petrol Diesel Rate: ಹಣದುಬ್ಬರ ಏರಿಕೆ ಇಂಧನ ದರದ ಮೇಲೆ ಪರಿಣಾಮ ಬೀರಿದೆಯಾ? ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  47,450ರೂ. ಇತ್ತು.ಇಂದು 47,460ರೂ.ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ. ನಿನ್ನೆ 51, 700ರೂ. ಇದ್ದ ಚಿನ್ನದ ದರ ಇಂದು 51,690ರೂ.ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 500ರೂ. ಏರಿಕೆಯಾಗಿದೆ. ನಿನ್ನೆ 61,400ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 61,900ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ (Mumbai) ಕೂಡ ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,410ರೂ.ಇದ್ದು, ಇಂದು 47,400ರೂ.ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,410ರೂ. ಇತ್ತು, ಇಂದು  48,400ರೂ. ಇದೆ.  ಬೆಳ್ಳಿ ದರದಲ್ಲಿಇಂದು 500ರೂ. ಏರಿಕೆಯಾಗಿದೆ.ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,400ರೂ. ಇದ್ದು, ಇಂದು 500ರೂ. ಏರಿಕೆಯಾಗಿ 61,900ರೂ.ಆಗಿದೆ.  

NPS Scheme :ನಿಮ್ಮ ಪತ್ನಿ ಲಕ್ಷಾಧಿಪತಿಯಾಗ್ಬೇಕೆಂದ್ರೆ ಈ ಖಾತೆಯಲ್ಲಿ ಹಣ ಹೂಡಿ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) ಇಂದು ಚಿನ್ನದ ದರದಲ್ಲಿ10ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45, 530ರೂ.ಇದೆ. ನಿನ್ನೆ 45,540ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,680ರೂ. ಇದ್ದು, ಇಂದು 10ರೂ. ಇಳಿಕೆಯಾಗಿ 49,670ರೂ. ಆಗಿದೆ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 600ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 65,800ರೂ.ಇದೆ.   

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮಂಡ್ಯದಲ್ಲಿ ಅಮೆರಿಕದ ಸೆಮಿಕಂಡಕ್ಟರ್ ಘಟಕಕ್ಕೆ 100 ಎಕರೆ ಭೂಮಿ ಗುರುತು: ಕೆಐಎಡಿಬಿಗೆ ಸೂಚನೆ
ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ: ದಾಖಲಿಸಿದ ಒಟ್ಟು ಹಣ ಎಷ್ಟು?