5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್!

Published : Jul 22, 2018, 09:41 PM IST
5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್!

ಸಾರಾಂಶ

5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್ ಪ್ಯಾಕೇಜ್ ಬಿಡುಗಡೆಗೆ ನಿರ್ಧರಿಸಿದ ಕೇಂದ್ರ  ಪಿಎನ್‌ಬಿ ಗೆ  28.16 ಬಿಲಿಯನ್ ರೂ.  ಸಂಸತ್ ನಿಂದ ಪ್ರತ್ಯೇಕ ಅನುಮೋದನೆ ಅಗತ್ಯ

ನವದೆಹಲಿ(ಜು.22): ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 5 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 113 ಬಿಲಿಯನ್ ರೂ. ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಒಂದು ವಾರದಲ್ಲಿ 5 ಸ್ಟೇಟ್ ಬ್ಯಾಂಕ್‌ಗಳಿಗೆ ಒಟ್ಟು 113.36 ಬಿಲಿಯನ್ ರೂಪಾಯಿ (1.65 ಬಿಲಿಯನ್ ಡಾಲರ್) ನಷ್ಟು ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ವೊಂದಕ್ಕೆ 28.16 ಬಿಲಿಯನ್ ರೂ. ನಷ್ಟು ಬಂಡಾವಳ ಹೂಡಿಕೆ ಮಾಡಲಾಗುತ್ತದೆ. 

ಜೊತೆಗೆ ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಅಲ್ಲಹಾಬಾದ್ ಬ್ಯಾಂಕ್‌ಗಳಿಗೂ ಹೊಸದಾಗಿ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಹೂಡಿಕೆ ಕಳೆದ ವರ್ಷ ಘೋಷಿಸಲಾಗಿದ್ದ 2.11 ಟ್ರಿಲಿಯನ್ ರೂಪಾಯಿ ಪ್ಯಾಕೇಜ್‌ನ ಭಾಗವಾಗಿದ್ದು, ಸಂಸತ್ತಿನ ಪ್ರತ್ಯೇಕ ಅನುಮೋದನೆ ಅಗತ್ಯವಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!