ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಸರ್ಕಾರ, ದೇಶದ ಪ್ರತಿ ಕೆಲಸಗಾರರಿಗೂ ಸಿಗಲಿದೆ ಲಾಭ

Published : Feb 26, 2025, 10:53 PM ISTUpdated : Feb 27, 2025, 10:02 AM IST
ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಸರ್ಕಾರ, ದೇಶದ ಪ್ರತಿ ಕೆಲಸಗಾರರಿಗೂ ಸಿಗಲಿದೆ ಲಾಭ

ಸಾರಾಂಶ

ಕೇಂದ್ರ ಸರ್ಕಾರವು ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಅಸಂಘಟಿತ ವಲಯದ ನೌಕರರು ಸೇರಿದಂತೆ ಎಲ್ಲರಿಗೂ ಪಿಂಚಣಿ ಸೌಲಭ್ಯ ಒದಗಿಸಲಿದೆ. ಪ್ರಸ್ತುತ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಇದರಿಂದ ತೊಂದರೆಯಾಗುವುದಿಲ್ಲ. ಅಟಲ್ ಪಿಂಚಣಿ ಯೋಜನೆ, ಶ್ರಮ ಯೋಗಿ ಮಾನ್ ಧನ್ ಯೋಜನೆ ಮತ್ತು ರೈತರಿಗಾಗಿ ಕಿಸಾನ್ ಮಾನ್ ಧನ್ ಯೋಜನೆಗಳು ಸಹ ಜಾರಿಯಲ್ಲಿವೆ. ಏಕೀಕೃತ ಪಿಂಚಣಿ ಯೋಜನೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಎಲ್ಲ ಕೆಲಸಗಾರರಿಗೆ ಕೇಂದ್ರ ಸರ್ಕಾರ (Central Govt) ಖುಷಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಬರೀ ಸರ್ಕಾರಿ ನೌಕರರು ಮಾತ್ರವಲ್ಲ ದೇಶದ ಎಲ್ಲ ನೌಕರರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಅಸಂಘಟಿತ ವಲಯದ ನೌಕರರು ಸೇರಲಿದ್ದಾರೆ.  ಸದ್ಯ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರು, ಗೃಹ ಸಿಬ್ಬಂದಿ ಮತ್ತು ಗಿಗ್ ಕೆಲಸಗಾರರು ಸರ್ಕಾರ ನಡೆಸುವ ಪಿಂಚಣಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿಲ್ಲ. ಸರ್ಕಾರ, ಸಾರ್ವತ್ರಿಕ ಪಿಂಚಣಿ ಯೋಜನೆ ಪರಿಚಯಿಸಿದ್ರೆ ಎಲ್ಲಾ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯುತ್ತಾರೆ. ಸರ್ಕಾರ ಪ್ರಸ್ತುತ ಇದಕ್ಕಾಗಿ ಪ್ರಸ್ತಾವನೆ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.  ಮಾಧ್ಯಮ ವರದಿಗಳ ಪ್ರಕಾರ, ಈಗ ಜಾರಿಯಲ್ಲಿರುವ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗಿಂತ ಭಿನ್ನವಾಗಿದೆ. ಸಾರ್ವತ್ರಿಕ ಪಿಂಚಣಿ ಯೋಜನೆಯಲ್ಲಿ ಸರ್ಕಾರ ಅನೇಕ ವಿಭಿನ್ನ ಯೋಜನೆಗಳನ್ನು ಸಂಯೋಜಿಸಲಿದೆ. 

ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme)ಗೆ ಇದ್ರಿಂದ ಏನಾಗಲಿದೆ? :  ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಬಂದ್ರೂ ಅದ್ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಯಾವುದೇ ಸಮಸ್ಯೆ ಆಗೋದಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ.  

ಒಳ್ಳೆ ಕೆಲ್ಸ ಸಿಗ್ಬೇಕು ಅಂದ್ರೆ ಉತ್ತಮ ಕ್ರೆಡಿಟ್ ಸ್ಕೋರ್ ಇರ್ಬೇಕು, ಹೊಸ ರೂಲ್ಸ್ ಫಾಲೋ

ಸದ್ಯ ಜಾರಿಯಲ್ಲಿದೆ ಈ ಯೋಜನೆ : ದೇಶದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆ.  

ಅಟಲ್ ಪಿಂಚಣಿ ಯೋಜನೆ (Atal Pension Scheme) : ನಿವೃತ್ತಿಯ ನಂತರ ಪಿಂಚಣಿ ಬೇಕು ಎನ್ನುವವರು  ಅಟಲ್ ಪಿಂಚಣಿ ಯೋಜನೆ (APY) ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ, 60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕು.   

ಶ್ರಮ ಯೋಗಿ ಮಾನ್ ಧನ್ ಯೋಜನೆ : ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (PM-SYM) ಸಹ ಚಾಲನೆಯಲ್ಲಿದೆ. ಇದರಲ್ಲಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡುತ್ತದೆ.

ಭಾರತದಂತೆ ಕರೆನ್ಸಿಯಾಗಿ ರೂಪಾಯಿ ಬಳಸುವ ದೇಶಗಳು!

ರೈತರಿಗಾಗಿ ಪ್ರತ್ಯೇಕ ಯೋಜನೆ : ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಚಾಲನೆಯಲ್ಲಿದೆ. ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.

 ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) : ಈ ಯೋಜನೆ ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಸಿಗಲಿದೆ. ಒಬ್ಬ ಉದ್ಯೋಗಿ 10 ವರ್ಷಗಳ ನಂತರ ಕೆಲಸ ಬಿಟ್ಟರೆ, ಅವನಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ. ಈ ಯೋಜನೆ ಲಾಭವನ್ನು ಸುಮಾರು 23 ಲಕ್ಷ ಉದ್ಯೋಗಿಗಳು  ಪಡೆಯಲಿದ್ದಾರೆ. ಸರ್ಕಾರಿ ಉದ್ಯೋಗಿಯೊಬ್ಬರು ಸೇವೆಯ ಸಮಯದಲ್ಲಿ ಮರಣಹೊಂದಿದರೆ, ಅವರ ಕುಟುಂಬ ಉದ್ಯೋಗಿಯ ಮರಣದವರೆಗೆ ಲಭ್ಯವಿರುವ ಪಿಂಚಣಿಯ ಶೇಕಡಾ  60 ರಷ್ಟನ್ನು  ನೀಡಲಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ