Hallmark Mandatory:ಆಭರಣ ಖರೀದಿಸೋರು ಗಮನಿಸಿ; ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯ ನಿಯಮ ದೇಶಾದ್ಯಂತ ವಿಸ್ತರಣೆಗೆ ಸಿದ್ಧತೆ

By Suvarna News  |  First Published Dec 28, 2021, 2:06 PM IST

* ದೇಶದ 256 ಜಿಲ್ಲೆಗಳಲ್ಲಿ ಈ ತನಕ ಹಾಲ್ ಮಾರ್ಕ್ ಕಡ್ಡಾಯ ಪ್ರಕ್ರಿಯೆ ಸುಗಮ
*ದೇಶದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಯೋಜನೆ 
*ಈ ತನಕ BISಯಲ್ಲಿ 1.27 ಲಕ್ಷ ಜ್ಯುವೆಲ್ಲರಿ ಮಳಿಗೆಗಳು ಹಾಲ್ ಮಾರ್ಕ್ ಆಭರಣಗಳ ಮಾರಾಟಕ್ಕೆ ನೋಂದಣಿ ಮಾಡಿಸಿವೆ.


ನವದೆಹಲಿ (ಡಿ.28): ಚಿನ್ನಾಭರಣಗಳಿಗೆ(gold jewellery)ಹಾಲ್ ಮಾರ್ಕ್(hallmark) ಕಡ್ಡಾಯಗೊಳಿಸೋ ಪ್ರಕ್ರಿಯೆ 256 ಜಿಲ್ಲೆಗಳಲ್ಲಿ(districts) ಈ ತನಕ ಸುಗಮವಾಗಿ ಸಾಗಿದ್ದು, ಇದನ್ನು ದೇಶಾದ್ಯಂತ ಎಲ್ಲ ಜಿಲ್ಲೆಗಳಿಗೂ(districts) ವಿಸ್ತರಿಸೋ ಕಾರ್ಯ ಈಗ ಪ್ರಗತಿಯಲ್ಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ(Consumer Affairs Ministry)ತಿಳಿಸಿದೆ. ದೇಶದ 256 ಜಿಲ್ಲೆಗಳಲ್ಲಿ 14,18  ಹಾಗೂ  22 ಕ್ಯಾರಟ್ (carat) ಚಿನ್ನಾಭರಣಗಳಿಗೆ  2021ರ ಜೂನ್  23ರಿಂದ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಹಾಲ್ ಮಾರ್ಕ್ ಕೇಂದ್ರ ತೆರೆಯುವಂತೆ ಸೂಚಿಸಲಾಗಿತ್ತು.

ಈ ತನಕ 1.27 ಲಕ್ಷ ಜ್ಯುವೆಲ್ಲರಿ ಮಳಿಗೆಗಳು ಹಾಲ್ ಮಾರ್ಕ್ ಆಭರಣಗಳನ್ನು ಮಾರಾಟ ಮಾಡಲು  ಭಾರತೀಯ ಮಾನದಂಡ ಮಂಡಳಿಯಲ್ಲಿ (BIS)ನೋಂದಣಿ ಮಾಡಿಸಿವೆ. ಇನ್ನು ದೇಶದಲ್ಲಿ BIS ನಿಂದ ಅನುಮತಿ ಪಡೆದ  976  ಹಾಲ್ ಮಾರ್ಕ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯನ್ನು ಸಚಿವಾಲಯದ ವರದಿ ನೀಡಿದೆ.   ಭಾರತೀಯ ಮಾನದಂಡ ಮಂಡಳಿ (BIS)ಆನ್ ಲೈನ್ ನೋಂದಣಿ (online registration), ಝೀರೋ ನೋಂದಣಿ ಶುಲ್ಕ (zero registration fee), ನೋಂದಣಿಗೆ ಜೀವಿತಾವಧಿ ವ್ಯಾಲಿಡಿಟಿ ಮುಂತಾದ ಸೌಲಭ್ಯಗಳನ್ನು ಜಾರಿಗೊಳಿಸಿದ ಬಳಿಕ  ಜ್ಯುವೆಲ್ಲರಿ ಮಳಿಗೆಗಳ ನೋಂದಣಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. 

Tap to resize

Latest Videos

Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

ಸ್ವಯಂಚಾಲಿತ ಸಾಫ್ಟ್ ವೇರ್ (automation software) ಪರಿಚಯಿಸಿದ ಬಳಿಕ ಐದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸುಮಾರು  4.5ಕೋಟಿ ಆಭರಣಗಳು ಹಾಲ್ ಮಾರ್ಕ್ ಪಡೆದಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಹಾಲ್ ಮಾರ್ಕ್ ವಿಶಿಷ್ಟ ಐಡಿ (HUID) ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಇದ್ರಿಂದ ಚಿನ್ನಾಭರಣಗಳ ಕೈಗಾರಿಕಾ ಕ್ಷೇತ್ರದಲ್ಲಿ ಪಾರದರ್ಶಕ ಕಾರ್ಯನಿರ್ವಹಣೆ ನಿರೀಕ್ಷಿಸಲು ಹಾಗೂ ಹಾಲ್ ಮಾರ್ಕ್ ನಿಖರತೆ ಬಗ್ಗೆ ಗ್ರಾಹಕರಿಗೆ ಸ್ಷಷ್ಟ ಮಾಹಿತಿ ಸಿಗಲಿದೆ ಎಂದು ಸಚಿವಾಲಯ ಹೇಳಿದೆ. 

ದೇಶಾದ್ಯಂತ ಚಿನ್ನಾಭರಣಗಳು ಹಾಗೂ ಕಲಾಕೃತಿಗಳಿಗೆ 2021 ಜನವರಿ15ರಿಂದ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗೋದು ಎಂದು 2019ರ ನವೆಂಬರ್ ನಲ್ಲಿ ಸರ್ಕಾರ ಘೋಷಿಸಿತ್ತು. ಆದ್ರೆ ಆ ಬಳಿಕ ಈ ಗಡುವನ್ನು2021 ಜೂನ್ 1ರ ತನಕ ವಿಸ್ತರಿಸಲಾಗಿತ್ತು. ನಂತರ ಕೊರೋನಾ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಮಳಿಗೆಗಳು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮತ್ತೆ ಜೂನ್ 23ರ ತನಕ ವಿಸ್ತರಿಸಲಾಗಿತ್ತು. ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದ ದೇಶದ 256 ಜಿಲ್ಲೆಗಳಲ್ಲಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ 14 ಜಿಲ್ಲೆಗಳು ಕೂಡ ಸೇರಿವೆ. 

EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!

ಹಾಲ್‌ಮಾರ್ಕ್ ಅಂದ್ರೇನು?
ಹಾಲ್ ಮಾರ್ಕ್ ಅಂದ್ರೆ ಚಿನ್ನಾಭರಣಗಳ ಶುದ್ಧತೆಯ ಮಾನದಂಡ ಪ್ರಮಾಣಪತ್ರ  ಎಂದೇ ಹೇಳಬಹುದು. ಹಾಲ್ ಮಾರ್ಕ್ ಇರೋ ಚಿನ್ನ ಪರಿಶುದ್ಧವಾಗಿದೆ ಎಂಬುದನ್ನು ಗ್ರಾಹಕರಿಗೆ ದೃಢಪಡಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಪರಿಶುದ್ಧತೆಗೆ ಮಾನದಂಡವಾಗಿದೆ.  2000ದಿಂದಲೇ ಹಾಲ್‌ಮಾರ್ಕ್ ಸೌಲಭ್ಯ ಭಾರತದಲ್ಲಿ ಆರಂಭವಾಗಿದ್ದು, 2005ರಿಂದ ಬೆಳ್ಳಿ ಮತ್ತಿತರ ಪ್ರಶಸ್ತ ಲೋಹಗಳ ಆಭರಣಗಳಿಗೂ ಹಾಲ್‌ಮಾರ್ಕ್ ಸೌಲಭ್ಯ ಶುರುವಾಗಿದೆ. ಗ್ರಾಹಕರಲ್ಲೂ ಹಾಲ್‌ಮಾರ್ಕ್ ಕುರಿತ ಜಾಗೃತಿ ಹೆಚ್ಚತೊಡಗಿದೆ. ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟ ದೃಢೀಕರಿಸಲು ಹಾಲ್‌ಮಾರ್ಕ್ ಅಗತ್ಯ.  ಹಾಲ್ ಮಾರ್ಕ್ ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ. ಈ ತನಕ ಭಾರತದಲ್ಲಿ ದೊಡ್ಡ ಜ್ಯುವೆಲ್ಲರಿ ಮಳಿಗೆಗಳು ಮಾತ್ರ ಹಾಲ್ ಮಾರ್ಕ್ ಹೊಂದಿರೋ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದವು. ಆದ್ರೆ ಚಿಕ್ಕಪುಟ್ಟ ಚಿನ್ನಾಭರಣ ಮಳಿಗೆಗಳು ಹಾಲ್ ಮಾರ್ಕ್ ಚಿನ್ನ ಬಳಸುತ್ತಿರಲಿಲ್ಲ. ಇದ್ರಿಂದ ಗ್ರಾಹಕರಿಗೆ ಮೋಸವಾಗುತ್ತಿತ್ತು. ಚಕ್ಕಪುಟ್ಟ ಜ್ಯುವೆಲ್ಲರಿ ಮಳಿಗೆಗಳಲ್ಲಿ ಖರೀದಿಸಿದ ಚಿನ್ನದ ಪರಿಶುದ್ಧತೆ ಕಡಿಮೆ ಇರುತ್ತಿತ್ತು. 

click me!