
ಬೆಂಗಳೂರು (ಡಿ.28): ಚಿನ್ನದ (Gold)ಒಡವೆ (Ornaments) ಖರೀದಿಸಬೇಕೆಂದು ಮಹಿಳೆಯರು ಅನೇಕ ದಿನಗಳಿಂದ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಯಾವ ವಿನ್ಯಾಸದ, ಎಷ್ಟು ಮೊತ್ತದ ಚಿನ್ನ ಖರೀದಿಸಬೇಕೆಂದು ಮೊದಲೇ ತೀರ್ಮಾನಿಸಿಕೊಂಡಿರುತ್ತಾರೆ. ನಾನಾ ವೆಬ್ ಸೈಟ್ ಗಳಲ್ಲಿ ಅಥವಾ ಒಡವೆ ಶಾಪ್ ಗಳಿಗೆ ಭೇಟಿ ನೀಡಿ ಆಭರಣದ ವಿನ್ಯಾಸಗಳನ್ನು ನೋಡಿಕೊಂಡು ಬಂದಿರುತ್ತಾರೆ. ಇಷ್ಟೆಲ್ಲ ಸಿದ್ಧತೆ ನಡೆಸಿದ ಬಳಿಕ ಚಿನ್ನದ ಬೆಲೆ ಗಮನಿಸದಿದ್ರೆ ಹೇಗೆ? ಹೀಗಾಗಿ ಯಾವಾಗ ಚಿನ್ನದ ದರ ಇಳಿಮುಖವಾಗುತ್ತದೆ ಎಂಬುದನ್ನೇ ಮಹಿಳೆಯರು ಕಾಯುತ್ತಿರುತ್ತಾರೆ. ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆಯಾದ್ರೂ ಸಾಕು ತಕ್ಷಣ ಆಭರಣ ಖರೀದಿಗೆ ಮುಂದಾಗುತ್ತಾರೆ. ಇನ್ನು ಚಿನ್ನದ ಮೇಲೆ ಹೂಡಿಕೆ(Invest) ಮಾಡೋರು ಕೂಡ ಮಾರುಕಟ್ಟೆ ದರದ ಮೇಲೆ ಕಣ್ಣಿಟ್ಟಿರುತ್ತಾರೆ. ಪ್ರತಿದಿನ ದರ ಪರಿಶೀಲಿಸಿ ಸೂಕ್ತವಾದ ಸಂದರ್ಭ ನೋಡಿಕೊಂಡು ಹೂಡಿಕೆ(Invest) ಮಾಡುತ್ತಾರೆ. ಇನ್ನು ಬೆಳ್ಳಿ ವಿಷಯಕ್ಕೆ ಬಂದ್ರೆ ಆಭರಣಗಳಿಗಿಂತ ಬೆಳ್ಳಿ(Silver) ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬೆಳ್ಳಿ ಬಟ್ಟಲು, ತಟ್ಟೆ, ಲೋಟ, ಪೂಜಾ ಸಾಮಗ್ರಿ ಇತ್ಯಾದಿಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿರುತ್ತದೆ. ಆದ್ರೆ ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯಲ್ಲಿ ಸತತ ಹಾವೇಣಿ ಆಟ ಕಂಡುಬರುತ್ತಿದೆ. ಚಿನ್ನದ ಬೆಲೆ ಕಳೆದ ಕೆಲವು ದಿನಗಳ ಹಿಂದೆ ಇಳಿಕೆಯತ್ತ ಸಾಗಿತ್ತು, ಆದ್ರೆ ನಿನ್ನೆಯಿಂದ (ಡಿ.27) ಮತ್ತೆ ಸ್ವಲ್ಪ ಏರಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಇನ್ನು ಬೆಳ್ಳಿ ಬೆಲೆ ನಿನ್ನೆ ದೇಶದ ಪ್ರಮುಖ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಆದ್ರೆ ಇಂದು ಮತ್ತೆ ಏರಿಕೆ ಕಂಡಿದೆ. ಹಾಗಾದ್ರೆ ಇಂದು (ಡಿ.28) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ?
ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು 10ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,450ರೂ. ಇದ್ದು, ಇಂದು 45,460ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 49,600ರೂ. ಇದೆ. ನಿನ್ನೆ 49, 590ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು 200ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆ 62,500ರೂ. ಇದೆ.
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು 10ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,600ರೂ. ಇದ್ದು, ಇಂದು 47,610ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿ ಇಂದು 51,910ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ ಇಂದು 62,500ರೂ. ಆಗಿದೆ.
ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 47,230ರೂ. ಇದೆ. ನಿನ್ನೆ 47, 240ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 48,230ರೂ. ಇದೆ. ನಿನ್ನೆ 48,240ರೂ. ಇತ್ತು.ಬೆಳ್ಳಿ ದರದಲ್ಲಿ ಇಂದು 200ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 62,500ರೂ. ಆಗಿದೆ.
Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,560ರೂ.ಇದೆ.ನಿನ್ನೆ 45,550ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 49,700ರೂ. ಇದೆ. ನಿನ್ನೆ 49, 690ರೂ. ಇತ್ತು. ಬೆಳ್ಳಿ ದರದಲ್ಲಿ ಇಂದು 500ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 65,700ರೂ.ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.